Gold Rate Today: ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ಬೆಲೆ ಇಳಿಕೆ; ಇಲ್ಲಿದೆ ಇಂದಿನ ದರಪಟ್ಟಿ

IMG 20250405 WA0001

WhatsApp Group Telegram Group

ಚಿನ್ನ-ಬೆಳ್ಳಿ ದರ ಇಳಿಕೆ: ನಿಖರ ಮಾಹಿತಿ ಜೊತೆಗೆ ಗೋಲ್ಡ್ ಪ್ರಿಯರಿಗೆ ಖುಷಿ ಸುದ್ದಿ!

ಭಾರತೀಯರ ಬದುಕಿನಲ್ಲಿ ಚಿನ್ನ ಮತ್ತು ಬೆಳ್ಳಿ (Gold and Silver) ದೈನಂದಿನ ಆಭರಣಗಳಷ್ಟೇ ಅಲ್ಲದೆ, ಭದ್ರವಾಗಿ ಹೂಡಿಕೆಯಾಗಬಹುದಾದ ಅಮೂಲ್ಯವಸ್ತುಗಳಾಗಿ ಪರಿಗಣಿಸಲಾಗಿದೆ. ಹಬ್ಬ, ಮದುವೆ ಅಥವಾ ಇತರ ಶುಭ ಸಂದರ್ಭಗಳಲ್ಲಿ ಚಿನ್ನ ಖರೀದಿ ಭಾರತೀಯ ಸಂಸ್ಕೃತಿಯ (Indian culture) ಅವಿಭಾಜ್ಯ ಅಂಗ. ಇಂತಹ ಸಂದರ್ಭದಲ್ಲೇ ದೇಶಾದ್ಯಂತ ಗೋಲ್ಡ್ ಪ್ರಿಯರಿಗೆ ಸಂತಸದ ಸುದ್ದಿ ಸಿಕ್ಕಿದ್ದು, ಚಿನ್ನ ಹಾಗೂ ಬೆಳ್ಳಿ ಬೆಲೆಯು ನಿರೀಕ್ಷೆಗೂ ಮೀರಿ ಇಳಿಕೆಯಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 5, 2025: Gold Price Today

ಏಪ್ರಿಲ್ ತಿಂಗಳಲ್ಲಿ ಪ್ರತಿದಿನವೂ ಕೂಡ ಚಿನ್ನ ಹಾಗೂ ಬೆಳ್ಳಿ ದರ ಏರಿಕೆಯಾಗುತಿತ್ತು. ಆಭರಣ ಪ್ರಿಯರು ಚಿನ್ನದ ದರ ಅಥವಾ ಬೆಳ್ಳಿಯದರ ಯಾವಾಗ ಇಳಿಕೆಯಾಗುತ್ತದೆ ಎಂಬುದನ್ನು ಯೋಚಿಸುತ್ತಿದ್ದರು. ಸದಾ ಏರಿಕೆಯಾಗುತ್ತಿದ್ದ ಚಿನ್ನ ಹಾಗೂ ಬೆಳ್ಳಿ ಏಪ್ರಿಲ್ 4 ರಂದು ಇಳಿಕೆಯಾಗಿದೆ. ಅದರಲ್ಲೂ ಮದುವೆ ಸೀಸನ್ಗಳು ಬರುತ್ತಿರುವ ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿ ಇಳಿಕೆಯಾಗುತ್ತಿರುವುದು ಗ್ರಾಹಕರನ್ನು ಸಂತೋಷ ಪಡಿಸುತ್ತಿದೆ. ಹಾಗಿದ್ದರೆ, ಏಪ್ರಿಲ್ 5, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 399 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,163 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,872 ಆಗಿದೆ. ಚಿನ್ನದ ಬೆಲೆ ನಿನ್ನಗೆ ಹೋಲಿಸಿದರೆ 162 ರೂ. ನಷ್ಟು ಇಳಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 98, 900 ರೂ ನಷ್ಟಿದ್ದು, ಒಂದೇ ದಿನದಲ್ಲಿ 4000 ರೂ. ನಷ್ಟು ಇಳಿಕೆಯಾಗಿದೆ.

ಯಾವ ಕಾರಣಕ್ಕೆ (which cause) ದರ ಇಳಿಕೆಯಾಗಿದೆ?’

ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಏರಿಕೆ ಕಂಡಿತ್ತು,ಆದರೂ ಅಮೆರಿಕದ ಫೆಡರಲ್ ರಿಸರ್ವ್ (American federal reserve) ಸೂಚನೆಗಳು, ಬಂಡವಾಳ ಹೂಡಿಕೆದಾರರ ನಿಲುವು ಮತ್ತು ರೂಪಾಯಿಯ ವಿರುದ್ಧ ಡಾಲರ್ ಬದಲಾವಣೆಯ ಅಂಶಗಳ ಕಾರಣದಿಂದ ಚಿನ್ನದ ದರ ಇಳಿಕೆಯಾಗಿದೆ. ಬೆಳ್ಳಿಯು ಕೈಗಾರಿಕಾ ಬಳಕೆಯಲ್ಲಿಯೂ ಮುಖ್ಯವಾದದ್ದಾಗಿದ್ದು, ಇದೂ ಸಹ ಜಾಗತಿಕ ವಹಿವಾಟಿನ (global transaction) ಮೇಲೆ ಆಧಾರಿತವಾಗಿದೆ. ಕಳೆದ ಕೆಲವು ದಿನಗಳಿಂದ ತೀವ್ರ ಕುಸಿತ ಕಂಡ ಬೆಳ್ಳಿ ಬೆಲೆಯು ಚಿನ್ನಕ್ಕಿಂತ ಹೆಚ್ಚಾಗಿ ಇಳಿಕೆಯಾಗಿದೆ.

ಏಪ್ರಿಲ್ 4, 2025ರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೀಗಿವೆ:

ಭಾರತದ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ:
22 ಕ್ಯಾರಟ್ ಚಿನ್ನ (10 ಗ್ರಾಂ): ₹84,000
24 ಕ್ಯಾರಟ್ ಚಿನ್ನ (10 ಗ್ರಾಂ): ₹91,640
18 ಕ್ಯಾರ್ಟ್ ಚಿನ್ನ (10 ಗ್ರಾಂ): ₹68,730
ಬೆಳ್ಳಿ (10 ಗ್ರಾಂ): ₹990

ಬೆಂಗಳೂರು ನಗರದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ:
22 ಕ್ಯಾರ್ಟ್ ಚಿನ್ನ (10 ಗ್ರಾಂ): ₹84,000
24 ಕ್ಯಾರ್ಟ್ ಚಿನ್ನ (10 ಗ್ರಾಂ): ₹91,640
ಬೆಳ್ಳಿ (100 ಗ್ರಾಂ): ₹9,900

ದೇಶದ ಪ್ರಮುಖ ನಗರಗಳಲ್ಲಿನ 22 ಕ್ಯಾರಟ್ – 10 ಗ್ರಾಂ ಚಿನ್ನದ ದರಗಳು ಹೀಗಿವೆ:
ಬೆಂಗಳೂರು: ₹84,000
ಚೆನ್ನೈ: ₹84,000
ಮುಂಬೈ: ₹84,000
ದೆಹಲಿ: ₹84,150
ಕೊಲ್ಕತ್ತಾ: ₹84,000
ಕೇರಳ: ₹84,000
ಅಹ್ಮದಾಬಾದ್: ₹84,050
ಜೈಪುರ: ₹84,150
ಲಕ್ನೋ: ₹84,150
ಭುವನೇಶ್ವರ್: ₹84,000

ಚಿನ್ನದ ದರವು ಕಳೆದ ವಾರದ ಮೌಲ್ಯದ ಹೋಲಿಕೆಯಲ್ಲಿ ಸ್ಥಿರವಾಗಿದೆ ಆದರೆ ಬೆಳ್ಳಿಯು ನಿನ್ನೆ 6 ರೂ. ಇಳಿಕೆಯಾಗಿದ್ದು, ತೀವ್ರ ಕುಸಿತವಾಗಿದೆ. ಮಾರ್ಚ್ 31 (March 31) ನಂತರ ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ ಬೆಲೆಯಲ್ಲಿ ಬೆಳ್ಳಿ ಲಭ್ಯವಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಹೀಗಾಗಿ, ಹೂಡಿಕೆದಾರರು (Investers) ಮತ್ತು ಚಿನ್ನ/ಬೆಳ್ಳಿ ಪ್ರಿಯರು ಈ ಸಮಯವನ್ನು ಹೂಡಿಕೆಯ ಅತ್ಯುತ್ತಮ ಅವಕಾಶವೆಂದು ಪರಿಗಣಿಸಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!