Gold Rate Today: ಚಿನ್ನದ ಬೆಲೆ ಬಂಪರ್ ಲಾಟರಿ, ಬಂಗಾರದ ರೇಟ್ ಸತತ ಇಳಿಕೆ.! ಇಲ್ಲಿದೆ ಇಂದಿನ ದರ ಪಟ್ಟಿ 

Picsart 25 04 06 06 33 57 555

WhatsApp Group Telegram Group

ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ: ಹೂಡಿಕೆದಾರರಿಗೆ ಅವಕಾಶವೋ ಅಥವಾ ಎಚ್ಚರಿಕೆಯಾ?

ಇದೀಗ ಚಿನ್ನ ಹಾಗೂ ಬೆಳ್ಳಿ ದರದಲ್ಲಿ (Gold and Silver rate) ಆಗುತ್ತಿರುವ ಭಾರೀ ಬದಲಾವಣೆಗಳು ದೇಶದ ಆರ್ಥಿಕತೆ, ಹೂಡಿಕೆದಾರರ ನಿರ್ಧಾರಗಳು ಮತ್ತು ಗ್ರಾಹಕರ ಖರೀದಿ ಶೈಲಿಗೆ ನೇರವಾಗಿ ಪ್ರಭಾವ ಬೀರುತ್ತಿವೆ. ಚಿನ್ನವನ್ನು ಭಾರತೀಯರು ಕೇವಲ ಆಭರಣ ಅಥವಾ ಹೂಡಿಕೆಯ ಸಾಧನವಾಗಿ ಮಾತ್ರವಲ್ಲ, ಭದ್ರತೆಯ ಸಂಕೇತವಾಗಿಯೂ (symbol of safety) ಪರಿಗಣಿಸುತ್ತಾರೆ. ಕಳೆದ ಕೆಲವು ತಿಂಗಳುಗಳಿಂದ ಚಿನ್ನದ ದರವು ಗಗನಕ್ಕೇರಿದ ಹಿನ್ನೆಲೆಯಲ್ಲಿ ಬಹುತೇಕ ಜನರು ಹೂಡಿಕೆಯಿಂದ ಹಿಂದೆ ಸರಿದಿದ್ದರು. ಆದರೆ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ (International) ರಾಜಕೀಯ ಬೆಳವಣಿಗೆಗಳು ಮತ್ತು ಆರ್ಥಿಕ ನಿಲುವುಗಳು ಚಿನ್ನದ ದರದಲ್ಲಿ ನಿರೀಕ್ಷಿತಕ್ಕಿಂತ ವೇಗವಾಗಿ ಕುಸಿತಕ್ಕೆ ಕಾರಣವಾಗಿವೆ. ಈ ಹಿನ್ನಲೆಯಲ್ಲಿ, ಚಿನ್ನದ ಮೌಲ್ಯ ಇನ್ನು ಮುಂದೆ ಹೇಗೆ ಇರುತ್ತದೆ? ಈಗ ಖರೀದಿಸುವುದು ಸೂಕ್ತವೆ? ಎಂದು ಸಾರ್ವಜನಿಕರಲ್ಲಿ ಅನುಮಾನಗಳು ಮೂಡಿವೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹಾಗೂ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 6, 2025: Gold Price Today

ಏಪ್ರಿಲ್ ತಿಂಗಳಲ್ಲಿ ಪ್ರತಿದಿನವೂ ಚಿನ್ನ ಹಾಗೂ ಬೆಳ್ಳಿಯ ದರ ನಿರಂತರವಾಗಿ ಏರಿಕೆಯಾಗುತ್ತಿತ್ತು. ಇದರಿಂದ ಆಭರಣ ಪ್ರಿಯರು ಮತ್ತು ಖರೀದಿದಾರರು ಚಿನ್ನ ಅಥವಾ ಬೆಳ್ಳಿಯ ದರ ಯಾವಾಗ ಇಳಿಯುತ್ತದೆಯೋ ಎಂದು ಕಾತುರದಿಂದ ನಿರೀಕ್ಷಿಸುತ್ತಿದ್ದರು. ಇನ್ನು, ಇದೀಗ ಮದುವೆ ಸೀಸನ್ ಆರಂಭವಾಗುತ್ತಿರುವ ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಇಳಿಕೆಯಾಗಿರುವುದು ಗ್ರಾಹಕರಿಗೆ ಸಂತೋಷದ ವಿಚಾರವಾಗಿದೆ. ದೀರ್ಘಕಾಲದ ಏರಿಕೆಯ (increased of long term) ನಂತರ ದರ ಇಳಿದಿರುವುದು ಖರೀದಿಗೆ ಅನುಕೂಲವನ್ನೂ ತಂದಿದೆ. ಹಲವರು ಈ ಅವಕಾಶವನ್ನು ಬಳಸಿಕೊಂಡು ಆಭರಣ ಖರೀದಿಗೆ ಮುಂದಾಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಇಳಿಕೆಯಾಗಿರುವ ದರ ಗ್ರಾಹಕರಲ್ಲಿ ಖರೀದಿ ಉತ್ಸಾಹ ಹೆಚ್ಚಿಸಿದ್ದು, ಚಿನ್ನಾಭರಣ ವ್ಯಾಪಾರಿಗಳಿಗೆ ಸಹ ಸಕಾರಾತ್ಮಕ ಬೆಳವಣಿಗೆ ತಂದಿದೆ. ಹಾಗಿದ್ದರೆ, ಏಪ್ರಿಲ್ 6, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 310 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,066 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,799 ಆಗಿದೆ. ಚಿನ್ನದ ಬೆಲೆ ನಿನ್ನಗೆ ಹೋಲಿಸಿದರೆ 89ರೂ. ನಷ್ಟು ಇಳಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 94, 000 ರೂ ನಷ್ಟಿದ್ದು, ಒಂದೇ ದಿನದಲ್ಲಿ 4900 ರೂ. ನಷ್ಟು ಇಳಿಕೆಯಾಗಿದೆ.

ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ! :

ಟ್ರಂಪ್ ಆಡಳಿತದಿಂದ (Trump rules) ವಿಧಿಸಲಾದ ಸುಂಕಗಳು ಮತ್ತು ಜಾಗತಿಕ ಮಟ್ಟದ ಆರ್ಥಿಕತೆಯಲ್ಲಿನ ಅನಿಶ್ಚಿತತೆ, ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ತೀವ್ರ ಬದಲಾವಣೆಗಳಿಗೆ ಕಾರಣವಾಗಿವೆ. ಕಳೆದ ವಾರ ಸತತ ಏರಿಕೆಯನ್ನು ಕಂಡಿದ್ದ ಚಿನ್ನದ ದರವು ಇತ್ತೀಚೆಗೆ ಕುಸಿತವಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (American President Donald Trump) ವಿವಿಧ ರಾಷ್ಟ್ರಗಳ ಮೇಲೆ ವಿಧಿಸಿದ ಆಮದು ಸುಂಕದ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಹೂಡಿಕೆದಾರರು ತಕ್ಷಣಿಕ ಲಾಭಕ್ಕೆ ಚಿನ್ನವನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದು, ಇದರ ಪರಿಣಾಮವಾಗಿ ಬೆಲೆ ಇಳಿಕೆಯಾಗುತ್ತಿದೆ.

ಏಪ್ರಿಲ್ 5, 2025 ರಂದು ಚಿನ್ನ ಮತ್ತು ಬೆಳ್ಳಿ ದರ ಯಾವರೀತಿಯಿದೆ?:

ಶನಿವಾರ (ಏಪ್ರಿಲ್ 5) ರಂದು ಭಾರತದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು 980 ರೂ.ಗಳಷ್ಟು ಇಳಿಕೆಯಾಗಿದ್ದು, ಈ ಮೂಲಕ ಒಂದು ಲಕ್ಷದತ್ತ ಸಾಗುತ್ತಿದ್ದ ಚಿನ್ನದ ಬೆಲೆ 91 ಸಾವಿರ ರೂ.ದವರೆಗೆ ಇಳಿದಿದೆ. ಇದೇ ರೀತಿ, ಬೆಳ್ಳಿಯ ದರದಲ್ಲೂ ಭಾರೀ ಕುಸಿತ ಕಂಡುಬಂದಿದ್ದು, ಕೇವಲ ಒಂದು ದಿನದಲ್ಲಿ ಒಂದು ಕೆ.ಜಿ ಬೆಳ್ಳಿಯ ಬೆಲೆ 8,000 ರೂ.ಗಳಷ್ಟು ಇಳಿಕೆಯಾಗಿದೆಯೆಂದು ವರದಿಯಾಗಿದೆ.

ಬೆಲೆ ಕುಸಿತದ ಪ್ರಮುಖ ಕಾರಣಗಳು (Causes) ಯಾವುವು?:

ಅಂತರರಾಷ್ಟ್ರೀಯ ಮಾರುಕಟ್ಟೆಯ (International market) ದುರ್ಬಲತೆ
ಜಾಗತಿಕ ಆರ್ಥಿಕತೆಯಲ್ಲಿನ ಅನಿಶ್ಚಿತತೆ, ಹೂಡಿಕೆದಾರರನ್ನು ಚಿನ್ನದ ಹೂಡಿಕೆಗಳಿಂದ ಹಿಂದೆ ಸರಿಯಲು ಪ್ರೇರೇಪಿಸಿದೆ.
ಮಾರುಕಟ್ಟೆಯಲ್ಲಿ ಹಳೆಯ ಚಿನ್ನದ ವಿನಿಮಯ ಹೆಚ್ಚಳ
ಗ್ರಾಹಕರು ಹಳೆಯ ಆಭರಣಗಳನ್ನು ವಿನಿಮಯ ಮೂಲಕ ಹೊಸ ಆಭರಣಗಳನ್ನು ಖರೀದಿಸುತ್ತಿದ್ದಾರೆ, ಇದು ಬೆಲೆಗಳ ಮೇಲೆ ಒತ್ತಡ ತಂದಿದೆ.
ಅಮೆರಿಕ ಡಾಲರ್ (Dollar) ಎದುರು ರೂಪಾಯಿಯ (Rupees) ಬಲ ರೂಪಾಯಿ ಮೌಲ್ಯ ಬಲವಾಗುತ್ತಿರುವುದು ಚಿನ್ನದ ಆಮದು ಬೆಲೆ ಇಳಿಯಲು ಸಹಾಯ ಮಾಡುತ್ತಿದೆ.

ಚಿನ್ನದ ದರ ಇನ್ನು ಮುಂದೆ ಹೇಗಿರಬಹುದು?:

ಮಾರುಕಟ್ಟೆ ತಜ್ಞರು (Market specialist) ಏಪ್ರಿಲ್ ಅಂತ್ಯ ಅಥವಾ ಮೇ ತಿಂಗಳಲ್ಲಿ ಚಿನ್ನದ ದರಗಳಲ್ಲಿ ಇನ್ನಷ್ಟು ಕುಸಿತವಾಗಬಹುದು ಎಂದು ಊಹಿಸುತ್ತಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಶಾಂತಿ ಮಾತುಕತೆಗಳು ಯಶಸ್ವಿಯಾಗಿ ಕದನ ವಿರಾಮಕ್ಕೆ ದಾರಿ ತೋರಿದರೆ, ಚಿನ್ನದ ಮೇಲೆ ಇರುವ ಭರವಸೆ ಕಡಿಮೆಯಾಗಲಿದೆ. ಹೀಗಾಗಿ, ತುರ್ತು ಪರಿಸ್ಥಿತಿಯಿಲ್ಲದ ಸಂದರ್ಭದಲ್ಲಿ ಗ್ರಾಹಕರು ಅಂತಾರಾಷ್ಟ್ರೀಯ ಬೆಳವಣಿಗೆಗಳನ್ನು (International growth) ಗಮನಿಸಿ ನಂತರವೇ ಚಿನ್ನ ಅಥವಾ ಬೆಳ್ಳಿ ಖರೀದಿ ಮಾಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.

ಪ್ರಸ್ತುತ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ನಿರೀಕ್ಷಿತಕ್ಕಿಂತ ಹೆಚ್ಚಿನ ಕುಸಿತ ಕಂಡುಬಂದಿದ್ದು, ಹೂಡಿಕೆದಾರರು ಹಾಗೂ ಗ್ರಾಹಕರಿಗೆ (Investers and customers) ಇದು ಉತ್ತಮ ಸಮಯವಾಗಬಹುದು. ಆದರೆ, ಅಂತಿಮ ನಿರ್ಧಾರಕ್ಕೂ ಮುನ್ನ ಜಾಗತಿಕ ಆರ್ಥಿಕ ಪರಿಸ್ಥಿತಿಗಳನ್ನು ಗಮನಿಸುವುದು ಅಗತ್ಯ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!