Gold Rate Today: ಚಿನ್ನದ ಬೆಲೆಯಲ್ಲಿ ಸತತ 4ನೇ ದಿನ ಇಳಿಕೆ.! ಇಲ್ಲಿದೆ ಇಂದಿನ ದರ ಪಟ್ಟಿ.

Picsart 25 04 07 06 53 27 817

WhatsApp Group Telegram Group

ಚಿನ್ನದ ಮಾರುಕಟ್ಟೆಯಲ್ಲಿ ಭಾರೀ ಕುಸಿತ: ಒಂದೇ ಸತತವಾಗಿ 4ನೇ ದಿನ ಇಳಿಕೆ, ಖರೀದಿಗೆ ಉತ್ತಮ ಅವಕಾಶ

ಇತ್ತೀಚಿಗೆ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ (Gold and silver rate) ಅಸಾಧಾರಣ ಬದಲಾವಣೆಗಳು ಕಂಡುಬರುತ್ತಿದ್ದು, ಹೂಡಿಕೆದಾರರು ಮತ್ತು ಚಿನ್ನಾಭರಣ ಪ್ರಿಯರಲ್ಲಿ ಒಂದು ರೀತಿಯ ಕುತೂಹಲ ಮತ್ತು ನಿರಾಳತೆ ಮೂಡಿಸಿದೆ. ವಿಶೇಷವಾಗಿ ಚಿನ್ನದ ದರ ಸತತವಾಗಿ 4ನೇ ದಿನ ಇಳಿಕೆಯಾಗಿರುವುದು ವಿಶೇಷವಾಗಿದ್ದು, ಅಂತಾರಾಷ್ಟ್ರೀಯ ಆರ್ಥಿಕ ಬೆಳವಣಿಗೆಗಳು, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US president Donald Trump) ತೆರಿಗೆ ನೀತಿಯ ಪ್ರಭಾವ, ಮತ್ತು ಷೇರು ಮಾರುಕಟ್ಟೆಯ ಬದಲಾವಣೆಗಳ ನಡುವೆಯೂ ಚಿನ್ನದ ದರದಲ್ಲಿ ಕಂಡ ಬದಲಾವಣೆ ಗಂಭೀರ ಗಮನಸೆಳೆಯುತ್ತಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 7, 2025: Gold Price Today

ಏಪ್ರಿಲ್ ತಿಂಗಳಲ್ಲಿ ಪ್ರತಿದಿನವೂ ಚಿನ್ನ ಮತ್ತು ಬೆಳ್ಳಿ ದರಗಳು ನಿರಂತರವಾಗಿ ಏರಿಕೆಯಾಗುತ್ತಿದ್ದು, ಖರೀದಿದಾರರು ಹಾಗೂ ಆಭರಣ ಪ್ರಿಯರು ದರ ಇಳಿಯುವ ನಿರೀಕ್ಷೆಯಲ್ಲಿದ್ದರು. ದೀರ್ಘಕಾಲದ ಏರಿಕೆಯ (Increased longterm) ಬಳಿಕ ಇತ್ತೀಚೆಗೆ ದರದಲ್ಲಿ ಇಳಿಕೆಯಾಗಿದ್ದು, ಖರೀದಿಗೆ ಉತ್ತಮ ಅವಕಾಶ ಒದಗಿಸಿದೆ. ಇದನ್ನು ಗ್ರಾಹಕರು ಸದುಪಯೋಗಪಡಿಸಿಕೊಂಡು ಆಭರಣ ಖರೀದಿಗೆ ಮುಂದಾಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಇಳಿದ ದರ ಗ್ರಾಹಕರ ಖರೀದಿ ಉತ್ಸಾಹವನ್ನು ಹೆಚ್ಚಿಸಿದೆ. ಇದರಿಂದ ಚಿನ್ನಾಭರಣ ವ್ಯಾಪಾರಿಗಳಿಗೆ ಕೂಡ ಸಕಾರಾತ್ಮಕ ಬೆಳವಣಿಗೆ ಕಂಡುಬರುತ್ತಿದೆ. ಗ್ರಾಹಕರ ಮನೋಭಾವ ಬದಲಾವಣೆಯು ವ್ಯಾಪಾರದಲ್ಲಿ ಚೈತನ್ಯ ತಂದಿದ್ದು, ದರ ಇಳಿಕೆಯು ಮಾರುಕಟ್ಟೆಗೆ ಹೊಸ ಜೀವ (New life for market) ನೀಡಿದಂತಾಗಿದೆ. ಹೀಗಾಗಿ ವ್ಯಾಪಾರಿಗಳು ಹಾಗೂ ಗ್ರಾಹಕರು ತೃಪ್ತರಾಗಿದ್ದಾರೆ. ಹಾಗಿದ್ದರೆ, ಏಪ್ರಿಲ್ 7, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 309 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,065 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,798 ಆಗಿದೆ. ಚಿನ್ನದ ಬೆಲೆ ನಿನ್ನಗೆ ಹೋಲಿಸಿದರೆ 1ರೂ. ನಷ್ಟು ಇಳಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 93, 00 ರೂ ನಷ್ಟಿದ್ದು, ನಿನ್ನೆಗೆ ಹೋಲಿಸಿದರೆ 100 ರೂ. ನಷ್ಟು ಇಳಿಕೆಯಾಗಿದೆ.

ಹೌದು, ಇತ್ತೀಚಿನ ದಿನಗಳಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ ಕಂಡುಬಂದ ತೀವ್ರ ಬದಲಾವಣೆಗಳು ಚಿನ್ನಾಭರಣ ಪ್ರಿಯರು, ಹೂಡಿಕೆದಾರರು ಹಾಗೂ ಆರ್ಥಿಕ ತಜ್ಞರಲ್ಲಿ (Investmenters and Economic specialist) ಚರ್ಚೆಯ ವಿಷಯವಾಗಿವೆ. ಸತತ ಏರಿಕೆಯಿಂದ 1 ಲಕ್ಷ ರೂಪಾಯಿಯತ್ತ ಸಾಗುತ್ತಿದ್ದ ಚಿನ್ನದ ದರ ಇದೀಗ ದಿಢೀರ್ ಕುಸಿತ ಕಂಡಿದ್ದು, ಹೂಡಿಕೆಗೆ ಯೋಚಿಸುತ್ತಿರುವವರು ಮತ್ತು ಆಭರಣ ಖರೀದಿಸಲು ಇಚ್ಛಿಸುವ ಗ್ರಾಹಕರಿಗೆ ಇದು ಉತ್ತಮ ಅವಕಾಶವಾಗಿದೆ. ಅಷ್ಟೇ ಅಲ್ಲದೆ, ಚಿನ್ನದ ಜತೆಗೆ ಬೆಳ್ಳಿ ಬೆಲೆಯಲ್ಲಿಯೂ (Silver rate) ಇಳಿಕೆ ಕಂಡುಬಂದಿದೆ.

ಚಿನ್ನದ ದರದಲ್ಲಿ ಭಾರೀ ಇಳಿಕೆ:

ಇತ್ತೀಚೆಗೆ ಸತತ ಏರಿಕೆಯಿಂದ 1 ಲಕ್ಷ ರೂಪಾಯಿ ದಾಟುವ ಹಂತಕ್ಕೆ ತಲುಪಿದ್ದ ಚಿನ್ನದ ದರ ಏಪ್ರಿಲ್ 4 ಅಂದರೆ ಶುಕ್ರವಾರದಿಂದ ಇಳಿಕೆ ಕಾಣಲು ಆರಂಭಿಸಿದೆ. ಶನಿವಾರದಂದು ಮಾತ್ರ 100 ಗ್ರಾಂ ಶುದ್ಧ ಚಿನ್ನದ ದರ 9,800 ರೂಪಾಯಿ ಕುಸಿತ ಕಂಡಿದ್ದು, 24 ಕ್ಯಾರಟ್ ಚಿನ್ನದ ದರ ಪ್ರತಿ 10 ಗ್ರಾಂಗೆ 980 ರೂಪಾಯಿ ಇಳಿಕೆಯಾಗಿದೆ, ಒಟ್ಟು ಬೆಲೆ ₹90,660ಕ್ಕೆ ತಲುಪಿದೆ. ಇದೇ ದಿನ 22 ಕ್ಯಾರಟ್ ಚಿನ್ನದ ದರವೂ 900 ರೂಪಾಯಿ ಇಳಿಕೆಯಿಂದ ₹83,100ಕ್ಕೆ ತಲುಪಿದೆ.
ಇದರೊಂದಿಗೆ ಎರಡು ದಿನಗಳಲ್ಲಿ ಒಟ್ಟು ₹2,720 ರಷ್ಟು ಚಿನ್ನದ ಬೆಲೆ ಇಳಿಕೆಯಾಗಿರುವುದು ಗಮನಾರ್ಹ.

ಪ್ರತಿ ಗ್ರಾಂ ದರದಲ್ಲಿ ಬದಲಾವಣೆ (Changes in every gram) :

ಬೆಂಗಳೂರು ನಗರದಲ್ಲಿ ಭಾನುವಾರ 1 ಗ್ರಾಂ 24 ಕ್ಯಾರಟ್ ಚಿನ್ನದ ದರ ₹9,066 ಆಗಿದ್ದು, ಶುಕ್ರವಾರದ ₹9,164 ರೊಂದಿಗೆ ಹೋಲಿಸಿದರೆ 98 ರೂಪಾಯಿ ಇಳಿಕೆಯಾಗಿದೆ. ಇದೇ ರೀತಿಯಾಗಿ, 1 ಗ್ರಾಂ 22 ಕ್ಯಾರಟ್ ಚಿನ್ನವು ₹8,310ಕ್ಕೆ ಮಾರಾಟವಾಗಿದ್ದು, ಇದು ಶುಕ್ರವಾರದ ₹8,400 ಗಿಂತ 90 ರೂಪಾಯಿ ಕಡಿಮೆ.

ಅಂತಾರಾಷ್ಟ್ರೀಯ ಕಾರಣಗಳ (International causes) ಪ್ರಭಾವ:

ಚಿನ್ನದ ದರದ ಇಳಿಕೆಗೆ ಯುಎಸ್ ಅಧ್ಯಕ್ಷ ಟ್ರಂಪ್ ಅವರ ತೆರಿಗೆ ನೀತಿಗಳಿಂದ ಉಂಟಾದ ಜಾಗತಿಕ ಷೇರು ಮಾರುಕಟ್ಟೆಯ ಬದಲಾವಣೆಗಳು (Market changes) ಪ್ರಮುಖ ಕಾರಣಗಳಾಗಿವೆ. ಇವುಗಳ ಪರಿಣಾಮವಾಗಿ ಆಭರಣ ವ್ಯಾಪಾರಿಗಳು ಹಾಗೂ ಹೂಡಿಕೆದಾರರು ತಮ್ಮ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಒಟ್ಟಾರೆಯಾಗಿ ದರದಲ್ಲಿ ತಾತ್ಕಾಲಿಕ ಇಳಿಕೆ ಕಂಡುಬಂದಿದೆ.

ಬೆಳ್ಳಿಯ ದರದಲ್ಲೂ ಇಳಿಕೆ (Decreased in silver rate also) :

ಚಿನ್ನದ ದರದ ಇಳಿಕೆಗೆ ತಕ್ಕಂತೆ ಬೆಳ್ಳಿಯ ದರವೂ ಕುಸಿತ ಕಂಡಿದೆ. ಶುಕ್ರವಾರ 1 ಕೆ.ಜಿ ಬೆಳ್ಳಿ ₹99,000 ಇತ್ತು. ಆದರೆ ನಿನ್ನೆ ಅದು ₹94,000ಕ್ಕೆ ಇಳಿದಿದೆ. ಇದರಿಂದಾಗಿ ಬೆಳ್ಳಿಯ ದರವೂ ಹೂಡಿಕೆದಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಕಂಡ ಇತ್ತೀಚಿನ ಇಳಿಕೆ ಹೂಡಿಕೆದಾರರು ಹಾಗೂ ಆಭರಣ ಖರೀದಿಸಲು ಯೋಜನೆ ಮಾಡುತ್ತಿರುವ ಗ್ರಾಹಕರಿಗೆ ಅನುಕೂಲಕರ ಬೆಳವಣಿಗೆಯಾಗಿದೆ. ತಾತ್ಕಾಲಿಕವಾಗಿ ದರ ಇಳಿಕೆಯಾಗಿದ್ದರೂ, ಜಾಗತಿಕ ಆರ್ಥಿಕ ಸ್ಥಿತಿಗತಿಯ (Global economic changes) ಪ್ರಕಾರ ಇವು ಮತ್ತೆ ಏರಿಕೆಯಾಗುವ ಸಾಧ್ಯತೆ ಉಂಟು. ಹೀಗಾಗಿ, ಚಿನ್ನ-ಬೆಳ್ಳಿ ಹೂಡಿಕೆದಾರರಿಗೆ ಈ ಸಮಯ ಅತ್ಯುತ್ತಮ ಅವಕಾಶವಾಗಿದೆ ಎಂಬ ಅಭಿಪ್ರಾಯ ಸಹ ವ್ಯಕ್ತವಾಗುತ್ತಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!