Gold Rate Today : ಚಿನ್ನದ ಬೆಲೆ ಸತತ ಇಳಿಕೆ.! ಇಂದಿನ ದರ ಎಷ್ಟು.? ಇಲ್ಲಿದೆ ಚಿನ್ನದ ದರಪಟ್ಟಿ 

Picsart 25 04 08 06 32 39 100

WhatsApp Group Telegram Group

ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಇಳಿಕೆ: ಹೂಡಿಕೆದಾರರಿಗೆ ಮತ್ತು ಗ್ರಾಹಕರಿಗೆ ಉತ್ತಮ ಅವಕಾಶ

ಇದೀಗ ಚಿನ್ನ ಹಾಗೂ ಬೆಳ್ಳಿ (Gold and Silver) ಮಾರುಕಟ್ಟೆಯ ಕುಸಿತದ ಸುದ್ದಿ, ಹೂಡಿಕೆದಾರರು ಹಾಗೂ ಚಿನ್ನ ಪ್ರಿಯರಿಗೆ ಅಚ್ಚರಿ ಮತ್ತು ಆಸಕ್ತಿಯ ವಿಷಯವಾಗಿದೆ. ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಕಂಡುಬಂದ ಭಾರಿ ಕುಸಿತದ ಪರಿಣಾಮವಾಗಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಗಣನೀಯ ಇಳಿಕೆಯನ್ನು ಕಾಣಲಾಗಿದೆ. ಇದೇ ಕಾರಣದಿಂದಾಗಿ, ಚಿನ್ನ ಖರೀದಿಸಲು ಇದು ಒಳ್ಳೆಯ ಅವಕಾಶವಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಆದರೆ ಚಿನ್ನ ಹೂಡಿಕೆಯಲ್ಲಿ ಮುನ್ನಡೆವ ಮುನ್ನ, ಕೆಲವು ಪ್ರಮುಖ ಅಂಶಗಳನ್ನು ಗಮನದಲ್ಲಿಡುವುದು ಅಗತ್ಯ. ಯಾವೆಲ್ಲ ಅಂಶಗಳನ್ನ (Elements) ಗಮನದಲ್ಲಿಡಬೇಕು? ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 8, 2025: Gold Price Today

ಏಪ್ರಿಲ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ನಿರಂತರ ಏರಿಕೆಯ ಬಳಿಕ ಇತ್ತೀಚೆಗೆ ಇಳಿಕೆಯಾಗಿದ್ದು, ಖರೀದಿದಾರರು ಹಾಗೂ ಆಭರಣ ಪ್ರಿಯರಿಗೆ ಇದು ಉತ್ತಮ ಅವಕಾಶವನ್ನೇ ತಂದಿದೆ. ದರ ಇಳಿಕೆಯೊಂದಿಗೆ (Rate decreased) ಗ್ರಾಹಕರ ಖರೀದಿ ಉತ್ಸಾಹ ಹೆಚ್ಚಿದ್ದು, ಮಾರುಕಟ್ಟೆಯಲ್ಲಿ ಚೈತನ್ಯತೆ ಕಾಣಿಸಿಕೊಂಡಿದೆ. ಆಭರಣ ಖರೀದಿಗೆ ಮುಂದಾಗಿರುವ ಗ್ರಾಹಕರ ಕಾರಣದಿಂದ ವ್ಯಾಪಾರಿಗಳು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ದೀರ್ಘಕಾಲದ ಬಳಿಕ ದರ ಇಳಿಕೆಯು ಮಾರುಕಟ್ಟೆಗೆ ಹೊಸ ಭರವಸೆ ನೀಡಿದೆ. ಹಾಗಿದ್ದರೆ, ಏಪ್ರಿಲ್ 8, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 284 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,037 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,778 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 93, 900 ರೂ ನಷ್ಟಿದ್ದು.

ಚಿನ್ನ-ಬೆಳ್ಳಿ ಬೆಲೆಗಳಲ್ಲಿ ಭಾರಿ ಕುಸಿತ:

ಷೇರು ಮಾರುಕಟ್ಟೆ ಸೋಮವಾರದಂದು 3,000ಕ್ಕೂ ಅಧಿಕ ಅಂಕಗಳನ್ನು ಕಳೆದುಕೊಂಡಿದ್ದು, ಅದೇ ದಿನದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ತೀವ್ರ ಇಳಿಕೆ ದಾಖಲಾಗಿದೆ. ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಪ್ರಕಾರ,
24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹2,613 ಇಳಿಕೆಯಾಗಿದ್ದು, ಪ್ರಸ್ತುತ ಬೆಲೆ ₹88,401 ಆಗಿದೆ. ಹಿಂದೆ ಇದೇ ಚಿನ್ನದ ಬೆಲೆ ₹91,014 ಆಗಿತ್ತು.
ಒಂದು ಕೆಜಿ ಬೆಳ್ಳಿ ಬೆಲೆ ₹4,535 ಇಳಿಕೆಯಾಗಿದ್ದು, ಈಗ ಅದು ₹88,375 ಕ್ಕೆ ತಲುಪಿದೆ. ಹಿಂದಿನ ಬೆಲೆ ₹92,910 ಆಗಿತ್ತು.

ಹೀಗಾಗಿ, ಕೇವಲ ಕೆಲವೇ ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಮೌಲ್ಯದಲ್ಲಿ ಸಾವಿರಾರು ರೂಪಾಯಿಗಳ ಇಳಿಕೆಯಾಗಿರುವುದು ಗಮನಾರ್ಹ.

ಇತಿಹಾಸಿಕ ಗರಿಷ್ಠ ಮಟ್ಟದಿಂದ ಇಳಿಕೆಗೆ ಕಾರಣವೇ?:

ಮಾರ್ಚ್ 28ರಂದು ಬೆಳ್ಳಿ ಬೆಲೆ ₹1,00,934 ಎಂಬ ಗರಿಷ್ಠ ಮಟ್ಟ ತಲುಪಿದರೆ,
ಏಪ್ರಿಲ್ 3ರಂದು ಚಿನ್ನ ₹91,205 ರಷ್ಟು ಮೌಲ್ಯವನ್ನು ಕಂಡಿದೆ.
ಈ ಗರಿಷ್ಠ ಮಟ್ಟಗಳ ನಂತರ ಹೂಡಿಕೆದಾರರು ಲಾಭ ಬುಕ್ ಮಾಡುತ್ತಿದ್ದುದು, ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟ ಹೆಚ್ಚಾಗಲು ಕಾರಣವಾಗಿದೆ.
ಕೆಡಿಯಾ ಸಲಹಾ ಸಂಸ್ಥೆಯ ನಿರ್ದೇಶಕ ಅಜಯ್ ಕೆಡಿಯಾ (Ajay Kedia, Director, Kedia Consulting) ಅವರ ಅನಿಸಿಕೆ ಪ್ರಕಾರ, ಈವರೆಗೆ ಚಿನ್ನವು ಈ ವರ್ಷದಲ್ಲಿ 19% ರಷ್ಟು ಲಾಭ ನೀಡಿದೆ. ಹೀಗಾಗಿ, ಷೇರು ಮಾರುಕಟ್ಟೆಯಲ್ಲಿ ನಷ್ಟವನ್ನು ಸಮತೋಲನಗೊಳಿಸಲು ಹೂಡಿಕೆದಾರರು ಚಿನ್ನ ಮಾರಾಟವನ್ನು ಆಯ್ಕೆ ಮಾಡಿದ್ದಾರೆ.

ಹಾಗಿದ್ದರೆ ಮುಂದಿನ ದಿನಗಳಲ್ಲಿ ಏನಾಗಬಹುದು?:

ಈ ಇಳಿಕೆ ಕೆಲ ದಿನಗಳವರೆಗೆ ಮುಂದುವರಿಯಬಹುದಾದರೂ, ಭೌಗೋಳಿಕ-ರಾಜಕೀಯ ಉದ್ವಿಗ್ನತೆ ಹಾಗೂ ಚಿನ್ನದ ಇಟಿಎಫ್ (ETF) ಗಳಲ್ಲಿ ಹೂಡಿಕೆ ಹೆಚ್ಚಾಗುತ್ತಿರುವುದರಿಂದ, ಚಿನ್ನದ ಬೇಡಿಕೆ ಇಡೀ ವರ್ಷ ಉನ್ನತ ಮಟ್ಟದಲ್ಲೇ ಇರಬಹುದೆಂದು ತಜ್ಞರು (Specialist) ಅಭಿಪ್ರಾಯಪಟ್ಟಿದ್ದಾರೆ.
ಅಂದರೆ, ಈ ವರ್ಷದ ಕೊನೆಗೆ 10 ಗ್ರಾಂ ಚಿನ್ನದ ಬೆಲೆ ₹94,000 ರನ್ನೂ ದಾಟಬಹುದು ಎಂಬ ನಿರೀಕ್ಷೆ ಇದೆ.

ಚಿನ್ನ ಖರೀದಿಸುವಾಗ ತಪ್ಪದೇ ಗಮನಿಸಬೇಕಾದ 3 ವಿಷಯಗಳು ಈ ರೀತಿಯಿವೆ:

1. ಪ್ರಮಾಣೀಕೃತ ಚಿನ್ನವನ್ನು ಆಯ್ಕೆಮಾಡಿ: ಖರೀದಿ ಮಾಡುವ ಚಿನ್ನವು ಭಾರತೀಯ ಮಾನದಂಡಗಳ ಬ್ಯೂರೋ (BIS) ನ ಹಾಲ್‌ಮಾರ್ಕ್ ಹೊಂದಿರಲೇಬೇಕು. ಹಾಲ್‌ಮಾರ್ಕ್‌ ಎನ್ನುವುದು ಚಿನ್ನದ ಶುದ್ಧತೆಯ ದೃಢೀಕರಣವಾಗಿದೆ. ಪ್ರತಿ ಹಾಲ್‌ಮಾರ್ಕ್‌ಗೊಂಡ ಆಭರಣದ ಮೇಲೆ 6-ಅಂಕಿಯ HUID (Hallmark Unique Identification) ಅಲ್ಫಾನ್ಯೂಮರಿಕ್ ಕೋಡ್ ಇರುತ್ತದೆ, ಉದಾಹರಣೆಗೆ AZ4524. ಇದು ಚಿನ್ನದ ಮೂಲತತ್ವ ಮತ್ತು ಶುದ್ಧತೆಯ ಖಾತರಿಯ ಸಂಕೇತವಾಗಿದೆ. ಈ ಕೋಡ್‌ನಿಂದ, ಆಭರಣವು ಎಷ್ಟು ಕ್ಯಾರೆಟ್ ಚಿನ್ನದಿಂದ ತಯಾರಿಸಲ್ಪಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ.

2. ಬೆಲೆ ಪರಿಶೀಲನೆ ಮಾಡಿಕೊಳ್ಳಿ: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಬದಲಾಗುತ್ತದೆ. ಆದ್ದರಿಂದ ಖರೀದಿಸುವ ದಿನದ ಚಿನ್ನದ ದರವನ್ನು ಬಹು ಮೂಲಗಳಿಂದ, ವಿಶೇಷವಾಗಿ ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್‌ನ (India Bullion and Jewellers Association) ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ. 24 ಕ್ಯಾರೆಟ್ ಚಿನ್ನ ಶುದ್ಧವಾದುದಾಗಿ ಪರಿಗಣಿಸಲಾಗುತ್ತದೆ, ಆದರೆ ಆಭರಣ ತಯಾರಿಕೆಗೆ 22 ಅಥವಾ 18 ಕ್ಯಾರೆಟ್ ಚಿನ್ನವನ್ನು ಉಪಯೋಗಿಸಲಾಗುತ್ತದೆ. ನಿಮ್ಮ ತೂಕ ಮತ್ತು ಕ್ಯಾರೆಟ್‌ಗೆ ಅನುಗುಣವಾಗಿ ಬೆಲೆಯನ್ನು ಕ್ರಾಸ್‌ಚೆಕ್ ಮಾಡುವುದು ಉತ್ತಮ.

3. ಪಾವತಿ ಪದ್ದತಿಯ ಬಗ್ಗೆ ಎಚ್ಚರಿಕೆ: ಚಿನ್ನ ಖರೀದಿಸಲು ನಗದು ಬಳಸುವುದನ್ನು ತಪ್ಪಿಸಿ. ಭದ್ರವಾಗಿರುವ ಡಿಜಿಟಲ್ ವಿಧಾನಗಳಾದ UPI, ಡೆಬಿಟ್/ಕ್ರೆಡಿಟ್ ಕಾರ್ಡ್ (Debit /Credit card) ಅಥವಾ ಇಂಟರ್ನೆಟ್ ಬ್ಯಾಂಕಿಂಗ್ (Internet banking) ಮೂಲಕ ಪಾವತಿಸಿ. ಇದರ ಜೊತೆಗೆ ಖರೀದಿಗೆ ಸಂಬಂಧಿಸಿದ ಬಿಲ್ ಅಥವಾ ರಶೀದಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಿ. ಆನ್‌ಲೈನ್ ಮೂಲಕ ಆರ್ಡರ್ ಮಾಡಿದ್ದರೆ ಪ್ಯಾಕೇಜಿಂಗ್ ಹಾಗೂ ಹಾಲ್‌ಮಾರ್ಕ್ ಪ್ರಮಾಣಪತ್ರವನ್ನು ಚೆನ್ನಾಗಿ ಪರಿಶೀಲಿಸಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!