Gold Rate Today: ಸತತ 6ನೇ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ.! ಇಂದಿನ ಚಿನ್ನದ ಬೆಲೆ ಇಲ್ಲಿದೆ.!

Picsart 25 04 09 06 14 48 338

WhatsApp Group Telegram Group

ಅಂತಾರಾಷ್ಟ್ರೀಯ ಬೆಳವಣಿಗೆಗಳ ಪ್ರಭಾವ: ಚಿನ್ನ-ಬೆಳ್ಳಿ ದರ ಇಳಿಕೆಯಿಂದ ಮಾರುಕಟ್ಟೆಯಲ್ಲಿ ಚೈತನ್ಯ

ಇತ್ತೀಚಿನ ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯು (Silver and Gold rate) ದಿನೇ ದಿನೇ ಏರಿಕೆಯಾಗುತ್ತಿರುವುದರಿಂದ ಹೂಡಿಕೆದಾರರು ಹಾಗೂ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದರು. ಅಂತಾರಾಷ್ಟ್ರೀಯ ರಾಜಕೀಯ ಅಸ್ಥಿರತೆ, ಶೇರು ಮಾರುಕಟ್ಟೆಯ ಏರಿಳಿತ, ಹಾಗೂ ಜನರ ಭದ್ರತಾ ಹೂಡಿಕೆಯ (Safety Investment) ರೂಪವಾಗಿ ಚಿನ್ನದ ಮೇಲೆ ನಿರೀಕ್ಷೆಯೂ ಹೆಚ್ಚಾಗಿದ್ದವು. ವಿಶೇಷವಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ನೀತಿಗಳು ಜಾಗತಿಕ ಆರ್ಥಿಕ ಪರಿಸ್ಥಿತಿಗೆ ತೀವ್ರ ಪರಿಣಾಮ ಬೀರಿದ್ದು, ಚಿನ್ನದ ಬೆಲೆಗೆ ಪ್ರತಿ ದಿನ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೀಗಿರುವಾಗ, ಏಪ್ರಿಲ್ 8ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸಂಭವಿಸಿದ ಭರ್ಜರಿ ಇಳಿಕೆಯು ಬಂಗಾರದ ಪ್ರಿಯರಿಗೆ ಹಾಗೂ ಸಾಮಾನ್ಯ ಗ್ರಾಹಕರಿಗೆ ಒಂದು ತಾತ್ಕಾಲಿಕ ಸಂತೋಷ (Happiness) ನೀಡಿದಂತಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದ ದರಗಳು ಈಗ ತೀರಾ ಬದಲಾಗಿವೆ. ಕೊನೆಯ ಕೆಲ ವಾರಗಳಲ್ಲಿ ಚಿನ್ನದ ಬೆಲೆಗಳಲ್ಲಿ ದಾಖಲೆಯ ಮಟ್ಟದ ಏರಿಕೆ ಕಂಡುಬಂದಿದ್ದರೆ, ಏಪ್ರಿಲ್ 8ರಂದು ಅದು ತೀವ್ರ ಇಳಿಕೆಗೆ ಇಳಿಕೆಯಾಗಿದೆ . ಇದು ಅಂತಾರಾಷ್ಟ್ರೀಯ ಆರ್ಥಿಕ ಹಾಗೂ ರಾಜಕೀಯ (International economic and politics) ಬೆಳವಣಿಗೆಗಳಿಂದ ಉಂಟಾದ ಪರಿಣಾಮವಾಗಿದ್ದು, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ನೀತಿಗಳು ಹಾಗೂ ಜಾಗತಿಕ ಮಟ್ಟದಲ್ಲಿ (Global level) ನಡೆಯುತ್ತಿರುವ ಟ್ಯಾಕ್ಸ್ ಸಮರಗಳ ಪರಿಣಾಮವಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 9, 2025: Gold Price Today

ಏಪ್ರಿಲ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ನಿರಂತರವಾಗಿ ಏರಿಕೆಯಾಗುತ್ತಿದ್ದರೂ, ಇತ್ತೀಚೆಗೆ ಅದರಲ್ಲಿ ಇಳಿಕೆ ಕಂಡುಬಂದಿದೆ. ಈ ಇಳಿಕೆ ಆಭರಣ ಪ್ರಿಯರು (Gold lovers) ಹಾಗೂ ಖರೀದಿದಾರರಿಗೆ ಒಳ್ಳೆಯ ಅವಕಾಶವಾಗಿ ಪರಿಣಮಿಸಿದೆ. ದರ ಇಳಿಕೆಯ ಹಿನ್ನೆಲೆಯಲ್ಲಿ ಗ್ರಾಹಕರ ಖರೀದಿ ಉತ್ಸಾಹ ಹೆಚ್ಚಿದ್ದು, ಮಾರುಕಟ್ಟೆಯಲ್ಲಿ ಹೊಸ ಚೈತನ್ಯತೆ ಮೂಡಿದೆ. ಹಲವರು ಆಭರಣ ಖರೀದಿಗೆ ಮುಂದಾಗುತ್ತಿರುವ ಕಾರಣದಿಂದ ವ್ಯಾಪಾರಿಗಳು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಹಾಗಿದ್ದರೆ, ಏಪ್ರಿಲ್ 9, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 224 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,972ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,729 ಆಗಿದೆ. ನಿನ್ನಗೆ ಹೋಲಿಸಿದರೆ 24 ರೂ. ನಷ್ಟು ಇಳಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 93, 900 ರೂ ನಷ್ಟಿದ್ದು.

ಅಂತಾರಾಷ್ಟ್ರೀಯ ಕಾರಣಗಳು (International causes) ಮತ್ತು ಭಾರತದಲ್ಲಿನ ಪರಿಣಾಮ:

ಅಮೆರಿಕದ ಆರ್ಥಿಕ ನೀತಿಗಳು, ವಿಶೇಷವಾಗಿ ಟ್ರಂಪ್ ಅವರ ಟ್ಯಾಕ್ಸ್ ವಾರ್ ನೀತಿಯು (Track war rules) ಜಾಗತಿಕ ವ್ಯಾಪಾರದ ಮೇಲೆ ತೀವ್ರ ಪ್ರಭಾವ ಬೀರಿದೆ. ಹೂಡಿಕೆದಾರರು ಸುರಕ್ಷಿತ ಪರ್ಯಾಯಗಳ ಕಡೆಗೆ ಮುಖ ಮಾಡುತ್ತಿರುವ ಸಂದರ್ಭದಲ್ಲಿಯೇ ಚಿನ್ನದ ಬೆಲೆಗಳಲ್ಲಿ ತೀವ್ರ ಏರಿಕೆಯಾಗಿತ್ತು. ಆದರೆ ನಿರೀಕ್ಷೆಗೂ ವಿರುದ್ಧವಾಗಿ ಇತ್ತೀಚೆಗೆ ಶೇರು ಮಾರುಕಟ್ಟೆಯಲ್ಲಿನ (Stock market) ಸ್ಥಿರತೆ ಹಾಗೂ ಭೂ ರಾಜಕೀಯಗಳಿಂದ ಇಳಿಕೆಗೆ ಕಾರಣವಾಗಿವೆ.

ಏಪ್ರಿಲ್ 8ರ ಚಿನ್ನದ ಬೆಲೆ ವಿವರ (ಭಾರತೀಯ ರೂಪಾಯಿಯಲ್ಲಿ):

22 ಕ್ಯಾರೆಟ್ ಚಿನ್ನ:
1 ಗ್ರಾಂ – ₹8,225
10 ಗ್ರಾಂ – ₹82,250
(ಇದು ಹಿಂದಿನ ದಿನಕ್ಕಿಂತ ₹60/ಗ್ರಾಂ, ₹600/10 ಗ್ರಾಂ ಇಳಿಕೆಯಾಗಿದ್ದುದು.)

24 ಕ್ಯಾರೆಟ್ ಚಿನ್ನ:
1 ಗ್ರಾಂ – ₹8,973
10 ಗ್ರಾಂ – ₹89,730
(ಇದರಲ್ಲೂ ಕಳೆದ ಕೆಲವು ದಿನಗಳಲ್ಲಿ ₹6,500ರಷ್ಟು ಇಳಿಕೆ ಕಂಡುಬಂದಿದೆ.).

ಬೆಳ್ಳಿಯ ಬೆಲೆ:
1 ಗ್ರಾಂ ಬೆಳ್ಳಿ – ₹94
1 ಕೆ.ಜಿ ಬೆಳ್ಳಿ – ₹94,000

ಚಿನ್ನದ ಬೆಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಳ್ಳಿಗೆ ಜನರ ಬೇಡಿಕೆ ಹೆಚ್ಚಾಗಿರುವುದು ಸ್ಪಷ್ಟವಾಗಿದೆ.

ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಕಂಡುಬಂದ ಕಾರಣ, ಇತ್ತೀಚಿನ ದಿನಗಳಲ್ಲಿ ಖರೀದಿದಾರರು ಮಾರುಕಟ್ಟೆಯತ್ತ ಓಡಿದ್ದಾರೆ. ಷೇರು ಮಾರುಕಟ್ಟೆಯ (Stock market) ಅವಿಶ್ವಾಸ, ಖಾತರಿ ಇಲ್ಲದ ಬಂಡವಾಳ ಹೂಡಿಕೆ ಮತ್ತು ಭವಿಷ್ಯದಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯ ನಡುವೆ, ಹೂಡಿಕೆದಾರರು ಈಗ ಚಿನ್ನವನ್ನು ಸುರಕ್ಷಿತ ಹೂಡಿಕೆ ಉಪಕರಣವಾಗಿ ನೋಡುತ್ತಿದ್ದಾರೆ.

ಇನ್ನು, ಕರ್ನಾಟಕದ ರಾಜಕೀಯದಲ್ಲಿ (In Karnataka politics) ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಪೈಪೋಟಿ, ನೇರವಾಗಿ ಇಲ್ಲದಿದ್ದರೂ, ಅರ್ಥವ್ಯವಸ್ಥೆಯ ಆಂತರಿಕ ಚಲನೆಗಳ ಮೇಲೆ ಪರಿಣಾಮ ಬೀರಬಹುದು. ಜನ ಸಾಮಾನ್ಯರ ಮೇಲೆ ಈ ಬೆಲೆ ಏರಿಕೆ-ಇಳಿಕೆಗಳು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತಿವೆ.

ಏಪ್ರಿಲ್ 8ರಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಕಂಡುಬಂದ ಇಳಿಕೆ, ಹೂಡಿಕೆದಾರರಿಗೆ ಮತ್ತು ಗ್ರಾಹಕರಿಗೆ (Investers and Buyers) ತಾತ್ಕಾಲಿಕ ಸಂತೋಷವನ್ನು ಒದಗಿಸಬಹುದು. ಆದರೆ ಜಾಗತಿಕ ಆರ್ಥಿಕ ಬೆಳವಣಿಗೆಗಳು, ರಾಜಕೀಯ ಸ್ಥಿರತೆ ಹಾಗೂ ಮಾರುಕಟ್ಟೆಯ ದಿಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಬೆಲೆಗಳಲ್ಲಿ ಮತ್ತೆ ಏರಿಕೆ ಆಗುವ ಸಾಧ್ಯತೆ ಕಾಡುತ್ತಿದೆ. ಆದ್ದರಿಂದ ಚಿನ್ನ ಹಾಗೂ ಬೆಳ್ಳಿಯಲ್ಲಿ ಹೂಡಿಕೆ ಮಾಡುವ ಮುನ್ನ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!