ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ: ಏಪ್ರಿಲ್ 10, 2025ರ ಹೊಸ ದರಗಳ ವಿವರ ಇಲ್ಲಿದೆ
ಭಾರತೀಯರು ಚಿನ್ನವನ್ನು ಕೇವಲ ಆಭರಣ ಅಥವಾ ಹೂಡಿಕೆ ವಸ್ತುವೆಂದು ಮಾತ್ರ ನೋಡುವುದಿಲ್ಲ. ಇದು ಸಂಸ್ಕೃತಿಯ ಭಾಗ, ಗೌರವದ ಸಂಕೇತ ಮತ್ತು ವೈಯಕ್ತಿಕ ಹಾಗೂ ವೈವಾಹಿಕ ಜೀವನದ ಅವಿಭಾಜ್ಯ ಅಂಗವಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಚಿನ್ನ ಎಂದರೆ ಖುಷಿಯ ಪ್ರತೀಕ. ಆದರೆ ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ನಡೆಯುತ್ತಿರುವ ಏರಿಳಿತ (Chanegs) ಜನರ ಗೊಂದಲಕ್ಕೆ ಕಾರಣವಾಗುತ್ತಿದೆ. ನಿನ್ನೆ ಬೆಳ್ಳಗೆ ಇಳಿಕೆಯಾಗಿದ್ದ ಚಿನ್ನದ ದರ ಸಂಜೆ ಅಷ್ಟರಲ್ಲಿ ಮತ್ತೆ ಏರಿಕೆಯಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 10, 2025: Gold Price Today
ಮುಂಬೈ ಸೇರಿದಂತೆ ಭಾರತದ ಪ್ರಮುಖ ನಗರಗಳ ಚಿಲ್ಲರೆ ಮಾರುಕಟ್ಟೆಯಲ್ಲಿ ನಿನ್ನೆ ಚಿನ್ನದ ಬೆಲೆ ಮತ್ತೊಮ್ಮೆ ಏರಿಕೆಯಾಗಿದೆ. ಕಳೆದ ಎರಡು ದಿನಗಳಲ್ಲಿ ಚಿನ್ನದ ದರ ಇಳಿಕೆಯಾಗಿದ್ದರೂ, ನಿನ್ನೆಯಾದ ದಿಢೀರ್ ಏರಿಕೆ ಜನರಲ್ಲಿ ನಿರಾಸೆ ಮೂಡಿಸಿದೆ. ಬೆಲೆ ಇಳಿಕೆಯಾಗುವ ನಿರೀಕ್ಷೆಯಲ್ಲಿ ಕಾಯುತ್ತಿದ್ದವರಿಗೆ ಶಾಕ್ (Shock) ಆಗಿದ್ದು, ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಹಾಗಿದ್ದರೆ, ಏಪ್ರಿಲ್ 10, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,291 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,045ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,784 ಆಗಿದೆ. ನಿನ್ನಗೆ ಹೋಲಿಸಿದರೆ 67 ರೂ. ನಷ್ಟು ಏರಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 92, 900 ರೂ ನಷ್ಟಿದ್ದು. ನಿನ್ನಗೆ ಹೋಲಿಸಿದರೆ 1000 ರೂ. ನಷ್ಟು ಇಳಿಕೆಯಾಗಿದೆ.
ಹೌದು, ಭಾರತೀಯ ಸಮಾಜಿಕ-ಸಾಂಸ್ಕೃತಿಕ (Indian social and cultural) ಪರಿಸರದಲ್ಲಿ ಚಿನ್ನಕ್ಕಿರುವ ಪ್ರಾಧಾನ್ಯತೆ ಅಪಾರ. ವಿವಾಹ ಸಮಾರಂಭದಿಂದ ಹಿಡಿದು ಧಾರ್ಮಿಕ ಆಚರಣೆಗಳವರೆಗೆ, ಚಿನ್ನವು ಶ್ರೀಮಂತಿಕೆ, ಗೌರವ ಹಾಗೂ ಸಾಂಪ್ರದಾಯಿಕತೆಯ ಪ್ರತೀಕವಾಗಿಯೇ ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಚಿನ್ನದ ಬೆಲೆಯ ಏರಿಳಿತವು ಜನರ ಗಮನ ಸೆಳೆಯುತ್ತಿದೆ. ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಜನರು “ಇನ್ನು ಕಡಿಮೆಯಾಗಬಹುದು” ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದರೆ, ಆದರೆ ಇಂದಿನ ಏರಿಕೆ ನಿರಾಸೆಯನ್ನು ಉಂಟು ಮಾಡಿದೆ. ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಏಪ್ರಿಲ್ 9, 2025 ಚಿನ್ನದ ದರದಲ್ಲಿ ಸ್ಪಷ್ಟ ಏರಿಕೆ ಕಂಡುಬಂದಿದೆ.
ಏಪ್ರಿಲ್ 9, 2025 ಚಿನ್ನದ ದರದ ವಿವರ ಹೀಗಿದೆ:
22 ಕ್ಯಾರಟ್ ಚಿನ್ನ:
1 ಗ್ರಾಂ: ₹8,290 (ಹೆಚ್ಚಳ ₹65)
10 ಗ್ರಾಂ: ₹82,900 (ಹೆಚ್ಚಳ ₹650)
100 ಗ್ರಾಂ: ₹8,29,000 (ಹೆಚ್ಚಳ ₹6,500)
24 ಕ್ಯಾರಟ್ ಚಿನ್ನ:
1 ಗ್ರಾಂ: ₹9,044 (ಹೆಚ್ಚಳ ₹71)
10 ಗ್ರಾಂ: ₹90,440 (ಹೆಚ್ಚಳ ₹710)
100 ಗ್ರಾಂ: ₹9,04,400 (ಹೆಚ್ಚಳ ₹7,100)
18 ಕ್ಯಾರಟ್ ಚಿನ್ನ:
1 ಗ್ರಾಂ: ₹6,783 (ಹೆಚ್ಚಳ ₹53)
10 ಗ್ರಾಂ: ₹54,264 (ಹೆಚ್ಚಳ ₹424)
100 ಗ್ರಾಂ: ₹6,78,300 (ಹೆಚ್ಚಳ ₹5,300)
ವಿಭಿನ್ನ ನಗರಗಳಲ್ಲಿನ ಚಿನ್ನದ ದರ (1 ಗ್ರಾಂ):
ಬೆಂಗಳೂರು/ಚೆನ್ನೈ/ಹೈದರಾಬಾದ್/ಕೋಲ್ಕತಾ:
22 ಕ್ಯಾರಟ್: ₹8,290
24 ಕ್ಯಾರಟ್: ₹9,044
18 ಕ್ಯಾರಟ್: ₹6,783
ದೆಹಲಿ:
22 ಕ್ಯಾರಟ್: ₹8,305
24 ಕ್ಯಾರ್ಟ್: ₹9,059
18 ಕ್ಯಾರ್ಟ್: ₹6,795
ಅಹಮದಾಬಾದ್/ಬರೋಡಾ:
22 ಕ್ಯಾರಟ್: ₹8,229
24 ಕ್ಯಾರ್ಟ್: ₹9,049
18 ಕ್ಯಾರ್ಟ್: ₹6,733
ಬೆಳ್ಳಿ ಬೆಲೆ ಇಳಿಕೆ:
ಚಿನ್ನದ ದರ ಏರಿಕೆಯನ್ನು ಕಂಡಿದ್ದರೆ ಬೆಳ್ಳಿ ಬೆಲೆಯು ಸ್ವಲ್ಪ ಇಳಿಕೆಯಾಗಿದೆ.
10 ಗ್ರಾಂ: ₹930
100 ಗ್ರಾಂ: ₹9,300
1 ಕೆ.ಜಿ: ₹93,000
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International market) ಚಿನ್ನದ ಸ್ಥಿತಿ:
ಏಪ್ರಿಲ್ 9ರ ಬೆಳಿಗ್ಗೆ 5 ಗಂಟೆಗೆ ಸ್ಪಾಟ್ ಗೋಲ್ಡ್ (Spot gold) ಪ್ರತಿ ಔನ್ಸ್ $3,010.39 ಗೆ ವ್ಯಾಪಾರವಾಗುತ್ತಿದ್ದು, ಶೇಕಡಾ 1ರಷ್ಟು ಏರಿಕೆಯಾಗಿದೆ. ಅಮೆರಿಕದ ಫ್ಯೂಚರ್ಸ್ ಗೋಲ್ಡ್ ಕೂಡ $3,026.90 ಗೆ ವ್ಯಾಪಾರವಾಗಿದೆ.
ಚಿನ್ನದ ಬೆಲೆಯ ಏರಿಳಿಗೆ ಕಾರಣಗಳು:
ಚಿನ್ನದ ಬೆಲೆ ಏರಿಕೆಗೆ ಹಲವು ಅಂತರಾಷ್ಟ್ರೀಯ ಹಾಗೂ ದೇಶೀಯ ಅಂಶಗಳು (International and local elements) ಕಾರಣವಾಗುತ್ತವೆ. ಜಾಗತಿಕ ಮಾರುಕಟ್ಟೆಯಲ್ಲಿ ದಟ್ಟಿರುವ ಅಸ್ಥಿರತೆ, ಅಮೆರಿಕದ ಬಡ್ಡಿದರ ನೀತಿ, ಭಾರತದಲ್ಲಿ ನಾಣ್ಯದ ಮೌಲ್ಯದಲ್ಲಿ ಬದಲಾವಣೆ, ರಾಜಕೀಯ ಗೊಂದಲಗಳು, ತೈಲ ಬೆಲೆ, ಹಾಗೂ ಹೂಡಿಕೆದಾರರ ವಿಶ್ವಾಸ ಎಲ್ಲವೂ ಚಿನ್ನದ ಬೇಡಿಕೆ ಹಾಗೂ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ.
ಚಿನ್ನವನ್ನು ‘ಸುರಕ್ಷಿತ ಹೂಡಿಕೆ’ ಎಂದು ಪರಿಗಣಿಸುವ ಹೂಡಿಕೆದಾರರು (investers) ಮಾರುಕಟ್ಟೆಯಲ್ಲಿ ಬೆಲೆ ಏರಿದಾಗ ಹೆಚ್ಚಿನ ಖರೀದಿಗೆ ಮುಂದಾಗುತ್ತಾರೆ. ಇದೇ ನಿರೀಕ್ಷೆಯಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗುತ್ತದೆ. ಹಾಗಾಗಿ ಚಿನ್ನದ ಖರೀದಿಯಲ್ಲಿ ಮುಕ್ತಾಯವಿಲ್ಲದ ತಲೆಕೆಡಿಸಿಕೊಳ್ಳುವಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಗೊಂದಲ ಮುಂದುವರಿಯುತ್ತಲೇ ಇರುತ್ತದೆ.
ಚಿನ್ನದ ಬೆಲೆಯ ಏರಿಕೆ (rate increased) ಭಾರತೀಯ ಜನತೆಗೆ ನಿರಂತರ ಚಿಂತೆ ತಂದಿದ್ದರೂ, ಇದನ್ನು ಉಡುಗೊರೆಯಾಗಿ ನೀಡುವ ಮನೋಭಾವ, ಅದರ ಮೇಲಿನ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ. ಇಂದಿನ ದರವು ಸ್ಥಿರತೆ (stability) ತೋರಿದರೂ, ಮುಂದಿನ ದಿನಗಳಲ್ಲಿ ಯಾವ ದಿಕ್ಕು ತಗೆದುಕೊಳ್ಳುತ್ತದೆ ಎಂಬುದು ಜಾಗತಿಕ ಬದಲಾವಣೆಗಳ ಮೇಲೆ ನಿರ್ಧಾರವಾಗಿರುತ್ತವೆ. ಹೀಗಾಗಿ ಚಿನ್ನ ಖರೀದಿಸುವ ಮೊದಲು ನವೀನ ದರಗಳನ್ನು ಪರಿಶೀಲಿಸಿ, ಆರ್ಥಿಕ ಪರಿಸ್ಥಿತಿಯನ್ನು (Economic situation) ಸಮೀಕ್ಷಿಸಿ ಖರೀದಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.