Gold Rate Today : ಚಿನ್ನದ ಬೆಲೆ ಮತ್ತೇ ಏರಿಕೆ.! ಬರೋಬ್ಬರಿ 1 ಲಕ್ಷ ರೂ ಗಡಿ, ಇಂದಿನ ಚಿನ್ನದ ದರಪಟ್ಟಿ ಇಲ್ಲಿದೆ.

Picsart 25 04 14 06 52 36 480

WhatsApp Group Telegram Group

ಚಿನ್ನದ ಬೆಲೆ 1 ಲಕ್ಷ ಗಡಿಗೆ ಸಮೀಪ: ಏಪ್ರಿಲ್ 14ರ(April 14 th) ಬೆಳವಣಿಗೆಗಳು ಚಿನ್ನಪ್ರಿಯರಲ್ಲಿ ಆತಂಕ ಸೃಷ್ಟಿಸಿದೆ!

ಭಾರತೀಯರು ತಮ್ಮ ಜೀವನಶೈಲಿಯಲ್ಲಿ ಚಿನ್ನಕ್ಕೆ ನೀಡುವ ಮಹತ್ವ ಎಲ್ಲರಿಗೂ ತಿಳಿದಿರುವ ವಿಷಯ. ಮದುವೆ, ಉತ್ಸವ, ಹಬ್ಬಗಳ ಸಂದರ್ಭದಲ್ಲಿ ಮಾತ್ರವಲ್ಲದೆ, ಭವಿಷ್ಯಕ್ಕಾಗಿ ಹೂಡಿಕೆ(investment) ಮಾಡಿಕೊಳ್ಳುವ ಭದ್ರವಾದ ಮಾರ್ಗವಾಗಿ ಸಹ ಚಿನ್ನವನ್ನು ಪರಿಗಣಿಸಲಾಗುತ್ತದೆ. ಹೀಗಿರುವಾಗ, ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಕಂಡು ಬಂದಿರುವ ಭರ್ಜರಿ ಏರಿಕೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಚಿನ್ನದ ದರ ಇತಿಹಾಸದಲ್ಲೇ ಕಂಡಿರದ ಮಟ್ಟಿಗೆ ಏರಿಕೆಯಾಗಿದೆ. ಈ ಬೆಲೆ ಏರಿಕೆಯಿಂದ ಚಿನ್ನ ಖರೀದಿಸುವ ಗ್ರಾಹಕರಲ್ಲಿ ಆತಂಕ ಸೃಷ್ಟಿಯಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 14, 2025: Gold Price Today

ಇತ್ತೀಚಿನ ದಿನಗಳಲ್ಲಿ ಚಿನ್ನದ ದರ ಭಾರಿ ಏರಿಕೆಯನ್ನು ಕಾಣುತ್ತಿದ್ದು, ಖರೀದಿಸಲು ಇಚ್ಛಿಸುತ್ತಿದ್ದ ಗ್ರಾಹಕರು ಚಿನ್ನ ಖರೀದಿಸಲು ಮೂರ್ನಾಲ್ಕು ಬಾರಿ ಯೋಚನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮದುವೆ ಸಮಾರಂಭಗಳು ಹಬ್ಬ ಹರಿದಿನಗಳು ಹೀಗೆ ಹಲವು ಸಂದರ್ಭಗಳಲ್ಲಿ ಚಿನ್ನ ಬಹಳ ಮುಖ್ಯ. ಹೀಗಿರುವಾಗ ಈ ರೀತಿಯ ಚಿನ್ನದ ದರ ಏರಿಕೆ ಗ್ರಾಹಕರಲ್ಲಿ ನಿರಾಸೆಯನ್ನು ಮೂಡುವಂತೆ ಮಾಡಿದೆ. ಹಾಗಿದ್ದರೆ, ಏಪ್ರಿಲ್ 14, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 769 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,566 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,175 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 99,000. ರೂ ನಷ್ಟಿದ್ದು. 

ಚಿನ್ನದ ದರವು ಕೆಲ ದಿನಗಳ ಹಿಂದಷ್ಟೇ ಇಳಿಕೆಯ ಹಾದಿಯಲ್ಲಿ ಸಾಗುತ್ತಿದ್ದರೂ, ಕಳೆದ ಮೂರು ದಿನಗಳಲ್ಲಿ ತೀವ್ರ ಏರಿಕೆಯನ್ನು ಕಂಡಿದೆ. ಏಕಾಏಕಿ 3,000 ರೂಪಾಯಿ ಮಟ್ಟಿಗೆ ಬೆಲೆ ಜಿಗಿತಗೊಂಡಿರುವುದು ಈ ವ್ಯತ್ಯಾಸಕ್ಕೆ ಕಾರಣವಾಗಿದೆ. ವಾರಾಂತ್ಯದ ಅವಧಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 95,670 ರೂಪಾಯಿಗೆ ತಲುಪಿದ್ದು, ಇನ್ನು ಕೇವಲ 3,500 ರೂಪಾಯಿ ಮಾತ್ರ ಬಾಕಿ ಇದೆ 1 ಲಕ್ಷ ರೂಪಾಯಿಗೆ( 1 lakh ) ಮುಟ್ಟಲು. ಈ ಮೂಲಕ ಚಿನ್ನದ ಬೆಲೆ ತನ್ನ ಇತಿಹಾಸದಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ಎಪ್ರಿಲ್ 13ರ ಚಿನ್ನದ ದರದ ವಿವರ:

18 ಕ್ಯಾರೆಟ್‌ ಚಿನ್ನ:
1 ಗ್ರಾಂಗೆ ₹7,176
10 ಗ್ರಾಂಗೆ ₹71,760

22 ಕ್ಯಾರೆಟ್‌ ಚಿನ್ನ:
1 ಗ್ರಾಂಗೆ ₹8,770
10 ಗ್ರಾಂಗೆ ₹87,700

24 ಕ್ಯಾರೆಟ್‌ ಚಿನ್ನ:
1 ಗ್ರಾಂಗೆ ₹9,567
10 ಗ್ರಾಂಗೆ ₹95,670

ಅಮೆರಿಕದ ಆರ್ಥಿಕ ನೀತಿಯು(American economic policy) ಈ ಬೆಲೆ ಏರಿಕೆಗೆ ಪೂರಕವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್(US President Donald Trump) ಅವರು ಹೇರಿದ ಹೊಸ ತೆರಿಗೆ ನೀತಿಗಳು ಮತ್ತು ಜಾಗತಿಕ ಆರ್ಥಿಕ ಅಸ್ಥಿರತೆ ಚಿನ್ನದ ದರದ ಮೇಲೆ ಸ್ಪಷ್ಟ ಪರಿಣಾಮ ಬೀರಿವೆ. ಈ ನೀತಿಗಳಿಂದ ಷೇರುಮಾರುಕಟ್ಟೆ ತಾತ್ಕಾಲಿಕ ಚೇತರಿಕೆ ಕಂಡಿದ್ದರೂ, ನಿಜವಾದ ಲೆಕ್ಕಾಚಾರಗಳು ಮಾರುಕಟ್ಟೆಯನ್ನು ಕಾಡುತ್ತಿರುವುದು ಸ್ಪಷ್ಟವಾಗಿದೆ.
ಇನ್ನು ಅದೇ ರೀತಿಯಾಗಿ, ವಿಶ್ವದಾದ್ಯಂತ ಆರ್ಥಿಕ ಸಂಕಷ್ಟಗಳು ತೀವ್ರಗೊಂಡಿರುವ ಈ ಸಂದರ್ಭದಲ್ಲಿ ಬಹುತೇಕ ಜನರು ತಮ್ಮ ಹಣವನ್ನು ಸುರಕ್ಷಿತ ಆಸ್ತಿ ರೂಪದಲ್ಲಿ ಇಡಲು ಚಿನ್ನವನ್ನೇ ಆಯ್ಕೆ ಮಾಡುತ್ತಿದ್ದಾರೆ. ಅಮೆರಿಕದ ಆರ್ಥಿಕ ನೀತಿಗಳು ಹಾಗೂ ಷೇರು ಮಾರುಕಟ್ಟೆಯ(Stock market) ಅಸ್ಥಿರತೆಯಿಂದಾಗಿ ಬಹಳಷ್ಟು ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಿದ್ದಾರೆ.
ಹೀಗಾಗಿ ಡಿಮಾಂಡ್ ಹೆಚ್ಚಾದಂತೆ ಬೆಲೆ ಕೂಡ ಭರ್ಜರಿಯಾಗಿ ಏರುತ್ತಿದೆ. ಮೂರು ದಿನಗಳ ಹಿಂದೆಲೇ ಸುಮಾರು ₹3,000ರಷ್ಟು ಏರಿಕೆ ಕಂಡಿದ್ದು, ಇದರ ಪರಿಣಾಮವಾಗಿ ದರಗಳು ಮಾರುಕಟ್ಟೆ ಅಂದಾಜಿಗಿಂತ ಹೆಚ್ಚು ವೇಗದಲ್ಲಿ ಏರಿವೆ.

ಮುಂದಿನ ದಿನಗಳಲ್ಲಿ ಯಾವರೀತಿಯ ನಿರೀಕ್ಷೆಯಿದೆ?:

ಆರ್ಥಿಕ ತಜ್ಞರ ಪ್ರಕಾರ, ಇದೇ ತಿಂಗಳ ಕೊನೆಗೆ ಅಥವಾ ಮುಂದಿನ ವಾರದೊಳಗೆ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಗಡಿ ದಾಟುವುದು ಬಹುತೇಕ ಖಚಿತವಾಗಿದೆ. ಇದು ಕೇವಲ ಭಾವನೆಗಳ ಕಾರಣವಲ್ಲ, ಬದಲಾಗಿ ಜಾಗತಿಕ ಆರ್ಥಿಕ ಚಲನೆ ಮತ್ತು ಆರ್ಥಿಕ ನಿರ್ಣಯಗಳಿಂದ ಕೂಡಿದ ಪರಿಣಾಮವಾಗಿದೆ.

ಈ ದಿನಗಳಲ್ಲಿ ಚಿನ್ನ ಖರೀದಿ ಸಿಂಪಲ್ ವ್ಯವಹಾರವಲ್ಲ. ಬೆಳೆಯುತ್ತಿರುವ ದರ, ಜಾಗತಿಕ ಆರ್ಥಿಕ ಅನಿಶ್ಚಿತತೆ, ಮತ್ತು ಹೂಡಿಕೆದಾರರ ಆತಂಕ, ಇವೆಲ್ಲದರ ಮಧ್ಯೆ ಚಿನ್ನವು ಮತ್ತಷ್ಟು ಮೌಲ್ಯಶಾಲಿಯಾದ ಆಸ್ತಿ ಆಗುತ್ತಿದೆ. ಆದ್ದರಿಂದ, ಚಿನ್ನ ಖರೀದಿಸುವ ಮುನ್ನ ಮಾರುಕಟ್ಟೆ ದರದ ಬಗ್ಗೆ ಪರಿಶೀಲನೆ ಮಾಡುವುದು ಸೂಕ್ತ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!