Gold Rate Today : ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ.! ಇಲ್ಲಿದೆ ಇಂದಿನ ಚಿನ್ನದ ದರ ಪಟ್ಟಿ.!

Picsart 25 04 16 06 50 15 785

WhatsApp Group Telegram Group

ಚಿನ್ನದ ಪ್ರಿಯರಿಗೆ ಶುಭ ಸುದ್ದಿ! ಏಪ್ರಿಲ್ 16ರಂದು(16th April) ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ – ಪ್ರಮುಖ ನಗರಗಳ ಇಂದಿನ ದರ ಇಲ್ಲಿದೆ

ಚಿನ್ನವು ಭಾರತೀಯರ ಜೀವನಶೈಲಿಯ ಅವಿಭಾಜ್ಯ ಅಂಗ. ಅದು ಕೇವಲ ಆಭರಣವಷ್ಟೇ ಅಲ್ಲ, ಹೂಡಿಕೆಯ ಮಾಧ್ಯಮವಾಗಿಯೂ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಿಹ್ನೆಯಾಗಿಯೂ ಪರಿಗಣನೆಯಾಗಿದೆ. ಮದುವೆ, ಹಬ್ಬಗಳು, ಉಪನಯನ, ಮನೆ ಪ್ರವೇಶದಂತಹ ಪ್ರಮುಖ ಸಂದರ್ಭಗಳಲ್ಲಿ ಚಿನ್ನದ ಬಳಕೆ ಅಪಾರವಾಗಿದ್ದು, ಇದಕ್ಕೆ ಭಾರತದಲ್ಲಿ ವಿಶೇಷ ಸ್ಥಾನವಿದೆ. ಇಂತಹ ಹಿನ್ನೆಲೆಯಲ್ಲೇ,  ಏರಿಕೆ ಕಂಡ ಚಿನ್ನದ ಬೆಲೆಯಲ್ಲಿ ಇದೀಗ ನಿರೀಕ್ಷಿತ ಇಳಿಕೆಯಾಗಿದ್ದು, ಗ್ರಾಹಕರ ಮುಖದಲ್ಲಿ ಪುನಃ ಸಂತೋಷ ಕಾಣುತ್ತಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 16, 2025: Gold Price Today

ಚಿನ್ನದ ದರದಲ್ಲಿ ಏರುಪೇರುಗಳು ಸದಾ ಆಗುತ್ತಲೇ ಇವೆ. ಒಂದೆರಡು ದಿನ ಚಿನ್ನದ ದರ(gold price ) ಇಳಿಕೆಯನ್ನು ಕಂಡರೆ, ಮತ್ತೆ ಏರಿಕೆಯನ್ನು ಕಾಣುತ್ತಾ ಗ್ರಾಹಕರನ್ನು ಗೊಂದಲಮಯಗೊಳಿಸುತ್ತಿದೆ. ಆದರೆ ನೆನ್ನೆಯಿಂದ ಚಿನ್ನದ ದರ ಸ್ವಲ್ಪಮಟ್ಟಿನ ಇಳಿಕೆಯನ್ನು ಕಾಣುತ್ತಿದ್ದು, ಗ್ರಾಹಕರು ಸ್ವಲ್ಪಮಟ್ಟಿನ ನಿರಾಳತೆಯನ್ನು ಅನುಭವಿಸುತ್ತಿದ್ದಾರೆ. ಹಾಗಿದ್ದರೆ, ಏಪ್ರಿಲ್ 16, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 719 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,517 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,134 ಆಗಿದೆ. ನಿನ್ನಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ 35 ರೂ. ನಷ್ಟು ಇಳಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 99,700. ರೂ ನಷ್ಟಿದ್ದು.  100 ರೂ. ನಷ್ಟು ಇಳಿಕೆ ಯಾಗಿದೆ.

ಚಿನ್ನದ ದರದಲ್ಲಿ ಏಕಾಏಕಿ ಕುಸಿತ!

ಮಂಗಳವಾರ, ಏಪ್ರಿಲ್ 15, 2025ರ ಬೆಳಗ್ಗೆ ಭಾರತದಲ್ಲಿ ಚಿನ್ನದ ದರದಲ್ಲಿ ಭಾರೀ ಇಳಿಕೆ ಕಂಡುಬಂದಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಸುಮಾರು ₹350 ರಷ್ಟು ಇಳಿಕೆಯಾಗಿದ್ದು, ಇದು ಕಳೆದ ಕೆಲವು ವಾರಗಳಿಗೆ ಹೋಲಿಸಿದರೆ ಲಾಭದಾಯಕ ಇಳಿಕೆಯಾಗಬಹುದು. ಇತ್ತೀಚೆಗೆ ದಾಖಲೆ ಮಟ್ಟ ತಲುಪಿದ್ದ ಚಿನ್ನದ ದರ, ಇದೀಗ ಕ್ಷಣಿಕವಾಗಿ ಇಳಿಕೆ ಕಂಡಿದೆ.

ಏಪ್ರಿಲ್ 15, 2025 ರಂದು ಪ್ರಮುಖ ನಗರಗಳ ಚಿನ್ನದ ದರಗಳ ವಿವರ ಹೀಗಿದೆ:

22 ಕ್ಯಾರೆಟ್ 10 ಗ್ರಾಂ ಚಿನ್ನ ದರ,
ದೆಹಲಿ: ₹87,350
ಜೈಪುರ್: ₹87,350
ಅಹಮದಾಬಾದ್: ₹87,250
ಪಾಟ್ನಾ: ₹87,250
ಮುಂಬೈ: ₹87,200
ಹೈದ್ರಾಬಾದ್: ₹87,200
ಚೆನ್ನೈ: ₹87,200
ಬೆಂಗಳೂರು: ₹87,200
ಕೊಲ್ಕತ್ತಾ: ₹87,200

24 ಕ್ಯಾರೆಟ್ 10 ಗ್ರಾಂ ಚಿನ್ನ ದರ,
ದೆಹಲಿ: ₹95,330
ಜೈಪುರ್: ₹95,330
ಅಹಮದಾಬಾದ್: ₹95,230
ಪಾಟ್ನಾ: ₹95,230
ಮುಂಬೈ: ₹95,180
ಹೈದ್ರಾಬಾದ್: ₹95,180
ಚೆನ್ನೈ: ₹95,180
ಬೆಂಗಳೂರು: ₹95,180
ಕೊಲ್ಕತ್ತಾ: ₹95,180

ಬೆಳ್ಳಿ ದರವೂ ಇಳಿಕೆಯಾಗುತ್ತಿದೆ:

ಮುಂಬೈನಲ್ಲಿ(Mumbai) ಬೆಳ್ಳಿ ದುರ್ಬಲ ವಹಿವಾಟು ನಡೆಸುತ್ತಿದೆ. ಏಪ್ರಿಲ್ 15, 2025 ರಂದು ಬೆಳ್ಳಿ ದರ ಕೆಜಿಗೆ ₹99,800 ರಷ್ಟರಲ್ಲಿದೆ. ಕಳೆದ ಕೆಲವು ದಿನಗಳಲ್ಲಿ ಬೆಳ್ಳಿ ಮಾರುಕಟ್ಟೆಯು ಸ್ಥಿರತೆಯಿಂದ ದೂರವಿರುವುದು ಕಂಡುಬಂದಿದೆ.

ಚಿನ್ನದ ಬೆಲೆಯಲ್ಲಿ ಇಳಿಕೆಗೆ ಕಾರಣವೇನು?:

ಭಾರತದಲ್ಲಿ ಚಿನ್ನದ ದರವನ್ನು ಹಲವಾರು ಅಂಶಗಳು ಪ್ರಭಾವಿಸುತ್ತವೆ. ಇವುಗಳಲ್ಲಿ ಪ್ರಮುಖವಾದವುಗಳು,
ಅಂತರರಾಷ್ಟ್ರೀಯ(International) ಮಾರುಕಟ್ಟೆಯ ದರಗಳು.
ಆಮದು ಸುಂಕಗಳು ಮತ್ತು ಜಿಎಸ್‌ಟಿ(GST).
ವಿದೇಶೀ ವಿನಿಮಯ ದರಗಳು (USD-INR ವಿನಿಮಯ ದರ).
ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ(Geopolitics) ಅಸ್ಥಿರತೆಗಳು.

ಚಿನ್ನ ಖರೀದಿಗೆ ಉತ್ತಮ ಸಮಯವೇ?:

ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿರುವುದು ಹೂಡಿಕೆದಾರರು ಮತ್ತು ಆಭರಣ ಪ್ರಿಯರಿಗೆ ಉತ್ತಮ ಅವಕಾಶ ಒದಗಿಸುತ್ತಿದೆ. ವಿಶೇಷವಾಗಿ ಮದುವೆ ಅಥವಾ ಹಬ್ಬದ ಸೀಸನ್ ಮುಂಗಡ ಯೋಜನೆಯ ಭಾಗವಾಗಿ ಚಿನ್ನ ಖರೀದಿಸಲು ಇದು ಸೂಕ್ತ ಸಮಯವಾಗಬಹುದು. ಆದರೆ, ಮಾರುಕಟ್ಟೆಯ ಸದುಪಯೋಗ ಪಡೆದುಕೊಳ್ಳಲು ದರಗಳ ಮೇಲಿನ ನಿಗಾ ಮುಂದುವರಿಸುವುದು ಬುದ್ಧಿವಂತಿಕೆ.

ಈ ರೀತಿಯ ಅಂಶಗಳು ದಿನದಿಂದ ದಿನಕ್ಕೆ ಚಿನ್ನದ ದರದ ಏರಿಳಿತಕ್ಕೆ ಕಾರಣವಾಗುತ್ತವೆ. ಹೀಗಾಗಿ, ಚಿನ್ನದ ಖರೀದಿದಾರರು ಮತ್ತು ಹೂಡಿಕೆದಾರರು(Investors) ದಿನನಿತ್ಯದ ದರಗಳ ಮೇಲೆ ನಿಗಾ ಇಡುವುದು ಅತ್ಯಂತ ಅವಶ್ಯಕವಾಗಿದೆ.

ಇನ್ನು ಮುಂದೆ ಚಿನ್ನದ ಮಾರುಕಟ್ಟೆಯಲ್ಲಿ ಮತ್ತಷ್ಟು ಏರುಪೇರುಗಳ ನಿರೀಕ್ಷೆಯಿದೆ. ಹೀಗಾಗಿ, ದೈನಂದಿನ ಚಿನ್ನದ ದರಗಳನ್ನು ಗಮನಿಸಿ, ನಿರ್ಧಾರ ತೆಗೆದುಕೊಳ್ಳಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!