Gold Rate Today: ಚಿನ್ನದ ಬೆಲೆ ಇಂದು ಸತತ ಏರಿಕೆ.! ರಾಜ್ಯದಲ್ಲಿ ಎಪ್ರಿಲ್ 22ರಂದು ಚಿನ್ನ ಬೆಳ್ಳಿ ಬೆಲೆ.!

Picsart 25 04 22 06 51 15 628

WhatsApp Group Telegram Group

ಬೆಂಗಳೂರಿನಲ್ಲಿ ಏಪ್ರಿಲ್ 22, 2025ರ ಚಿನ್ನದ ಮಾರುಕಟ್ಟೆಯ ಸ್ಫೋಟಕ ಬೆಳವಣಿಗೆ – ಗ್ರಾಹಕರಿಗೆ ಬಿಗ್ ಶಾಕ್

ಚಿನ್ನವು (Gold) ಭಾರತೀಯರ ಬದುಕಿನಲ್ಲಿ ಕೇವಲ ಲೋಹವಲ್ಲ  ಅದು ಭರವಸೆ, ಭದ್ರತೆ ಮತ್ತು ಸಂಸ್ಕೃತಿಯ ಸಂಕೇತ. ಮದುವೆ, ಹಬ್ಬ, ಧಾರ್ಮಿಕ ಕಾರ್ಯಕ್ರಮವೇ ಇರಲಿ, ಚಿನ್ನ ಖರೀದಿ ಬಹಳ ಮುಖ್ಯ. ಇದೀಗ ಚಿನ್ನದ ಮಾರುಕಟ್ಟೆಯಲ್ಲಿ ನಡೆದಿರುವ ಬೃಹತ್ ಬದಲಾವಣೆಯು ಆಭರಣ ಪ್ರಿಯರಿಗೆ ಶಾಕ್ (Shock) ನೀಡಿದೆ. ಏಪ್ರಿಲ್ 21ರಂದು ಚಿನ್ನದ ದರದಲ್ಲಿ ಸಂಭವಿಸಿದ ಭಾರೀ ಏರಿಕೆ, ದೇಶದಾದ್ಯಂತ ಗ್ರಾಹಕರನ್ನು ಅಚ್ಚರಿ ಗೊಳಿಸಿದೆ. ವಿಶೇಷವಾಗಿ ಮದುವೆ ಹಾಗೂ ಹಬ್ಬದ ಸೀಸನ್ (Marriage and Festival season) ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಚಿನ್ನದ ಬೆಲೆ ಗಗನಕ್ಕೇರಿರುವುದು ಜನಸಾಮಾನ್ಯರು ನಿರಾಸೆಗೊಳ್ಳುವಂತೆ ಮಾಡಿದೆ. ಒಂದೇ ದಿನದಲ್ಲಿ 24 ಕ್ಯಾರೆಟ್ ಚಿನ್ನದ ದರ 7,700 ರೂಪಾಯಿಗಳಷ್ಟು ಏರಿಕೆಯಾಗಿದೆ. ಇದರೊಂದಿಗೆ ಬೆಳ್ಳಿ (Silver) ಕೂಡ ಲಕ್ಷದ ಗಡಿ ದಾಟಿದ್ದು, ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 22, 2025: Gold Price Today

ಚಿನ್ನದ ದರದಲ್ಲಿ ಬದಲಾವಣೆಗಳು ನಿರಂತರ. ಗ್ರಾಹಕರು (Buyers) ಚಿನ್ನ ಕೊಂಡುಕೊಳ್ಳಲು ಕಾಯುತ್ತಿರುವಂತಹ ಈ ಸಂದರ್ಭದಲ್ಲಿ ಈ ರೀತಿಯ ಏರುಪೇರು ಸಹಜ. ಪ್ರತಿದಿನವೂ ಒಂದೊಂದು ರೀತಿ ಬದಲಾಗುತ್ತಿರುವ ಈ ದರದಲ್ಲಿ ಯಾವಾಗ ಯಾವ ರೀತಿಯ ಏರುಪೇರು (Changes) ಆಗುತ್ತದೆ ಎಂಬುದನ್ನು ಊಹಿಸುವುದು ಕಷ್ಟ. ಹೀಗಿರುವಾಗ ನಿನ್ನೆ ಬೆಳಗ್ಗೆ ಯಾವುದೇ ರೀತಿಯ ಬದಲಾವಣೆಗಳನ್ನು ಕಾಣದ ಚಿನ್ನದ ದರ ಸಂಜೆಯೊಳಗೆ ಏರಿಕೆಯನ್ನು ಕಂಡಿದೆ. ಹಾಗಿದ್ದರೆ, ಏಪ್ರಿಲ್ 22, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9, 016  ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,836 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,377 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,01,100 ರೂ. ನಷ್ಟಿದ್ದು. ನಿನ್ನೆಗೆ ಹೋಲಿಸಿದರೆ 1100 ರೂ. ನಷ್ಟು ಏರಿಕೆಯಾಗಿದೆ.

ಏಪ್ರಿಲ್ 21, 2025 ರಂದು ಬೆಂಗಳೂರು ಮಾರುಕಟ್ಟೆಯಲ್ಲಿ  ಚಿನ್ನದ ಬೆಲೆ (Gold rate):

ಏಪ್ರಿಲ್ 21, 2025 ರಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ ₹90,150 ರಾಗಿದ್ದು, 24 ಕ್ಯಾರೆಟ್ ಚಿನ್ನ ₹98,350 ತಲುಪಿದೆ. ಭಾನುವಾರದ ದರಕ್ಕೆ ಹೋಲಿಸಿದರೆ ಪ್ರತಿ 10 ಗ್ರಾಂಗೆ ಸುಮಾರು ₹770 ರಷ್ಟು ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ಪ್ರತಿ ಗ್ರಾಂ ಚಿನ್ನದ ದರ :
18 ಕ್ಯಾರೆಟ್: ₹7,370
22 ಕ್ಯಾರೆಟ್: ₹9,015
24 ಕ್ಯಾರೆಟ್: ₹9,835

ಚಿನ್ನದ ಪ್ರತಿ 10 ಗ್ರಾಂ ದರ:
18 ಕ್ಯಾರೆಟ್: ₹73,760
22 ಕ್ಯಾರೆಟ್: ₹90,150
24 ಕ್ಯಾರೆಟ್: ₹98,350

ಚಿನ್ನದ ಪ್ರತಿ 100 ಗ್ರಾಂ ದರ:
18 ಕ್ಯಾರೆಟ್: ₹7,37,600
22 ಕ್ಯಾರೆಟ್: ₹9,01,500
24 ಕ್ಯಾರೆಟ್: ₹9,83,500

ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ ವಿವರ:

ಚಿನ್ನದ ಬೆಲೆ ಏರಿಕೆಯಂತೆ ಬೆಳ್ಳಿಯೂ ಏರಿಕೆಯತ್ತ (Increased) ಮುಖ ಮಾಡಿದೆ. ಪ್ರಸ್ತುತ ಪ್ರತಿ ಕಿಲೋಗ್ರಾಂ ಬೆಳ್ಳಿಯ ದರ ₹1,01,000 ತಲುಪಿದೆ. ಒಟ್ಟಾರೆಯಾಗಿ ಒಂದು ಗ್ರಾಂ ಬೆಳ್ಳಿ ₹101, 10 ಗ್ರಾಂ ₹1,010, ಹಾಗೂ 100 ಗ್ರಾಂ ಬೆಳ್ಳಿ ₹10,100 ದರದಲ್ಲಿ ವ್ಯಾಪಾರವಾಗುತ್ತಿದೆ.

ಸ್ಪಾಟ್ ಮಾರುಕಟ್ಟೆಯ (Spot market) ಚಿನ್ನದ ದರ:

ಏಪ್ರಿಲ್ 21ರಂದು ಸ್ಪಾಟ್ ಚಿನ್ನದ ದರ ಔನ್ಸ್‌ ಗೆ $3,373.70 ತಲುಪಿದ್ದು, ಹಿಂದಿನ ಗರಿಷ್ಠ $3,385.08 ರಿಗೆ ಹತ್ತಿರವಾಗಿದೆ. ಇದೇ ವೇಳೆ ಯುಎಸ್ ಚಿನ್ನದ ಭವಿಷ್ಯದ ದರ $3,386.50 ತಲುಪಿದೆ. ಸ್ಪಾಟ್ ಬೆಳ್ಳಿ ಶೇ.0.4 ಏರಿಕೆಯಾಗಿ $32.71 ಆಗಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಪ್ರತಿ ಗ್ರಾಂ ಚಿನ್ನದ ದರ :
ಮೈಸೂರು, ಮಂಗಳೂರು, ಗದಗ, ಮಂಡ್ಯ, ಚಿತ್ರದುರ್ಗ ಸೇರಿದಂತೆ ಎಲ್ಲೆಡೆ ಚಿನ್ನದ ದರಗಳಲ್ಲಿ ಸಮಾನತೆ ಕಂಡುಬರುತ್ತಿದೆ.
18 ಕ್ಯಾರೆಟ್ – ₹7,376
22 ಕ್ಯಾರೆಟ್ – ₹9,015
24 ಕ್ಯಾರೆಟ್ – ₹9,835

ಚಿನ್ನದ ಬೆಲೆ ಏರಿಕೆಯ ಪ್ರಮುಖ ಕಾರಣಗಳು (Causes) ಹೀಗಿವೆ:

ಅಂತರರಾಷ್ಟ್ರೀಯ ಮಾರುಕಟ್ಟೆಯ (International market) ಬದಲಾವಣೆಗಳು.
ಕರೆನ್ಸಿ ವಿನಿಮಯ ದರಗಳ ವ್ಯತ್ಯಾಸ.
ದೇಶೀಯ ಬೇಡಿಕೆ.
ಆರ್ಥಿಕ ಅನಿಶ್ಚಿತತೆ.
ಹೂಡಿಕೆದಾರರ ಅಭಿಪ್ರಾಯ ಹಾಗೂ ಗ್ಲೋಬಲ್ ಮಾರುಕಟ್ಟೆ(Global market).
ಹಬ್ಬದ ಸೀಸನ್ ಪ್ರಾರಂಭ.

ಭಾರತೀಯ ಮಹಿಳೆಯರಿಗೆ (For Indian women’s) ಚಿನ್ನ ಅಂದರೆ ಶ್ರದ್ಧೆ ಮತ್ತು ಗೌರವ. ಮದುವೆ, ಧಾರ್ಮಿಕ ಕಾರ್ಯಕ್ರಮ, ವರದಕ್ಷಿಣೆ, ಹಬ್ಬ ಸಂದರ್ಭದಲ್ಲಿ ಚಿನ್ನದ ಖರೀದಿ ಅನಿವಾರ್ಯವಾಗಿದೆ. ಚಿನ್ನವು ಸಂಪ್ರದಾಯ, ಆರ್ಥಿಕ ಭದ್ರತೆ ಮತ್ತು ಮೌಲ್ಯವನ್ನೂ (Economic safety and values) ಸೂಚಿಸುತ್ತದೆ. ಶತಮಾನಗಳಿಂದಲೂ ಬಂಗಾರವು ಭಾರತೀಯ ಕುಟುಂಬಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದು. ಸಮಯ ಬದಲಾದರೂ ಚಿನ್ನದ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ.

ಚಿನ್ನ ಹಾಗೂ ಬೆಳ್ಳಿಯ ಬೆಲೆ (Gold and Silver rate) ಏರಿಕೆಯಿಂದಾಗಿ ಗ್ರಾಹಕರಿಗೆ ತಾತ್ಕಾಲಿಕವಾಗಿ ನಿರಾಸೆ ಮೂಡಿದರೂ, ಹೂಡಿಕೆಯ ದೃಷ್ಟಿಯಿಂದ ಇದು ಒಳ್ಳೆಯ ಸಮಯವೂ ಆಗಬಹುದು. ಈಗಿರುವ ಸ್ಥಿತಿಗತಿಗಳನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಚಿನ್ನದ ದರ ಇನ್ನಷ್ಟು ಏರಿಕೆಯಾದರೂ ಅಚ್ಚರಿಯಿಲ್ಲ. ಹೀಗಾಗಿ ಬಂಗಾರ ಖರೀದಿಗೆ ಮುಂದಾಗುತ್ತಿರುವ ಗ್ರಾಹಕರು  ಇಂತಹ ಸಮಯದಲ್ಲಿ ಸಮಗ್ರ ಮಾಹಿತಿ ಪಡೆದು ನಿರ್ಧಾರ ತೆಗೆದುಕೊಳ್ಳುವುದು ಒಳಿತು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!