Gold Rate Today : ಚಿನ್ನದ ಬೆಲೆ ಸರ್ವಕಾಲಿಕ ದಾಖಲೆ.! ಎಪ್ರಿಲ್ 23, ಇಂದಿನ ಚಿನ್ನ ಬೆಳ್ಳಿ ಬೆಲೆ ಇಲ್ಲಿದೆ.

Picsart 25 04 23 06 25 47 679

WhatsApp Group Telegram Group

ಅಕ್ಷಯ ತೃತೀಯಕ್ಕೂ ಮುನ್ನ ಚಿನ್ನದ ದರ ಶತಕ ದಾಟಿದೆ.! 2026ರೊಳಗೆ ₹3 ಲಕ್ಷ ದಾಟುವ ಸಾಧ್ಯತೆ

ಇತ್ತೀಚಿನ ದಿನಗಳಲ್ಲಿ ಭಾರತದ ಚಿನ್ನದ ಮಾರುಕಟ್ಟೆಯಲ್ಲಿ (Indian Gold market) ಆಘಾತಕಾರಿ ಬೆಳವಣಿಗೆ ಕಂಡುಬಂದಿದ್ದು, ಚಿನ್ನದ ಬೆಲೆ ಗರಿಷ್ಠ ಮಟ್ಟವನ್ನು ತಲುಪುತ್ತಿದೆ. ಕೆಲವರ್ಷಗಳ ಹಿಂದೆ ಪ್ರತಿ 10 ಗ್ರಾಂ ಬೆಲೆ 50,000 ರೂಪಾಯಿ ನಷ್ಟು ಇದ್ದ ಚಿನ್ನದ ಬೆಲೆ, ಇದೀಗ ಶತಕ ದಾಟಿ ಪ್ರತಿ 10 ಗ್ರಾಂಗೆ ₹1,01,350 ರೂಪಾಯಿ ಆಗಿದೆ. ಅಂದಾಜುಗಳ ಪ್ರಕಾರ, ಮುಂದಿನ ನಾಲ್ಕು-ಐದು ವರ್ಷಗಳಲ್ಲಿ ಈ ಬೆಲೆ ಮೂರು ಲಕ್ಷದ (3 Lakhs) ಗಡಿ ತಲುಪಬಹುದೆಂಬ ಆತಂಕ ಸಹ ಇದೆ. ಇದು ಕೇವಲ ಆರ್ಥಿಕ ಲೆಕ್ಕಾಚಾರವಲ್ಲ, ಬದಲಾಗಿ ಲಕ್ಷಾಂತರ ಚಿನ್ನ ಪ್ರಿಯರು, ಖರೀದಿದಾರರು ಹಾಗೂ ಬಡ, ಮಧ್ಯಮ ವರ್ಗದ ಜನರ ಆರ್ಥಿಕ ಸ್ಥಿತಿಗೆ ಗಂಭೀರ ಹೊಡೆತವಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 23, 2025: Gold Price Today

ಇತ್ತೀಚಿನ ದಿನಗಳಲ್ಲಿ ಚಿನ್ನದ ಏರಿಕೆ ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ. ಹೀಗಿರುವಾಗ ನಿನ್ನೆ ಚಿನ್ನದ ದರ ಶತಕ ಬಾರಿಸಿದೆ. ಹೌದು ನಿನ್ನೆ ಒಂದು ಲಕ್ಷ ಗಡಿ ದಾಟಿರುವ ಚಿನ್ನದ ದರ ಗ್ರಾಹಕರಲ್ಲಿ ಬೇಸರವನ್ನು ವ್ಯಕ್ತಪಡಿಸುತ್ತಿದೆ. ಚಿನ್ನದ ದರ ಇಳಿಕೆಯಾಗಬಹುದು ಎಂದು ಕಾಯುತ್ತಿದ್ದಂತಹ ಹಲವಾರು ಜನರಿಗೆ ಇದೊಂದು ಶಾಕಿಂಗ್ ಸುದ್ದಿಯಾಗಿದೆ. ಹಾಗಿದ್ದರೆ, ಏಪ್ರಿಲ್ 23, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :

22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9, 291  ಆಗಿದ್ದು,

24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹10,136 ಆಗಿದ್ದು,

18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,602 ಆಗಿದೆ.

ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,01,200 ರೂ. ನಷ್ಟಿದ್ದು. ನಿನ್ನೆಗೆ ಹೋಲಿಸಿದರೆ 100 ರೂ. ನಷ್ಟು ಏರಿಕೆಯಾಗಿದೆ.

ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಸ್ಥಿರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೂಡಿಕೆದಾರರು (Investmenters) ಸುರಕ್ಷಿತ ಸಂಪತ್ತಾಗಿ ಪರಿಗಣಿಸುವ ಚಿನ್ನದತ್ತ ಮುಖ ಮಾಡುತ್ತಿದ್ದಾರೆ. ಅಮೆರಿಕ ಹಾಗೂ ಚೀನಾದ ನಡುವೆ ನಡೆಯುತ್ತಿರುವ ವ್ಯಾಪಾರ ಯುದ್ಧ, ಅಮೆರಿಕದ ಟ್ಯಾಕ್ಸ್ ನೀತಿ (American tax value), ಷೇರು ಮಾರುಕಟ್ಟೆಯ ಅಸ್ಥಿರತೆ ಇವೆಲ್ಲವೂ ಚಿನ್ನದ ಬೆಲೆ ಏರಿಕೆಯಾಗಲು ಪ್ರಮುಖ ಕಾರಣಗಳಾಗಿವೆ.

ಅಕ್ಷಯ ತೃತೀಯದ ಮೇಲೆ ಪರಿಣಾಮ:

ಅಕ್ಷಯ ತೃತೀಯ (Akshaya Tritiya) ದಂದು ಚಿನ್ನ ಖರೀದಿಸುವುದು ಅದೃಷ್ಟದ ಸಂಕೇತವೆಂದು ನಂಬುವ ನಮ್ಮ ಸಂಸ್ಕೃತಿಯಲ್ಲಿ, ಈ ಬಾರಿಯ ಬೆಲೆ ಏರಿಕೆಯಿಂದ ಜನರಿಗೆ ನಿರಾಶೆಯ ಕಹಿ ಅನುಭವವಾಗಲಿದೆ. ಅಕ್ಷಯ ತೃತೀಯದ ಪ್ರಯುಕ್ತವಾಗಿ ಸಾಮಾನ್ಯವಾಗಿ ಚಿನ್ನದ ಖರೀದಿಯಲ್ಲಿ ಗಂಭೀರ ಏರಿಕೆ (Increased) ಕಾಣುತ್ತೆ. ಆದರೆ, ಪ್ರತಿ 10 ಗ್ರಾಂಗೆ ₹1,01,350 ರೂಪಾಯಿ ಆಗಿರುವುದರಿಂದ, ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ.

ಇನ್ನೂ ಅದರಲ್ಲೂ ಚಿನ್ನವು ಈಗ ಬಡ ಮತ್ತು ಮಧ್ಯಮ ವರ್ಗದ ಜನರಿಂದ ದೂರವಾಗುತ್ತಿರುವುದು ಕೇವಲ ಲೆಕ್ಕಾಚಾರದ ವಿಷಯವಲ್ಲ. ಭಾರತೀಯ ಸಮಾಜದಲ್ಲಿ ಮದುವೆ, ಉತ್ಸವ, ಹಬ್ಬ-ಹರ್ಣೆಗಳ ಅಂಗವಾಗಿ ಚಿನ್ನದ ಖರೀದಿಗೆ ವಿಶೇಷ ಸ್ಥಾನವಿದೆ. ಆದರೆ ಈ ಬೆಲೆ ಏರಿಕೆ(Price increased) ಯಿಂದಾಗಿ, ಚಿನ್ನ ಖರೀದಿಯ ಆಸೆಯಿಂದಲೇ ಹೊರ ಬರುತ್ತಿದ್ದಾರೆ ಗ್ರಾಹಕರು.

2030 ಕ್ಕೆ ಮುನ್ನವೇ 3 ಲಕ್ಷ ಬೆಲೆ ಸಾಧ್ಯ?:

ಇತ್ತೀಚಿನ ವರದಿಗಳ ಪ್ರಕಾರ, 2030ರ ವೇಳೆಗೆ ಚಿನ್ನದ ಬೆಲೆ ₹3 ಲಕ್ಷದ ಗಡಿಯನ್ನು ತಲುಪಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಈಗಾಗಲೇ ಚಿನ್ನದ ದರ ಶತಕ ದಾಟಿರುವುದರಿಂದ, ಇದು 2026-27 ರೊಳಗೆಲೇ ಸಂಭವಿಸಬಹುದು ಎಂಬ ಆತಂಕ (Anxiety) ಮೂಡಿದೆ. ಹೀಗಾಗಿ, ಈ ಬೆಳವಣಿಗೆಗಳು ಚಿನ್ನದಲ್ಲಿ ಹೂಡಿಕೆ ಮಾಡುವವರು ಹಾಗೂ ಖರೀದಿಸುವವರಲ್ಲಿ ಭೀತಿಯನ್ನುಂಟುಮಾಡಿದೆ.

ಏಪ್ರಿಲ್ 22 2025ರಂದು ದರದ ಸ್ಥಿತಿ ಹೀಗಿದೆ:

2025ರ ಏಪ್ರಿಲ್ 22 ರಂದು 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹10,135 ಆಗಿದ್ದು,
10 ಗ್ರಾಂಗೆ ₹1,01,350 ರೂಪಾಯಿ ಆಗಿದೆ. 22 ಕ್ಯಾರೆಟ್ ಚಿನ್ನದ ದರದಲ್ಲೂ ಪ್ರಬಲ ಏರಿಕೆಯನ್ನು ದಾಖಲಿಸಲಾಗಿದೆ.

ಚಿನ್ನದ ಬೆಲೆಯ ಈ ತೀವ್ರ ಏರಿಕೆ ಭಾರತದಲ್ಲಿನ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಯ (Economic situation) ಮೇಲೆ ಬಹುಮುಖ್ಯ ಪರಿಣಾಮ ಬೀರಲಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಚಿನ್ನವು ಕೇವಲ ಆಸೆ ಆಗದೆ ಕನಸಾಗಿ ಉಳಿಯುವ ಸಂಭವವಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಚಿನ್ನದ ಹೂಡಿಕೆಯ ಬಗ್ಗೆ ಮತ್ತಷ್ಟು ಜಾಣ್ಮೆಯಿಂದ ಯೋಜನೆ ರೂಪಿಸುವ ಅಗತ್ಯವಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!