Gold Rate Today : ಚಿನ್ನದ ಬೆಲೆ ಏರುಪೇರು, ಎಪ್ರಿಲ್ 28, ಇಂದಿನ ಚಿನ್ನ ಬೆಳ್ಳಿ ಬೆಲೆ ಇಲ್ಲಿದೆ.!

Picsart 25 04 28 06 52 05 044

WhatsApp Group Telegram Group

ಏಪ್ರಿಲ್ 28, 2025: ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ಬೆಲೆ ಸ್ಥಿರತೆ; ಹೂಡಿಕೆದಾರರಿಗೆ ಸಂತಸದ ಸುದ್ದಿ

ಭಾರತದಲ್ಲಿ ಚಿನ್ನಕ್ಕೆ ಇರುವ ಪ್ರೀತಿ ಮತ್ತು ಮಹತ್ವವನ್ನು ಹೇಳಬೇಕಾದ ಅಗತ್ಯವೇ ಇಲ್ಲ. ಹಬ್ಬ-ಹರಿದಿನಗಳು, ಮದುವೆಗಳು, ಧಾರ್ಮಿಕ ಆಚರಣೆಗಳು, ಎಲ್ಲದರಲ್ಲಿಯೂ ಚಿನ್ನದ (Gold) ಪಾತ್ರ ಪ್ರಮುಖವಾಗಿದ್ದು, ಅದು ಬಡವರಿಂದ  ಶ್ರೀಮಂತರವರೆಗೂ ಎಲ್ಲರಿಗೂ ಸಮಾನವಾಗಿ ಹೂಡಿಕೆಯ ಮಾದರಿಯಾಗಿದೆ. ವಿಶೇಷವಾಗಿ ಅಕ್ಷಯ ತೃತೀಯದಂತಹ ಶುಭ ದಿನಗಳಲ್ಲಿ ಚಿನ್ನ ಖರೀದಿಗೆ ಗ್ರಾಹಕರು ಮುಂದಾಗುತ್ತಾರೆ. ಆದ್ದರಿಂದ ಈ ಸಂದರ್ಭದಲ್ಲಿ ಚಿನ್ನದ ಬೆಲೆಯ ಸ್ಥಿತಿಯ ಬಗ್ಗೆ ಗ್ರಾಹಕರು ತಿಳಿದುಕೊಳ್ಳಲು ಬಯಸುತ್ತಾರೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 28, 2025: Gold Price Today

ಚಿನ್ನದ ದರದಲ್ಲಿ ಬದಲಾವಣೆಗಳು ಸಹಜ. ಒಂದೆರಡು ದಿನ ಏರಿಕೆಯನ್ನು ಕಾಣುವ ಚಿನ್ನದ ದರ ತದನಂತರ ಇಳಿಕೆಯತ್ತ ಮುಖ ಮಾಡುತ್ತದೆ. ಈ ನಿಟ್ಟಿನಲ್ಲಿ ಹಲವು ದಿನಗಳ ಹಿಂದೆ ಚಿನ್ನದ ದರ ಏರಿಕೆಯನ್ನು ಕಂಡು ಬಂದಿತ್ತು, ಕಳೆದ ಮೂರು ನಾಲ್ಕು ದಿನಗಳಿಂದ ಇಳಿಕೆಯನ್ನು ಕಂಡು, ನಿನ್ನೆ ಮತ್ತೆ ಚಿನ್ನದ ದರ ಸ್ಥಿರತೆಯತ್ತ ಮುಖ ಮಾಡಿದೆ. ಹಾಗಿದ್ದರೆ, ಏಪ್ರಿಲ್ 28, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9, 001  ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,820 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,365 ಆಗಿದೆ. ನಿನ್ನೆಗೆ ಹೋಲಿಸಿದರೆ 1 ರೂ. ನಷ್ಟು ಇಳಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,01,800 ರೂ. ನಷ್ಟಿದ್ದು. ನಿನ್ನಗೆ ಹೋಲಿಸಿದರೆ 100 ರೂ ನಷ್ಟು ಇಳಿಕೆಯಾಗಿದೆ.

ಹೌದು, ಅಕ್ಷಯ ತೃತೀಯ ಹಬ್ಬವು ಚಿನ್ನ ಖರೀದಿಗೆ ಅತ್ಯಂತ ಶುಭದ ದಿನವಾಗಿದ್ದು, ಈ ಸಂದರ್ಭದಲ್ಲಿ ಚಿನ್ನ ಮುಂಗಡ ಬುಕ್ಕಿಂಗ್ (pre booking) ಶೇಕಡಾ 10ರಷ್ಟು ಹೆಚ್ಚಳಗೊಂಡಿದೆ. ಹೂಡಿಕೆ ಉದ್ದೇಶದಿಂದಲೂ ಹೆಚ್ಚಿನವರು ಚಿನ್ನದ ಕಡೆ ತಿರುಗುತ್ತಿದ್ದಾರೆ. ಚಿನ್ನದ ಬೆಲೆ ಇಳಿಕೆಯಿಂದಾಗಿ ಗ್ರಾಹಕರಿಗೆ ಒಳ್ಳೆಯ ಅವಕಾಶ ಸಿಕ್ಕಿದೆ.

ಏಪ್ರಿಲ್ 27, 2025ರಂದು ಬೆಂಗಳೂರು ಚಿನ್ನ-ಬೆಳ್ಳಿ ಬೆಲೆಗಳು ಹೀಗಿವೆ:

ಬೆಂಗಳೂರು ನಗರದಲ್ಲಿ ನಿನ್ನೆ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಯಾವುದೇ ಬದಲಾವಣೆಗಳನ್ನು ಕಂಡಿಲ್ಲ. ಪ್ರಸ್ತುತ ದರಗಳು ಹೀಗಿವೆ:
22 ಕ್ಯಾರೆಟ್ ಚಿನ್ನ,
1 ಗ್ರಾಂ: ₹9,002
10 ಗ್ರಾಂ: ₹90,020
100 ಗ್ರಾಂ: ₹9,00,200

24 ಕ್ಯಾರೆಟ್ ಅಪರಂಜಿ ಚಿನ್ನ,
1 ಗ್ರಾಂ: ₹9,821
10 ಗ್ರಾಂ: ₹98,210
100 ಗ್ರಾಂ: ₹9,82,100

18 ಕ್ಯಾರೆಟ್ ಚಿನ್ನ,
1 ಗ್ರಾಂ: ₹7,366
10 ಗ್ರಾಂ: ₹73,660
100 ಗ್ರಾಂ: ₹7,36,600

ಬೆಳ್ಳಿ ದರ ಹೀಗಿದೆ’
1 ಗ್ರಾಂ: ₹100.90
10 ಗ್ರಾಂ: ₹1,019
1 ಕಿಲೋ: ₹1,01,900

ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಯಾವುದೇ ಮಹತ್ವದ ಬದಲಾವಣೆ (Changes) ಇಲ್ಲದೆ ಸ್ಥಿರತೆಯನ್ನು ಕಾಯ್ದಿರಿಸಿಕೊಂಡಿದೆ.

ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಯಾವರೀತಿಯಿದೆ?:

ಬೆಂಗಳೂರಿನಂತೆ ಮೈಸೂರು, ಮಂಗಳೂರು, ಗದಗ, ಮಂಡ್ಯ ಮತ್ತು ಚಿತ್ರದುರ್ಗ ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿಯೂ ಚಿನ್ನದ ಬೆಲೆಗಳು ಸಮಾನಮಟ್ಟದಲ್ಲಿವೆ.
18 ಕ್ಯಾರೆಟ್ ಚಿನ್ನ: 1 ಗ್ರಾಂ ₹7,366
22 ಕ್ಯಾರೆಟ್ ಚಿನ್ನ: 1 ಗ್ರಾಂ ₹9,002
24 ಕ್ಯಾರೆಟ್ ಚಿನ್ನ: 1 ಗ್ರಾಂ ₹9,821

ಅಂತಾರಾಷ್ಟ್ರೀಯ ಮಾರುಕಟ್ಟೆ (International market) ಪ್ರಭಾವದಿಂದ ಮಾರ್ಚ್ 27ರಿಂದ ಏಪ್ರಿಲ್ 1ರವರೆಗೆ ಚಿನ್ನದ ಬೆಲೆಯಲ್ಲಿ ಸತತ ಏರಿಕೆ ಕಂಡುಬಂದಿತ್ತು. ಮಾರ್ಚ್ 30 ಮತ್ತು ಏಪ್ರಿಲ್ 2ರಂದು ಮಾತ್ರ ಬೆಲೆ ಸ್ಥಿರವಾಗಿತ್ತು. ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗಿದ್ದು, ಗ್ರಾಹಕರಿಗೆ (Buyer’s) ಖರೀದಿಗೆ ಉತ್ತಮ ಅವಕಾಶ ಒದಗಿಸಿದೆ.

ಚಿನ್ನದ ಬೆಲೆ ಇಳಿಕೆಗೆ ಕಾರಣಗಳೇನು (Causes)?:

ಚಿನ್ನದ ಬೆಲೆ ಇಳಿಕೆಗೆ ಹಲವು ಅಂತರರಾಷ್ಟ್ರೀಯ ಮತ್ತು ದೇಶೀಯ ಕಾರಣಗಳಿವೆ,

ಅಂತರರಾಷ್ಟ್ರೀಯ ಮಾರುಕಟ್ಟೆಯ ತೊಳಲಾಟ.
ಕರೆನ್ಸಿ ವಿನಿಮಯ ದರ ಬದಲಾವಣೆ.
ದೇಶೀಯ ಬೇಡಿಕೆ ಇಳಿಕೆ.
ಹೂಡಿಕೆದಾರರ ಮನೋಭಾವ.
ಆರ್ಥಿಕ ಅನಿಶ್ಚಿತತೆ.
ಜಾಗತಿಕ ರಾಜಕೀಯ ಬೆಳವಣಿಗೆಗಳು.
ಡಾಲರ್ ಮೌಲ್ಯ ಏರಿಕೆ
ಈ ಎಲ್ಲಾ ಅಂಶಗಳು ಚಿನ್ನದ ಮೌಲ್ಯವನ್ನು ಪ್ರಭಾವಿಸುತ್ತವೆ.

ಭಾರತೀಯ ಮಹಿಳೆಯರಿಗೆ ಚಿನ್ನ ಬಹಳ ಇಷ್ಟವಾದ ಆಭರಣ. ಹಬ್ಬ, ಜಾತ್ರೆ, ಮದುವೆ ಸಂದರ್ಭದಲ್ಲಿ ಚಿನ್ನ ಖರೀದಿಯು ಅನಿವಾರ್ಯವಾಗಿ ಪರಿಗಣಿಸಲಾಗಿದೆ. ವರದಕ್ಷಿಣೆ, ಹೂಡಿಕೆ ಮತ್ತು ಆರ್ಥಿಕ ಸುರಕ್ಷತೆಯ (Investment and economic safety) ದೃಷ್ಟಿಯಿಂದ ಚಿನ್ನದ ಮಹತ್ವ ಅತ್ಯಂತ ಹೆಚ್ಚಾಗಿದೆ. ಶತಮಾನಗಳಿಂದ ಚಿನ್ನ ಭಾರತೀಯ ಸಂಸ್ಕೃತಿಯ ಭಾಗವಾಗಿದೆ.

ಹೀಗಾಗಿ, ಅಕ್ಷಯ ತೃತೀಯ ಹಬ್ಬದಂದು ಚಿನ್ನ ಖರೀದಿ ಮಾಡುವ ಆಲೋಚನೆ ಇರುವವರು ಸೂಕ್ತ ನಿರ್ಧಾರ ತೆಗೆದುಕೊಳ್ಳಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!