ಮಹಾಶಿವರಾತ್ರಿ ಹಿನ್ನಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಕುಸಿತ: ಚಿನ್ನದ ಮಾರುಕಟ್ಟೆಯಲ್ಲಿ ಮುಂದೇನಾಗಲಿದೆ?
ಭಾರತೀಯ ಆಭರಣ ಪ್ರಿಯರ ಪಾಲಿಗೆ ಚಿನ್ನದ ದರ ಯಾವಾಗಲೂ ಗಮನ ಸೆಳೆಯುವ ವಿಷಯ. ಇತ್ತೀಚಿನ ದಿನಗಳಲ್ಲಿ ನಿರಂತರ ಏರಿಕೆಯನ್ನು ಕಂಡಿದ್ದ ಚಿನ್ನದ ದರ (Gold rate) ಮಹಾಶಿವರಾತ್ರಿ (Mahashivratri) ಯಂದು ₹250 ಇಳಿಕೆಯಾಗಿದ್ದು, ಈ ಬೆಳವಣಿಗೆಯು ಹೀಗೆ ಮುಂದುವರೆಯುತ್ತಾ? ಅಥವಾ ಬದಲಾವಣೆಗಳು ಸಾಧ್ಯನ ಎಂದು ಕಾದು ನೋಡಬೇಕಾಗಿದೆ. ಇನ್ನು ಬೆಳ್ಳಿ (Silver) ಮೌಲ್ಯದಲ್ಲೂ ಅಚ್ಚರಿಯ ಕುಸಿತ ಕಂಡುಬಂದಿದ್ದು, ಪ್ರತಿ ಕೆಜಿಗೆ ₹3000 ಇಳಿಕೆಯಾಗಿದೆ. ಶಿವರಾತ್ರಿ ದಿನದಂದು ಕೆಜಿಗೆ ₹3000 ಕುಸಿತದಿಂದ ಗ್ರಾಹಕರು ಸಂತಸ ಪಡುತ್ತಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಇದೇ ಸಂದರ್ಭದಲ್ಲಿ, ದೇಶೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಏಕೆ ತಗ್ಗುತ್ತಿದೆ? ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗಿರಬಹುದು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಚಿನ್ನ-ಬೆಳ್ಳಿ (Gold and Silver) ಬೆಲೆ ಇಂದು, 27, ಫೆಬ್ರವರಿ 2025: Gold Price Today
ಕಳೆದ ಕೆಲವು ತಿಂಗಳಿನಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇತ್ತು, ಆದರೆ ಫೆಬ್ರವರಿ 26, 2025 ರಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬಂದಿದ್ದು, ಚಿನ್ನ ಹಾಗೂ ಬೆಳ್ಳಿ ಬೆಲೆ ಸ್ವಲ್ಪ ಇಳಿಕೆಯಾಗಿರುವುದನ್ನು ನಾವು ಗಮನಿಸಬಹುದು. ಇನ್ನು ಮಹಾ ಶಿವರಾತ್ರಿದಿನ ಆದ ಈ ಬದಲಾವಣೆಯಿಂದ ಆಭರಣ ಪ್ರಿಯರು (Gold Buyers) ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,049ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,781ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,586ಆಗಿದೆ. ಇನ್ನು,1 ಕೆಜಿ ಬೆಳ್ಳಿ ಬೆಲೆ:97,900 ತಲುಪಿದೆ. ಬೆಳ್ಳಿಯ ಬೆಲೆ ನಿನ್ನೆಗೆ ಹೋಲಿಸಿದರೆ ಇಂದು ₹100 ಇಳಿಕೆಯಾಗಿದೆ.
ಮಹಾ ಶಿವರಾತ್ರಿ ದಿನ ಇಳಿಕೆಯಾದ ಚಿನ್ನದ ದರ:
ಫೆಬ್ರವರಿ 26, 2025ರಂದು, ಭಾರತೀಯ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ ₹80,500 ತಲುಪಿದ್ದು, ₹250 ಇಳಿಕೆಯನ್ನು ಕಂಡಿದೆ. 24 ಕ್ಯಾರೆಟ್ ಚಿನ್ನದ ದರವೂ ₹270 ಕುಸಿತ ಕಂಡು ₹87,820ಗೆ ತಲುಪಿದೆ. ಆದರೆ, ಈ ಇಳಿಕೆ ಹೆಚ್ಚು ದಿನ ಮುಂದುವರೆಯುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದ್ದು, ಚಿನ್ನದ ದರ ಮತ್ತೆ ಏರಿಕೆಯಾಗುತ್ತದೆಯೋ ಅಥವಾ ಇಳಿಕೆಯಾಗುತ್ತದೆಯೋ ಕಾದು ನೋಡಬೇಕಾಗಿದೆ.
ಪ್ರಮುಖ ನಗರಗಳ 22 ಕ್ಯಾರೆಟ್ ಚಿನ್ನದ ದರ (10ಗ್ರಾಂ):
ಬೆಂಗಳೂರು – ₹80,500
ಚೆನ್ನೈ – ₹80,500
ದೆಹಲಿ – ₹80,650
ಹೈದರಾಬಾದ್ – ₹80,500
ಮುಂಬೈ – ₹80,500
ಕೊಲ್ಕತ್ತಾ – ₹80,500
24 ಕ್ಯಾರೆಟ್ ಚಿನ್ನದ ದರ (10ಗ್ರಾಂ):
ಬೆಂಗಳೂರು – ₹87,820
ಚೆನ್ನೈ – ₹87,820
ದೆಹಲಿ – ₹87,970
ಹೈದರಾಬಾದ್ – ₹87,820
ಮುಂಬೈ – ₹87,820
ಕೊಲ್ಕತ್ತಾ – ₹87,820
ಶಿವರಾತ್ರಿಗೆ ಬೆಳ್ಳಿ ದರದಲ್ಲೂ ಭಾರಿ ಕುಸಿತವಾಗಿದೆ :
ಕಳೆದ ವಾರ ಪ್ರತಿ ಕೆಜಿ ಬೆಳ್ಳಿ ಬೆಲೆ ₹1,01,000 ತಲುಪಿದ್ದರೆ, ಶಿವರಾತ್ರಿ ಹಬ್ಬದ ದಿನದಂದು ಬೆಳ್ಳಿ ಹಠಾತ್ ಕುಸಿದಿದ್ದು, ಇದೀಗ ಬೆಳ್ಳಿ ಮೌಲ್ಯ ₹98,000ಗೆ ತಲುಪಿದೆ. ಪ್ರತಿ ಕೆಜಿಗೆ ₹3,000 ಕಡಿಮೆಯಾದ ಬೆಳ್ಳಿ ದರದಿಂದ ಆಭರಣ ಪ್ರಿಯರು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ.
ಅಂತರಾಷ್ಟ್ರೀಯ ಮಾರುಕಟ್ಟೆಯ (international market) ಪ್ರಭಾವ:
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ದರವು ಕಳೆದ ಎರಡು ದಿನಗಳಲ್ಲಿ ಪ್ರತಿ ಔನ್ಸ್‌ಗೆ $20 ಕಡಿಮೆಯಾಗಿದೆ. ಪ್ರಸ್ತುತ, ಚಿನ್ನ $2,926 ದರದಲ್ಲಿ ವಹಿವಾಟು ನಡೆಸುತ್ತಿದೆ. ಸ್ಪಾಟ್ ಬೆಳ್ಳಿ ದರವು ಪ್ರತಿ ಔನ್ಸ್‌ಗೆ $32.41 ಆಗಿದೆ.
ಚಿನ್ನದ ಮೌಲ್ಯ ಕುಸಿತದ ಹಿಂದಿನ ಕಾರಣಗಳೇನು (Causes) ?:
ಅಂತರಾಷ್ಟ್ರೀಯ ಚಿನ್ನದ ದರದ ಏರುಪೇರಿಗಳು :
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಕುಸಿದಿರುವುದರಿಂದ ಭಾರತೀಯ ಮಾರುಕಟ್ಟೆಯ (Indian market) ಮೇಲೂ ಪರಿಣಾಮ ಬೀರುತ್ತಿದೆ.
ಡಾಲರ್ ಮತ್ತು ರೂಪಾಯಿ ವಿನಿಮಯ ದರ :
ಪ್ರತಿ ಡಾಲರ್‌ಗೆ ₹86.675 ರಷ್ಟು ವಹಿವಾಟು ನಡೆಯುತ್ತಿದ್ದು, ಇದು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತಿದೆ.
ಬ್ಯಾಂಕುಗಳ ಬಡ್ಡಿ (Bank interest) ದರ ನೀತಿ :
ಭಾರತದಲ್ಲಿ ರಿಸರ್ವ್ ಬ್ಯಾಂಕ್ ಬಡ್ಡಿ ದರ ನಿಗದಿಪಡಿಸುವ ನೀತಿ ಚಿನ್ನದ ಹೂಡಿಕೆಗೆ ಸಂಬಂಧಿತ ಪರಿಣಾಮ ಬೀರುತ್ತದೆ.
ಭಾರತವು ವಿಶ್ವದಲ್ಲಿ 2ನೇ ಅತಿದೊಡ್ಡ ಚಿನ್ನ ಆಮದುದಾರ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿವರ್ಷ ಟನ್‌ಗಳ (Tun) ಲೆಕ್ಕದಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳುವ ಭಾರತದಲ್ಲಿ, ಚಿನ್ನದ ಬೆಲೆ ಏರಿಕೆ ಅಥವಾ ಇಳಿಕೆ ಬಹುಮಟ್ಟಿಗೆ ಅಂತರಾಷ್ಟ್ರೀಯ ಬೇಡಿಕೆ, ಆರ್ಥಿಕ ಸ್ಥಿತಿ ಮತ್ತು ಹೂಡಿಕೆಗಾರರ ಮನೋಭಾವದ ಮೇಲೆ ಅವಲಂಬಿತವಾಗಿರುತ್ತದೆ.
ಮಾರುಕಟ್ಟೆ ತಜ್ಞರ (Market specialist) ಪ್ರಕಾರ, ಮುಂದಿನ ಕೆಲವು ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿನ ಈ ತಾತ್ಕಾಲಿಕ ಇಳಿಕೆ, ಏರಿಕೆಯಾಗಬಹುದು. ಹೀಗಾಗಿ, ಹೂಡಿಕೆದಾರರು ಮತ್ತು ಆಭರಣ ಪ್ರಿಯರು ಚಿನ್ನ ಖರೀದಿಸುವ ಮುನ್ನ ಮಾರುಕಟ್ಟೆಯ ಸ್ಥಿತಿಯನ್ನು ಲೆಕ್ಕಹಾಕುವುದು ಒಳಿತು ಎಂದು ತಿಳಿಸಿದ್ದಾರೆ.
ಚಿನ್ನ ಮತ್ತು ಬೆಳ್ಳಿಯ ದರಗಳು (Gold and silver rate) ಸ್ವಾಭಾವಿಕವಾಗಿ ಏರಿಳಿಯುತ್ತಿರುತ್ತವೆ. ಈ ಬಾರಿ ಮಹಾಶಿವರಾತ್ರಿ ಹಿನ್ನಲೆಯಲ್ಲಿ ಬೆಲೆ ಕುಸಿತವಾಗಿದ್ದರೂ, ಮುಂದಿನ ದಿನಗಳಲ್ಲಿ ಚಿನ್ನದ ದರ ಮತ್ತೆ ಏರಿಕೆ ಕಾಣುವ ಸಾಧ್ಯತೆ ಇದೆ. ಹೀಗಾಗಿ, ಹೂಡಿಕೆ ಮಾಡಬಯಸುವವರು ಮಾರುಕಟ್ಟೆಯ ಸ್ಥಿತಿಗತಿಗಳನ್ನು ಪರಿಶೀಲಿಸಿ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುವುದು ವಾಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.