Gold Rate Today : ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಭಾರಿ ಇಳಿಕೆ! ಆಭರಣ  ಪ್ರಿಯರಿಗೆ ಜಾಕ್ ಪಾಟ್.!

Picsart 25 03 02 06 50 53 340

WhatsApp Group Telegram Group

ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ: ಹೂಡಿಕೆದಾರರು ಮತ್ತು ಗ್ರಾಹಕರಲ್ಲಿ ಹೊಸ ನಿರೀಕ್ಷೆ!

ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿ (Gold and Silver) ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಏರಿಳಿತ ಕಂಡು ಬಂದಿದೆ. ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಚಿನ್ನ ಹಾಗೂ ಬೆಳ್ಳಿಯ ದರಗಳಲ್ಲಿ ದಿನದಿಂದ ದಿನಕ್ಕೆ ವ್ಯತ್ಯಾಸ ಕಂಡು ಬರುತ್ತಿದೆ. ಕಳೆದ ಕೆಲ ತಿಂಗಳುಗಳಿಂದ ಚಿನ್ನದ ಬೆಲೆ ಗಗನಕ್ಕೇರಿದ ಪರಿಣಾಮ, ಗ್ರಾಹಕರು ಚಿನ್ನ ಹಾಗೂ ಬೆಳ್ಳಿ ಖರೀದಿಸಲು ಹಿಂದೇಟು ಹಾಕುತ್ತಿದ್ದರು. ಆದರೆ, ಈ ತಿಂಗಳ ಆರಂಭದಲ್ಲೇ ಚಿನ್ನದ ದರದಲ್ಲಿ ಸಣ್ಣ ಪ್ರಮಾಣದ ಇಳಿಕೆಯನ್ನು ನೋಡಬಹುದು. ಈ ಬದಲಾವಣೆಯು (Update) ಹೂಡಿಕೆದಾರರು ಮತ್ತು ಚಿನ್ನಾಭರಣ ಪ್ರಿಯರ ಗಮನ ಸೆಳೆದಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and Silver) ಬೆಲೆ ಇಂದು, ಮಾರ್ಚ್ 1, 2025: Gold Price Today

ಕಳೆದ ಕೆಲವು ತಿಂಗಳಿನಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇತ್ತು, ಆದರೆ ಈ ತಿಂಗಳ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬಂದಿದ್ದವು, ಇನ್ನು ಈ ಬದಲಾವಣೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಸ್ವಲ್ಪ ಇಳಿಕೆಯಾಗಿರುವುದನ್ನು ನಾವು ಗಮನಿಸಬಹುದು. ಸ್ವಲ್ಪ ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯು ಇಳಿಕೆಯಾಗುತ್ತಿದ್ದು, ಗ್ರಾಹಕರ ಸಂತೋಷಕ್ಕೆ ಕಾರಣವಾಗಿತ್ತು, ಇದೀಗ ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ (Decrease) ಕಂಡಿದ್ದು, ಆಭರಣ ಪ್ರಿಯರು ಚಿನ್ನ ಹಾಗೂ ಬೆಳ್ಳಿ ಕೊಂಡುಕೊಳ್ಳಲು ಹೆಚ್ಚು ಉತ್ಸುಕರಾಗಿದ್ದಾರೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,940ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,662ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,497ಆಗಿದೆ. ಇನ್ನು,1 ಕೆಜಿ ಬೆಳ್ಳಿ ಬೆಲೆ:97,000 ತಲುಪಿದೆ. 

ಹೌದು, ಕಳೆದ ಕೆಲ ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಗಣನೀಯ ಏರಿಳಿತ ಕಂಡಿದ್ದು, ಇದರ ಪರಿಣಾಮವಾಗಿ ಗ್ರಾಹಕರು ಬಂಗಾರ ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರಿದ ನಂತರ, ಇದೀಗ ಸ್ವಲ್ಪ ಇಳಿಕೆಯಾಗಿರುವುದು ವಹಿವಾಟುದಾರರಲ್ಲಿ ನಿರಾಶೆಯಿಂದ ನಿರೀಕ್ಷೆಯತ್ತ ಮುಖ ಮಾಡಿಸುವಂತಾಗಿದೆ.

ಮಾರ್ಚ್ 1, 2025: ಚಿನ್ನ ಮತ್ತು ಬೆಳ್ಳಿಯ ದರ:

ಚಿನ್ನದ ದರವು ನಗರದಿಂದ ನಗರಕ್ಕೆ ವ್ಯತ್ಯಾಸ ಹೊಂದಿದ್ದು, ಶನಿವಾರ ಮಾರ್ಚ್ 1, 2025 ರಂದು ಚಿನ್ನದ ದರ ಹೀಗಿದೆ :

ಚಿನ್ನದ ದರ (10 ಗ್ರಾಂ):
22 ಕ್ಯಾರೆಟ್: ₹79,590
24 ಕ್ಯಾರೆಟ್: ₹86,830

ಇನ್ನು ಪ್ರಮುಖ ನಗರಗಳಲ್ಲಿ ಚಿನ್ನದ ದರದ ಪಟ್ಟಿ ಹೀಗಿದೆ :

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ :

ಬೆಂಗಳೂರು: ₹79,590
ಮುಂಬೈ:  ₹79,590
ದೆಹಲಿ:  ₹79,740
ಚೆನ್ನೈ: ₹79,590
ಹೈದರಾಬಾದ್:  ₹79,590
ವಿಜಯವಾಡ:  ₹79,590

ಪ್ರಮುಖ ನಗರಗಳಲ್ಲಿ 24  ಕ್ಯಾರೆಟ್ ಚಿನ್ನದ ದರ :

ಬೆಂಗಳೂರು:  ₹86,830
ಮುಂಬೈ:  ₹86,830
ದೆಹಲಿ:  ₹86,980
ಚೆನ್ನೈ: ₹86,830
ಹೈದರಾಬಾದ್:  ₹86,830
ವಿಜಯವಾಡ:  ₹86,830

ಬೆಳ್ಳಿಯ ದರ (Silver rate) :

ಇನ್ನು ಇತ್ತೀಚಿಗೆ ಬೆಳ್ಳಿಯ ಮಾರುಕಟ್ಟೆಯಲ್ಲೂ ಬದಲಾವಣೆಗಳನ್ನು ನಾವು ಕಾಣಬಹುದು.  ಹೈದರಾಬಾದ್, ವಿಜಯವಾಡ, ಮತ್ತು ಚೆನ್ನೈಗಳಲ್ಲಿ ಬೆಳ್ಳಿಯ ದರ ಪ್ರತಿ ಕೆಜಿ ₹1,04,900 ಇದ್ದರೆ, ದೆಹಲಿ, ಮುಂಬೈ, ಮತ್ತು ಬೆಂಗಳೂರಿನಲ್ಲಿ ₹96,900 ನಷ್ಟಿದೆ.

ಚಿನ್ನ ಮತ್ತು ಬೆಳ್ಳಿ ದರಗಳ ಏರಿಳಿತ ನೇರವಾಗಿ ಹೂಡಿಕೆದಾರರು, ಚಿನ್ನಾಭರಣ ಖರೀದಿದಾರರು, ಹಾಗೂ ಆಭರಣ ವಹಿವಾಟುಗಳಿಗೆ ಪರಿಣಾಮ ಬೀರುತ್ತದೆ. ಈಗಾಗಲೇ ವಹಿವಾಟು ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳವಣಿಗೆಯನ್ನು ನಿರೀಕ್ಷಿಸಬಹುದು.

ಈಗಾಗಲೇ ಚಿನ್ನದ ಬೆಲೆ ಗಗನಕ್ಕೇರಿದರೂ, ಸಣ್ಣ ಮಟ್ಟದ ಇಳಿಕೆ ಗ್ರಾಹಕರಿಗೆ ಖರೀದಿ ಮಾಡುವ ಒಂದು ಅವಕಾಶ ನೀಡುತ್ತಿದೆ. ಆದರೆ, ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ (Market) ಮತ್ತಷ್ಟು ಏರಿಳಿತ ಕಾಣಬಹುದು ಎಂಬ ನಿರೀಕ್ಷೆಯೂ ಇದೆ. ಹೀಗಾಗಿ, ಹೂಡಿಕೆ ಅಥವಾ ಆಭರಣ ಖರೀದಿಗೆ ಮೊದಲು ದೈನಂದಿನ ದರಗಳನ್ನು ಪರಿಶೀಲಿಸುವುದು ಸೂಕ್ತ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!