ಜಾಗತಿಕ ಆರ್ಥಿಕ ಸ್ಥಿತಿ ಪ್ರಭಾವ: ಚಿನ್ನದ ಬೆಲೆ 10 ಗ್ರಾಂಗೆ ₹89,000 ದಾಟುವ ಸೂಚನೆ
ಭಾರತೀಯ ಚಿನ್ನ ಮಾರುಕಟ್ಟೆಯಲ್ಲಿ (Gold market) ಇತ್ತೀಚೆಗೆ ನಿರಂತರ ಬದಲಾವಣೆಗಳು ಕಂಡುಬಂದಿವೆ. ಚಿನ್ನದ ಬೆಲೆ (Gold rate) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಹೂಡಿಕೆದಾರರು ಮತ್ತು ಆಭರಣ ಪ್ರಿಯರ ಮೇಲೆ ಪರಿಣಾಮ ಬೀರುತ್ತಿದೆ. ಮಂಗಳವಾರದ ಮಾರಾಟದ ಸಮಯದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಒಂದೇ ದಿನ 1,100 ರೂಪಾಯಿ ಏರಿಕೆ ಕಾಣಲಾಗಿದ್ದು, ಈ ಬೆಳವಣಿಗೆ ಆಭರಣ ಖರೀದಿದಾರರಿಗೆ (Gold buyers) ಆಘಾತ ಮೂಡಿಸಿರುವುದರೊಂದಿಗೆ, ಹೂಡಿಕೆದಾರರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ. ಇನ್ನೇನು ಮುಂದಿನ ಎರಡು ಅಥವಾ ಮೂರು ತಿಂಗಳಲ್ಲಿ ಬರೋಬ್ಬರಿ ಒಂದು ಲಕ್ಷ ರೂಪಾಯಿ ದಾಟುವ ಮುನ್ಸೂಚನೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ , ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಚಿನ್ನ-ಬೆಳ್ಳಿ (Gold and Silver) ಬೆಲೆ ಇಂದು, ಮಾರ್ಚ್ 6, 2025: Gold Price Today
ಕಳೆದ ಕೆಲವು ತಿಂಗಳಿನಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇತ್ತು, ಆದರೆ ಈ ತಿಂಗಳ ಮೊದಲ ದಿನದಿಂದಲೂ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬರುತ್ತಿದ್ದವು, ಇನ್ನು ಈ ಬದಲಾವಣೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ (Gold and silver rate) ಸ್ವಲ್ಪ ಇಳಿಕೆಯಾಗಿರುವುದನ್ನು ನಾವು ಗಮನಿಸಿರುತ್ತೇವೆ. ಆದರೆ ಸೋಮವಾರದಿಂದ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಅದೇ ರೀತಿಯಾಗಿ ಇಂದೂ ಕೂಡ ಚಿನ್ನದ ಬೆಲೆ ಏರಿಕೆಯಾಗಿದ್ದು, ಗ್ರಾಹಕರು ನಿರಾಸೆಗೊಂಡಿದ್ದಾರೆ. ಹಾಗಿದ್ದರೆ, ಇಂದಿನ ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 066ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,799 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,666 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ:97,900 100 ತಲುಪಿದೆ. ಒಟ್ಟಾರೆಯಾಗಿ ನಿನ್ನೆಗೆ ಹೋಲಿಸಿದರೆ, 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 55 ರೂ. ನಷ್ಟು ಏರಿಕೆ ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 1000 ರೂ ನಷ್ಟು ಏರಿಕೆಯನ್ನು ನಾವು ಕಾಣಬಹುದು.
ಅಖಿಲ ಭಾರತ ಸರಾಫಾ ಅಸೋಸಿಯೇಷನ್(All India Sarafa Association) ಪ್ರಕಾರ, ದೇಶೀಯ ಚಿನ್ನ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಮತ್ತು ದಾಸ್ತಾನುದಾರರಿಂದ ಹೆಚ್ಚಿನ ಖರೀದಿಯಾಗಿದೆ. ಇದರ ಜತೆಗೆ ಜಾಗತಿಕ ಮಟ್ಟದಲ್ಲಿ (Global level) ಬಲವಾದ ಚಿನ್ನದ ಬೇಡಿಕೆಯ ಪರಿಣಾಮವಾಗಿ ದೆಹಲಿಯ ಚಿನ್ನದ ದರ 10 ಗ್ರಾಂಗೆ 89,000 ರೂ. ತಲುಪಿದೆ.
ಬೆಲೆ ಏರಿಕೆಯ ಹಿಂದಿನ ಪ್ರಮುಖ ಕಾರಣಗಳು (Causes) ಯಾವುವು?:
ಅಮೆರಿಕದ ಸುಂಕ ನೀತಿ(American tariff policy) :
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನಡಾ, ಮೆಕ್ಸಿಕೊ ಮತ್ತು ಚೀನಾದ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಜಾಗತಿಕ ವಹಿವಾಟು ತೊಡಕು ಎದುರಿಸುತ್ತಿದ್ದು, ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ.
ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ (Increased demand in the market) :
ಹೂಡಿಕೆದಾರರು ಮತ್ತು ಚಿನ್ನಾಭರಣ ವ್ಯಾಪಾರಿಗಳು ಭವಿಷ್ಯದ ಹೂಡಿಕೆಗೆ ಚಿನ್ನವನ್ನು ಖರೀದಿಸುತ್ತಿದ್ದು, ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತಿದೆ.
ಅಮೆರಿಕದ ಫೆಡರಲ್ ರಿಸರ್ವ್ ನೀತಿ (US Federal Reserve Policy) :
ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳಿಸಬಹುದು ಎಂಬ ನಿರೀಕ್ಷೆಯಿಂದ ಹೂಡಿಕೆದಾರರು ಚಿನ್ನದತ್ತ ಮುಖ ಮಾಡಿದ್ದಾರೆ. HDFC ಸೆಕ್ಯೂರಿಟೀಸ್‌ನ ವಿಶ್ಲೇಷಕ ಸೌಮಿಲ್ ಗಾಂಧಿ (Soumil Gandhi, analyst at HDFC Securities) ಅವರ ಪ್ರಕಾರ, ಫೆಡರಲ್ ರಿಸರ್ವ್ ನ ನವೀಕೃತ ಹಣಕಾಸು ನೀತಿ ಚಿನ್ನದ ಮೇಲಿನ ಆಕರ್ಷಣೆಯನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಮದುವೆ ಸರದಿ ಮತ್ತು ಹಬ್ಬಗಳ ಋತು:
ಮದುವೆ ಮತ್ತು ಹಬ್ಬಗಳ ಋತುವಿನಲ್ಲಿ (During the festive season) ಚಿನ್ನದ ಖರೀದಿ ಹೆಚ್ಚಾಗುತ್ತದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೃಹತ್ ಬೇಡಿಕೆಯೂ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಚಿನ್ನ ಮತ್ತು ಬೆಳ್ಳಿ ದರ ಸ್ಥಿತಿ ಯಾವ ರೀತಿಯಿದೆ?:
ಶೇ 99.9 ಶುದ್ಧತೆಯ ಚಿನ್ನ: 10 ಗ್ರಾಂ ಬೆಲೆ 87,900 ರೂ.ನಿಂದ 89,000 ರೂ.ಗೆ ಏರಿಕೆ.
ಶೇ 99.5 ಶುದ್ಧತೆಯ ಚಿನ್ನ: 87,500 ರೂ.ನಿಂದ 88,600 ರೂ.ಗೆ ಏರಿಕೆ.
ಬೆಳ್ಳಿ: ಅಮೆರಿಕದ ಸುಂಕ ನೀತಿ ಪರಿಣಾಮವಾಗಿ ಬೆಳ್ಳಿಯ ದರಗಳೂ ಏರಿಕೆಯಾಗಿದೆ.
ಮಾರುಕಟ್ಟೆ ತಜ್ಞರ (Market specialist) ಪ್ರಕಾರ, ಅಮೆರಿಕದ ಆರ್ಥಿಕ ನೀತಿಗಳು, ಬಡ್ಡಿದರದಲ್ಲಿ ಬದಲಾವಣೆ, ವಿಶ್ವದ ಒತ್ತಡಗಳು ಮತ್ತು ಭಾರತದಲ್ಲಿ ಆಭರಣ ದಾಸ್ತಾನುದಾರರಿಂದ ಎದುರಾಗುವ ಬೇಡಿಕೆ ಮುಂದಿನ ದಿನಗಳಲ್ಲಿ ಚಿನ್ನದ ದರವನ್ನು ಇನ್ನಷ್ಟು ಪ್ರಭಾವಿತಗೊಳಿಸಬಹುದು. ಹೀಗಾಗಿ, ಹೂಡಿಕೆದಾರರು ಮತ್ತು ಗ್ರಾಹಕರು ಮಾರುಕಟ್ಟೆಯ ಸ್ಥಿತಿಗತಿ ಗಮನಿಸಬೇಕಾಗಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ನೀವು ಚಿನ್ನ ಹೂಡಿಕೆ (Gold investment) ಮಾಡಲು ಯೋಚಿಸುತ್ತಿದ್ದರೆ, ಮಾರುಕಟ್ಟೆ ಸ್ಥಿತಿಯನ್ನು ಸಂಪೂರ್ಣವಾಗಿ ವಿಶ್ಲೇಷಿಸಿ ಬುದ್ಧಿವಂತಿಕೆಯಿಂದ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.