Gold Rate Today : ಚಿನ್ನದ ಬೆಲೆಯಲ್ಲಿ ಬರೋಬ್ಬರಿ 90 ಸಾವಿರ ರೂಪಾಯಿ. ಇಂದಿನ ರೇಟ್ ಇಲ್ಲಿದೆ.

Picsart 25 03 15 06 50 00 142

WhatsApp Group Telegram Group

ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ(gold and silver prices) ತೀವ್ರ ಏರಿಕೆ: ಚಿನ್ನದ ದರ ₹90,000 ಗಡಿ ದಾಟುವ ಮುನ್ಸೂಚನೆ!

ಇತ್ತೀಚಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ(gold and silver prices) ಕಂಡುಬರುತ್ತಿರುವ ಅಪೂರ್ವ ಏರಿಕೆ ಆರ್ಥಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆ ಏರಿಕೆ ಕಾಣುತ್ತಿದ್ದು, ನೆನ್ನೆಯೂ ಕೂಡ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಊಹಿಸಲಾಗದಷ್ಟು ಏರಿಕೆಯನ್ನು ನಾವು ಕಾಣಬಹುದು. ಮಾರ್ಚ್ 14 ರಂದು(March 14), 24 ಕ್ಯಾರೆಟ್ ಚಿನ್ನದ ದರವು ಪ್ರತಿ 10 ಗ್ರಾಂಗೆ ₹89,780 ತಲುಪಿದ್ದು, ಕೇವಲ ಮೂರು ದಿನಗಳ ಅವಧಿಯಲ್ಲಿ ₹2,100 ಹೆಚ್ಚಳವನ್ನು ತಲುಪಿದೆ. ಇನ್ನು ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಕೆಯೂ ಹೂಡಿಕೆದಾರರು(Investors) ಮತ್ತು ಗ್ರಾಹಕರಲ್ಲಿ ಕುತೂಹಲ ಹುಟ್ಟಿಸಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮಾರ್ಚ್ 15, 2025: Gold Price Today

ಚಿನ್ನ ಎಂದರೆ ಎಲ್ಲರಿಗೂ ಇಷ್ಟ ಆದರೆ, ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿವೆ. ಅದರಲ್ಲೂ ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಯನ್ನು ಕಾಣುತ್ತಿದ್ದು, ದಿನದಿಂದ ದಿನಕ್ಕೆ  ಏನಿಲ್ಲವೆಂದರೂ ಸಾವಿರಾರು ರೂ. ಗಳಷ್ಟು ಏರಿಕೆಯಾಗುತ್ತಾ ಬಂದಿದೆ. ಇನ್ನು ಈ ರೀತಿಯ ಚಿನ್ನದ ಬೆಲೆಯ ಏರಿಕೆಯಿಂದಾಗಿ ಗ್ರಾಹಕರು ಆತಂಕಕೊಳಗಾಗಿದ್ದು ಚಿನ್ನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು, ನಿನ್ನೆ ಕೂಡ ಚಿನ್ನದ ದರದಲ್ಲಿ ಏರಿಕೆಯಾಗಿದೆ (Increases). ಹಾಗಿದ್ದರೆ, ಮಾರ್ಚ್ 15, 2025ರಂದು ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 231 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,979 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,735 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,03,100 ತಲುಪಿದೆ.  ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ 110 ರೂ.ನಷ್ಟು ಏರಿಕೆ ಕಾಣಬಹುದು. ಹಾಗೆ ಬೆಳ್ಳಿ ಬೆಲೆಯಲ್ಲಿ ಒಂದೇ ದಿನಕ್ಕೆ 2000 ರೂ.ನಷ್ಟು ಏರಿಕೆಯನ್ನು ನೋಡಬಹುದು.

ಕೇವಲ ಚಿನ್ನದ ದರವಷ್ಟೇ ಅಲ್ಲ ಬೆಳ್ಳಿಯ ದರದಲ್ಲೂ ಕೂಡ ಆಶ್ಚರ್ಯಚಕಿತ ಏರಿಕೆಯಾಗಿದೆ:

ಹೌದು, ಬೆಳ್ಳಿ ಬೆಲೆಯೂ(silver prices) ಕೂಡ ತೀವ್ರವಾಗಿ ಏರಿಕೆಯಾಗಿದ್ದು, ಕೇವಲ ಮೂರು ದಿನಗಳಲ್ಲಿ ಪ್ರತಿ ಕೆಜಿಗೆ ₹5,000 ಏರಿಕೆಯಾಗಿ, ₹1.03 ಲಕ್ಷಕ್ಕೆ ತಲುಪಿದೆ. ಹೈದರಾಬಾದ್‌ನಲ್ಲಿ(Hyderabad) ಬೆಳ್ಳಿ ಬೆಲೆ ಇದಕ್ಕಿಂತಲೂ ಹೆಚ್ಚಾಗಿ ₹1.12 ಲಕ್ಷಕ್ಕೆ ತಲುಪಿದೆ. ಈ ಬೆಳವಣಿಗೆ ಭಾರತೀಯ ಮಾರುಕಟ್ಟೆಯಲ್ಲಿನ ಆರ್ಥಿಕ ಗತಿಯ ಪ್ರಭಾವ ಮತ್ತು ಜಾಗತಿಕ ಆರ್ಥಿಕ ಸ್ಥಿತಿಗತಿಗಳನ್ನೂ ಪ್ರತಿಬಿಂಬಿಸುತ್ತದೆ.

ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ – ಬೆಳ್ಳಿ ಬೆಲೆ ಯಾವ ರೀತಿಯಿದೆ?:

ಇತ್ತೀಚಿನ ದಿನಗಳಲ್ಲಿ ಭಾರತದ ಆಭರಣ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ತೀವ್ರ ಏರಿಕೆ ಕಂಡುಕೊಂಡಿವೆ.
ಚಿನ್ನ ದರ:
24 ಕ್ಯಾರೆಟ್ ಚಿನ್ನ: ಕಳೆದ ಮೂರು ದಿನಗಳಲ್ಲಿ ₹2,100 ಏರಿಕೆಯಾಗಿದ್ದು, ಪ್ರತಿ 10 ಗ್ರಾಂಗೆ ₹89,780 ದಾಟಿದೆ.
22 ಕ್ಯಾರೆಟ್ ಚಿನ್ನ: ₹82,300ಕ್ಕೆ ವಹಿವಾಟು ನಡೆಯುತ್ತಿದೆ.

ಬೆಳ್ಳಿ ದರ:
ಬೆಳ್ಳಿ ಬೆಲೆಯಲ್ಲಿ ₹5,000 ಏರಿಕೆ ಕಂಡುಬಂದಿದ್ದು, ಪ್ರತಿ ಕೆಜಿಗೆ ₹1.03 ಲಕ್ಷ ತಲುಪಿದೆ.
ಹೈದರಾಬಾದ್‌ನಲ್ಲಿ(Hyderabad) ಬೆಳ್ಳಿ ಬೆಲೆ ₹1.12 ಲಕ್ಷಕ್ಕೆ ತಲುಪಿರುವುದು ಗಮನಾರ್ಹ.
ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಿಂದ ಆಭರಣ ಪ್ರೇಮಿಗಳು, ಹೂಡಿಕೆದಾರರು ಮತ್ತು ವ್ಯಾಪಾರಿಗಳು(Investors and traders) ಗಾಬರಯಾಗಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಬೆಳವಣಿಗೆ ಯಾವ ರೀತಿಯಿದೆ?:

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ(international market) ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಪ್ರತಿ ಔನ್ಸ್ ಚಿನ್ನದ ಬೆಲೆ $2,990 ದಾಟಿ ಇತಿಹಾಸದಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ. ಇದು ಹೂಡಿಕೆದಾರರಲ್ಲಿ ಭರವಸೆಯನ್ನು ಮೂಡಿಸಿರುವುದರೊಂದಿಗೆ, ಮಾರುಕಟ್ಟೆಯ ಸ್ಥಿರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿಸಿದೆ.
ಬೆಳ್ಳಿಯ ದರವೂ ಏರಿಕೆಯಾಗಿ $34ಕ್ಕೆ ತಲುಪಿದೆ. ಇದೇ ಸಮಯದಲ್ಲಿ, ರೂಪಾಯಿ ಮೌಲ್ಯ ಪ್ರತಿ ಡಾಲರ್‌ಗೆ ₹86.94ಕ್ಕೆ ತಲುಪಿದ್ದು, ಆರ್ಥಿಕ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತಿದೆ.

ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣಗಳು ಯಾವುವು?:

ಅಮೆರಿಕ-ಕೆನಡಾ(America-Canada) ವಾಣಿಜ್ಯ ಯುದ್ಧ:
ಅಮೆರಿಕದ(America) ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ತೆರಿಗೆ ನೀತಿಯು ಜಾಗತಿಕ ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತಿದೆ. ಕೆನಡಾದಿಂದ ಆಮದುಗೊಳ್ಳುವ ಉಕ್ಕು ಮತ್ತು ಅಲ್ಯೂಮಿನಿಯಂ(Aluminum) ಉತ್ಪನ್ನಗಳ ಮೇಲೆ ಶೇ. 25 ರಷ್ಟು ಆಮದು ಸುಂಕ ವಿಧಿಸಲಾಗಿದೆ. ಇದಲ್ಲದೆ, ಕೆಲವು ಉತ್ಪನ್ನಗಳ ಮೇಲೆ ಸುಂಕ ಶೇ. 50 ಕ್ಕೆ ಹೆಚ್ಚಿಸಲಾಗಿದೆ.

ಯುರೋಪಿಯನ್(European) ಒಕ್ಕೂಟದ ಮೇಲೆ ತೆರಿಗೆ ಹೆಚ್ಚಳ:
ಯುರೋಪ್ ನಿಂದ ಆಮದುಗೊಳ್ಳುವ ವೈನ್(Wine) ಮತ್ತು ಷಾಂಪೇನ್ ಮೇಲೆ ಶೇ. 200 ರಷ್ಟು ಸುಂಕ ವಿಧಿಸುವುದಾಗಿ ಘೋಷಣೆ ಮಾಡಿರುವುದು ಜಾಗತಿಕ ಮಾರುಕಟ್ಟೆಗೆ ಭಾರಿ ಆಘಾತವನ್ನುಂಟು ಮಾಡಿದೆ.

ಅಮೆರಿಕ ಮಾರುಕಟ್ಟೆಯಲ್ಲಿ ಕುಸಿತ:

ಅಮೆರಿಕದ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯ ಸಾಧನವಾಗಿ ಪರಿಗಣಿಸುತ್ತಿದ್ದಾರೆ. ಈ ಬೆಳವಣಿಗೆಯು ಚಿನ್ನದ ಬೇಡಿಕೆಯನ್ನು ಹೆಚ್ಚಿಸಿರುವುದರಿಂದ ದರದಲ್ಲೂ ಭಾರೀ ಏರಿಕೆ ಕಂಡುಬರುತ್ತಿದೆ.
ರೂಪಾಯಿ ಮೌಲ್ಯದಲ್ಲಿನ ಬದಲಾವಣೆ:
ಅಮೆರಿಕ ಡಾಲರ್(US dollar) ಎದುರು ರೂಪಾಯಿ ಮೌಲ್ಯ ₹86.94ಕ್ಕೆ ತಲುಪಿದ್ದು, ಇದೂ ಸಹ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.

ಮುಂದಿನ ದಿನಗಳಲ್ಲಿ, ಚಿನ್ನದ ಬೆಲೆ ₹90,000 ಗಡಿಯನ್ನು ದಾಟುವ ಸಾಧ್ಯತೆ ಇದ್ದು, ಬೆಳ್ಳಿ ಬೆಲೆ ₹1.05 ಲಕ್ಷದತ್ತ ಸಾಗಬಹುದು ಎಂದು ಊಹಿಸಲಾಗಿದೆ. ಅದೇ ರೀತಿ ಜಾಗತಿಕ ವಾಣಿಜ್ಯ ವ್ಯವಹಾರಗಳು(Global commercial affairs) ಮತ್ತಷ್ಟು ಬದಲಾವಣೆಗೆ ಒಳಗಾದರೆ, ಚಿನ್ನದ ದರಗಳು ಇನ್ನಷ್ಟು ಏರಿಕೆ ಯಾಗುವ ಸಾಧ್ಯತೆ ಇದೆ.

ಬೆಲೆಗಳಲ್ಲಿ ಪ್ರತಿ ಕ್ಷಣವೂ ಬದಲಾವಣೆಯಾಗುವ ಸಾಧ್ಯತೆ ಇರುವುದರಿಂದ,ಮಾರುಕಟ್ಟೆಯಲ್ಲಿನ ಬೆಳವಣಿಗೆಗಳನ್ನು ಗಮನಿಸಿ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಇನ್ನು ಗ್ರಾಹಕರು ಖರೀದಿ ಅಥವಾ ಹೂಡಿಕೆಯ (Buying and Investment) ಮೊದಲು ಅಧಿಕೃತ ವಹಿವಾಟುದಾರರೊಂದಿಗೆ ಪರಿಶೀಲನೆ ಮಾಡುವುದು ಒಳಿತು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!