ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ!.
ಚಿನ್ನ ಮತ್ತು ಬೆಳ್ಳಿಯ (Gold and Silver) ದರದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಹೂಡಿಕೆದಾರರು ಹಾಗೂ ಗ್ರಾಹಕರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ಆರ್ಥಿಕ ಸ್ಥಿತಿಗತಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಯುದ್ಧ (Trade War), ಮತ್ತು ಹೂಡಿಕೆದಾರರ ಹಿತಾಸಕ್ತಿಯು ಬೆಲೆಯ ಏರಿಕೆಗೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ದರ ನಿರಂತರವಾಗಿ ಏರುತ್ತಿದ್ದು, ಹೂಡಿಕೆದಾರರು ಹಾಗೂ ಆಭರಣ ಪ್ರಿಯರು ಈ ರೀತಯ ಚಿನ್ನದ ಏರಿಕೆಗೆ ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.ಆದರೆ ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ನೋಡಬಹುದು. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮಾರ್ಚ್ 16, 2025: Gold Price Today
ಚಿನ್ನವು ಎಲ್ಲರಿಗೂ ಇಷ್ಟವಾದರೂ, ಇತ್ತೀಚಿನ ದಿನಗಳಲ್ಲಿ ಅದರ ಬೆಲೆಯಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ. ವಿಶೇಷವಾಗಿ, ಕಳೆದ ಮೂರ್ನಾಲ್ಕು ದಿನಗಳಿಂದ ಚಿನ್ನದ ಬೆಲೆಯಲ್ಲಿ ದಿನದಿಂದ ದಿನಕ್ಕೆ ಸಾವಿರಾರು ರೂಪಾಯಿಗಳಷ್ಟು ಹೆಚ್ಚಳವಾಗುತ್ತಿದೆ. ಈ ಏರಿಕೆಯಿಂದಾಗಿ ಗ್ರಾಹಕರು (Buyers) ಆತಂಕಗೊಂಡಿದ್ದಾರೆ ಮತ್ತು ಚಿನ್ನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ನಿನ್ನೆ ಕೂಡ ಚಿನ್ನದ ದರದಲ್ಲಿ ಹೆಚ್ಚಳ ಕಂಡುಬಂದಿದ್ದು, ಮಾರುಕಟ್ಟೆಯಲ್ಲಿ ನಿರಂತರ ಬೆಲೆ ಏರಿಕೆ ನೋಡಬಹುದು. ಚಿನ್ನದ ಬೆಲೆಯ ಏರಿಕೆ ಯಿಂದ ಸಾಮಾನ್ಯ ಜನರು ಚಿನ್ನ ಖರೀದಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಇನ್ನು, ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಆಭರಣ ಖರೀದಿಯಲ್ಲಿ ಮಿತಿಮೀರಿದ ಖರ್ಚು (Excessive spending) ಮಾಡುವುದು ಕಷ್ಟವಾಗುತ್ತಿದೆ. ಈ ರೀತಿಯ ಬೆಲೆ ಏರಿಕೆಯ ಪ್ರವೃತ್ತಿ ಮುಂದುವರಿದರೆ, ಗ್ರಾಹಕರ ಮೇಲೆ ಇನ್ನಷ್ಟು ಆರ್ಥಿಕ ಹೊರೆ ಬೀಳುವ ಸಾಧ್ಯತೆಯಿದೆ. ಆದರೆ ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ನೋಡಬಹುದು. ಹಾಗಿದ್ದರೆ, ಮಾರ್ಚ್ 16, 2025ರಂದು ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 220 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,967 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,726 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,03,000 ತಲುಪಿದೆ. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ 11 ರೂ. ಇಳಿಕೆಯಾಗಿದೆ. ಹಾಗೆ ಬೆಳ್ಳಿ ಬೆಲೆಯಲ್ಲಿಯೂ 100 ರೂ.ನಷ್ಟು ಇಳಿಕೆಯನ್ನು ನೋಡಬಹುದು.
ಮಾರ್ಚ್ 15, 2025 ರ ಚಿನ್ನದ ದರ ಯಾವ ರೀತಿಯಿದೆ?:
ಮಾರ್ಚ್ 15, 2025ರಂದು 24 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ ₹89,963 ಆಗಿದ್ದು, ನಿನ್ನೆ ಒಂದೇ ದಿನಕ್ಕೆ ₹1,200 ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ದರ(Gold rate) ಪ್ರತಿ ಗ್ರಾಂ ₹8,248.3 ಆಗಿದ್ದು, ₹1,100 ಹೆಚ್ಚಳವಾಗಿದೆ. ಕಳೆದ ವಾರ 24 ಕ್ಯಾರೆಟ್ ಚಿನ್ನದ ದರದಲ್ಲಿ -0.32% ಇಳಿಮುಖ ದಾಖಲಾಗಿದ್ದರೆ, ಕಳೆದ ತಿಂಗಳಲ್ಲಿ ಈ ಬದಲಾವಣೆ -1.05% ಆಗಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳು ಮಾರುಕಟ್ಟೆಯಲ್ಲಿ ಚಿನ್ನದ ದರವನ್ನು ಮತ್ತಷ್ಟು ಗಗನಕ್ಕೇರಿಸಿವೆ.
ಇತ್ತೀಚಿಗೆ ಬೆಳ್ಳಿಯ ದರದಲ್ಲೂ (Silver rate) ಏರಿಕೆಯಾಗುತ್ತಿದೆ:
ಚಿನ್ನದ ಜೊತೆಗೆ ಬೆಳ್ಳಿಯ ದರದಲ್ಲಿಯೂ ಹೆಚ್ಚಳವಾಗಿದೆ. ಭಾರತದಲ್ಲಿ ಪ್ರಸ್ತುತ ಬೆಳ್ಳಿಯ ದರ ಪ್ರತಿ ಕೆಜಿಗೆ ₹1,06,200 ಆಗಿದ್ದು, ನಿನ್ನೆ ಒಂದೇ ದಿನ ₹2,000 ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ 1 ಕೆಜಿ ಬೆಳ್ಳಿಯ ದರ ₹1,03,000 ಆಗಿದ್ದು, 1 ಗ್ರಾಂ ಬೆಳ್ಳಿಯ ದರ ₹103 ಆಗಿದೆ. ಈ ರೀತಿಯ ಬೆಳ್ಳಿಯ ದರ ಹೂಡಿಕೆದಾರರಿಗೆ ಹೆಚ್ಚು ಅನುಕೂಲವಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.
ಚಿನ್ನದ ದರ ಏರಿಕೆಗೆ ಪ್ರಮುಖ ಕಾರಣಗಳು ಯಾವುವು?:
ಜಾಗತಿಕ ಮಾರುಕಟ್ಟೆಯ (Global market) ಅಸ್ಥಿರತೆ:
ಅಮೆರಿಕ ಮತ್ತು ಚೀನಾವಿನ ನಡುವಿನ ವ್ಯಾಪಾರಯುದ್ಧದಿಂದಾಗಿ ಹೂಡಿಕೆದಾರರು ಚಿನ್ನದ ಖರೀದಿಗೆ ಮುಗ್ಗರಿಸುತ್ತಿದ್ದಾರೆ.
ಅಮೆರಿಕದ ಆರ್ಥಿಕ ನೀತಿಗಳು (American economic values) :
ಡೊನಾಲ್ಡ್ ಟ್ರಂಪ್ ಅವರ ಅರ್ಥಿಕ ನೀತಿಗಳು ಹಾಗೂ ಬಡ್ಡಿ ದರ ಪರಿಷ್ಕರಣೆಗಳು ಚಿನ್ನದ ಮೌಲ್ಯದಲ್ಲಿ ಏರಿಕೆಯಾಗಲು ಪ್ರಮುಖ ಕಾರಣವಾಗಿದೆ.
ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಇತ್ತೀಚಿನ ಏರಿಕೆ ಮಾರುಕಟ್ಟೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಇನ್ನು, ಇಂದು ಚಿನ್ನ, ಬೆಳ್ಳಿ ಬೆಲ್ಲೆಯಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ಚಿನ್ನ ದರ ಇನ್ನೂ ಕಡಿಮೆಯಾಗುವ ನಿರೀಕ್ಷೆಯನ್ನು ಗ್ರಾಹಾಕರು ಇಟ್ಟುಕೊಂಡಿದ್ದಾರೆ. ಹೂಡಿಕೆದಾರರು ಹಾಗೂ ಗ್ರಾಹಕರು ಈ ಬೆಳವಣಿಗೆಯ ಬಗ್ಗೆ ಗಮನಹರಿಸಿ ಸೂಕ್ತ ನಿರ್ಧಾರ (Better Decision) ತೆಗೆದುಕೊಳ್ಳುವುದು ಅಗತ್ಯ.
ಪ್ರತಿದಿನವೂ ಪ್ರತಿ ಕ್ಷಣವು ಚಿನ್ನದ ಬೆಲೆಯಲ್ಲಿ ಬದಲಾವಣೆಯಾಗುತ್ತಿದ್ದು, ಚಿನ್ನ ಖರೀದಿಸುವ ಮುನ್ನ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳನ್ನು ಗಮನಿಸಿ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಇನ್ನು ಗ್ರಾಹಕರು ಖರೀದಿ ಅಥವಾ ಹೂಡಿಕೆಯ (Buying and Investment) ಮೊದಲು ಅಧಿಕೃತ ವಹಿವಾಟುದಾರರೊಂದಿಗೆ ಪರಿಶೀಲನೆ ಮಾಡುವುದು ಒಳಿತು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.