Gold Rate Today: ಯುಗಾದಿ ಹಬ್ಬಕ್ಕೆ ಮತ್ತೇ ಬಿಗ್ ಶಾಕ್.! ಚಿನ್ನದ ಬೆಲೆ ಭಾರಿ ಏರಿಕೆ.! ಇಂದಿನ ರೇಟ್ ಇಲ್ಲಿದೆ

Picsart 25 03 20 07 00 42 778

WhatsApp Group Telegram Group

ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ: ಹೂಡಿಕೆದಾರರಿಗೆ ಲಾಭ, ಗ್ರಾಹಕರಿಗೆ ಆತಂಕ!

ಚಿನ್ನ ಎಂದಾಕ್ಷಣ ಅದು ಭಾರತೀಯರ ಹೃದಯಕ್ಕೆ ಹತ್ತಿರವಾದ ಹೂಡಿಕೆ ಮಾತ್ರವಲ್ಲ, ಸಂಪ್ರದಾಯ, ಭದ್ರತೆ ಮತ್ತು ಶ್ರೀಮಂತಿಕೆಯ ಪ್ರತೀಕವೂ ಹೌದು. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಸಾಮಾನ್ಯ ಗ್ರಾಹಕರಿಗೆ(General customers) ಆತಂಕ ಉಂಟುಮಾಡಿದೆ. ಹೂಡಿಕೆದಾರರು ಮತ್ತು ವಹಿವಾಟುದಾರರಿಗೆ ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಕಳೆದ ಕೆಲವು ವಾರಗಳಿಂದ ಚಿನ್ನದ ದರ ನಿರಂತರವಾಗಿ ಏರಿಕೆಯಾಗುತ್ತಾ ಬಂದಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ(International market) ಬಂಡವಾಳ ಹೂಡಿಕೆ ಮತ್ತು ಆರ್ಥಿಕ ನೀತಿಗಳ ಪ್ರಭಾವದಿಂದ ಇದು ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮಾರ್ಚ್ 20, 2025: Gold Price Today

ಚಿನ್ನವು ಭಾರತೀಯ ಮಾರುಕಟ್ಟೆಯಲ್ಲಿ ಯಾವಾಗಲೂ ವಿಶೇಷ ಸ್ಥಾನವನ್ನು ಹೊಂದಿದೆ. ಇದು ಕೇವಲ ಆಭರಣ ಮಾತ್ರವಲ್ಲ, ಹೂಡಿಕೆಗೆ ಮತ್ತು ಆರ್ಥಿಕ ಭದ್ರತೆಗೆ (Investment and economic safety) ಪ್ರಮುಖ ಆಯ್ಕೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ದರದಲ್ಲಿ ಅಚಾನಕ್ ಏರಿಕೆಯಾಗುತ್ತಿರುವುದು ಗ್ರಾಹಕರಿಗೆ ಆತಂಕ ಉಂಟುಮಾಡಿದರೆ, ಹೂಡಿಕೆದಾರರಿಗೆ ಸಂತೋಷ ತಂದಿದೆ. ಒಂದೆರಡು ದಿನ ಚಿನ್ನದ ದರದಲ್ಲಿ 100 ರೂಪಾಯಿ ಅಥವಾ 200 ರಷ್ಟು ಇಳಿಕೆಯನ್ನು ಕಂಡರೆ, ಮತ್ತೆರಡು ದಿನ 400 ರಿಂದ 1000 ರೂ.ನಷ್ಟು ಚಿನ್ನದ ದರ ಏರಿಕೆಯಾಗುತ್ತಿದೆ. ಅದೇ ರೀತಿ ನಿನ್ನೆ ಮತ್ತೆ ಚಿನ್ನದ ದರದಲ್ಲಿ ದಿಡೀರ್ ಏರಿಕೆ (Increased) ಕಂಡಿದ್ದು ಗ್ರಾಹಕರು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಹಾಗಿದ್ದರೆ, ಮಾರ್ಚ್ 19, 2025ರಂದು ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 291 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,045 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,784 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,05,100 ತಲುಪಿದೆ. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ 40ರೂ. ಏರಿಕೆಯನ್ನು ಕಾಣಬಹುದು. ಹಾಗೆ ಬೆಳ್ಳಿ ಬೆಲೆಯಲ್ಲಿಯೂ ಒಂದೇ ದಿನಕ್ಕೆ 1000 ರೂ.ನಷ್ಟು ಏರಿಕೆಯನ್ನು ನೋಡಬಹುದು.

ಚಿನ್ನದ ದರ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿದ್ದು, ಮಾರ್ಚ್ ತಿಂಗಳ ಆರಂಭದ ಹೊತ್ತಿಗೆ ₹7,940 ಇದ್ದ 22 ಕ್ಯಾರೆಟ್ ಚಿನ್ನದ ದರ ಈಗ ₹8,290ಕ್ಕೆ ಏರಿಕೆಯಾಗಿದೆ. ಕೇವಲ 19 ದಿನಗಳಲ್ಲಿ ಪ್ರತಿ ಗ್ರಾಂ ₹350 ಹೆಚ್ಚಳ ಕಂಡಿದೆ, ಇದರಿಂದಾಗಿ 10 ಗ್ರಾಂ ದರ ₹3,500 ಹೆಚ್ಚಾಗಿದೆ. ಈ ಏರಿಕೆಯ ಹಿಂದಿನ ಪ್ರಮುಖ ಕಾರಣಗಳು (Causes) ಹೂಡಿಕೆದಾರರ ಆಸಕ್ತಿ, ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಡಾಲರ್ ವಿರುದ್ಧ ರೂಪಾಯಿ ಮೌಲ್ಯ, ಮತ್ತು ಅಮೆರಿಕದ ಹಣಕಾಸು ನೀತಿಗಳಾಗಿದೆ.

ಮಾರ್ಚ್ 19, 2025ರ ಚಿನ್ನದ ದರ ಎಷ್ಟು?:

ನಿರಂತರ ಏರಿಕೆಯಿಂದಾಗಿ, 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ₹8,290 ಆಗಿದ್ದು, ಇದು ಕಳೆದ ದಿನಕ್ಕೆ ಹೋಲಿಸಿದರೆ ₹40 ಹೆಚ್ಚಾಗಿದೆ. 24 ಕ್ಯಾರೆಟ್ ಚಿನ್ನದ ದರ ₹9,044 ಕ್ಕೆ ಏರಿಕೆಯಾಗಿದೆ, ಈ ದರದಲ್ಲೂ ಸಹ ₹44 ರಷ್ಟು ಹೆಚ್ಚಳವಾಗಿದೆ.
10 ಗ್ರಾಂ ಚಿನ್ನದ ದರ:
22 ಕ್ಯಾರೆಟ್: ₹82,900
24 ಕ್ಯಾರೆಟ್: ₹90,440

ವಿವಿಧ ನಗರಗಳಲ್ಲಿನ 22 ಕ್ಯಾರೆಟ್ (1 ಗ್ರಾಂ)ಚಿನ್ನದ ದರ:
ಬೆಂಗಳೂರು: ₹8,290
ಚೆನ್ನೈ: ₹8,290
ಕೇರಳ: ₹8,290
ದಿಲ್ಲಿ: ₹8,305
ಹೈದರಾಬಾದ್: ₹8,290
ಕೋಲ್ಕತ್ತಾ: ₹8,290
ಮುಂಬೈ: ₹8,290

ವಿವಿಧ ನಗರಗಳಲ್ಲಿನ 24 ಕ್ಯಾರೆಟ್ (1 ಗ್ರಾಂ)ಚಿನ್ನದ ದರ:
ಬೆಂಗಳೂರು: ₹9,044
ಚೆನ್ನೈ: ₹9,044
ಕೇರಳ: ₹9,044
ದಿಲ್ಲಿ: ₹9,059
ಹೈದರಾಬಾದ್: ₹9,044
ಕೋಲ್ಕತ್ತಾ: ₹9,044
ಮುಂಬೈ: ₹9,044

ಕಳೆದ 10 ದಿನಗಳ 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ :
ಮಾರ್ಚ್. 19  : 8,290 (+40)
ಮಾರ್ಚ್.18  : 8,250 (+40)
ಮಾರ್ಚ್.17  : 8,210 (-10)
ಮಾರ್ಚ್.16 : 8,220
ಮಾರ್ಚ್.15  : 8,220 (-10)
ಮಾರ್ಚ್.14 :  8,230 (+110)
ಮಾರ್ಚ್.13 :  8,120 (+55)
ಮಾರ್ಚ್.12  : 8,065(+45)
ಮಾರ್ಚ್.11:  8,020 (-30)
ಮಾರ್ಚ್.10 : 8,050 (+10)
ಮಾರ್ಚ್.9  : 8040
ಚಿನ್ನದ ದರದಲ್ಲಿ ನಿರಂತರ ಏರಿಳಿತವಾಗುತ್ತಿದ್ದು, ಮಾರ್ಚ್ 1 ರಂದು ₹7,940 ರೂ. ನಷ್ಟು ಇದ್ದ ದರ, ಮಾರ್ಚ್ 19ಕ್ಕೆ ₹8,290 ಗೆ ಏರಿಕೆಯಾಗಿದೆ. ಈ ಗತಿ ಮುಂದುವರಿದರೆ, ಮುಂಬರುವ ದಿನಗಳಲ್ಲಿ ಚಿನ್ನದ ದರ ₹8,500-₹9,000 ಹತ್ತುವ ಸಾಧ್ಯತೆ ಇದೆ.

ಚಿನ್ನದ ಬೆಲೆ ಏರಿಕೆಗೆ ಕಾರಣಗಳು ಯಾವುವು?:

ಇತರ ಷೇರು ಮಾರುಕಟ್ಟೆ (Stoke market) ಪತನವಾದ ಕಾರಣ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸುತ್ತಿದ್ದಾರೆ. ಈ ಕಾರಣದಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ.
ಅಮೆರಿಕದ ಕೇಂದ್ರ ಬ್ಯಾಂಕ್ (ಫೆಡ್)ದ ಕೆಲವು ನಿರ್ಧಾರಗಳು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಿವೆ.
ಚಿನ್ನದ ದರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ (Dollar) ಮೇಲೆ ಹೆಚ್ಚು ಅವಲಂಬಿತವಾಗಿದ್ದು, ರೂಪಾಯಿಯ ಮೌಲ್ಯ ಕುಸಿದಂತೆ ಬೆಲೆ ಏರುತ್ತದೆ.
ಮದುವೆ ಮತ್ತು ಹಬ್ಬದ ಋತು ಆರಂಭವಾಗುತ್ತಿರುವುದರಿಂದ ಚಿನ್ನದ ಖರೀದಿ ಹೆಚ್ಚಾಗುತ್ತಿದೆ. ಆದ್ದರಿಂದ ಚಿನ್ನದ ದರ ಏರಿಕೆಯಾಗುತ್ತಿದೆ.
ಚಿನ್ನದ ಮೇಲಿನ ಸುಂಕದ ಪ್ರಮಾಣದಲ್ಲಿ ಬದಲಾವಣೆಗಳು ಮಾರುಕಟ್ಟೆಯ ಮೇಲೂ ಪ್ರಭಾವ ಬೀರಿವೆ.

ಗ್ರಾಹಕರೇ ಗಮನಿಸಿ (Notice)

ಚಿನ್ನವನ್ನು ಖರೀದಿ ಮಾಡುವ ಮೊದಲು ಮಾರುಕಟ್ಟೆ ಪರಿಸ್ಥಿತಿಯನ್ನು ಸಮೀಕ್ಷಿಸಿ.
ಹೂಡಿಕೆ ಉದ್ದೇಶದಿಂದ ಚಿನ್ನ ಕೊಳ್ಳುವವರು ದೀರ್ಘಾವಧಿಯ ಲಾಭದ ದೃಷ್ಟಿಯಿಂದ ಬಂಡವಾಳ ಹೂಡಿಕೆ ಮಾಡಬಹುದು.
ಚಿನ್ನದ ಆನ್‌ಲೈನ್ ದರ (Online rate) ಪರಿಶೀಲಿಸಿ, ಅತ್ಯುತ್ತಮ ದರದಲ್ಲಿ ಖರೀದಿಸುವುದು ಒಳಿತು.
ಚಿನ್ನದ ಮೌಲ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ, ಗ್ರಾಹಕರು ಹಾಗೂ ಹೂಡಿಕೆದಾರರು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು.

ವಿಶ್ಲೇಷಕರು ಚಿನ್ನದ ಬೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಏರಿಕೆ ಸಾಧ್ಯವಿದೆ ಎಂದು ಅಂದಾಜಿಸುತ್ತಿದ್ದಾರೆ. ಹೀಗಾಗಿ ಚಿನ್ನ ಖರೀದಿಯ ಯೋಜನೆ ಹೊಂದಿರುವವರು ತಕ್ಷಣವೇ ನಿರ್ಧಾರ ತೆಗೆದುಕೊಳ್ಳುವುದು ಒಳಿತು. ಇಂತಹ ಸಂದರ್ಭದಲ್ಲಿ ಹೂಡಿಕೆದಾರರು ಹಾಗೂ ಗ್ರಾಹಕರು ಮುನ್ನೆಚ್ಚರಿಕೆಯಿಂದ ತೀರ್ಮಾನ (Decision) ಮಾಡುವುದು ಅಗತ್ಯ. ಚಿನ್ನದ ಮೌಲ್ಯವು ರಾಜಕೀಯ, ಆರ್ಥಿಕ ಮತ್ತು ಜಾಗತಿಕ ಪ್ರಭಾವಗಳಿಂದ ಸಿದ್ಧವಾಗುವ ಕಾರಣ, ಚಿನ್ನ ಖರೀದಿಸುವ ಮುನ್ನ ನಿಖರವಾದ ಮಾಹಿತಿ ಪಡೆದುಕೊಳ್ಳುವುದು ಉತ್ತಮ. ಹಾಗೆ, ಖರೀದಿಯ ಮೊದಲು ಮಾರುಕಟ್ಟೆ ವಿಶ್ಲೇಷಣೆ ಮಾಡುವುದು ಅತ್ಯಗತ್ಯ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!