ಚಿನ್ನದ ಬೆಲೆಯಲ್ಲಿ ಏರಿಕೆ, ಬೆಳ್ಳಿಯ ದರ ಸ್ಥಿರ – ಹೂಡಿಕೆದಾರರ ಗಮನ ಸೆಳೆಯುತ್ತಿರುವ ಮಾರುಕಟ್ಟೆ
ಚಿನ್ನ ಮತ್ತು ಬೆಳ್ಳಿ (Gold and Silver) ಮಾರುಕಟ್ಟೆಯಲ್ಲಿ ಕಳೆದ ಕೆಲವು ವಾರಗಳಿಂದ ಸಾಕಷ್ಟು ಏರಿಳಿತಗಳು ಕಂಡುಬಂದಿವೆ. ಆರ್ಥಿಕ ಅಸ್ಥಿರತೆ, ಅಂತರಾಷ್ಟ್ರೀಯ ಮಾರುಕಟ್ಟೆಯ (International market) ಏರಿಕೆಗಳು, ಮತ್ತು ಭಾರತೀಯ ಗ್ರಾಹಕರ ಬೇಡಿಕೆಯ ನಡುವಿನ ವ್ಯತ್ಯಾಸಗಳು ಈ ಬೆಲೆಬದಲಾವಣೆಗೆ ಕಾರಣವಾಗಿದೆ. ಚಿನ್ನವನ್ನು ವಿಶ್ವಾಸಾರ್ಹ ಹೂಡಿಕೆ ಆಯ್ಕೆಯಾಗಿ ಪರಿಗಣಿಸಲಾಗುತ್ತಿದೆ, ಹೀಗಾಗಿ ಮಾರುಕಟ್ಟೆಯ ಸೂಕ್ಷ್ಮ ಬದಲಾವಣೆಗಳು (market subtle changes) ಕೂಡಲೇ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇನ್ನು, ಇತ್ತೀಚಿನ ದಿನಗಳಲ್ಲಿ, ಚಿನ್ನದ ಬೆಲೆ ಕ್ರಮೇಣ ಏರಿಕೆಯಾಗುತ್ತಿದೆ. ಅದರೆ ಬೆಳ್ಳಿ(Silver) ಯ ಬೆಲೆ ಇಳಿಕೆಯಾಗುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ದರದಲ್ಲಿ 50 ರೂಗಳಷ್ಟು ಹೆಚ್ಚಳ ಕಂಡುಬಂದಿದ್ದು, ಬೆಳ್ಳಿ ಬೆಲೆ ಒಂದೇ ಮಟ್ಟದಲ್ಲಿ ಉಳಿದಿದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಹೂಡಿಕೆದಾರರು ಹೆಚ್ಚಿನ ಜಾಗೃತೆಯಿಂದ ಹೂಡಿಕೆ ಮಾಡುತ್ತಿದ್ದಾರೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮಾರ್ಚ್ 31, 2025: Gold Price Today
ಭಾರತದಲ್ಲಿ ಚಿನ್ನವು ಆಭರಣ ಹಾಗೂ ಹೂಡಿಕೆಯ ಪ್ರಮುಖ ಆಯ್ಕೆಯಾಗಿದ್ದು, ಅದರ ಬೆಲೆಯಲ್ಲಿ ಇತ್ತೀಚೆಗೆ ನಿರಂತರ ಏರಿಕೆ ಕಂಡುಬಂದಿದೆ. ಇನ್ನು, ಹಬ್ಬಗಳ ಹತ್ತಿರದ ಸಂದರ್ಭದಲ್ಲಿ ಚಿನ್ನದ ಬೆಲೆ ಏರಿಕೆಯಾಗುವುದು ಸಾಮಾನ್ಯವಾಗಿದೆ. ಅದೇ ರೀತಿ ಯುಗಾದಿ ಹಬ್ಬದ (Ugadi festival) ದಿನವೂ ಕೂಡ ಚಿನ್ನ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿಲ್ಲ. ಇನ್ನು ಇತ್ತೀಚಿಗೆ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಯಾಗುತ್ತಿದ್ದರೆ ಬೆಳ್ಳಿ ಬೆಲೆ ಇಳಿಕೆಯಾಗುತ್ತಿದೆ. ಹಾಗಿದ್ದರೆ, ಮಾರ್ಚ್ 31, 2025ರಂದು ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 359 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9.119 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,839 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,03,900 ರೂ ನಷ್ಟಿದೆ. ನಿನ್ನೆಗೆ ಹೋಲಿಸದರೆ 100 ರೂ. ನಷ್ಟು ಇಳಿಕೆಯಾಗಿದೆ.
ಮಾರ್ಚ್ 30, 2025ರಂದು ಭಾರತದಲ್ಲಿ 10 ಗ್ರಾಂ ಚಿನ್ನದ ದರ :
22 ಕ್ಯಾರಟ್ ಚಿನ್ನ: ₹83,600
24 ಕ್ಯಾರಟ್ ಚಿನ್ನ: ₹91,200
18 ಕ್ಯಾರಟ್ ಚಿನ್ನ: ₹68,400
ಭಾರತದಲ್ಲಿ ಬೆಳ್ಳಿ ದರ (100 ಗ್ರಾಂ):
ಬೆಳ್ಳಿ: ₹10,400
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ 10 ಗ್ರಾಂ ಚಿನ್ನದ ದರ (Gold rate) :
ಚಿನ್ನದ ದರದಲ್ಲಿ ಕಳೆದ ಹತ್ತು ದಿನಗಳಿಂದ ಏರಿಕೆಯನ್ನು ಕಾಣುತ್ತಿದೆ. 10 ದಿನಗಳ ಹಿಂದೆ 8,310 ರೂ ಆಗಿದ್ದ 1 ಗ್ರಾಂ 22 ಕ್ಯಾರಟ್ ಚಿನ್ನದ ದರವು 8,360 ರೂಗೆ ತಲುಪಿದೆ. ಈ ಅವಧಿಯಲ್ಲಿ ಚಿನ್ನದ ದರದಲ್ಲಿ 50 ರೂನಷ್ಟು ಹೆಚ್ಚಳ ಕಂಡುಬಂದಿದೆ.
ಬೆಂಗಳೂರು: ₹83,600
ಚೆನ್ನೈ: ₹83,600
ಮುಂಬೈ: ₹83,600
ದೆಹಲಿ: ₹83,750
ಕೋಲ್ಕತಾ: ₹83,600
ಕೇರಳ: ₹83,600
ಅಹ್ಮದಾಬಾದ್: ₹83,650
ಜೈಪುರ್: ₹83,750
ಲಕ್ನೋ: ₹83,750
ಭುವನೇಶ್ವರ್: ₹83,600
ಭಾರತದ ಪ್ರಮುಖ ನಗರಗಳಲ್ಲಿ 100 ಗ್ರಾಂ ಬೆಳ್ಳಿ ದರ:
ಹತ್ತು ದಿನಗಳ ಹಿಂದೆ 10 ಗ್ರಾಂ ಬೆಳ್ಳಿಯ ದರ ₹1,044 ಆಗಿದ್ದರೆ, ಈಗ ಅದು ₹1,040ಕ್ಕೆ ಇಳಿದಿದೆ. ಬೆಳ್ಳಿ ದರವು ಕೆಲವು ದಿನಗಳ ಹಿಂದೆ ₹3ನಷ್ಟು ಏರಿಕೆ ಕಂಡಿತ್ತು, ಆದರೆ ಕ್ರಮೇಣ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಆದರೆ ಬೆಳ್ಳಿ ದರದಲ್ಲಿ ಈ ವಾರಾಂತ್ಯದಲ್ಲಿ ಯಾವುದೇ ಪ್ರಮುಖ ಏರಿಕೆ ಇಲ್ಲ.
ಬೆಂಗಳೂರು: ₹10,400
ಚೆನ್ನೈ: ₹11,300
ಮುಂಬೈ: ₹10,400
ದೆಹಲಿ: ₹10,400
ಕೋಲ್ಕತಾ: ₹10,400
ಕೇರಳ: ₹11,300
ಅಹ್ಮದಾಬಾದ್: ₹10,400
ಜೈಪುರ್: ₹10,400
ಲಕ್ನೋ: ₹10,400
ಭುವನೇಶ್ವರ್: ₹11,300
ಪುಣೆ: ₹10,400
ವಿದೇಶಿ ಮಾರುಕಟ್ಟೆಯಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ದರ :
ಮಲೇಶ್ಯಾ: 4,300 ರಿಂಗಿಟ್ (₹82,860)
ದುಬೈ: 3,442.50 ಡಿರಾಮ್ (₹80,100)
ಅಮೆರಿಕಾ: 935 ಡಾಲರ್ (₹79,910)
ಸಿಂಗಾಪುರ: 1,289 SGD (₹82,120)
ಕತಾರ್: 3,475 ಕತಾರಿ ರಿಯಾಲ್ (₹81,470)
ಸೌದಿ ಅರೇಬಿಯಾ: 3,510 ಸೌದಿ ರಿಯಾಲ್ (₹79,950)
ಓಮನ್: 366 ಒಮಾನಿ ರಿಯಾಲ್ (₹81,250)
ಕುವೇತ್: 283.20 ಕುವೇತಿ ದಿನಾರ್ (₹78,520)
ಚಿನ್ನದ ಬೆಲೆಗಳಲ್ಲಿ ಮುಂದುವರೆದ ಏರಿಕೆ ಪ್ರಸ್ತುತ ಆರ್ಥಿಕ ಬೆಳವಣಿಗೆಯೊಂದಿಗೇ ಜೋಡಿಸಿಕೊಂಡಿದೆ. ಅಮೆರಿಕದ ಫೆಡರಲ್ ರಿಸರ್ವ್ (American Federal Reserve) ಬಡ್ಡಿದರ ನಿರ್ಧಾರ, ಬಂಡವಾಳ ಮಾರುಕಟ್ಟೆಯ ಚಲನೆಗಳು, ಹಾಗೂ ರೂಪಾಯಿ-ಡಾಲರ್ (Rupees and Dollar) ವಿನಿಮಯ ದರಗಳು ಬೆಲೆ ಏರಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಹೂಡಿಕೆ ಮಾಡುವ ಮುನ್ನ ನವೀಕರಿಸಿದ ದರ ಪರಿಶೀಲಿಸುವುದು ಬಹಳ ಮುಖ್ಯ.
ಗಮನಿಸಿ (Notice) :
ಈ ದರಗಳು ಪ್ರತಿದಿನವೂ ಬದಲಾವಣೆಯಲ್ಲಿದ್ದು, ವಿವಿಧ ನಗರಗಳಲ್ಲಿನ ಜವಳಿ ಅಂಗಡಿಗಳು, ಸ್ವತಂತ್ರ ಚಿನ್ನಾಭರಣ ಮಾರಾಟಗಾರರು ಹಾಗೂ ಬ್ಯಾಂಕುಗಳು (Gold sellers and banks) ನೀಡುವ ದರಗಳಲ್ಲಿ ಕೆಲವು ವ್ಯತ್ಯಾಸಗಳು ಇರಬಹುದು. ಜೊತೆಗೆ, ಜಿಎಸ್‌ಟಿ ಹಾಗೂ ಮೇಕಿಂಗ್ ಚಾರ್ಜ್ ಸೇರಿದ ದರವು ಖರೀದಿಯ ಸಮಯದಲ್ಲಿ ಬದಲಾವಣೆಗಳಾಗಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.