Gold Rate Today : ಚಿನ್ನ ಪ್ರಿಯರಿಗೆ ಬಿಗ್ ಶಾಕ್: ಚಿನ್ನದ ಬೆಲೆ ಗಗನಕ್ಕೆ; ಇಲ್ಲಿದೆ ಇಂದಿನ ದರಪಟ್ಟಿ

IMG 20250320 WA0021

WhatsApp Group Telegram Group

ಮಾರುಕಟ್ಟೆಯಲ್ಲಿ ಇಂದು ಕೂಡ ಏರಿಕೆ ಕಂಡ ಚಿನ್ನ-ಬೆಳ್ಳಿ ದರ?

ಚಿನ್ನ ಮತ್ತು ಬೆಳ್ಳಿಯ ದರಗಳು (Gold and silver rate) ಬದಲಾವಣೆಯಾಗುವುದು ಹೊಸದೇನಲ್ಲ. ಜಾಗತಿಕ ಆರ್ಥಿಕ ಸ್ಥಿತಿ, ಕೇಂದ್ರ ಬ್ಯಾಂಕುಗಳ ಹಣದುಬ್ಬರ ನಿಯಂತ್ರಣ ನೀತಿಗಳು, ಹೂಡಿಕೆದಾರರ ಮನೋಭಾವ, ಮತ್ತು ಮಾರುಕಟ್ಟೆಯ ಬೇಡಿಕೆ ಹೀಗೆ ಇತ್ಯಾದಿ ಕಾರಣಗಳಿಂದ ನಿತ್ಯ ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತಿವೆ. ಇತ್ತೀಚೆಗೆ ಅಮೆರಿಕದ ಹಣಕಾಸು ನೀತಿಗಳಲ್ಲಿ (American Financial values) ಕಂಡುಬಂದ ಬದಲಾವಣೆ, ಜಾಗತಿಕ ಆರ್ಥಿಕ ಶಕ್ತಿಗಳ ಪರಸ್ಪರ ಪ್ರಭಾವ, ಹಾಗೂ ಹೂಡಿಕೆದಾರರಲ್ಲಿ ಮೂಡಿದ ಅಶಾಂತಿ ಚಿನ್ನ ಮತ್ತು ಬೆಳ್ಳಿ ಮೌಲ್ಯ ಇಳಿಕೆಗೆ ಕಾರಣವಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮಾರ್ಚ್ 21, 2025: Gold Price Today

ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಸದಾ ಅನನ್ಯ ಮಹತ್ವವಿದೆ. ಇದು ಕೇವಲ ಆಭರಣವಷ್ಟೇ ಅಲ್ಲ, ಹೂಡಿಕೆ ಮತ್ತು ಆರ್ಥಿಕ ಭದ್ರತೆಗಾಗಿ ವಿಶ್ವಾಸಾರ್ಹ ಆಯ್ಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಆಗುತ್ತಿರುವ ತೀವ್ರ ಏರಿಳಿತ ಗ್ರಾಹಕರಿಗೆ ಆತಂಕವನ್ನುಂಟುಮಾಡಿದೆ. ಕಳೆದ ಕೆಲವು ದಿನಗಳಲ್ಲಿ ಚಿನ್ನದ ದರವು (Gold rate) ಏರಿದ ಪರಿಣಾಮ ಚಿನ್ನ ಖರೀದಿಸಲು ಖರೀದಿದಾರರು ಹಿಂಜರಿದಿದ್ದರು, ಆದರೆ ನಿನ್ನೆ ಬೆಲೆಯಲ್ಲಿ ಆದ ಬದಲಾವಣೆ ಕಂಡು ಗ್ರಾಹಕರು ಖುಷಿ ಪಡುತ್ತಿದ್ದರು. ಹೌದು, ನಿನ್ನೆ ಬೆಳಗ್ಗೆ ಏರಿಕೆಯಾಗಿದ್ದ ಚಿನ್ನ ಹಾಗೂ ಬೆಳ್ಳಿಯ ದರ ಸಂಜೆಯೊಳಗಾಗಿ ಇಳಿಕೆಯನ್ನು ಕಂಡಿರುವುದರಿಂದ ಗ್ರಾಹಕರು ಸಂತಸ ವ್ಯಕ್ತಪಡಿಸುತ್ತಿದ್ದರು, ಆದರೆ ಇಂದು ಪುನಃ ದರ ಏರಿಕೆಯಾಗಿರುವುದರಿಂದ ಗ್ರಾಹಕರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.  ಹಾಗಿದ್ದರೆ, ಮಾರ್ಚ್ 21, 2025ರಂದು ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,301ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,067 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,800 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,05,200 ತಲುಪಿದೆ. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ 10ರೂ. ಏರಿಕೆಯನ್ನು ಕಾಣಬಹುದು. ಹಾಗೆ ಬೆಳ್ಳಿ ಬೆಲೆಯಲ್ಲಿಯೂ (Silver rate) 100 ರೂ.ನಷ್ಟು ಏರಿಕೆಯನ್ನು ನೋಡಬಹುದು.

ಚಿನ್ನದ ದರ ಇಳಿಕೆ:
ಹೌದು, ಚಿನಿವಾರ ಪೇಟೆಯಲ್ಲಿ ಮಾರ್ಚ್ 20,2025ರ ಸಂಜೆ 10 ಗ್ರಾಂ (99.9% ಶುದ್ಧತೆ) ಚಿನ್ನದ ದರ ₹300 ಇಳಿಕೆಯಾಗಿದ್ದು,  ₹91,650ಕ್ಕೆ ತಲುಪಿದೆ. ಆಭರಣ ಚಿನ್ನ (99.5% ಶುದ್ಧತೆ) ಸಹ ₹300 ಕಡಿಮೆಯಾಗಿದ್ದು, ₹91,200 ಆಗಿದೆ. ಅಖಿಲ ಭಾರತ ಸರಾಫ್ ಅಸೋಸಿಯೇಷನ್‌ನ ಪ್ರಕಾರ(According to the All India Saraf Association), ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಕುಸಿತವೇ ಈ ಬದಲಾವಣೆಗೆ ಕಾರಣವಾಗಿದೆ ಎಂದಿದ್ದಾರೆ.

ಬೆಳ್ಳಿಯ ಬೆಲೆ ಕುಸಿತ:
ಬೆಳ್ಳಿಯ ದರವು ಕೆ.ಜಿಗೆ ₹1,500 ಇಳಿಯುತ್ತಿದ್ದಂತೆ, ₹1,02,000ಕ್ಕೆ ತಲುಪಿತ್ತು. ಆದರೆ ಇಂದು ಪುನಃ ಬೆಳ್ಳಿಯ ದರದಲ್ಲೂ ಏರಿಕೆಯನ್ನು ಕಾಣಬಹುದು. ಆಭರಣ ಮತ್ತು ಕೈಗಾರಿಕಾ ಬಳಕೆಗೆ ಬೆಳ್ಳಿಯ ಪ್ರಮುಖವಾದ ಬೇಡಿಕೆ ಇರುವುದರಿಂದ ಇದರ ಬೆಲೆ ಚಿನ್ನದಷ್ಟೇ ಮಹತ್ವ ಪಡೆದುಕೊಂಡಿದೆ. ಆದರೆ, ಇತ್ತೀಚಿನ ಆರ್ಥಿಕ ಅಸ್ಥಿರತೆಯ (Financial instability) ಕಾರಣಕ್ಕೆ ಬೆಳ್ಳಿ ಮಾರುಕಟ್ಟೆಯಲ್ಲಿಯೂ ದುರ್ಬಲತೆ ಕಂಡುಬಂದಿದೆ. ಆದರೆ ಇಂದು ಬೆಳ್ಳಿಯ ದರವೂ ಭಾರೀ ಏರಿಕೆಯಾಗಿ  ₹1, 05,200 ನಷ್ಟು ಲಕ್ಷಕ್ಕೆ ತಲುಪಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ಚಿನ್ನ ಮತ್ತು ಬೆಳ್ಳಿ ಮೌಲ್ಯದ ಏರಿಳಿತ ಜಾಗತಿಕ ಮಾರುಕಟ್ಟೆಯಲ್ಲಿನ ಬದಲಾವಣೆಯ ನೇರ ಪರಿಣಾಮವಾಗಿದೆ. ಅಮೆರಿಕದ ಹಣದುಬ್ಬರ ನಿಯಂತ್ರಣದ ಪರಿವರ್ತನೆ, ಭವಿಷ್ಯದ ಬಡ್ಡಿದರ ನಿರ್ಧಾರಗಳ ಕುರಿತು ನಿರ್ಧಾರಕ ಸಂಸ್ಥೆಗಳ ಸಂದೇಶಗಳು, ಹಾಗೆಯೇ ಪ್ರಾದೇಶಿಕ ಆರ್ಥಿಕ ಮತ್ತು ರಾಜಕೀಯ ಅಶಾಂತಿ (Regional economic and political unrest) ಹೀಗೆ ಹಲವು ಅಂಶಗಳು ಚಿನ್ನದ ಬಜಾರಿನ ಮೇಲಿನ ಹೂಡಿಕೆದಾರರ ನಿಲುವನ್ನು ತಿರುಗಿಸಲಿವೆ.
ಹಣದುಬ್ಬರದ ಮಟ್ಟವನ್ನು ನಿಯಂತ್ರಿಸಲು ಅಮೆರಿಕದ ಫೆಡರಲ್ ರಿಸರ್ವ್ ಹೆಚ್ಚು ಹಠಾತ್ ಬಡ್ಡಿದರ ಹೆಚ್ಚಳ ಮಾಡಬಹುದು ಎಂಬ ಮಾತುಗಳು ಮಾರುಕಟ್ಟೆಯಲ್ಲಿ ಚಿಂತೆ ಹುಟ್ಟಿಸಿವೆ. ಇದರ ಪರಿಣಾಮವಾಗಿ ಹೂಡಿಕೆದಾರರು ಚಿನ್ನದ ಹೂಡಿಕೆಯಿಂದ ಹಿಂದೇಟು ಹಾಕುತ್ತಿದ್ದಾರೆ. ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ (Safety Investment) ಪರಿಗಣಿಸುವ ಹೂಡಿಕೆದಾರರು, ಅಮೆರಿಕದ ಬಡ್ಡಿದರ ಹೆಚ್ಚಳದಿಂದ ಚಿನ್ನದ ಮೇಲೆ ಇರುವ ಆಕರ್ಷಣೆ ಕಡಿಮೆಯಾಗಬಹುದು ಎಂಬ ಭೀತಿಯಲ್ಲಿ ತಮ್ಮ ಹೂಡಿಕೆಗಳನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ.

ಅಮೆರಿಕದ ಹಣಕಾಸು ನೀತಿಯ ಬದಲಾವಣೆ, ಜಾಗತಿಕ ಆರ್ಥಿಕ ಅನಿಶ್ಚಿತತೆ(Global economic uncertainty), ಮತ್ತು ಹೂಡಿಕೆದಾರರ ಪ್ರತಿಕ್ರಿಯೆಗಳಿಂದ ಚಿನ್ನ ಮತ್ತು ಬೆಳ್ಳಿ ಮೌಲ್ಯ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಹೇಗೆ ಇರುತ್ತದೆ ಎಂಬುದು ಜಾಗತಿಕ ಆರ್ಥಿಕ ಪರಿಸ್ಥಿತಿಯ(Economic Situation) ಮೇಲೆ ನಿಂತಿದೆ. ಹೂಡಿಕೆದಾರರು ಮಾರುಕಟ್ಟೆಯ ಬೆಳವಣಿಗೆಯನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!