ಧಾರವಾಡ ಜಿಲ್ಲೆ ರೈತರಿಗೆ ಮತ್ತೊಂದು ಸುವರ್ಣಾವಕಾಶ: ಎಫ್.ಎ.ಕ್ಯೂ. ಗುಣಮಟ್ಟದ ಬಿಳಿ ಜೋಳ ಖರೀದಿ ಏಪ್ರಿಲ್ 1ರಿಂದ ಆರಂಭ
ಕೃಷಿಕರು (Formers) ತಮ್ಮ ಬೆಳೆಗೆ ನ್ಯಾಯಯುತ ಬೆಲೆ ದೊರಕಿಸಿಕೊಳ್ಳಲು ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಬೆಂಬಲ ಬೆಲೆ ಯೋಜನೆಯಡಿ ಬಿಳಿಜೋಳ (White corn) ಖರೀದಿಯೂ ಅದರಲ್ಲಿ ಪ್ರಮುಖ ಹಂತ. ರೈತರು ತಮ್ಮ ಉತ್ಪನ್ನವನ್ನು ನಿಗದಿತ ಬೆಲೆಗೆ ಮಾರಾಟ ಮಾಡಲು ಸರ್ಕಾರವು (Government) ಮಾರ್ಚ್ 25, 2025ರಿಂದ ನೋಂದಣಿ ಪ್ರಕ್ರಿಯೆ ಆರಂಭಿಸಲಿದೆ. ನಿಗದಿತ ಅವಧಿಯಲ್ಲಿ ನೋಂದಾಯಿಸಿಕೊಂಡ ರೈತರಿಂದ ಏಪ್ರಿಲ್ 1, 2025ರಿಂದ ಮೇ 31, 2025ರೊಳಗೆ ಖರೀದಿ ಕಾರ್ಯವನ್ನು ಕೈಗೊಳ್ಳಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, 2024-25 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ (MSP) ಯೋಜನೆಯಡಿ, ಎಫ್.ಎ.ಕ್ಯೂ. (FAQ – Fair Average Quality) ಗುಣಮಟ್ಟದ ಬಿಳಿ ಜೋಳವನ್ನು ಖರೀದಿ ಮಾಡಲು ಧಾರವಾಡ ಜಿಲ್ಲೆಯ ರೈತರಿಗಾಗಿ ವಿಶೇಷ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಯೋಜನೆಯಡಿ, ಬಿಳಿ ಜೋಳ ಹೈಬ್ರಿಡ್ (Hybrid) ಪ್ರತಿ ಕ್ವಿಂಟಾಲ್‌ಗೆ ₹3,371 ಹಾಗೂ ಮಾಲ್ದಂಡಿ ಬಿಳಿ ಜೋಳ ಪ್ರತಿ ಕ್ವಿಂಟಾಲ್‌ಗೆ ₹3,421 ಬೆಂಬಲ ಬೆಲೆಯಡಿ ಸರ್ಕಾರವು ಖರೀದಿ ಮಾಡಲಿದೆ.
ಈ ಕುರಿತು ಪ್ರಕಟಣೆ (Announcement) ನೀಡಿರುವ ಧಾರವಾಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷೆ ದಿವ್ಯ ಪ್ರಭು ಅವರು, ರೈತರು ಈ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಬಿಳಿ ಜೋಳ ಖರೀದಿಗೆ ಸಂಬಂಧಿಸಿದಂತೆ ರೈತರ ನೋಂದಣಿ ಕಾರ್ಯ (Registration of farmers) ಮಾರ್ಚ್ 25, 2025 ರಿಂದ ಆರಂಭವಾಗಲಿದೆ. ಖರೀದಿ ಪ್ರಕ್ರಿಯೆಯು ಏಪ್ರಿಲ್ 1, 2025 ರಿಂದ ಮೇ 31, 2025ರ ವರೆಗೆ ನಡೆಯಲಿದ್ದು, ರೈತರು ಅಗತ್ಯ ದಾಖಲೆಗಳನ್ನು (Important documents) ಸಿದ್ಧಪಡಿಸಿ ಸರ್ಕಾರದ ಬೆಂಬಲ ಬೆಲೆ ಯೋಜನೆಯ ಲಾಭ ಪಡೆಯಲು ಮುಂದಾಗಬೇಕಾಗಿದೆ ಎಂದು ತಿಳಿಸಿದ್ದಾರೆ.
ಬಿಳಿ ಜೋಳ ಖರೀದಿಗೆ ಸ್ಥಾಪಿಸಲಾದ ಕೇಂದ್ರಗಳು ಯಾವುವು?:
ಧಾರವಾಡ ಜಿಲ್ಲೆಯ (Dharwad District) ವಿವಿಧ ಭಾಗಗಳಲ್ಲಿ ರೈತರ ಅನುಕೂಲಕ್ಕಾಗಿ ಸರ್ಕಾರದಿಂದ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಮುಖ್ಯವಾಗಿ, ಈ ಕೆಳಗಿನ ಕೇಂದ್ರಗಳಲ್ಲಿ ಬಿಳಿ ಜೋಳವನ್ನು ಖರೀದಿಸಲಾಗುವುದು:
1. ಎ.ಪಿ.ಎಂ.ಸಿ., ಧಾರವಾಡ – ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಹುಬ್ಬಳ್ಳಿ
2. ಎ.ಪಿ.ಎಂ.ಸಿ., ಹುಬ್ಬಳ್ಳಿ – ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಹುಬ್ಬಳ್ಳಿ
3. ಎ.ಪಿ.ಎಂ.ಸಿ., ನವಲಗುಂದ – ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಹುಬ್ಬಳ್ಳಿ
4. ಎ.ಪಿ.ಎಂ.ಸಿ., ಕಲಘಟಗಿ – ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಹುಬ್ಬಳ್ಳಿ
5. ಎ.ಪಿ.ಎಂ.ಸಿ., ಕುಂದಗೋಳ – ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಹುಬ್ಬಳ್ಳಿ
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 0836-2004419 ಸಂಪರ್ಕಿಸಬಹುದು.
ಬಿಳಿ ಜೋಳ ಖರೀದಿಗೆ ಅಗತ್ಯವಿರುವ ದಾಖಲೆಗಳು (Documents) ಯಾವುವು?:
ರೈತರು ತಮ್ಮ ಜೋಳವನ್ನು ಸರಕಾರದಿಂದ ನಿಗದಿಪಡಿಸಿದ ಬೆಂಬಲ ಬೆಲೆಗೆ ಮಾರಾಟ ಮಾಡಲು, ಈ ಕೆಳಗಿನ ಅಗತ್ಯ ದಾಖಲಾತಿಗಳನ್ನು ಒದಗಿಸಬೇಕು:
ಆಧಾರ್ ಗುರುತಿನ ಚೀಟಿ (ಮೂಲ ಪ್ರತಿಯೊಂದಿಗೆ ನಕಲು ಪ್ರತಿ).
ಪಹಣಿ ಪತ್ರಿಕೆ – ಭೂಸ್ವಾಮ್ಯದ ದೃಢೀಕರಣಗೊಂಡಿರಬೇಕು.
ರೈತರ ಆಧಾರ್ ಗೆ ಜೋಡಣೆಯಾಗಿರುವ ಬ್ಯಾಂಕ್ ಪಾಸ್ ಬುಕ್ ನ (Bank passbook) ನಕಲು ಪ್ರತಿ.
ಬಿಳಿ ಜೋಳ ಖರೀದಿಗೆ ಅನುಸರಿಸಬೇಕಾದ ನಿಯಮಗಳು (Rules) ಯಾವುವು?:
ತೇವಾಂಶ ನಿಯಂತ್ರಣ :
ಜೋಳವು ಉತ್ತಮವಾಗಿ ಒಣಗಿರಬೇಕು, ತೇವಾಂಶವು ಶೇ.14 ಕ್ಕಿಂತ ಕಡಿಮೆ ಇರಬೇಕು.
ಗುಣಮಟ್ಟದ ನಿಯಮಗಳು :
ಬಿಳಿ ಜೋಳದ ಗಾತ್ರ, ಬಣ್ಣ, ಆಕಾರ ಸರಿಯಾಗಿ ಇರಬೇಕು. ಮಣ್ಣು ಅಥವಾ ಬೇರೆ ಪದಾರ್ಥಗಳಿಂದ ಮುಕ್ತವಾಗಿರಬೇಕು.
ಪ್ಯಾಕಿಂಗ್ ನಿಯಮಗಳು (Packing rules) :
ರೈತರು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಒದಗಿಸಲಾದ 50 ಕೆ.ಜಿ. ಗೋಣಿ ಚೀಲದಲ್ಲಿ ಜೋಳ ತುಂಬಿಸಬೇಕು.
ಖರೀದಿ ಮಿತಿಗಳು (Purchase Limits) :
ಪ್ರತಿ ಎಕರೆಗೆ 20 ಕ್ವಿಂಟಾಲ್ ಹಾಗೂ ಪ್ರತಿ ರೈತ 150 ಕ್ವಿಂಟಾಲ್ ವರೆಗೆ ಜೋಳ ಮಾರಾಟ ಮಾಡಲು ಅನುಮತಿ ಇದೆ.
ಮಧ್ಯವರ್ತಿಗಳ ಬಳಕೆ ನಿಷೇಧ(Prohibition of the use of intermediaries) :
ರೈತರು ನೇರವಾಗಿ ಖರೀದಿ ಕೇಂದ್ರಗಳಿಗೆ ಹಾಜರಾಗಿ ತಮ್ಮ ಉತ್ಪನ್ನವನ್ನು ಮಾರಾಟ ಮಾಡಬೇಕು.
ಬಹಳ ಮುಖ್ಯವಾಗಿ ಸಮಯದ ಪಾಲನೆ ಮಾಡಬೇಕು:
ಖರೀದಿ ಕೇಂದ್ರಗಳು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ, ಸರ್ಕಾರದ ರಜೆಗಳ ಹೊರತಾಗಿ, ಪ್ರಚಲಿತದಲ್ಲಿರುತ್ತವೆ.
ಸರ್ಕಾರ (Government) ನಿಗದಿಪಡಿಸಿದ ಬೆಂಬಲ ಬೆಲೆ ಕೆಳಗಿನಂತಿದೆ:
ಹೈಬ್ರಿಡ್ ಬಿಳಿ ಜೋಳ – ಪ್ರತಿ ಕ್ವಿಂಟಾಲ್ ₹3,371
ಮಾಲ್ದಂಡಿ ಬಿಳಿ ಜೋಳ – ಪ್ರತಿ ಕ್ವಿಂಟಾಲ್ ₹3,421
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ (Contact for more information) :
ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು – ಧಾರವಾಡ, ಹುಬ್ಬಳ್ಳಿ, ನವಲಗುಂದ, ಕಲಘಟಗಿ, ಕುಂದಗೋಳ
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ(Karnataka State Cooperative Marketing Federation), ಹುಬ್ಬಳ್ಳಿ – 0836-2004419
ಈ ಖರೀದಿ ಕಾರ್ಯಕ್ರಮ ರೈತರ ಭದ್ರಿತ ಮೌಲ್ಯ ದೀರ್ಘಕಾಲಿಕವಾಗಿ ಸ್ಥಿರವಾಗಿರಿಸಲು ಮತ್ತು ಬೆಂಬಲ ಬೆಲೆ ಯೋಜನೆಯಡಿ (Under Support Price Scheme) ಲಾಭ ಪಡೆಯಲು ಮಹತ್ವದ ಅವಕಾಶವಾಗಿದೆ. ಸರಕಾರದಿಂದ ನೀಡಲಾಗುತ್ತಿರುವ ಈ ಸೌಲಭ್ಯವನ್ನು ಬಳಸಿಕೊಂಡು, ಮಧ್ಯವರ್ತಿಗಳನ್ನು ದೂರವಿಟ್ಟು, ಖರೀದಿ ಕೇಂದ್ರಗಳಲ್ಲಿ ನೇರವಾಗಿ ಜೋಳ ಮಾರಾಟ ಮಾಡಿ, ಅನುಕೂಲ ಪಡೆಯಲು ರೈತರು ಮುಂದಾಗಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು (District Collector Divya Prabhu) ಅವರು ವಿನಂತಿಸಿದ್ದಾರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.