ಗೂಗಲ್ ಪೇ ಇದ್ದವರಿಗೆ 1 ಲಕ್ಷ ವರೆಗೆ ಸಾಲ! ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

IMG 20240914 WA0002

ನೀವು ಗೂಗಲ್ ಪೇ ಬಳಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಸಿಗುತ್ತದೆ ಒಂದು ಲಕ್ಷ ರೂಗಳವರೆಗಿನ ಸಾಲ ಸೌಲಭ್ಯ(loan facility).

ನಮ್ಮ ಭಾರತ ದೇಶವು ಎಲ್ಲಾ ರೀತಿಯಿಂದಲೂ ಮುಂದುವರೆಯುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು (Central government) ಡಿಜಿಟಲೀಕರಣವನ್ನು ಜಾರಿಗೆ ತಂದಿತ್ತು. ಇದರಿಂದಾಗಿ ನೇರ ಹಣಕಾಸಿನ ವಹಿವಾಟುವನ್ನು ನಿಲ್ಲಿಸಿ, ಎಲ್ಲರೂ ಕೂಡ ಫೋನ್ ಪೇ, ಗೂಗಲ್ ಪೇಯನ್ನು ಬಳಸಲು ಶುರು ಮಾಡಿದರು. ಇದರಿಂದ ಬ್ಯಾಂಕುಗಳಿಗೆ ಹೋಗುವ ಸಮಸ್ಯೆಯೂ ಕೂಡ ಕಡಿಮೆಯಾಗತೊಡಗಿತು. ಹೆಚ್ಚಿನ ಜನರು ಗೂಗಲ್ ಪೇ (Google pay), ಫೋನ್ ಪೇ (Phone pay) ಬಳಸುತ್ತಿದ್ದಾರೆ. ಅದರಲ್ಲಿ ಗೂಗಲ್ ಪೇ ಬಳಸುತ್ತಿರುವ ಎಲ್ಲರಿಗೂ ಕೂಡ ಒಂದು ಸಂತಸದ ಸುದ್ದಿ ಇದೆ. ಗೂಗಲ್ ಪೇ ಬಳಸುತ್ತಿರುವವರಿಗೆ ಒಂದು ಲಕ್ಷ ಸಾಲ ಸಿಗುತ್ತದೆ. ಈ ಸಾಲವನ್ನು ಪಡೆಯಲು ಇರುವ ಮಾನದಂಡಗಳೇನು? ಯಾರೆಲ್ಲ ಈ ಸಾಲವನ್ನು ಪಡೆಯಬಹುದು? ಸಾಲಪಡಿಯಲು ಬೇಕಾಗುವ ದಾಖಲೆಗಳು ಹಾಗೂ ಸಾಲ ಪಡೆಯುವ ವಿಧಾನವೇನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು ಗೂಗಲ್ ಇಂಡಿಯಾ (Google India) ಗೂಗಲ್ ಪೇ ನಲ್ಲಿ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ಯಾರೆಲ್ಲಾ ಗೂಗಲ್ ಬಳಕೆದಾರರಿದ್ದಾರೆ ಅವರೆಲ್ಲರೂ ಕೂಡ ಗೂಗಲ್ ಅಪ್ಲಿಕೇಶನ್ (Google application) ನ ಮೂಲಕ 1 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ. ಯಾವುದೇ ರೀತಿಯ ಬ್ಯಾಂಕ್ ಗಳಿಗೆ ಭೇಟಿ ನೀಡದೆ ಬಹಳ ಬೇಗ ಈ ಸಾಲವನ್ನು ಪಡೆಯಬಹುದಾಗಿದೆ. ತಕ್ಷಣದ ಹಣದ ತೊಂದರೆಯನ್ನು ಎದುರಿಸುತ್ತಿರುವ ಜನರಿಗಾಗಿ ಈ ಸೇವೆಯನ್ನು ತರಲಾಗಿದೆ. ಈ ಸಾಲವನ್ನು ಪಡೆಯಲು ಯಾವುದೇ ರೀತಿಯ ಹೆಚ್ಚಿನ ದಾಖಲೆಗಳಾಗಲಿ ಅಥವಾ ಬ್ಯಾಂಕಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ.

ಗೂಗಲ್ ಪೇ ನೀಡುತ್ತಿರುವ ಈ ಸಾಲವನ್ನು ಪಡೆಯಲು ಯಾವೆಲ್ಲ ಮಾನದಂಡಗಳು ಇರಬೇಕು:

ಗೂಗಲ್ ಪೇ ನೀಡುತ್ತಿರುವ ಪರ್ಸನಲ್ ಲೋನ್ (Personal loan) ಗೆ ಅರ್ಹರಾಗಲು ಮೊದಲಿಗೆ ಅಜ್ಜಿದಾರನು ಗೂಗಲ್ ಪೇ ಮೊಬೈಲ್ ಅಪ್ಲಿಕೇಶನ್ ಅನ್ನು ಸಕ್ರಿಯವಾಗಿ ಬಳಸುತ್ತಿರಬೇಕು.
ವಿಶೇಷವಾಗಿ ವಾಣಿಜ್ಯ ಅಥವಾ ವ್ಯಾಪಾರಗಳ ವಹಿವಾಟಿಗಳಿಗಾಗಿ ಬಳಸುತ್ತಿರಬೇಕು.
ಅವರು ಉತ್ತಮ ಕ್ರೆಡಿಟ್ ಸ್ಕೋರ್ (credit score) ಹೊಂದಿರಬೇಕು ಮತ್ತು ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಅಸ್ತಿತ್ವದಲ್ಲಿರುವ ಯಾವುದೇ ಸಾಲ ಅಥವಾ ಒಪ್ಪಂದವನ್ನು ಹೊಂದಿರಬೇಕು.
ಇದರ ಜೊತೆಯಲ್ಲಿ ಸ್ಥಿರ ಆದಾಯದ ಮೂಲವನ್ನು ಕೂಡ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು (Documents) ಬೇಕು :

ಗೂಗಲ್ ಪೇ ನೀಡುತ್ತಿರುವ ಈ ಲೋನ್ ಪಡೆಯಲು ಕೇವಲ ಕಡಿಮೆ ದಾಖಲೆಗಳು ಅವಶ್ಯಕವಾಗಿ ಬೇಕಾಗುತ್ತದೆ.
ಆಧಾರ್ ಕಾರ್ಡ್.
ಪಾನ್ ಕಾರ್ಡ್.
IFSC ಕೋಡ್‌ನೊಂದಿಗೆ ಬ್ಯಾಂಕ್ ಖಾತೆ.
Google Pay ಖಾತೆಯೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆ ಅಗತ್ಯವಿದೆ.

ಗೂಗಲ್ ಪೇ (Google pay) ನೀಡುತ್ತಿರುವ ಈ ಲೋನ್ ಕಾರ್ಯನಿರ್ವಹಿಸುತ್ತದೆ :

ಬಳಕೆದಾರರು ಉತ್ತಮ ವಹಿವಾಟು ಹಾಗೂ ಕ್ರೆಡಿಟ್ ಸ್ಕೋರ್ ಅನ್ನು ಆಧಾರವಾಗಿಟ್ಟುಕೊಂಡು, ಸಾಲದ ಕೊಡುಗೆಗಳನ್ನು ನೇರವಾಗಿ ಸ್ವೀಕರಿಸುತ್ತಾರೆ. ಇದರ ನಂತರ ಬಳಕೆದಾರರು ಈ ಕೊಡುಗೆಗಳನ್ನು ಸ್ವೀಕರಿಸಬಹುದು. ಹಾಗೂ ದಾಖಲೆಗಳನ್ನು ಸಲ್ಲಿಸಿದ ತಕ್ಷಣವೇ ಅರ್ಜಿಯನ್ನೂ ಕೂಡ ಸಲ್ಲಿಸಬಹುದು. IDFC ಫಸ್ಟ್ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕ್‌ನಂತಹ ಪಾಲುದಾರ ಬ್ಯಾಂಕ್‌ಗಳು ಈ ಹಣವನ್ನು ಒದಗಿಸುತ್ತವೆ. ಈ ಸಾಲದ ಪೂರ್ವಪಾವತಿಯನ್ನು Google Pay ಅಪ್ಲಿಕೇಶನ್ ಮೂಲಕ ನಿರ್ವಹಿಸಲಾಗುತ್ತದೆ.

ಗೂಗಲ್ ಪೇ  (Google Pay) ಪರ್ಸನಲ್ ಲೋನ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಮೊದಲಿಗೆ Google Pay ಆ್ಯಪ್ ತೆರೆಯಿರಿ ಮತ್ತು ಲಾಗ್ ಇನ್ ಮಾಡಿ. ನಂತರ ವ್ಯಾಪಾರ ಅಥವಾ ಪಾವತಿ ಟ್ಯಾಬ್‌ನಲ್ಲಿ ಲೋನ್ ಭಾಗಕ್ಕೆ ಹೋಗಬೇಕು.
ಅರ್ಹತೆ ಇದ್ದರೆ, ನಿಮ್ಮ ವಹಿವಾಟಿನ (transaction) ಇತಿಹಾಸ ಮತ್ತು ಕ್ರೆಡಿಟ್ ಸ್ಕೋರ್ ಆಧರಿಸಿ ನೀವು ಲೋನ್ ಪಡೆಯಬಹುದು.
ಮೊತ್ತ, ಬಡ್ಡಿ ದರ ಮತ್ತು ಮರುಪಾವತಿ ನಿಯಮಗಳು ಸೇರಿದಂತೆ ಲೋನ್ ಆಫರ್ ವಿವರಗಳನ್ನು ವೀಕ್ಷಿಸಿ.
ನೀವು ಈ ಸಾಲದ ಕೊಡುಗೆಯನ್ನು ಸ್ವೀಕರಿಸಿದರೆ, ಆಧಾರ್ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು IFSC ಕೋಡ್‌ನಂತಹ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ.
ನಿಮ್ಮ ಮರುಪಾವತಿ ಸಾಮರ್ಥ್ಯದ ಪ್ರಕಾರ EMI ಆಯ್ಕೆಯನ್ನು ಆಯ್ಕೆಮಾಡಿ. ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ;
ನಿಮ್ಮ ಅರ್ಜಿಯನ್ನು ಪರಿಶೀಲಿಸಲು ಈ OTP ಅನ್ನು ಭರ್ತಿ ಮಾಡಿ. GST ಮತ್ತು ಪ್ರಕ್ರಿಯೆ ಶುಲ್ಕದಂತಹ ಅನ್ವಯವಾಗುವ ಶುಲ್ಕಗಳನ್ನು ಕಡಿತಗೊಳಿಸಿದ ನಂತರ ಸಾಲದ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
Google Pay ಸ್ವತಃ ಸಾಲಗಳನ್ನು ಒದಗಿಸುವುದಿಲ್ಲ, ಆದರೆ ಪಾಲುದಾರ ಬ್ಯಾಂಕ್‌ಗಳ ಸಹಯೋಗದೊಂದಿಗೆ ಈ ಸೌಲಭ್ಯವನ್ನು ಒದಗಿಸುತ್ತದೆ. ಈ ಸಾಲ ಪಡೆಯಲು ಹೊಸ ಬ್ಯಾಂಕ್ ಖಾತೆ ತೆರೆಯುವ ಅಗತ್ಯವಿಲ್ಲ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!