Google Pay ದೇಶದ ಅತ್ಯಂತ ಜನಪ್ರಿಯ UPI ಪಾವತಿ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಭಾರತದಲ್ಲಿ ಅತಿ ಹೆಚ್ಚು ಬಳಸುವ ಯುಪಿಐ ಅಪ್ಲಿಕೇಶನ್‌ಗಳ ಟಾಪ್ 5 ರ ಪಟ್ಟಿಯಲ್ಲಿ ಗೂಗಲ್ ಪೇ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ ಅತಿ ಹೆಚ್ಚು ಜನರು ಪ್ರತಿನಿತ್ಯ ಹಣ ವರ್ಗಾವಣೆ ಮಾಡಲು ಗೂಗಲ್ ಪೇ ಅಪ್ಲಿಕೇಶನ್ ಉಪಯೋಗಿಸುತ್ತಾರೆ, ಹಾಗಾಗಿ ಭಾರತದಲ್ಲಿ ಗೂಗಲ್ ಪೇ ಗೆ ಅತಿ ದೊಡ್ಡ ಮಾರುಕಟ್ಟೆ ಇದೆ ಎಂದೇ ಹೇಳಬಹುದು. ಆದ್ದರಿಂದ ಗೂಗಲ್ ಪೇ ತನ್ನ ಬಳಕೆದಾರರಿಗೆ ಒಂದಿಷ್ಟು ಎಚ್ಚರಿಕೆ ಸಂದೇಶಗಳನ್ನು ಕೊಟ್ಟಿದೆ, ನೀವೇನಾದರೂ ಗೂಗಲ್ ಪೇ ಬಳಸುತ್ತಿದ್ದರೆ ಮಿಸ್ ಮಾಡದೆ ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬಳಕೆದಾರರ ವಹಿವಾಟುಗಳ ವಂಚನೆಗಳನ್ನು ತಡೆಗಟ್ಟಲು ಮತ್ತು ಅನುಮಾನಾಸ್ಪದ ವಹಿವಾಟುಗಳನ್ನು ಗುರುತಿಸಲು ಗೂಗಲ್ ತನ್ನ ಅತ್ಯುತ್ತಮ AI ತಂತ್ರಜ್ಞಾನವನ್ನು ಉಪಯೋಗಿಸುತ್ತದೆ. ಎಂದು ಗೂಗಲ್ ಹೇಳಿಕೊಂಡಿದೆ. ಗೂಗಲ್ ಪೇ ತನ ಬಳಕೆದಾರರಿಗೆ ಕೆಲವು ಎಚ್ಚರಿಕೆ ಸಂದೇಶಗಳನ್ನು ಕೊಟ್ಟಿದೆ, ನಿಮ್ಮ ಸುರಕ್ಷತೆಯನ್ನು ಕಾಪಾಡಲು ನಾವು ಹಲವಾರು ತಂತ್ರಜ್ಞಾನಗಳನ್ನ ಉಪಯೋಗಿಸುತ್ತಿದ್ದೇವೆ, ಆದರೂ ಸಹಿತ ಬಳಕೆದಾರರು ಜಾಗರೂಕರಾಗಿರುವುದು ಸಹ ಮುಖ್ಯವಾಗಿದೆ ಎಂದು Google ತನ್ನ ವೆಬ್‌ಸೈಟ್‌ನಲ್ಲಿGoogle Pay ಬಳಕೆದಾರರಿಗಾಗಿ ಕೆಲವು ಪ್ರಮುಖ ವಿಷಯಗಳನ್ನು ಹಂಚಿಕೊಂಡಿದೆ.
ಗೂಗಲ್ ಪೇ ಬಳಸುತ್ತಿದ್ದರೆ ಮೊದಲು ಈ ಕೆಲಸ ಮಾಡಿ.
– ಎಲ್ಲಾ ಸ್ಕ್ರೀನ್ ಶೇರ್ ಅಪ್ಲಿಕೇಶನ್‌ಗಳನ್ನು ಕ್ಲೋಸ್ ಮಾಡಿ.
ನೀವು ವಹಿವಾಟು ಮಾಡುವಾಗ ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್‌ಗಳನ್ನು ಎಂದಿಗೂ ಬಳಸಬೇಡಿ.
-ಸ್ಕ್ರೀನ್ ಶೇರ್ ಅಪ್ಲಿಕೇಶನ್‌ಗಳು ಯಾವವು?
ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್‌ಗಳು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಟ್ಯಾಬ್ಲೆಟ್ ನ ಸ್ಕ್ರೀನ್ ಅನ್ನು ದೂರದಿಂದ ಬೇರೆಯವರು ನೋಡಲು ಅನುಮತಿಸುತ್ತವೆ. ಈ ಸಂದರ್ಭದಲ್ಲಿ ನೀವು ಸ್ಕ್ರೀನ್ ಶೇರ್ ಮಾಡಿದ ವ್ಯಕ್ತಿ ನಿಮ್ಮ ಎಲ್ಲಾ ಫೋನ್ ಪರದೆ ಮೇಲಿನ ಮಾಹಿತಿಗಳನ್ನ ನೋಡಬಹುದು. ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್‌ಗಳ ಉದಾಹರಣೆಗಳೆಂದರೆ ಸ್ಕ್ರೀನ್ ಹಂಚಿಕೆ, AnyDesk ಮತ್ತು TeamViewer.
ಬಳಕೆದಾರರು Google Pay ಜೊತೆಗೆ ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್‌ಗಳನ್ನು ಏಕೆ ಬಳಸಬಾರದು.
ಕೆಲವು ಸಾರಿ ವಂಚಕರು ಈ ಅಪ್ಲಿಕೇಶನ್ ಗಳ ಸಹಾಯದಿಂದ ನಿಮ್ಮ ಫೋನನ್ನು ಕಂಟ್ರೋಲ್ ಮಾಡುತ್ತಾರೆ, ಈ ಸಂದರ್ಭದಲ್ಲಿ ನಿಮ್ಮ ಯುಪಿಐ ಬಳಸಿ ಹಣ ಎಗರಿಸಬಹುದು. ನಿಮ್ಮ ATM ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ವೀಕ್ಷಿಸಬಹುದು. ನಿಮ್ಮ ಫೋನ್‌ಗೆ ಕಳುಹಿಸಲಾದ OTP ಪಡೆದು ನಿಮ್ಮ ಖಾತೆಯಿಂದ ಹಣವನ್ನು ವರ್ಗಾಯಿಸಿಕೊಳ್ಳಬಹುದು
Google Pay ಪ್ರತಿನಿಧಿಯಂತೆ ಕರೆ ಮಾಡಿ ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ನಿಮಗೆ ಸೂಚಿಸಿದರೆ ಯಾವುದೇ ಕಾರಣಕ್ಕೂ ಆ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳಬಾರದು . ನೀವು ಈ ಸಮಸ್ಯೆಯನ್ನು Google Pay ಗೆ ವರದಿ ಮಾಡಬಹುದು,” ಗೂಗಲ್ ಪೇ ಅಪ್ಲಿಕೇಶನ್ ಅನ್ನ ನೀವು ನೇರವಾಗಿ ಗೂಗಲ್ ಪ್ಲೇ ಸ್ಟೋರ್ ನಿಂದ ಮಾತ್ರ ಇನ್ಸ್ಟಾಲ್ ಮಾಡಿಕೊಳ್ಳಬೇಕು.
ಈ ಮಾಹಿತಿಯನ್ನು ಗೂಗಲ್ ಪೇ ಹೊಂದಿರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಈ ಕೊಡಲೇ ಶೇರ್ ಮಾಡಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ