ರಾಜ್ಯ ಸರ್ಕಾರದ ನೌಕರರು ತಮ್ಮ ಸೇವಾ ಸಂಬಂಧಿತ ಮನವಿಗಳನ್ನು ಸರಿಯಾದ ನಿಯಮಪ್ರಕಾರ ಸಲ್ಲಿಸಬೇಕೆಂದು ಮುಖ್ಯಮಂತ್ರಿಯವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದಿನಾಂಕ 21.08.2024 ರಂದು ಹೊರಡಿಸಿದ ಟಿಪ್ಪಣಿಯಲ್ಲಿ, ಸರ್ಕಾರದ ಆದೇಶಗಳಂತೆ ನೌಕರರು ತಮ್ಮ ಸೇವಾ ಸಮಸ್ಯೆಗಳ ಬಗ್ಗೆ ಸರಿಯಾದ ಚಾನಲ್ ಮೂಲಕವೇ ಮನವಿಗಳನ್ನು ಸಲ್ಲಿಸಬೇಕು, ನೇರವಾಗಿ ಸಚಿವರು ಅಥವಾ ಶಾಸಕರಿಗೆ, ಮುಖ್ಯಮಂತ್ರಿಗೆ ಮನವಿಗಳನ್ನು ಸಲ್ಲಿಸದಿರುವಂತೆ ಸೂಚನೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನಿಯಮಾನುಸಾರ ಅನುಸರಿಸಬೇಕಾದ ಹಂತಗಳು ಈ ಕೆಳಗಿನಂತಿವೆ:
1966ರಲ್ಲಿ ಹೊರಡಿಸಲಾದ ಸರಕಾರದ ಆದೇಶ ಸಂಖ್ಯೆ ಜಿಎಡಿ, ಎಆರ್ ಆರ್ 64, 29.08.1966, ಮತ್ತು 1980ರಲ್ಲಿ ಹೊರಡಿಸಲಾದ ಜ್ಞಾಪನ ಸಂಖ್ಯೆ ಡಿಪಿಎಆರ್ 11 ಎಸ್ ಸಿ 80, 21.05.1980ನಲ್ಲಿ ನೌಕರರು ತಮ್ಮ ಮನವಿಗಳನ್ನು ಇಲಾಖೆಯ ಕಾರ್ಯದರ್ಶಿಯವರಿಗೆ ಸಲ್ಲಿಸಬೇಕೆಂದು ಹಾಗೂ ರಾಜಕೀಯ ಅಥವಾ ಇನ್ನಿತರೆ ಬಾಹ್ಯ ಪ್ರಭಾವವನ್ನು ಬಳಸದೇ ಇರುವಂತೆ ಸೂಚಿಸಲಾಗಿದೆ. ಕೆಲವು ನೌಕರರು ಈ ನಿಯಮಗಳನ್ನು ಪಾಲಿಸದೆ, ರಾಜಕೀಯ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದಿದ್ದು, ಈ ಹಿನ್ನಲೆಯಲ್ಲಿ ಸರ್ಕಾರವು ಶಿಸ್ತು ಕ್ರಮಗಳನ್ನು ಜರುಗಿಸುವ ದೃಷ್ಟಿಯಿಂದ ನಿಖರ ನಿರ್ದೇಶನಗಳನ್ನು ನೀಡಿದೆ.
ತಪ್ಪಿದರೆ ಶಿಸ್ತು ಕ್ರಮ :
ಮುಖ್ಯಮಂತ್ರಿಯವರ ಈ ಎಚ್ಚರಿಕೆಯು ನೌಕರರಿಗೆ ಕಾನೂನುಬದ್ಧ ಮತ್ತು ಶಿಸ್ತುಬದ್ಧ ಕಾರ್ಯವಿಧಾನದ ಮಹತ್ವವನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ, ನೌಕರರು ನಿಯಮಾನುಸಾರ ತಮ್ಮ ಮನವಿಗಳನ್ನು ಸಲ್ಲಿಸದಿದ್ದಲ್ಲಿ, ತಕ್ಷಣವೇ ಶಿಸ್ತು ಕ್ರಮಗಳನ್ನು ಜರುಗಿಸುವುದಾಗಿ ಸರ್ಕಾರವು ಸ್ಪಷ್ಟಪಡಿಸಿದೆ.
ಸರ್ಕಾರದ ಆದೇಶಗಳ ತಾತ್ವಿಕ ಮಹತ್ವ :
ಈ ನಿರ್ಬಂಧವು, ರಾಜಕೀಯ ಪ್ರಭಾವದಿಂದ ಮುಕ್ತವಾದ ಆಡಳಿತ ವ್ಯವಸ್ಥೆಯನ್ನು ದೃಢಪಡಿಸಲು, ಹಾಗೂ ನ್ಯಾಯಸಂಗತ ಕಾರ್ಯಪಾಲನೆಗೆ ಉತ್ತೇಜನ ನೀಡಲು ಸರ್ಕಾರವು ಕೈಗೊಂಡ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಸರಿಯಾದ ಚಾನಲ್ ಮೂಲಕ ಮನವಿಗಳನ್ನು ಸಲ್ಲಿಸುವುದು, ಸರ್ಕಾರದ ಶಿಸ್ತು ಮತ್ತು ಕಾರ್ಯನೀತಿಯನ್ನು ಕಾಪಾಡಲು ಅತ್ಯಂತ ಅವಶ್ಯಕವಾಗಿದೆ.
ಇದೇ ಸಂದರ್ಭದಲ್ಲಿ, ಸರ್ಕಾರವು ನೌಕರರ ಹಿತಸಾಲಹೆಯನ್ನು ಯೋಗ್ಯ ರೀತಿಯಲ್ಲಿಯೇ ಪರಿಗಣಿಸಲು ಬದ್ಧವಾಗಿದ್ದು, ಸರ್ಕಾರದ ಆಡಳಿತದಲ್ಲಿ ತಾರತಮ್ಯವಿಲ್ಲದ ಸಮಾನ ನ್ಯಾಯವನ್ನು ಪಾಲಿಸಲಿದೆ.
ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.