Job Alert – ಜನವರಿ ತಿಂಗಳಲ್ಲಿ ರಾಜ್ಯ ಸರ್ಕಾರದ ಯಾವೆಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಗೊತ್ತಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

government jobs in 2024

ಇದೀಗ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್. ಹೌದು, ಕರ್ನಾಟಕ ಸರ್ಕಾರ (Karnataka Govt) ಮುಂದಿನ ವರ್ಷದಲ್ಲಿ ಹಲವು ಇಲಾಖೆಗಳ ಹುದ್ದೆಗಳನ್ನು (KPSC, KEA Job Notifications in 2024) ಭರ್ತಿ ಮಾಡುವ ಕುರಿತಂತೆ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಮಾಹಿತಿ ನೀಡಿದೆ. ಬನ್ನಿ ಹಾಗಾದರೆ 2024 ರಲ್ಲಿ ಕರ್ನಾಟಕ ಸರ್ಕಾರದ ಯಾವ ಯಾವ ಇಲಾಖೆ ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕಂದಾಯ ಇಲಾಖೆಯ(Revenue department)ಹುದ್ದೆಗಳು:

ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳು ಹೊರೆಯಾಗಿ ತಡೆಯಾಗಿ ನಿಂತಿರುತ್ತವೆ, ಅಲ್ಲಿನ ಕೆಲಸಗಳು ಸಲೀಸಾಗಿ ಮುಂದೆ ನಡೆಯಬೇಕು ಎಂಬ ಉದ್ದೇಶದಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ಸರ್ಕಾರ ತೀರ್ಮಾನ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ 256 ಉಪನೋಂದಣಿ ಕಚೇರಿಗಳಲ್ಲಿ ಒಟ್ಟು 1145 ಹುದ್ದೆಗಳು ಮಂಜೂರಾಗಿವೆ. ಇವುಗಳಲ್ಲಿ 55 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಆರ್ಥಿಕ ಇಲಾಖೆ ಜತೆ ಚರ್ಚಿಸಿ ಹೆಚ್ಚುವರಿ ಹುದ್ದೆಗಳ ಭರ್ತಿಗೆ ಅನುಮತಿ ಪಡೆಯಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡರು ತಿಳಿಸಿದ್ದಾರೆ.

ಗ್ರಾಮ ಲೆಕ್ಕಿಗರು / ಗ್ರಾಮ ಆಡಳಿತಾಧಿಕಾರಿಗಳ (Village Accountent) ಹುದ್ದೆಗಳ ನೇಮಕಾತಿಗಳು:

ರಾಜ್ಯದಲ್ಲಿ ಒಟ್ಟು 1500 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು ಖಾಲಿಯಿದ್ದು, ಇವುಗಳಲ್ಲಿ ಮೊದಲ ಹಂತದಲ್ಲಿ 750 ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲು ಕಂದಾಯ ಇಲಾಖೆ ಮುಂದಾಗಿದೆ ಎಂದು ಆದೇಶ ತಿಳಿಸಿದೆ.

ಅರಣ್ಯ ಇಲಾಖೆ (Forest department)ಹುದ್ದೆಗಳಿಗೆ ನೇಮಕಾತಿ:

ಉಳಿಕೆ ಮೂಲ ವೃಂದದ 26 ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಮುಖಾಂತರ ಹುದ್ದೆಯ ಭರ್ತಿ ಮಾಡಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. 143 ಉಪ ವಲಯ ಅರಣ್ಯಾಧಿಕಾರಿ come ಮೋಜಣಿದಾರರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅನುಮತಿಯನ್ನು ಸರ್ಕಾರ ನೀಡಿದೆ.

ಸಾರಿಗೆ ಇಲಾಖೆಯ (Transport department)ಹುದ್ದೆಗಳ ನೇಮಖಾತಿ:

2024ರಲ್ಲಿ 9000 ಸಾರಿಗೆ ಸಿಬ್ಬಂದಿ (ಕಂಡಕ್ಟರ್ ಹಾಗೂ ಕಂಡಕ್ಟರ್ ಕಮ್ ಚಾಲಕ ) (Conductor and conductor come driver)ಹುದ್ದೆಗಳ ಭರ್ತಿಗೆ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.

ಕೆಎಎಸ್‌ ಹುದ್ದೆಗಳ ನೇಮಕಾತಿ : (KAS job requirements):

ರಾಜ್ಯದಲ್ಲಿ ಖಾಲಿ ಇರುವ ಕೆಎಎಸ್‌ ಗೆಜೆಟೆಡ್‌ ಪ್ರೊಬೇಷನರಿ (KAS Gageted Probationary) ಹುದ್ದೆಗಳಲ್ಲಿ ವಿವಿಧ ಹಲವು ಇಲಾಖೆಗಳಿಗೆ ಸೇರಿ 656 ಹುದ್ದೆಗಳ ಭರ್ತಿಗೆ ಮಾನ್ಯ ಮುಖ್ಯಮಂತ್ರಿಗಳು ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿ ಮನವಿ ಮಾಡಿದ್ದರು. ಆದರೆ ಆರ್ಥಿಕ ಇಲಾಖೆ ಒಟ್ಟು 504 ಹುದ್ದೆಗಳ ಭರ್ತಿಗೆ ಮಾತ್ರ ಅವಕಾಶ ಕಲ್ಪಿಸಿದೆ ಎಂದು ತಿಳಿದಿದೆ.

ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ(Grama panchayat Development Officer) ಮತ್ತು ಇತರೆ ಹುದ್ದೆಗಳಿಗೆ ಅಧಿಸೂಚನೆ:

ಪಂಚಾಯತ್ ರಾಜ್‌ (Panchayat Raj ) ಇಲಾಖೆಯಡಿಯಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (PDO)-150,
ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌-1- 135 ಹುದ್ದೆಗಳು ಪಂಚಾಯ್ತಿ ಕಾರ್ಯದರ್ಶಿ ಗ್ರೇಡ್‌ 2- 343 ಹುದ್ದೆಗಳು
ದ್ವಿತೀಯ ದರ್ಜೆ ಲೆಕ್ಕ ಸಹಾಯಕ -105 ಹುದ್ದೆಗಳಿಗೆ ನೇಮಕಾತಿ ವಿಧಾನ ನಿಗದಿ ಮಾಡಲಾಗಿದೆ ಎಂದು ತಿಳಿದಿದೆ.

whatss

ಸಮಾಜ ಕಲ್ಯಾಣ ಇಲಾಖೆ ವಾರ್ಡನ್‌ (Social welfare department Warden)ಹುದ್ದೆಗಳು:

ನೇರ ನೇಮಕಾತಿ ಕೋಟಾದಡಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿಯಿರುವ 232 ವಾರ್ಡನ್‌ (Warden) ಹುದ್ದೆಗಳ ಭರ್ತಿ ಕುರಿತು ಆರ್ಥಿಕ ಇಲಾಖೆಯ ಸಹಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಪೊಲೀಸ್‌ ಇಲಾಖೆಯ ಹುದ್ದೆಗಳು(Police department Recruitments ):

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ(karnataka state police department) 20,000 ಹುದ್ದೆ ಖಾಲಿಯಿದ್ದು, ಈ ಹುದ್ದೆಗಳ ನೇಮಕಾತಿಗೆ ಸಿದ್ಧತೆ ನಡೆಯುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹುದ್ದೆಗಳು(Backward classes welfare department requirement):

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಒಟ್ಟು 2439 ನಿಲಯ ಪಾಲಕರು / ನಿಲಯ ಮೇಲ್ವಿಚಾರಕರ (Warden) ಹುದ್ದೆಗಳು ಮಂಜೂರಾಗಿವೆ. ಈ ಪೈಕಿ ಪ್ರಸ್ತುತ 1189 ಹುದ್ದೆಗಳು ಭರ್ತಿಯಾಗಿದೆ. ಇನ್ನು 1250 ಹುದ್ದೆಗಳು ಖಾಲಿಯಿದ್ದು, ಸದರಿ ಹುದ್ದೆಗಳ ಭರ್ತಿಯ ಕ್ರಮವಾಗಿ ಪ್ರಸ್ತುತ 188 ಹುದ್ದೆಗಳ ಭರ್ತಿಗೆ ಹೆಚ್ಚುವರಿ ಪಟ್ಟಿ ಕಳುಹಿಸಲು ಕೆಪಿಎಸ್‌ಸಿಗೆ (KPSC)ಮಾನ್ಯ ಸಚಿವರು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ 41 ಅಭ್ಯರ್ಥಿಗಳ ಪಟ್ಟಿ ಸ್ವೀಕರಿಸಲಾಗಿದ್ದು, ಉಳಿದ 1006 ಹುದ್ದೆಗಳಿಗೆ ನೇರ ನೇಮಕಾತಿ ಕೋಟಾದಡಿ ಭರ್ತಿ ಮಾಡುವ ಕಾರ್ಯಕ್ಕಾಗಿ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.

ಪ್ರಸ್ತುತ ಕರ್ನಾಟಕ ಎಕ್ಸಾಮಿನೇಷನ್‌ ಅಥಾರಿಟಿಗೆ(Karnataka examination authority)(KEA) ಈ ಕೆಳಕಂಡ ನಿಗಮ / ಸಂಸ್ಥೆ / ಮಂಡಳಿಗಳಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಪ್ರಸ್ತಾವನೆಗಳು ಸಲ್ಲಿಕೆ ಆಗಿವೆ. ಅವುಗಳ ಲಿಸ್ಟ್‌ ಕೆಳಗಿನಂತಿದೆ:
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ.
ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ.

tel share transformed

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ನೀವೇನಾದರೂ, ಈ ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!