Government Update: ರಾಜ್ಯ ಸರ್ಕಾರಿ ನೌಕಕರ ತುಟ್ಟಿಭತ್ಯೆ  ಕೈ ಸೇರುವುದು ಯಾವಾಗ? ಇಲ್ಲಿದೆ ವಿವರ

1000345999

ರಾಜ್ಯ ಸರ್ಕಾರಿ ನೌಕರರ ಡಿಸೆಂಬರ್ (December) ತಿಂಗಳ ವೇತನದಲ್ಲಿ ಏರಿಕೆಯಾಗಿರುವ ತುಟ್ಟಿಭತ್ಯೆ ಸೇರ್ಪಡೆ.

ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ದರವನ್ನು 8.50% ರಿಂದ 10.75% ಕ್ಕೆ ಹೆಚ್ಚಿಸಿದೆ. ಈ ಪರಿಷ್ಕೃತ ದರವು 2024ರ ಜುಲೈ 1ರಿಂದ ಜಾರಿಗೆ ಬಂದಿದ್ದು, ಆರ್ಥಿಕ ಲಾಭಗಳು 2024ರ ಆಗಸ್ಟ್ 1ರಿಂದ ಲಭ್ಯವಾಗುತ್ತದೆ ಎಂದು ನವೆಂಬರ್ ನಲ್ಲಿ ಪ್ರಕಟವಾದ ಆದೇಶದಲ್ಲಿ ತಿಳಿಸಿದೆ. ಇನ್ನು  ಏರಿಕೆಯಾಗಿರುವ ಡಿಎ, ನೌಕರರ ಕೈ ಸೇರುವುದು ಯಾವಾಗ? ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಡಿಸೆಂಬರ್ ತಿಂಗಳ ವೇತನದಲ್ಲಿ ಪರಿಷ್ಕೃತ ಡಿಎ:

ಸರ್ಕಾರಿ ಆದೇಶದ ಪ್ರಕಾರ, ಪರಿಷ್ಕೃತ ತುಟ್ಟಿಭತ್ಯೆಯ ಬಾಕಿ ಮೊತ್ತವನ್ನು 2024ರ ಡಿಸೆಂಬರ್ ತಿಂಗಳ ವೇತನ ಬಟವಾಡೆಗೂ ಮೊದಲು ಪಾವತಿಸತಕ್ಕದ್ದು. ಅದರಿಂದ, ನೌಕರರು ಡಿಸೆಂಬರ್ ತಿಂಗಳ ವೇತನದಲ್ಲಿ ಹೆಚ್ಚಿದ ಡಿಎ ಪಡೆಯುವ ನಿರೀಕ್ಷೆಯಿದೆ. ಇನ್ನು HRMS ನಲ್ಲಿ ವೇತನಕ್ಕೆ ಡಿಎ ಸೇರಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಇನ್ನು ಈ ತಿಂಗಳ ವೇತನ ಬಟವಾಡೆಯಾಲ್ಲೇ(Salary) ಏರಿಕೆಯಾಗಿರುವ ತುಟ್ಟಿಭತ್ಯೆ ಸೇರಿರುತ್ತದೆ ಎಂದು ಸರ್ಕಾರಿ ನೌಕರರ ಟೆಲಿಗ್ರಾಮ್ (Telegram) ಚಾಲನ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ನಿವೃತ್ತಿ ವೇತನದಾರರಿಗೆ ಡಿಎ ಏರಿಕೆ:

ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ, ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೂ, ಹಾಲಿ ಲಭ್ಯವಿರುವ ತುಟ್ಟಿಭತ್ಯೆಯ ದರವನ್ನು 8.50% ರಿಂದ 10.75% ಕ್ಕೆ ಹೆಚ್ಚಿಸಲಾಗಿದೆ.

ಸರ್ಕಾರಿ ನೌಕರರ ಪ್ರತಿಕ್ರಿಯೆ:

ಡಿಎ (DA) ಏರಿಕೆಯನ್ನು ಸ್ವಾಗತಿಸಿದ ಸರ್ಕಾರಿ ನೌಕರರು, ಜೀವನೋಪಾಯ ವೆಚ್ಚಗಳ ಹೆಚ್ಚಳವನ್ನು ಸಮರ್ಥಿಸಲು ಇದು ಸಹಾಯಕವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರು ಸರ್ಕಾರದ ಈ ನಿರ್ಧಾರವಕ್ಕೆ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರ್ಕಾರವು ಡಿಎ ದರವನ್ನು 8.50% ರಿಂದ 10.75% ಕ್ಕೆ ಹೆಚ್ಚಿಸಿದ್ದು, ನೌಕರರು ಡಿಸೆಂಬರ್ ತಿಂಗಳ ವೇತನ(monthly salary)ದಲ್ಲಿ ಈ ಹೆಚ್ಚುವರಿ ಮೊತ್ತವನ್ನು ಪಡೆಯುವ ನಿರೀಕ್ಷೆಯಿದೆ. ನಿವೃತ್ತಿ ವೇತನದಾರರು ಸಹ ಈ ಪರಿಷ್ಕೃತ ದರದಿಂದ ಲಾಭ ಪಡೆಯಲಿದ್ದಾರೆ. ಕೇಂದ್ರ ಸರ್ಕಾರ(central Government)ವು ಸಹ ತನ್ನ ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 3ರಿಂದ 4ರಷ್ಟು ಹೆಚ್ಚಿಸಿದೆ.

ಗಮನಿಸಿ :

ಡಿಎ ಏರಿಕೆಯ ವಿವರಗಳು ಹೀಗಿವೆ
ಹಳೆಯ ದರ: ಮೂಲ ವೇತನದ 8.50%
ಹೊಸ ದರ: ಮೂಲ ವೇತನದ 10.75%
ಜಾರಿಗೆ ಬರುವ ದಿನಾಂಕ: 2024ರ ಜುಲೈ
ಆರ್ಥಿಕ ಲಾಭಗಳ ಲಭ್ಯತೆ: 2024ರ ಆಗಸ್ಟ್ 1

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!