Government Update : ನಿವೃತ್ತ ಸರ್ಕಾರಿ ನೌಕರರ ಪಿಂಚಣಿ ಬಗ್ಗೆ ಸರ್ಕಾರದಿಂದ ಹೊಸ ಆದೇಶ ಪ್ರಕಟ

Pension recommendations

ರಾಜ್ಯ ನಿವೃತ್ತ ಸರ್ಕಾರಿ ನೌಕರರಿಗೆ(government employees) ಪಿಂಚಣಿ ಪರಿಷ್ಕರಣೆ: ಕರ್ನಾಟಕ ಸರ್ಕಾರದಿಂದ ಮಹತ್ವದ ಆದೇಶ

ಕರ್ನಾಟಕ ರಾಜ್ಯ ಸರ್ಕಾರವು ನಿವೃತ್ತ ಸರ್ಕಾರಿ ನೌಕರರಿಗೆ ಪಿಂಚಣಿ ಪರಿಷ್ಕರಣೆಯ(Revision of Pension) ಮಹತ್ವದ ಆದೇಶವನ್ನು ಹೊರಡಿಸಿದ್ದು, ಇದು ಸಾವಿರಾರು ನಿವೃತ್ತ ನೌಕರರಿಗೆ ಸಿಹಿಸುದ್ದಿಯಾಗಿದೆ. ಈ ತೀರ್ಮಾನವು 7ನೇ ವೇತನ ಆಯೋಗದ ಶಿಫಾರಸ್ಸುಗಳ(7th Pay Commission recommendations) ಅನುಸಾರವಾಗಿದ್ದು, ರಾಜ್ಯ ಸರ್ಕಾರಿ ನೌಕರರ ವೇತನ ಹಾಗೂ ಪಿಂಚಣಿಯನ್ನು ಸುಧಾರಿಸಲು ಮಹತ್ವದ ಹೆಜ್ಜೆಯಾಗಲಿದೆ. ರಾಜ್ಯ ನಿವೃತ್ತ ಸರ್ಕಾರಿ ನೌಕರರ ಪಿಂಚಣಿ ಪರಿಷ್ಕರಣೆಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳ ಹಾವಳಿ ಹೆಚ್ಚಾಗಿದ್ದು, ಇವುಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಕರ್ನಾಟಕದಲ್ಲಿ ಇನ್ನು ಮುಂದೆ ಅಸ್ತಿತ್ವಕ್ಕೆ ಬರಲಿದೆ ಫೈನಾನ್ಸ್ ನೋಂದಣಿ ಪ್ರಾಧಿಕಾರ. ಹಾಗಾಗಿ , ಪೈನಾನ್ಸ್‌ ವ್ಯವಹಾರ ನಡೆಸಲು ಮುಚ್ಚಳಿಕೆ ಸಹಿತ ನೋಂದಣಿ ಕಡ್ಡಾಯ ಎಂಬ ನಿಯಮ ಜಾರಿಗೆ ಬರಲಿದೆ. ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದ್ದು . ಈ ಕುರಿತು ಸಂಪೂರ್ಣ ವಿವರ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿಯು ಈ ಕುರಿತಂತೆ ಅಧಿಕೃತ ಆದೇಶ ಹೊರಡಿಸಿದ್ದು, 7ನೇ ರಾಜ್ಯ ವೇತನ ಆಯೋಗವು ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಪಿಂಚಣಿ ಪರಿಷ್ಕರಣೆಗಾಗಿ ಶಿಫಾರಸುಗಳನ್ನು ನೀಡಿದ್ದು, ಅದನ್ನು ಸರ್ಕಾರ ಸ್ವೀಕರಿಸಿ, 2024ರ ಆಗಸ್ಟ್ 1ರಿಂದ ಅನುಷ್ಠಾನಗೊಳಿಸಲು ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಆದೇಶ ಸಂಖ್ಯೆ: ಆಇ 21 ಎಸ್‌ಆರ್‌ 2024 (23.08.2024) ಮತ್ತು ಆ-ಪಿಇಎನ್‌/262/2024 (28.08.2024) ಅನ್ನು ಸರ್ಕಾರ ಜಾರಿ ಮಾಡಿದೆ.

ಈ ಹೊಸ ಆದೇಶದ ಅನ್ವಯ, ಸರ್ಕಾರದ ಸಬಲೀಕರಣ ಪ್ರಾಧಿಕಾರವು ನಿವೃತ್ತ ನೌಕರರ ಹೊಸ ಪಿಂಚಣಿಯನ್ನು(New pension) ಶಿಫಾರಸುಗಳ ಪ್ರಕಾರ ಪರಿಷ್ಕರಿಸಿ ಅನುಮೋದಿಸಲಿದೆ. ಇದರಿಂದ ಸರ್ಕಾರಿ ಸೇವೆಯಿಂದ ನಿವೃತ್ತರಾದ ನೌಕರರು ಆರ್ಥಿಕ ಸುಧಾರಣೆ ಪಡೆಯಲಿದ್ದು, ಅವರ ಜೀವನಮಟ್ಟ ಸುಧಾರಿಸಲು ಇದು ಸಹಾಯಕವಾಗಲಿದೆ.

ವಿಜ್ಞಾನ ತಂತ್ರಜ್ಞಾನ ಇಲಾಖೆಯ(Department of Science and Technology) ಪ್ರಗತಿ ಪರಿಶೀಲನಾ ಸಭೆ:

ಇದಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ (Chief Minister Siddaramaiah)ಅಧ್ಯಕ್ಷತೆಯಲ್ಲಿ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ(Progress review meeting) ನಡೆಸಲಾಯಿತು. ಈ ಸಭೆಯಲ್ಲಿ ರಾಜ್ಯದ ವಿಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ಸಭೆಯಲ್ಲಿ ತೆಗೆದುಕೊಂಡ ಮಹತ್ವದ ತೀರ್ಮಾನಗಳು ಹೀಗಿವೆ :

ರಾಜ್ಯದಲ್ಲಿ ಒಟ್ಟು 9 ಹೊಸ ತಾರಾಲಯಗಳ ನಿರ್ಮಾಣ ಪ್ರಕ್ರಿಯೆ ಆರಂಭವಾಗಿದ್ದು, 5 ತಾರಾಲಯಗಳ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ(CM Siddaramaiah) ತಿಳಿಸಿದರು.
ಬೆಂಗಳೂರು(Bangalore) ನಗರದಲ್ಲಿ ಒಂದು ತಿಂಗಳ ಕಾಲ “ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ಸವ” ಆಯೋಜನೆಗೊಳ್ಳಲಿದೆ.
ಡಾ. ಹೆಚ್. ನರಸಿಂಹಯ್ಯ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರದ(Dr. H. Narasimhaiah International Science Centre) ಸ್ಥಾಪನೆಗೆ 132 ಎಕರೆ ಭೂಮಿಯನ್ನು ಹಂಚಿಕೆ ಮಾಡಲಾಗಿದ್ದು, ಆದಷ್ಟು ಬೇಗನೆ ಇಲಾಖೆಯ ಸುಪರ್ದಿಗೆ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ “ವಿಜ್ಞಾನ ನಗರ” ಸ್ಥಾಪನೆಗಾಗಿ 25 ಎಕರೆ(25 acres) ಭೂಮಿಯನ್ನು ವಿಭಾಗಕ್ಕೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ವಿದ್ಯಾರ್ಥಿಗಳಿಗೆ ಆಕಾಶ ಕಾಯಗಳ ಬಗ್ಗೆ ಆಸಕ್ತಿ ಮೂಡಿಸಲು 833 ವಸತಿ ಶಾಲೆಗಳು(833 residential schools) ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ(undergraduate colleges) ದೂರದರ್ಶಕ (ಟೆಲಿಸ್ಕೋಪ್)ಗಳನ್ನು ಒದಗಿಸಲಾಗುವುದು.
ರಾಮನಗರದಲ್ಲಿ(Ramanagara) ಹೊಸ ವಿಜ್ಞಾನ ಕೇಂದ್ರ ನಿರ್ಮಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿದೆ.
ಬೆಂಗಳೂರು ನಗರದಲ್ಲಿ “ಕ್ವಾಂಟಮ್ ಸಮ್ಮೇಳನ”(Quantum Conference) ಆಯೋಜನೆಗೆ ಸಿದ್ಧತೆ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ(CM Siddaramaiah) ತಿಳಿಸಿದ್ದಾರೆ.

ಈ ಎಲ್ಲಾ ಯೋಜನೆಗಳು ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವನ್ನು ಬಲಪಡಿಸುವುದರೊಂದಿಗೆ, ವಿದ್ಯಾರ್ಥಿಗಳಿಗೆ(students) ಮತ್ತು ಸಂಶೋಧಕರಿಗೆ(researchers) ಹೊಸ ಅವಕಾಶಗಳನ್ನು ಒದಗಿಸಲು ಸಹಾಯಕವಾಗಲಿದೆ.

ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!