Government update : ಅನುಕಂಪದ ಆಧಾರದ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ.!

IMG 20250221 WA0000

WhatsApp Group Telegram Group

ಕರ್ನಾಟಕ ಸರ್ಕಾರದಿಂದ ಅನುಕಂಪದ ಆಧಾರದ ನೇಮಕಾತಿಗೆ ಮಹತ್ವದ ಆದೇಶ:

ಕರ್ನಾಟಕ ಸರ್ಕಾರವು (Karnataka Government) ಅನುಕಂಪದ ಆಧಾರದ ಮೇಲೆ ನಿರೀಕ್ಷೆಯಲ್ಲಿದ್ದವರಿಗೆ ಮಹತ್ವದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹೊಸ ಆದೇಶವನ್ನು ಹೊರಡಿಸಿದೆ. ಸರ್ಕಾರದ ಈ ಹೊಸ ನಿರ್ಧಾರವು ವಿಶೇಷವಾಗಿ ಪರಿಶಿಷ್ಟ ಜಾತಿ (Scheduled Cast) ಮತ್ತು ಪರಿಶಿಷ್ಟ ಪಂಗಡ (Scheduled Tribe) ಸಮುದಾಯಗಳ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ. ಸರ್ಕಾರಿ ನೌಕರ (Government Employees) ಸೇವೆಯಲ್ಲಿರುವಾಗಲೇ ಮೃತನಾದರೆ, ಅವರ ಕುಟುಂಬದ ಅವಲಂಬಿತರ ಜೀವನ ನಿರ್ವಹಣೆ ಒಂದು ದೊಡ್ಡ ಪ್ರಶ್ನೆಯಾಗುತ್ತದೆ. ಈ ಸಂದರ್ಭದಲ್ಲಿ, ಮೃತ ಉದ್ಯೋಗಿಯ ಕುಟುಂಬ ಸದಸ್ಯರೊಬ್ಬರಿಗೆ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996 ರನ್ವಯ ಉದ್ಯೋಗ ನೀಡುವ ವ್ಯವಸ್ಥೆ ಇದೆ. ಆದಾಗ್ಯೂ, ಈ ನಿಯಮಗಳನ್ನು ತಾರತಮ್ಯವಿಲ್ಲದೆ ಅನುಸರಿಸಿ ಎಲ್ಲ ಹಂತದಲ್ಲೂ ಸಮಾನತೆ ಕಾಪಾಡುವಂತೆ ಕರ್ನಾಟಕ ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಅನುಕಂಪದ ಆಧಾರದ ನೇಮಕಾತಿಯ ನಿಬಂಧನೆಗಳು:

ಅನುಕಂಪದ ನೇಮಕಾತಿ ದೊರಕುವಿಕೆ ಒಂದು ಸೌಲಭ್ಯವಾಗಿದ್ದರೂ, ಇದು ಹಕ್ಕೊತ್ತಾಯವಲ್ಲ. ಅರ್ಹ ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆ, ಅರ್ಜಿ (Apllication) ಸಲ್ಲಿಸಲು ಅವಧಿ, ಹಾಗೂ ಇತರ ನಿಯಮಗಳನ್ನು ಪೂರೈಸಿದರೆ ಮಾತ್ರ ಅವರಿಗೆ ಈ ಅವಕಾಶ ಒದಗಿಸಬಹುದಾಗಿದೆ. 1996ರ ನಿಯಮ 4(4)ರ ಪ್ರಕಾರ, ಸರ್ಕಾರದ ಅನುಮೋದನೆಯೊಂದಿಗೆ, ಅಭ್ಯರ್ಥಿಯ ವಿದ್ಯಾರ್ಹತೆಗನುಗುಣವಾಗಿ ಗರಿಷ್ಠ ಗ್ರೂಪ್ “ಸಿ” ಅಥವಾ ಗ್ರೂಪ್ “ಡಿ” (Group C or D) ಹುದ್ದೆಗೆ ನೇಮಕಾತಿ ನೀಡಲು ಅವಕಾಶವಿದೆ. ಆದರೆ, ಯಾವುದೇ ನಿಯಮದಲ್ಲಿ ತಾರತಮ್ಯ ಮೌಲ್ಯಮಾಪನವಾಗಬಾರದು ಎಂಬುದಾಗಿ ಸರ್ಕಾರ ಸ್ಪಷ್ಟಪಡಿಸಿದೆ.

SC/ST ಅಭ್ಯರ್ಥಿಗಳಿಗೆ ನ್ಯಾಯ:

ನಿರ್ದೇಶನದ ಪ್ರಕಾರ, ಕೆಲವು ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅನುಕಂಪದ ನೇಮಕಾತಿ ನೀಡುವ ಸಂದರ್ಭದಲ್ಲಿ ಅವರ ಶೈಕ್ಷಣಿಕ ಅರ್ಹತೆಯನ್ನು (Education Qualification) ಪರಿಗಣಿಸದೇ ಕಡಿಮೆ ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ ಎಂಬ ಆರೋಪಗಳು ಸರ್ಕಾರದ ಗಮನಕ್ಕೆ ಬಂದಿವೆ. ಈ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಅಭ್ಯರ್ಥಿಗೆ ತಾರತಮ್ಯ (Discrimination) ವಿಲ್ಲದೆ, ನಿಯಮಾನುಸಾರ ನೇಮಕಾತಿ ಪ್ರಕ್ರಿಯೆ ನಡೆಯುವಂತೆ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ.

ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ:

ಅನುಕಂಪದ (Sympathetic) ಆಧಾರದ ಮೇಲಿನ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳು ಹಾಗೂ ನಿಯಮಾವಳಿಗಳನ್ನು ಸಮರ್ಥವಾಗಿ ಅನುಸರಿಸಬೇಕೆಂದು ಸರ್ಕಾರ ತಿಳಿಸಿದ್ದು, ಯಾವುದೇ ಅಧಿಕಾರಿ ಅಥವಾ ನೇಮಕಾತಿ ಪ್ರಾಧಿಕಾರ ಈ ನಿಯಮಗಳನ್ನು ಉಲ್ಲಂಘಿಸಿದರೆ, ಅವರ ವಿರುದ್ಧ ಶಿಸ್ತು ಕ್ರಮ (Disciplinary action) ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ. ಈ ಹೊಸ ಆದೇಶದ ಜಾರಿಗೆ ರಾಜ್ಯದ ಹಲವಾರು ನಿರೀಕ್ಷಿತ ಅರ್ಹರು ಸರ್ಕಾರದ ಸೌಲಭ್ಯಗಳನ್ನು (Government Facilities) ನ್ಯಾಯಯುತವಾಗಿ ಪಡೆಯಲು ಸಾಧ್ಯವಾಗಲಿದೆ.

ಕರ್ನಾಟಕ ಸರ್ಕಾರದ ಈ ಮಹತ್ವದ ಆದೇಶವು ಅನುಕಂಪದ ಆಧಾರದ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ತಡೆಹಿಡಿಯಲು, ಹಾಗೂ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನ್ಯಾಯ (justice) ಒದಗಿಸಲು ಮಾಡಿರುವ ಮಹತ್ವದ ಹೆಜ್ಜೆಯಾಗಿದೆ. ಸರ್ಕಾರದ ಈ ನಿಲುವು ರಾಜ್ಯದ ಭವಿಷ್ಯದಲ್ಲಿ ಹೆಚ್ಚಿನ ಸಮಾನತೆ ಮತ್ತು ಸಾಮಾಜಿಕ ನ್ಯಾಯದತ್ತ ಒಲಿಯುವಲ್ಲಿ ಸಹಾಯ ಮಾಡಲಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!