ಕೇಂದ್ರ ಸರ್ಕಾರ 15 ಗ್ರಾಮೀಣ ಬ್ಯಾಂಕ್ ಗಳನ್ನು ಮುಚ್ಚಲು ಸಜ್ಜು, ಯಾವೆಲ್ಲಾ ಬ್ಯಾಂಕ್ ಗಳು ಮುಚ್ಚುತ್ತವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹಣಕಾಸಿನ ವಹಿವಾಟಿನಲ್ಲಿ ಬ್ಯಾಂಕ್ ಗಳು ಉತ್ತಮ ಕಾರ್ಯವನ್ನು ನಿರ್ವಹಿಸುತ್ತವೆ. ಹೌದು, ಹಣವನ್ನು ಹೂಡಿಕೆ(invest) ಮಾಡಲು ಅಷ್ಟೇ ಅಲ್ಲದೆ ಸಾಲ(loan) ಪಡೆಯಲು, ಹಣವನ್ನು ಪಡೆಯಲು ಅಥವಾ ಪಾವತಿ ಮಾಡಲು, ಚಿನ್ನಾಭರಣಗಳನ್ನು ಭದ್ರವಾಗಿಡಲು ಅಷ್ಟೇ ಅಲ್ಲದೆ ಇನ್ನಿತರ ಕೆಲಸ ಕಾರ್ಯಗಳಿಗೆ ಬ್ಯಾಂಕ್ ಬಹಳ ಅವಶ್ಯಕವಾಗಿದೆ. ಇಂದು ಪ್ರತಿಯೊಂದು ಹಳ್ಳಿಗಳಲ್ಲಿಯೂ ಕೂಡ ಬ್ಯಾಂಕ್ ಗಳ ಸೌಲಭ್ಯ ಇದ್ದೆ ಇದೆ.
ಗ್ರಾಮೀಣ ಭಾಗದ ಬ್ಯಾಂಕ್ ಗಳ ಮಹತ್ವ (Importatance) :
ದೇಶವು ಆರ್ಥಿಕ ಅಭಿವೃಧ್ಧಿಯನ್ನು ಸಾಧಿಸಲು ಗ್ರಾಮೀಣ ಭಾಗದಲ್ಲಿನ ವ್ಯವಸಾಯ, ವ್ಯಾಪಾರ, ಉದ್ಯೋಗಗಳಿಗೆ ಹಣಸಹಾಯವನ್ನು ಗ್ರಾಮೀಣ ಬ್ಯಾಂಕ್ ಗಳು(Gramina Banks) ಒದಗಿಸುತ್ತವೆ. ಅಷ್ಟೇ ಅಲ್ಲದೆ ಹಳ್ಳಿಗಳಲ್ಲಿ ಅಭಿವೃದ್ಧಿಗೊಳ್ಳುವ ವ್ಯವಸಾಯ (farming) ಮತ್ತು ವಾಣಿಜ್ಯಗಳಿಂದ ಬರುವ ಲಾಭವನ್ನು ಉಳಿತಾಯ ಮಾಡಲು ಹಾಗೂ ಗ್ರಾಮೀಣ ಭಾಗದ ಸುರಕ್ಷಿತ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸಲು ಈ ಬ್ಯಾಂಕ್ (Bank) ಗಳು ಸಹಾಯ ಮಾಡುತ್ತವೆ. ಆದರೆ ಇದೀಗ ಸರ್ಕಾರವು ಗ್ರಾಮೀಣ ಭಾಗದ 15 ಬ್ಯಾಂಕ್ ಗಳನ್ನು ಮುಚ್ಚಲು ಸಜ್ಜಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಕೇಂದ್ರ ಸರ್ಕಾರ 15 ಗ್ರಾಮೀಣ ಬ್ಯಾಂಕ್ ಗಳನ್ನು ಮುಚ್ಚಲು ಸಜ್ಜು :
ಇದೀಗ ಕೇಂದ್ರ ಸರ್ಕಾರ ಗ್ರಾಮೀಣ ಬ್ಯಾಂಕ್ (Grameen Bank) ಗಳ ಸಂಖ್ಯೆಯನ್ನು ಇಳಿಕೆ ಮಾಡಲು ಸಜ್ಜಾಗಿದೆ. ಹೌದು, ಇದರ ಬಗ್ಗೆ ಹಲವು ಚರ್ಚೆಗಳು ನಡೆದಿದ್ದು, ಸರ್ಕಾರವು 15 ಗ್ರಾಮೀಣ ಬ್ಯಾಂಕ್ ಗಳನ್ನು ಮುಚ್ಚಲು ಮುಂದಾಗಿದೆ. ನಿಮ್ಮ ಖಾತೆ ಗ್ರಾಮೀಣ ಬ್ಯಾಂಕ್‌ನಲ್ಲಿದ್ದರೆ ಇದರ ಬಗ್ಗೆ ಗಮನ ಹರಿಸಿ.
ರಾಜ್ಯದಲ್ಲಿ ಒಂದೇ ಗ್ರಾಮೀಣ ಬ್ಯಾಂಕ್ ಇರಬೇಕೆಂಬ ಚಿಂತನೆಯನ್ನು ಹೊಂದಿದೆ ಕೇಂದ್ರ ಸರ್ಕಾರ :
ಈಗಾಗಲೇ ಸರ್ಕಾರವು ಗ್ರಾಮೀಣ ಬ್ಯಾಂಕ್‌ಗಳ ಸಂಖ್ಯೆಯನ್ನು ಇಳಿಸುವ ಕುರಿತು ಪ್ರಸ್ತಾವನೆ (proposal) ಯೂ ಸಲ್ಲಿಸಿದ್ದು, ಕೇಂದ್ರ ಸರ್ಕಾರವು (Central government) ಬ್ಯಾಂಕ್‌ಗಳನ್ನು ವಿಲೀನ ಮಾಡುವ ಮೂಲಕ ರಾಜ್ಯದಲ್ಲಿ ಒಂದೇ ಗ್ರಾಮೀಣ ಬ್ಯಾಂಕ್ ಇರಬೇಕೆಂಬ ಚಿಂತನೆಯನ್ನು ಹೊಂದಿದೆ. ಸದ್ಯ ಭಾರತದಲ್ಲಿ ಒಟ್ಟು 43 ಆರ್‌ಆರ್‌ಬಿ(RRB)ಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳನ್ನು 28ಕ್ಕೆ ಇಳಿಸಲು ಚಿಂತಿಸಲಾಗುತ್ತಿದೆ.
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ನ ಹೆಸರು (Name of Regional Rural Bank) ಪ್ರಾಯೋಜಕ ಬ್ಯಾಂಕ್ (Sponsor Bank) ಹೆಸರುಗಳು ಹಾಗೂ ಅವುಗಳ ರಾಜ್ಯಗಳ ಹೆಸರುಗಳನ್ನು ಈ ಕೆಳಗೆ ನೀಡಲಾಗಿದೆ :
ಆಂಧ್ರ ಪ್ರಗತಿ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಗ್ರಾಮೀಣ ಬ್ಯಾಂಕ್) – ಕೆನರಾ ಬ್ಯಾಂಕ್(ಪ್ರಾಯೋಜಕ ಬ್ಯಾಂಕ್)-ಆಂಧ್ರ ಪ್ರದೇಶ
ಚೈತನ್ಯ ಗೋಧಾವರಿ ಗ್ರಾಮೀಣ ಬ್ಯಾಂಕ್- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ(ಆಂಧ್ರ ಪ್ರದೇಶ)
ಸಪ್ತಗಿರಿ ಗ್ರಾಮೀಣ ಬ್ಯಾಂಕ್ – ಇಂಡಿಯನ್ ಬ್ಯಾಂಕ್(ಆಂಧ್ರ ಪ್ರದೇಶ)
ಅರುಣಾಚಲ ಪ್ರದೇಶ ಗ್ರಾಮೀಣ ಬ್ಯಾಂಕ್ – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಅರುಣಾಚಲ ಪ್ರದೇಶ)
ಅಸ್ಸಾಂ ಗ್ರಾಮೀಣ ಬ್ಯಾಂಕ್ – ಪಂಜಾಬ್ ನ್ಯಾಷನಲ್ ಬ್ಯಾಂಕ್(ಅಸ್ಸಾಂ)
ದಕ್ಷಿಣ ಬಿಹಾರ ಗ್ರಾಮೀಣ ಬ್ಯಾಂಕ್ – ಪಂಜಾಬ್ ನ್ಯಾಷನಲ್ ಬ್ಯಾಂಕ್(ಬಿಹಾರ)
ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್ – ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ(ಬಿಹಾರ)
ಛತ್ತೀಸಗಢ ರಾಜ್ಯ ಗ್ರಾಮೀಣ ಬ್ಯಾಂಕ್ – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಛತ್ತೀಸಗಢ)
ಬರೋಡಾ ಗುಜರಾತ ಗ್ರಾಮೀಣ ಬ್ಯಾಂಕ್ -ಬ್ಯಾಂಕ್ ಆಫ್ ಬರೋಡಾ(ಗುಜರಾತ್)
ಸೌರಾಷ್ಟ್ರ ಗ್ರಾಮೀಣ ಬ್ಯಾಂಕ್ – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಗುಜರಾತ್)
ಸರ್ವ ಹರಿಯಾಣ ಗ್ರಾಮೀಣ ಬ್ಯಾಂಕ್- ಪಂಜಾಬ್ ನ್ಯಾಷನಲ್ ಬ್ಯಾಂಕ್(ಹರಿಯಾಣ)
ಹಿಮಾಚಲ ಪ್ರದೇಶ ಗ್ರಾಮೀಣ ಬ್ಯಾಂಕ್ – ಪಂಜಾಬ್ ನ್ಯಾಷನಲ್ ಬ್ಯಾಂಕ್(ಹಿಮಾಚಲ ಪ್ರದೇಶ)
bಎಲೆಕ್ವೈ ದೇಹತಿ ಬ್ಯಾಂಕ್ – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಜಮ್ಮು ಕಾಶ್ಮೀರ)
ಜಮ್ಮು-ಕಾಶ್ಮೀರ ಗ್ರಾಮೀಣ ಬ್ಯಾಂಕ್- ಜೆ ಆಂಡ್ ಕೆ ಬ್ಯಾಂಕ್ ಲಿಮಿಟೆಡ್ (ಜಮ್ಮು ಕಾಶ್ಮೀರ)
ಜಾರ್ಖಂಡ್ ರಾಜ್ಯ ಗ್ರಾಮೀಣ ಬ್ಯಾಂಕ್- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಜಾರ್ಖಂಡ್)
ಕರ್ನಾಟಕ ಗ್ರಾಮೀಣ ಬ್ಯಾಂಕ್- ಕೆನರಾ ಬ್ಯಾಂಕ್(ಕರ್ನಾಟಕ)
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್- ಕೆನರಾ ಬ್ಯಾಂಕ್ (ಕರ್ನಾಟಕ)
ಕೇರಳ ಗ್ರಾಮೀಣ ಬ್ಯಾಂಕ್ – ಕೆನರಾ ಬ್ಯಾಂಕ್(ಕೇರಳ)
ಮಧ್ಯ ಪ್ರದೇಶ ಗ್ರಾಮೀಣ ಬ್ಯಾಂಕ್- ಬ್ಯಾಂಕ್ ಆಫ್ ಇಂಡಿಯಾ(ಮಧ್ಯ ಪ್ರದೇಶ)
ಮಧ್ಯಾಂಚಲ ಗ್ರಾಮೀಣ ಬ್ಯಾಂಕ್ – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಮಧ್ಯ ಪ್ರದೇಶ)
ಮಹಾರಾಷ್ಟ್ರ ಗ್ರಾಮೀಣ ಬ್ಯಾಂಕ್ – ಬ್ಯಾಂಕ್ ಆಫ್ ಮಹಾರಾಷ್ಟ್ರ (ಮಹಾರಾಷ್ಟ್ರ)
ವಿದರ್ಭ ಕೊಂಕಣ ಗ್ರಾಮೀಣ ಬ್ಯಾಂಕ್ -ಬ್ಯಾಂಕ್ ಆಫ್ ಇಂಡಿಯಾ(ಮಹಾರಾಷ್ಟ್ರ)
ಮಣಿಪುರ ಗ್ರಾಮೀಣ ಬ್ಯಾಂಕ್ – ಪಂಜಾಬ್ ನ್ಯಾಷನಲ್ ಬ್ಯಾಂಕ್(ಮಣಿಪುರ)
ಮೇಘಾಲಯ ಗ್ರಾಮೀಣ ಬ್ಯಾಂಕ್- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಮೇಘಾಲಯ)
ಮಿಜೊರಾಂ ಗ್ರಾಮೀಣ ಬ್ಯಾಂಕ್- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಮಿಜೊರಾಂ)
.ನಾಗಾಲ್ಯಾಂಡ್ ಗ್ರಾಮೀಣ ಬ್ಯಾಂಕ್ – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ನಾಗಾಲ್ಯಾಂಡ್)
ಓಡಿಶಾ ಗ್ರಾಮೀಣ ಬ್ಯಾಂಕ್- ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (ಓಡಿಶಾ)
ಉತ್ಕಲ್ ಗ್ರಾಮೀಣ ಬ್ಯಾಂಕ್- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಓಡಿಶಾ)
ಪುದವೈ ಭಾರತೀಯರ್ ಗ್ರಾಮೀಣ ಬ್ಯಾಂಕ್- ಇಂಡಿಯನ್ ಬ್ಯಾಂಕ್ (ಪುದುಚೇರಿ)
ಪಂಜಾಬ್ ಗ್ರಾಮೀಣ ಬ್ಯಾಂಕ್ – ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಂಜಾಬ್)
ಬರೋಡಾ ರಾಜಸ್ಥಾನ ಕ್ಷೇತ್ರಿಯ ಗ್ರಾಮೀಣ ಬ್ಯಾಂಕ್- ಬ್ಯಾಂಕ್ ಆಫ್ ಬರೋಡಾ(ರಾಜಸ್ಥಾನ)
ರಾಜಸ್ಥಾನ ಮರೂಧರಾ ಗ್ರಾಮೀಣ ಬ್ಯಾಂಕ್ – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ರಾಜಸ್ಥಾನ)
ತಮಿಳುನಾಡು ಗ್ರಾಮ್ ಬ್ಯಾಂಕ್ – ಇಂಡಿಯನ್ ಬ್ಯಾಂಕ್ (ತಮಿಳುನಾಡು)
ಆಂಧ್ರ ಪ್ರದೇಶ ಗ್ರಾಮೀಣ ವಿಕಾಸ ಬ್ಯಾಂಕ್- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಆಂಧ್ರ ಪ್ರದೇಶ)
ತೆಲಂಗಾಣ ಗ್ರಾಮೀಣ ಬ್ಯಾಂಕ್ – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ತೆಲಂಗಾಣ)
.ತ್ರಿಪುರ ಗ್ರಾಮೀಣ ಬ್ಯಾಂಕ್ – ಪಂಜಾಬ್ ನ್ಯಾಷನಲ್ ಬ್ಯಾಂಕ್(ತ್ರಿಪುರ)
ಆರ್ಯವರ್ತ ಬ್ಯಾಂಕ್ – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಉತ್ತರ ಪ್ರದೇಶ)
ಬರೋಡಾ ಯುಪಿ ಬ್ಯಾಂಕ್- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಉತ್ತರ ಪ್ರದೇಶ)
ಪಶ್ಚಿಮ ಯುಪಿ ಗ್ರಾಮೀಣ ಬ್ಯಾಂಕ್ -ಪಂಜಾಬ್ ನ್ಯಾಷನಲ್ ಬ್ಯಾಂಕ್(ಉತ್ತರ ಪ್ರದೇಶ)
ಉತ್ತರಾಖಂಡ ಗ್ರಾಮೀಣ ಬ್ಯಾಂಕ್- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಉತ್ತರಾಖಂಡ)
ಬಂಗೀಯ ಗ್ರಾಮೀಣ ಬ್ಯಾಂಕ್- ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಶ್ಚಿಮ ಬಂಗಾಳ)
ಪಶ್ಚಿಮ ಬಂಗಾ ಗ್ರಾಮೀಣ ಬ್ಯಾಂಕ್- ಯುಕೊ ಬ್ಯಾಂಕ್(ಪಶ್ಚಿಮ ಬಂಗಾಳ)
ಉತ್ತರ ಬಂಗ ಕ್ಷೇತ್ರಿಯ ಗ್ರಾಮೀಣ ಬ್ಯಾಂಕ್- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ(ಪಶ್ಚಿಮ ಬಂಗಾಳ)
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.