ಚಾಲಕ, ಟೈಪಿಸ್ಟ್, ಹಾಗೂ ಹಲವು ಗ್ರೂಪ್ ಸಿ, ಡಿ (group C and D jobs) ನೇಮಕಕ್ಕೆ ಸುತ್ತೋಲೆ ಹೊರಡಿಸಿದ ಕರ್ನಾಟಕ ಸರ್ಕಾರ!
ಹಲವಾರು ಜನರು ಸರ್ಕಾರದ ಹುದ್ದೆಗಳಿಗೆ ಕಾಯುತ್ತಿರುತ್ತಾರೆ. ಸಮಯಕ್ಕೆ ತಕ್ಕಂತೆ ಸರ್ಕಾರವು ಹಲವಾರು ಹುದ್ದೆಗಳ ನೇಮಕಕ್ಕೆ ಹಾಗೂ ಅವುಗಳಿಗೆ ಅರ್ಜಿಗಳನ್ನು (Application) ಸಲ್ಲಿಸಲು ಆದೇಶ ಹೊರಡಿಸುತ್ತಿರುತ್ತದೆ. ಹಾಗೆಯೇ ಇದೀಗ ಕರ್ನಾಟಕ ಸರ್ಕಾರವು ಒಂದು ಗುಡ್ ನ್ಯೂಸ್ ನೀಡಿದೆ. ಸರ್ಕಾರದ ಯಾವುದಾದರೂ ಹುದ್ದೆಗಳಲ್ಲಿ ಕೆಲಸ ಮಾಡುವ ಆಸಕ್ತಿ ಇರುವ ಅಭ್ಯರ್ಥಿಗಳಿಗೆ, ಸರ್ಕಾರವು ಒಂದು ಮಹತ್ವದ ಆದೇಶವನ್ನು ಹೊರಡಿಸಿದ್ದು, ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗ್ರೂಪ್ ಸಿ, ಡಿ ಹಾಗೂ ಇನ್ನಿತರ ಹುದ್ದೆಗಳ ನೇಮಕಕ್ಕೆ ಆದೇಶ :
ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿನ ಗ್ರೂಪ್- ಡಿ ಮತ್ತು ಸಮಾನಾಂತರ ಹುದ್ದೆ, ಗ್ರೂಪ್-ಸಿ ಹುದ್ದೆಗಳಾದ ಬೆರಳಚ್ಚುಗಾರರು, ದತ್ತಾಂಶ ನಮೂದು ಸಹಾಯಕರು (ಡಿಇಒ), ವಾಹನ ಚಾಲಕರು, ಶೀಘ್ರ ಲಿಪಿಗಾರರ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಸುತ್ತೋಲೆ ಇದಾಗಿದೆ.
ವರ್ಗಗಳ ಮೀಸಲಾತಿ ಮತ್ತು ನೇಮಕಾತಿಯ ಬಗ್ಗೆ ಮಾಹಿತಿ ಈ ಸುತ್ತೋಲೆಯಲ್ಲಿದೆ (circulation) :
ಸ್ವಾಯತ್ತ ಸಂಸ್ಥೆಗಳು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿನ ಗ್ರೂಪ್ ಡಿ ಮತ್ತು ಸಮನಾಂತರ ಹುದ್ದೆ, ಗ್ರೂಪ್ ಸಿ ಹುದ್ದೆಗಳಾದ ಬೆರಳಚ್ಚುಗಾರರು, ದತ್ತಾಂಶ ನಮೂದು ಸಹಾಯಕರು (ಡಿಇಒ), ವಾಹನ ಚಾಲಕರು(Driver), ಶೀಘ್ರ ಲಿಪಿಗಾರರ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾತ್ರ ಭರ್ತಿ ಮಾಡಬೇಕು. ಈ ವೃಂದಗಳಲ್ಲಿ ಬ್ಯಾಕ್‌ಲಾಗ್ ಸೇರಿದಂತೆ ಯಾವುದೇ ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ಇಲ್ಲ. ಹೊರಗುತ್ತಿಗೆ ನೇಮಕಾತಿಯಲ್ಲಿ ಆಯಾ ವರ್ಗಗಳಿಗೆ ನೇಮಕಾತಿಯಲ್ಲಿ ಮೀಸಲಾತಿ ಖಚಿತಪಡಿಸಿಕೊಳ್ಳಬೇಕು ಎಂದು ಸರ್ಕಾರ ಮಹತ್ವದ ಸುತ್ತೋಲೆ ಮಾಹಿತಿ ಇದೆ.
ಆರ್ಥಿಕ ಇಲಾಖೆ ಮಂಜೂರು ಮಾಡದ ಹುದ್ದೆ ಹಾಗೂ ಇತರ ಸಂಸ್ಥೆಗಳ ಹುದ್ದೆಗಳಿಗೆ ಮಾನ್ಯತೆ ಇರುವುದಿಲ್ಲ :
ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977ರ ಅನ್ವಯ ಆರ್ಥಿಕ ಇಲಾಖೆಯಿಂದ ಪೂರ್ವಾನುಮತಿ ಪಡೆಯದ ಹೊರತು ಅನುಮೋದಿತ ಅಲ್ಲದ ಹುದ್ದೆಗಳ ಎದುರಾಗಿ ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ ಖಾಲಿ ಹುದ್ದೆ ಭರ್ತಿ ಮಾಡಲು ಅವಕಾಶ ಇರುವುದಿಲ್ಲ. ಅನುಮತಿ ಕಡ್ಡಾಯವಾಗಿರುತ್ತದೆ. ಆರ್ಥಿಕ ಇಲಾಖೆ (Economic department) ಹುದ್ದೆ ಮಂಜೂರು ಮಾಡದ ಹೊರತು ವಿಶ್ವವಿದ್ಯಾಲಗಳು, ಇತರ ಸ್ವಾಯತ್ತ ಸಂಸ್ಥೆಗಳ ಮಟ್ಟದಲ್ಲಿ ಸೃಜಿಸಲಾದ ಹುದ್ದೆಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೆ ಆರ್ಥಿಕ ಇಲಾಖೆಯು ಇಂತಹ ಹುದ್ದೆ ಭರ್ತಿಗೆ ಸಹಮತಿ ನೀಡುವುದಿಲ್ಲ ಹಾಗೂ ಅನುದಾನ ಒದಗಿಸಲು ಕ್ರಮವಹಿಸುವುದಿಲ್ಲ.
ಗ್ರೂಪ್ ಸಿ ಮತ್ತು ಡಿ ಹುದ್ದೆಗಳನ್ನು ಹೊರಗುತ್ತಿಗೆ ಮೂಲಕವೇ ಭರ್ತಿ ಮಾಡಲಾಗುತ್ತದೆ :
ಗ್ರೂಪ್- ಡಿ ಮತ್ತು ಸಮಾನಾಂತರ ಹುದ್ದೆ, ಗ್ರೂಪ್-ಸಿ ಹುದ್ದೆಗಳಾದ ಬೆರಳಚ್ಚುಗಾರರು, ದತ್ತಾಂಶ ನಮೂದು ಸಹಾಯಕರು (ಡಿಇಒ), ವಾಹನ ಚಾಲಕರು, ಶೀಘ್ರ ಲಿಪಿಗಾರರ ಹುದ್ದೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾತ್ರ ಭರ್ತಿ ಮಾಡುವುದು ಸರ್ಕಾರದ ನೀತಿಯಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಆದ್ದರಿಂದ ಇಂತಹ ಹುದ್ದೆಗೆ ನೇರ ನೇಮಕಾತಿ ಪ್ರಶ್ನೆ ಉದ್ಭವಿಸುವುದಿಲ್ಲ. ಈ ವೃಂದಗಳಲ್ಲಿ (ಬ್ಯಾಕ್‌ಲಾಗ್ ಹುದ್ದೆ ಸೇರಿದಂತೆ) ಯಾವುದೇ ಖಾಲಿ ಹುದ್ದೆಗಳನ್ನು ಹೊರ ಗುತ್ತಿಗೆಮೂಲಕವೇ ಭರ್ತಿ ಮಾಡಬೇಕೆಂದು ಹೇಳಲಾಗಿದೆ.
ಆರ್ಥಿಕ ಇಲಾಖೆಯಿಂದ ಪೂರ್ವಾನುಮತಿ ಪಡೆಯದೇ ಖಾಲಿ ಹುದ್ದೆ ಭರ್ತಿಗೆ ಅವಕಾಶ ಇರುವುದಿಲ್ಲ. ಆರ್ಥಿಕ ಇಲಾಖೆ ಮಂಜೂರು ಮಾಡದೇ ವಿವಿಗಳು, ಸ್ವಾಯತ್ತ ಸಂಸ್ಥೆಗಳಲ್ಲಿ ಸೃಜಿಸಲಾದ ಹುದ್ದೆಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.