ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಲು ಪ್ರಜಾ ಪ್ರತಿನಿಧಿಗಳು ಮನೆಯ ಬಾಗಿಲಿಗೆ ಬಂದು ಸಹಾಯ ಮಾಡುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೌದು, ಮನೆಯ ಯಜಮಾನಿಗಳಿಗೆ ಅರ್ಜಿಗಳನ್ನು ಸಲ್ಲಿಸಲು ಸಹಾಯ ಮಾಡಲೆಂದೇ ಈ ಪ್ರಜಾ ಪ್ರತಿನಿಧಿಗಳನ್ನು ನೇಮಕ ಮಾಡಲಾಗುತ್ತದೆ. ಈ ಪ್ರಜಾಪ್ರತಿನಿಧಿಗಳನ್ನು ಹೇಗೆ ನೇಮಕ ಮಾಡಿಕೊಳ್ಳಲಾಗುತ್ತದೆ?, ಅವರು ಹೇಗೆ ಸಹಾಯ ಮಾಡುತ್ತದೆ ಮಾಡುತ್ತಾರೆ ಮಾಡುತ್ತಾರೆ?, ಇವರಿಂದ ಮಹಿಳೆಯರಿಗೆ ಅರ್ಜಿಯನ್ನು ಸಲ್ಲಿಸಲು ಹೇಗೆ ಅನುಕೂಲವಾಗುತ್ತದೆ?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಮನೆಗೆ ಬರಲಿದ್ದಾರೆ ಪ್ರಜಾ ಪ್ರತಿನಿಧಿಗಳು!:
ಮನೆ ಯಜಮಾನಿಗೆ 2000 ರೂ ನೀಡುವ ಗೃಹ ಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಗೆ ದಿನಾಂಕ ನಿಗದಿಯಾಗಿದ್ದು, ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.
ಗೃಹ ಲಕ್ಷ್ಮೀ ಯೋಜನೆಗೆ ಜುಲೈ 19ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ರಾಷ್ಟ್ರೀಯ ನಾಯಕರನ್ನು ಕರೆಸಿ ಯೋಜನೆಗೆ ಚಾಲನೆ ನೀಡುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಕರ್ನಾಟಕ… pic.twitter.com/tvHUgkvJtW
— Laxmi Hebbalkar (@laxmi_hebbalkar) July 15, 2023
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರು ಗೃಹಲಕ್ಷ್ಮಿ ಯೋಜನೆಯ ಅರ್ಜಿದಾರರು ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್‌ಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಈ ಕೇಂದ್ರಗಳಲ್ಲಿ ಉಂಟಾಗಬಹುದಾಗ ಒತ್ತಡವನ್ನು ತಪ್ಪಿಸುವ ಸಲುವಾಗಿ Mobile App ಮೂಲಕವು ಸಹ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲು ಪ್ರಜಾ ಪ್ರತಿನಿಧಿ’ (Citizen Volunteer)ಗಳನ್ನು ನೇಮಕ ಮಾಡಲಾಗುತ್ತಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೆ ಇವರು ಸಹಾಯ ಮಾಡುತ್ತಾರೆ :
ಮಹಿಳೆಯರು ಅರ್ಜಿಯನ್ನು ಸಲ್ಲಿಸುವಾಗ ತಾಂತ್ರಿಕವಾಗಿ ಯಾವುದಾದರೂ ಅಡೆತಡೆಗಳು ಬಂದರೆ ಈ ಪ್ರಜಾಪ್ರತಿನಿಧಿಗಳು ಅವರಿಗೆ ಸಹಾಯವನ್ನು ಮಾಡುತ್ತಾರೆ. ಪ್ರಜಾ ಪ್ರತಿನಿಧಿಗಳು ಈ ಸೇವೆಯನ್ನು ಸ್ವಯಂ ಪ್ರೇರಣೆಯಿಂದ ಮಾಡುತ್ತಿದ್ದು ಅವರಿಗೆ ಯಾವುದೇ ಶುಲ್ಕ ಪಾವತಿಸುವಂತಿಲ್ಲ. ನಗರ ಪ್ರದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ವಾರ್ಡ್ ನಲ್ಲಿ 1000 ಜನಸಂಖ್ಯೆಗೆ ಇಬ್ಬರು ಪ್ರಜಾ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. (ಕನಿಷ್ಕ ಒಂದು ಮಹಿಳಾ “ಪ್ರಜಾ ಪ್ರತಿನಿಧಿ”ರವರು ಇರತಕ್ಕದ್ದು), ಪ್ರತಿ ಹೆಚ್ಚುವರಿ 500 ಜನ ಸಂಖ್ಯೆಗೆ, ಒಂದು ಹೆಚ್ಚುವರಿ “ಪ್ರಜಾ ಪ್ರತಿನಿಧಿ”ಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಜಾ ಪ್ರತಿನಿಧಿಗಳಿಗೆ ಇರಬೇಕಾದ ಅರ್ಹತೆಗಳು :
ಗೃಹಲಕ್ಷ್ಮಿ ಯೋಜನೆಗೆ ಮೊಬೈಲ್ ಅಪ್ಲಿಕೇಷನ್ ಮೂಲಕ ಅರ್ಜಿ ಸಲ್ಲಿಸುವ ಪ್ರಜಾ ಪ್ರತಿನಿಧಿಗಳು ಆಯಾ ತಾಲ್ಲೂಕಿನ ನಿವಾಸಿಗಳಾಗಿರಬೇಕು.
ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು.
ಗೃಹಲಕ್ಷ್ಮಿ ಯೋಜನೆಯಡಿ ಸ್ವಯಂ ಸೇವಕರಾಗಿ ಕೆಲಸ ನಿರ್ವಹಿಸಹಿಸಲು ಆಸಕ್ತಿಯುವುಳ್ಳವರಾಗಿರಬೇಕು.
“ಪ್ರಜಾ ಪ್ರತಿನಿಧಿ”ರವರನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಲಾಗುತ್ತದೆ:
ನೋಂದಣಿ ಪ್ರಕ್ರಿಯೆಯು 3 ಹಂತಗಳನ್ನು ಒಳಗೊಂಡಿರುತ್ತದೆ. ಅವುಗಳೆಂದರೆ:
ಹಂತ 1: “ಪ್ರಜಾ ಪ್ರತಿನಿಧಿ ರವರ ಆಯ್ಕೆ: ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ “ಪ್ರಜಾ ಪ್ರತಿನಿಧಿ” ಗಳನ್ನು ಆಯ್ಕೆ ಮಾಡುತ್ತಾರೆ.
ಹಂತ 2: ಪ್ರಜಾ ಪ್ರತಿನಿಧಿಗಳ ಡೇಟಾದ ಡಿಜಿಟಲೀಕರಣ: ಆಯ್ಕೆಯಾದ ಪ್ರಜಾ ಪ್ರತಿನಿಧಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಡಿಜಿಟೈಸ್ ಮಾಡಲಾಗುತ್ತದೆ.
ಹಂತ 3: ಬಳಕೆದಾರ ಗುರುತು (ID) ಮತ್ತು ಪಾಸ್‌ವರ್ಡ್‌ನ ದೃಢೀಕರಣ ಮತ್ತು ಸೃಜನೆ: ಪ್ರಜಾ ಪ್ರತಿನಿಧಿಗಳ ಆಯ್ಕೆಯ / ಆತನ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಸೇವಾ ಸಿಂಧು ಪೋರ್ಟಲ್‌ಗೆ ಲಾಗಿನ್ ಆಗಬೇಕು.
ಈ ಪ್ರಜಾಪ್ರತಿನಿಧಿಗಳನ್ನು ಒಂದು ತಿಂಗಳವರೆಗೆ ನೇಮಿಸಿಕೊಳ್ಳಲಾಗುತ್ತದೆ. ಹೀಗೆ ಎಲ್ಲಾ ಮಹಿಳೆಯರು ಅಥವಾ ಮನೆಯ ಯಜಮಾನಿಯು ಪ್ರಜಾಪ್ರತಿನಿಧಿಗಳಿಂದ ಸಹಾಯವನ್ನು ಪಡೆದುಕೊಂಡು, ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ 2000 ಗಳನ್ನು ಪ್ರತಿ ತಿಂಗಳು ನಿಮ್ಮದಾಗಿಸಿಕೊಳ್ಳುವ ಅವಕಾಶವನ್ನು ಸರ್ಕಾರವು ಕಲ್ಪಿಸಿಕೊಟ್ಟಿದೆ. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ, ಬಂಧುಗಳಿಗೂ ಹಾಗೂ ಮನೆಯ ಯಜಮಾನಿಯರಿಗೂ ಶೇರ್ ಮಾಡಿ, ಧನ್ಯವಾದಗಳು.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ವಿಧಾನ :
ಎರಡು ವಿಧಾನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಮೊದಲನೆಯದಾಗಿ ಆಧಾರ್ ಸಂಖ್ಯೆಯನ್ನು ಅನುಸರಿಸಿಕೊಂಡು ಹಾಗೂ ಎರಡನೆಯದಾಗಿ ಪಡಿತರ ಸಂಖ್ಯೆಯ ಆದರದ ಮೇಲೆ ಅರ್ಜಿಯನ್ನು ಸಲ್ಲಿಸಬಹುದು. ಇದಕ್ಕೆ ನೀವು ಸೇವಾ ಸಿಂಧುವಿನ ಅಕೌಂಟಿಗೆ ಮೊದಲನೆಯದಾಗಿ ಲಾಗಿನ್ ಆಗಬೇಕಾಗುತ್ತದೆ.
ರೇಷನ್ ಕಾರ್ಡ್ ಆಧಾರಿತ ಗೃಹಲಕ್ಷ್ಮಿ ಅರ್ಜಿಯನ್ನು ಸಲ್ಲಿಸುವ ವಿಧಾನ :
ಹಂತ 1: ಹಂತ 1: ಮೊದಲು ಸೇವಾ ಸಿಂಧು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
https://sevasindhuservices.karnataka.gov.in/
ಹಂತ 2: ನೀವು ಮೊದಲ ಸಾರಿ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸುತ್ತಿದ್ದರೆ ನಿಮ್ಮ ಅಕೌಂಟನ್ನು ಕ್ರಿಯೇಟ್ ಮಾಡಬೇಕಾಗುತ್ತದೆ. ಅದಕ್ಕಾಗಿ Register Here ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಹಾಕಿ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ.
ಹಂತ 2: ನೀವು ಮೊದಲ ಸಾರಿ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸುತ್ತಿದ್ದರೆ ನಿಮ್ಮ ಅಕೌಂಟನ್ನು ಕ್ರಿಯೇಟ್ ಮಾಡಬೇಕಾಗುತ್ತದೆ. ಅದಕ್ಕಾಗಿ Register Here ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಹಾಕಿ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ.
ಹಂತ 3: ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ ಅಥವಾ ಓಟಿಪಿ ಮೂಲಕ ಲಾಗಿನ್ ಆಗಿ. ನಂತರ ಸರ್ಚ್ ಆಪ್ಷನ್ ಅಲ್ಲಿ ಗೃಹಲಕ್ಷ್ಮಿ ಯೋಜನೆ(gruhalakshmi scheme) ಯ ಅರ್ಜಿ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿ
ಹಂತ 4: ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಆಧಾರ್ ಸಂಖ್ಯೆ, ಗುರುತಿನ ಚೀಟಿ ಮುಂತಾದ ನಿಮಗೆ ಅಗತ್ಯವಿರುವ ವಿವರಗಳನ್ನು ಇಲ್ಲಿ ನಮೂದಿಸಿ. ಕೊನೆಯದಾಗಿ, ಅಗತ್ಯ ದಾಖಲೆಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿ ಸಲ್ಲಿಸಬೇಕು.
ಹಂತ 3: ಲೋಗಿನ್ ಅದ ನಂತರ ನಿಮಗೆ ಸರ್ವಿಸ್ ಗಳು ದೊರೆಯುತ್ತದೆ ಅದರಲ್ಲಿ, ಗೃಹಲಕ್ಷ್ಮಿ ಯೋಜನೆ ಫ್ರೀ ಅಪ್ರೂಡ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 4: ನಂತರ ನೀವು ನಿಮ್ಮ ವಯಕ್ತಿಕ ವಿವರಗಳಾದ ಪಡಿತರ ಚೀಟಿ ಸಂಖ್ಯೆ ಹಾಗೂ ಇನ್ನಿತರೆಗಳನ್ನು ಭರ್ತಿ ಮಾಡಿ
ಹಂತ 5: ನಂತರ ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸಿ. ನಂತರ ಸ್ವಯಂ ಘೋಷಣೆಯನ್ನು ಮಾಡಿ, I agree ಎಂಬ ಚೆಕ್ ಬಾಕ್ಸ್ ಮೇಲೆ ಚೆಕ್ ಮಾಡಿ.
ಹಂತ 6: ನಂತರ ಆಧಾರ್ ದೃಢೀಕರಣವನ್ನು ಮಾಡಿಕೊಂಡು ಓಟಿಪಿಯನ್ನು ನೋಂದಾಯಿಸಬೇಕು. ನಂತರ ಸ್ವೀಕೃತಿಯನ್ನು ನೀಡಲಾಗುತ್ತದೆ. ಹೀಗೆ ರೇಷನ್ ಕಾರ್ಡನ್ನು ಬಳಸಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.
ಆಧಾರ್ ಕಾರ್ಡ್ ಆಧಾರಿತ ಗೃಹಲಕ್ಷ್ಮಿ ಅರ್ಜಿಯನ್ನು ಸಲ್ಲಿಸುವ ವಿಧಾನ :
ಹಂತ 1: ಸೇವಾ ಸಿಂಧುವಿನ ಅಕೌಂಟಿಗೆ ಲಾಗಿನ್ ಆದ ನಂತರ ಆಧಾರ್ ಆಧಾರಿತ ದೃಢೀಕರಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಎಂಬ ಆಯ್ಕೆಯನ್ನು ಮಾಡಿ.
ಹಂತ 2: ನಂತರ ಓಟಿಪಿಯನ್ನು ಹಾಕಿ ಕ್ರೂಢೀಕರಣವನ್ನು ಮಾಡಿಕೊಳ್ಳಬೇಕು
ಹಂತ 3 : ನಂತರ ಮನೆಯ ಯಜಮಾನಿಯ ವಿವರಗಳನ್ನು ಹಾಕಬೇಕು, ಹಾಗೆಯೇ ನಿಮ್ಮ ಭಾವಚಿತ್ರವನ್ನು ಕೂಡ ಕೇಳಲಾಗುತ್ತದೆ.
ಹಂತ 4: ಮುಂದುವರೆದು ಕುಟುಂಬ ಸದಸ್ಯರ ವಿವರಗಳನ್ನು ನೋಂದಣಿ ಮಾಡಬೇಕು.
ಹಂತ 5: ನಂತರ ಘೋಷಣೆಯನ್ನು ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ಹೀಗೆ ಎರಡು ವಿಧಾನಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಡೆಮೋ ಲಿಂಕನ್ನು ಬಿಡುಗಡೆ ಮಾಡಲಾಗಿದೆ. ಈ ಟೆಸ್ಟಿಂಗ್ ವಿಧಾನಗಳು ಯಶಸ್ವಿಯಾದ ನಂತರ ಅಧಿಕೃತವಾಗಿ ಸರ್ಕಾರದಿಂದ ಇನ್ನೇನು ಕೆಲವೇ ದಿನಗಳಲ್ಲಿ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಇಂತಹ ಖುಷಿಯ ಸಮಾಚಾರವನ್ನು, ಹಾಗೆಯೆ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಬಂಧುಗಳಿಗೆ ಹಾಗೂ ಮಹಿಳೆಯರಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ