ಕರ್ನಾಟಕ ರಾಜ್ಯ ಸರ್ಕಾರವು ಪರಿಚಯಿಸಿದ ಗೃಹ ಲಕ್ಷ್ಮಿ ಯೋಜನೆ(Gruhalakshmi scheme)ಯು ಅಗತ್ಯವಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ಕುಟುಂಬದ ಮುಖ್ಯಸ್ಥ ಮಹಿಳೆಗೆ ಮಾಸಿಕ 2000 ರೂ. ಭತ್ಯೆ ಪಡೆದುಕೊಳ್ಳುವ ಅವಕಾಶವನ್ನು ಈ ಯೋಜನೆ ನೀಡುತ್ತಾ ಬಂದಿದೆ. ಗೃಹ ಲಕ್ಷ್ಮಿ ಯೋಜನೆ ಜಾರಿಯಾಗಿರುವುದರಿಂದ ರಾಜ್ಯವು ಸಂತಸಗೊಂಡಿರುವ ಈ ಸಮಯದಲ್ಲಿ ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿಯ ಹಣ ಬಾರದಿರುವುದು ಕೆಲ ಮಹಿಳೆಯರಲ್ಲಿ ಆತಂಕವನ್ನು ಉಂಟು ಮಾಡಿದೆ. ಗೃಹಲಕ್ಷ್ಮಿ ಯೋಜನೆಯ ಹೆಚ್ಚಿನ ಫಲಾನುಭವಿಗಳು ಮಾಸಿಕ ಕರ್ನಾಟಕ ಸರ್ಕಾರದಿಂದ ತಮ್ಮ ಪಾವತಿಗಳನ್ನು ಸ್ವೀಕರಿಸಿದರೆ, ಕೆಲವರು ಗೃಹಲಕ್ಷ್ಮಿಯ ಪಾವತಿಗಳನ್ನು ಸ್ವೀಕರಿಸಿಲ್ಲ ಎಂದು ಹೇಳುತ್ತಿದ್ದಾರೆ. ಕೆಲ ಮಹಿಳೆಯರು ಹಬ್ಬದ ಸಮಯದಲ್ಲಿ ಮನೆಯ ಖರ್ಚುಗಳಿಗಾಗಿ ಈ ಹಣವನ್ನು ನಂಬಿ ಕೂತಿದಾರೆ ಆದರೆ ಎಲ್ಲರ ಖಾತೆಗೂ ಇನ್ನೂ ಹಣ ಜಮಾ ಆಗಿಲ್ಲ, ಆದರೆ ಇದರ ಬಗ್ಗೆ ಆತಂಕ ಬೇಡ ಎಂದು ಸರ್ಕಾರವು ತಿಳಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇದರ ಕುರಿತು ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ನೀತಿ ಸಂಹಿತೆ ಜಾರಿಯಲ್ಲಿದ್ದಿದ್ದರಿಂದ ಹಾಗೂ ಕೆಲವು ತಾಂತ್ರಿಕ ದೋಷದಿಂದಾಗಿ ಕಳೆದ ಎರಡು ತಿಂಗಳ ಹಣವನ್ನು ಜಮಾ ಮಾಡಲು ಆಗಿರಲಿಲ್ಲ, ಆದರೆ ಈಗ ಎಲ್ಲಾ ದೋಷಗಳು ಮುಕ್ತವಾಗಿದ್ದು ಎರಡು ತಿಂಗಳ ಹಣ ಅಂದರೆ ಒಟ್ಟಿಗೆ ನಾಲ್ಕು 4000ರೂ.ಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈಗಾಗಲೇ ಕೆಲವರ ಖಾತೆಗೆ ಹಣ ಜಮೆ ಆಗಿದೆ. ಹಂತ ಹಂತವಾಗಿ ಎಲ್ಲರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗುತ್ತದೆ ಎಂದು ತಿಳಿಸಿದ್ದಾರೆ.
ಈಗಾಗಲೇ 26.65 ಲಕ್ಷ ರೂ. ಬಿಡುಗಡೆ ಆಗಿದೆ ಎಂದು ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಪ್ರಸ್ತುತ ಬೀದರ್, ಬೆಳಗಾವಿ, ಕಲಬುರಗಿ, ಬಳ್ಳಾರಿ, ವಿಜಯಪುರ, ಗದಗ, ಹಾವೇರಿ, ಬಾಗಲಕೋಟೆ, ಕೊಪ್ಪಳ, ಯಾದಗಿರಿ, ಚಿತ್ರದುರ್ಗ, ಬೆಂಗಳೂರು & ಕೋಲಾರ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗಿದೆ. ಯಾವ ಮಹಿಳೆಯರು ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲ, ಹಂತ ಹಂತವಾಗಿ ಎಲ್ಲರ ಕಾವ್ಯಗಳಿಗೂ ಹಣ ಜಮಾವಾಗುತ್ತದೆ ಎಂದು ಸರ್ಕಾರವು ಮಾಹಿತಿಯನ್ನು ನೀಡಿದೆ. ಹಾಗಾಗಿ ಶೀಘ್ರದಲ್ಲೇ ಎಲ್ಲರ ಖಾತೆಗಳಿಗೂ ಹಣ ಲಭಿಸುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.