ಎಲ್ಲರಿಗೂ ನಮಸ್ಕಾರ ಇವತ್ತಿನ ವರದಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು, 63 ಲಕ್ಷ ಮಹಿಳೆಯರಿಗೆ 2000 ರೂಗಳು ಜಮಾ ಆಗಿದೆ. ಆದರೆ ಇನ್ನೂ ಕೆಲ ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ ಎಂಬ ಗೊಂದಲದಲ್ಲಿದ್ದಾರೆ. ಯಾವ ಕಾರಣಕ್ಕಾಗಿ ಹಣ ಬಂದಿಲ್ಲ ಎನ್ನುವ ಗೊಂದಲದಲ್ಲಿರುವ ಇವರಿಗೆ ಸುದ್ದಿಗೋಷ್ಠಿಯ ಮುಖಾಂತರ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ. ಮನೆಯೊಡತಿಗೆ ಪ್ರತಿ ತಿಂಗಳು ಎರಡು ಸಾವಿರ ಹಣ ಘೋಷಿಸಿದಂತೆ ಈಗಾಗಲೇ ಕಳೆದೊಂದು ವಾರದಿಂದ ಹಣ ಅವರ ಬ್ಯಾಂಕ್ ಖಾತೆಗೆ ಡಿಬಿಟಿ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಇದರ ಪ್ರಮಾಣ ಶೇ.45ರಷ್ಟು ಇದ್ದರೆ ರಾಜಧಾನಿ ಬೆಂಗಳೂರಿನಲ್ಲಿಯೇ ಇದರ ಶೇಕಡಾ 20ರಷ್ಟು ತಲುಪಿಲ್ಲ. ಬೆಂಗಳೂರು ನಗರದಲ್ಲಿ 5,27,768 ಅರ್ಜಿಯಲ್ಲಿ 69, 642 ಮನೆಯೊಡತಿಗೆ ಎರಡು ಸಾವಿರ ಹಣ ಸಂದಾಯವಾಗಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಇದುವರೆಗೂ ಹಣ ತಲುಪದೇ ಇರುವ ಮನೆ ಯಜಮಾನಿಯರು ಹಣ ಬರುತ್ತದೆಯೋ ಅಥವಾ ಇಲ್ಲವೋ ಎನ್ನುವ ಗೊಂದಲದಲ್ಲಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಯಾರ ಖಾತೆಗೆ ಇನ್ನು ಹಣ ಬಂದಿಲ್ವೋ ಅಂತವರ ಖಾತೆಗೆ ಮೊದಲ ಕಂತಿನ ಹಣದ ಜೊತೆಗೆ ಎರಡನೇ ಕಂತಿನ ಹಣವು ಕೂಡ ಅತಿ ಶೀಘ್ರದಲ್ಲಿಯೇ ಜಮೆ ಮಾಡಲಾಗುತ್ತೆ ಅನ್ನೋ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.
ಮೊದಲ ಕಂತಿನ ಹಣ ಪಡೆದವರು 2ನೇ ಕಂತಿನ ಹಣ ಯಾವಾಗ ಬರಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ.ನಿಮಗೆ ಈಗಾಗಲೇ ಒಂದನೇ ಕಂತಿನ ಹಣ ಬಂದು ತಲುಪಿದ್ದರೆ, ಮಿಸ್ ಮಾಡದೆ ಈ ವರದಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ. ಹಣ ಬರದೇ ಇದ್ದವರಿಗೆ ತುಂಬಾ ಅನುಕೂಲವಾಗುತ್ತದೆ.
2ನೇ ಕಂತಿನ ಹಣ ಯಾವಾಗ ಬರುತ್ತೆ?
ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಮತ್ತು ಹಣ ವರ್ಗಾವಣೆ ಮಾಡುವುದಕ್ಕೆ ಒಂದೇ ವೆಬ್ಸೈಟ್ ಇರುವುದರಿಂದ ಆಗಸ್ಟ್ ತಿಂಗಳ ಪ್ರಕ್ರಿಯೆಯಲ್ಲಿ ತಡವಾಗಿದೆ ಆದರೆ ಈ ಸೆಪ್ಟೆಂಬರ್ ತಿಂಗಳಿನಿಂದ ಹೀಗೆ ಆಗುವುದಿಲ್ಲ ಪ್ರತಿ ತಿಂಗಳು 15ನೇ ತಾರೀಖಿನ ಒಳಗಾಗಿ ಎಲ್ಲಾ ಮನೆ ಒಡತಿಯರ ಖಾತೆಗೆ ರೂ.2000 ಜಮಾ ಮಾಡಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಇದೇ ತಿಂಗಳ 15 ಅಥವಾ 16 ನೇ ತಾರೀಖಿನ ಒಳಗಾಗಿ ಮೊದಲ ಕಂತಿನ ಜೊತೆಗೆ ಎರಡನೇ ಕಂತಿನ ಹಣವನ್ನು ಸೇರಿಸಿ ಜಮಾ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಆಗಸ್ಟ್ ತಿಂಗಳ ಹಣ ಬರದೆ ಇದ್ದವರು ಈ ಸೆಪ್ಟೆಂಬರ್ ತಿಂಗಳಿನಲ್ಲಿ ಒಂದೇ ಬಾರಿಗೆ ರೂ.4,000 ಪಡೆಯುತ್ತಾರೆ.
ಗೃಹಲಕ್ಷ್ಮಿ DBT ನೇರ ನಗದು ವರ್ಗಾವಣೆ ಸ್ಟೇಟಸ್ ಹೀಗೆ ಚೆಕ್ ಮಾಡಿ:
DBT-ಅನ್ನಭಾಗ್ಯ,ಗೃಹಲಕ್ಷ್ಮಿ ಹಾಗೂ ಸರ್ಕಾರದ ಯಾವುದೇ ಯೋಜನೆಯ ನೇರ ನಗದು ವರ್ಗಾವಣೆ ಸ್ಥಿತಿಯನ್ನು ನಾವು ನೇರವಾಗಿ ನಮ್ಮ ಮೊಬೈಲ್ ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ಮಾಡಬಹುದು
ಹಂತ 1: ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಉಚಿತವಾಗಿ ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ
https://play.google.com/store/apps/details?id=com.dbtkarnataka
ಹಂತ 2: ಫಲಾನುಭವಿಯ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ
ಹಂತ 3: ಈಗ ನಿಮ್ಮ ಆಧಾರ್ ನಂಬರ್ ಅನ್ನು ಹಾಕಿ Get OTP ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಮೊಬೈಲ್ ಗೆ ಬರುವ ಓಟಿಪಿ ಹಾಕಿದ ನಂತರ verify OTP ಮೇಲೆ ಕ್ಲಿಕ್ ಮಾಡಿ ನಂತರ ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಡೀಟೇಲ್ಸ್ ಕಾಣಿಸುತ್ತದೆ
ಹಂತ 4: ನಂತರ ಇಲ್ಲಿ ನೀವು ಪಾಸ್ವರ್ಡ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ
ಹಂತ 4: ಈಗ ಹೋಂ ಪೇಜ್ ನಲ್ಲಿ ನೀವು Payment status ಮೇಲೆ ಕ್ಲಿಕ್ ಮಾಡಿ. ಅನ್ನಭಾಗ್ಯದ ಡಿಬಿಟಿ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು. ಮತ್ತು ಪಕ್ಕದಲ್ಲಿರುವ Seeding status of Adhaar in bank account ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಆಧಾರ್ ಸೀಡಿಂಗ್ ಸ್ಟೇಟಸ್ ಅನ್ನು ಮತ್ತು ಯಾವ ಬ್ಯಾಂಕಿಗೆ ಸೀಡಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು
ಹಂತ 5: ಇಲ್ಲಿ ನಿಮಗೆ ಸರ್ಕಾರದಿಂದ ಇದುವರೆಗೂ ಬಂದಿರುವ ಯಾವುದೇ ನೇರ ನಗದು ವರ್ಗಾವಣೆಯ ಸ್ಥಿತಿ ಕಾಣಿಸಿಕೊಳ್ಳುತ್ತದೆ
ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಲು ಕೆಳಗಿನ ವಿಷಯಗಳನ್ನು ಕಡ್ಡಾಯವಾಗಿ ಮಾಡಬೇಕು:
ಮೊದಲನೇಯದಾಗಿ, ನಿಮ್ಮ ಪಡೆತರ ಚೀಟಿ ( ರೇಷನ್ ಕಾರ್ಡ್) ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿದೆಯೇ ಅನ್ನುವುದನ್ನು ಪರಿಶೀಲಿಸಿ, ಇಲ್ಲವಾದಲ್ಲಿ ಶೀಘ್ರದಲ್ಲೆ ನಿಮ್ಮ ರೇಷನ್ ಕಾರ್ಡ್ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸಿ.
ಎರಡೇನೇಯದಾಗಿ, ರೇಷನ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಸೀಡಿಂಗ್ ಆಗಿಬೇಕು, ಅಂದರೆ NPC Mapping ಆಗಿರ್ಬೇಕು ನಿಮ್ಮ ಬ್ಯಾಂಕ್ ಅಕೌಂಟ್ ಸೀಡಿಂಗ್ ಮಾಡಬೇಕಾಗುತ್ತದೆ. ಏಕೆಂದರೆ ಸರ್ಕಾರವು ಡಿಬಿಟಿ ಮುಖಾಂತರ ಹಣವನ್ನು ಜಮಾಯಿಸುತ್ತದೆ, ಹಾಗಾಗಿ ಪಡೆತದಾರರ ಬ್ಯಾಂಕ್ ಅಕೌಂಟ್ ಮತ್ತು ಆಧಾರ್ ಕಾರ್ಡ್ ಸೀಡಿಂಗ್ ಮಾಡಬೇಕಾಗುತ್ತದೆ ಮತ್ತು NPC ಸರ್ವರ್ ಗೆ Mapping ಆಗಬೇಕಾಗುತ್ತದೆ.
ಅನ್ನಭಾಗ್ಯ ಯೋಜನೆಯ ಹಣ ಪಡೆಯಲು 3 ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು?
- ಪಡಿತರ ಚೀಟಿಯಲ್ಲಿ ಇರುವ ಮುಕ್ಯಸ್ತನ ಹೆಸರಲ್ಲಿ ಒಂದು ಅಕೌಂಟ್ ಇರಬೇಕು
- ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ನ್ನೂ ಲಿಂಕ್ ಮಾಡಿರಬೇಕು
- ನಿಮ್ಮ ಅಕೌಂಟ್ ಗೆ ಆಧಾರ್ ಕಾರ್ಡ್ ನ್ನೂ ಲಿಂಕ್ ಮಾಡಿರಬೇಕು ( NPCI map ಆಗಿರಬೇಕು)
ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿದಿಯ ಎಂದು ತಿಳಿಯುವ ಲಿಂಕ್ 👇👇👇👇
ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ 👇👇👇👇
ಗೃಹಲಕ್ಷ್ಮಿ ಯೋಜನೆಯ ಹಣದ ಜಮೆ ಬಗ್ಗೆ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ