ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಹರ ಪಟ್ಟಿ ಮತ್ತು ತಿರಸ್ಕೃತ ಪಟ್ಟಿಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಹೌದು ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ರೇಷನ್ ಕಾರ್ಡ್ ಮೇಲೆ ಅವಲಂಬಿತವಾಗಿರುತ್ತದೆ. ಈಗಾಗಲೇ 1.30 ಕೋಟಿ ಜನರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಗೃಹಲಕ್ಷ್ಮಿ ಯೋಜನೆಯ ಹಣ ಈಗಾಗಲೇ ಪಡೆಯುತ್ತಿದ್ದಾರೆ. ಆದರೆ ಇನ್ನೂ ಕೆಲವು ಜನರಿಗೆ ಈ ಹಣ ಬಂದಿರುವುದಿಲ್ಲ. ಹಾಗಾಗಿ ಈ ವರದಿಯಲ್ಲಿ ಅರ್ಹ ಮತ್ತು ಅನರ್ಹರ ಲಿಸ್ಟ್ ಕೊಡಲಾಗಿದೆ ದಯವಿಟ್ಟು ಚೆಕ್ ಮಾಡಿಕೊಳ್ಳಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಈ ಕೆಳಗಿನವರಿಗೆ ಹಣ ಬರೋದಿಲ್ಲ :
ಇನ್ನೇನು ಎಲ್ಲ ಮಹಿಳೆಯರಿಗೂ ಹಣ ಬರುತ್ತದೆ ಎಂಬ ಖುಷಿಯ ಸಮಯದಲ್ಲಿ ಸರ್ಕಾರವು ಇನ್ನೊಂದು ನಿಯಮವನ್ನು ಜಾರಿಗೆ ತಂದಿದೆ. ಅದೇನೆಂದರೆ, ಬಿಪಿಎಲ್ ಕುಟುಂಬದ ಯಜಮಾನಿಗೆ ಮಾತ್ರ ರೂ.2000 ಅಂತ ಹೇಳಲಾಗಿದ್ದು. 5 ಎಕರೆ ಮೀರಿದ ಒಣ ಭೂಮಿ ಹೊಂದಿರುವ ಜನರಿಗೆ 2000 ಬೇಡ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ನಾಲ್ಕು ಚಕ್ರಗಳ ವಾಹನ ಹೊಂದಿದ ಕುಟುಂಬದವರಿಗೆ ಹಣವನ್ನು ನೀಡಲಾಗದು ಎನ್ನುತ್ತಿದ್ದಾರೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಯಾರಿಗೂ ಬೇಡ ಎಂದು ಹೇಳಲಾಗಿದೆ.
ಸರ್ಕಾರಿ ಉದ್ಯೋಗ ಮತ್ತು ಪೆನ್ಷನ್ ಪಡೆಯುವವರೆಗೂ ಬೇಡ ಎಂದು ಹೇಳಲಾಗಿದೆ.
ಸರ್ಕಾರ ಇನ್ಕಮ್ ಟ್ಯಾಕ್ಸ್ ಪಾವತಿದಾರರ ಕುಟುಂಬಕ್ಕೂ ಹಣ ದೊರೆಯುವುದಿಲ್ಲ. ಜಿಎಸ್ಟಿ ರಿಟರ್ನ್ ಪಾವತಿಸುವ ಮಹಿಳೆಯರಿಗೂ ನೀಡಬಾರದು. ಪ್ರೊಫೆಷನಲ್ ಟ್ಯಾಕ್ಸ್ ಪಾವತಿದಾರರಿಗೂ ಕೊಡಬಾರದು ಎಂದು ಸರ್ಕಾರ ತಿಳಿಸಿದೆ ಎಂದು ಸುದ್ದಿಗಳು ಹೇಳುತ್ತಿವೆ. ಅದೇನೆ ಇದ್ದರೂ ಒಂದು ಒಂದು ಬಾರಿ ಹಣ ಜಮಾ ಆದ ನಂತರ ಯಾರ್ಯಾರಿಗೆ ಬಂದಿದೆ ಎಂದು ತಿಳಿಯಿತ್ತದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಅನರ್ಹರ ಪಟ್ಟಿ ಚೆಕ್ ಮಾಡುವುದು ಹೇಗೆ? Gruhalakshmi Cancelled List
ಹಂತ 1: ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ತೆರಳಬೇಕು ಅದಕ್ಕಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ :
https://ahara.kar.nic.in/Home/EServices
ಹಂತ 2: ನಂತರ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.
ನಂತರ e-Ration Card ಎಂಬ ಆಯ್ಕೆಯಲ್ಲಿ Show cancelled/Suspended ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 3: ನಂತರ ನಿಮಗೆ ಲಿಸ್ಟ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ, ತಿಂಗಳು ಹಾಗೂ ತಾಲೂಕನ್ನು ಆಯ್ಕೆ ಮಾಡಿಕೊಳ್ಳಿ
ಹಂತ 4: ನಂತರ ನೀವು ಅನರ್ಹರ ಪಟ್ಟಿಯನ್ನು ನೋಡಬಹುದು, ಅದರಲ್ಲಿ ರದ್ದು ಆಗಿರುವುದಕ್ಕೆ ಕೆಲವೊಮ್ಮೆ ಕಾರಣವನ್ನು ಕೂಡ ನೀಡಲಾಗಿರುತ್ತದೆ.
ಗೃಹಲಕ್ಷ್ಮಿಯ ಅರ್ಹ ಯಜಮಾನಿಯರ ಪಟ್ಟಿ ಬಿಡುಗಡೆ.
ಗೃಹಲಕ್ಷ್ಮಿ ಹಣ ಪಡೆದುಕೊಳ್ಳಲು ಅಗಸ್ಟ ತಿಂಗಳ ಮನೆ ಯಜಮಾನಿಯರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಿಮ್ಮ ಹೆಸರಿಗೆ ಚೆಕ್ ಮಾಡಿಕೊಳ್ಳಿ. ಕೆಳಗೆ ಕೊಟ್ಟಿರುವ ನೇರವಾದ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://ahara.kar.nic.in/Home/EServices
ನಿಮ್ಮ ಮೊಬೈಲ್ ಫೋನ ಮುಖಪುಟದ ಎಡಭಾಗದಲ್ಲಿ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ ನಂತರ ಕೆಳಗಡೆ e-Ration card ಸೆಲೆಕ್ಟ್ ಮಾಡಿಕೊಂಡು ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ
ಇಲ್ಲಿ ತೋರಿಸುತ್ತಿರುವ ಬಾಕ್ಸ್ ನಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತಿ ಮತ್ತು ಗ್ರಾಮವನ್ನು ಸೆಲೆಕ್ಟ್ ಮಾಡಿ Go ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಗ್ರಾಮದಲ್ಲಿರುವ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರ ಯಜಮಾನಿಯರ ಕಂಪ್ಲೀಟ್ ಡೀಟೇಲ್ಸ್ ಕಾಣಿಸುತ್ತದೆ
ಈ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ :
ಹಲವಾರು ಜನರಿಗೆ ಈಗಾಗಲೇ ಅನ್ನ ಭಾಗ್ಯ ಯೋಜನೆಯ ಹಣವು ಬಂದಿದೆ. ಬಿಪಿಎಲ್ ಕಾರ್ಡ್ ಹೊಂದಿದ ಮನೆಯ ಯಜಮಾನಿಯಾ ಖಾತೆಗೆ ಯೋಜನೆಯ ಹಣ ಬಂದಿರುತ್ತದೆ ಆದ್ದರಿಂದ ಅದೇ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ಬರುತ್ತದೆ. ಗೃಹಲಕ್ಷ್ಮಿ ಯೋಜನೆಯ ಅಧಿಕೃತ ಪ್ರಕಟಣೆಯ ಪ್ರಕಾರ ರೇಷನ್ ಕಾರ್ಡಿನಲ್ಲಿ ಇರುವ ಮನೆಯ ಯಜಮಾನಿಯ ಖಾತೆಗೆ ಹಣ ಜಮಾ ಆಗುತ್ತದೆ. ನಿಮ್ಮ ಆಧಾರ್ ಕಾರ್ಡಿಗೆ ಮ್ಯಾಪಿಂಗ್ ಆಗಿರುವ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ. ಒಂದು ವೇಳೆ ನೀವೇನಾದರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಾಗ ಬೇರೆ ಖಾತೆಯ ಅಕೌಂಟ್ ನಂಬರ್ ಅನ್ನು ಕೊಟ್ಟಿದ್ದರೆ ಆ ಬ್ಯಾಂಕ್ ಖಾತೆಗೆ ಹಣ ಜಮಾವಾಗಲಿದೆ. ನಿಮಗೇನಾದರೂ ಇನ್ನೂ ಇದರ ಬಗ್ಗೆ ಸಂಶಯವಿದ್ದಲ್ಲಿ, ಯಾವ ಖಾತೆಗೆ ಹಣ ಜಮಾ ಆಗುತ್ತದೆ ಎಂಬುವುದನ್ನು ನೀವೇ ಮೊಬೈಲಿನಲ್ಲಿ ನೋಡಿಕೊಳ್ಳಬಹುದು. ಅದಕ್ಕಾಗಿ ಕೆಳಗಿನ ಹಂತಗಳನ್ನು ಅನುಸರಿಸಿ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Sir City awru hnge check madbeku
Good work in link