Gruhalakshmi – ಈ ಬ್ಯಾಂಕ್ ನಲ್ಲಿ ಹೊಸ ಖಾತೆ ತೆರೆದು ಮೇಲೆ ಬಂತು ಗೃಹಲಕ್ಷ್ಮೀ 2000/- ಹಣ – ಇಲ್ಲಿದೆ ವಿವರ

gruhalakshmi 6

ರಾಜ್ಯ ಸರ್ಕಾರದ ( State Government ) ಗೃಹಲಕ್ಷ್ಮೀ ( Gruhalakshmi scheme ) ಯೋಜನೆಯು ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ. ಹಾಗೆಯೇ ಇದು ವಿಶೇಷವಾಗಿ ಮಹಿಳೆಯರಿಗಾಗಿ ಜಾರಿಗೊಳಿಸಿದ ಯೋಜನೆ ಆಗಿದ್ದು, ಮನೆಯ ಯಜಮಾನಿಗೆ ಈ ಹಣ ದೊರೆಯುತ್ತದೆ. ಈಗಾಗಲೇ ಹಲವಾರು ಜನರು ಇದನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಮೊದಲಿನ ಕಂತಿನ ಹಣ ಅವರ ಬ್ಯಾಂಕ್ ( Bank account ) ಖಾತೆಗೆ ಬಂದಿದ್ದು, ಇನ್ನು ಎರಡನೆಯ ಕಂತಿನ ಹಣ ಕೆಲವೊಬ್ಬರಿಗೆ ಮಾತ್ರ ಬಂದಿದೆ. ಇನ್ನು ಕೆಲವೊಬ್ಬರಿಗೆ ಬರಲು ಬಾಕಿ ಇದೆ. ಒಂದೂ ಕಂತಿನ ಹಣ ಬರದೇ ಇರುವವರು ಈ ರೀತಿ ಮಾಡಿದರೆ ಹಣ ಖಂಡಿತಾ ಮಹಿಳೆಯರ ಖಾತೆಗೆ ಬರುತ್ತದೆ. ಹಾಗಾದರೆ ಏನು ಮಾಡಬೇಕು?, ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ,  ಈ ವರದಿಯನ್ನು ಕೊನೆವರೆಗೂ ಓದಿ.

ಗೃಹಲಕ್ಷ್ಮಿ ಹಣ ಬರದಿದ್ದರೆ ಹೀಗೆ ಮಾಡಿ, ಖಂಡಿತ ಬರುತ್ತದೆ :

post office

ಗೃಹಲಕ್ಷ್ಮಿ ಹಣ ಬರದೇ ಇರುವವರ ಬ್ಯಾಂಕ್ ಖಾತೆ ಸಮಸ್ಯೆ ಇರಬಹುದು ಹಾಗೆಯೇ ಇನ್ನಿತರ ಸಮಸ್ಯೆ ಇರಬಹುದು. ಮತ್ತು ಈ ಕಂತಿನ ಹಣ ಬರಲು ಅಂಚೆ ಕಚೇರಿ ( Post Office ) ಯಲ್ಲಿ ಖಾತೆ ತೆರೆಯಲು ತಿಳಿಸಿದ್ದಾರೆ. ಅದು ಯಾಕೆ ಮತ್ತು ಹೇಗೆ ಎಂದು ನೋಡೋಣ ಬನ್ನಿ.

ಈ ಯೋಜನೆಯ ಅಡಿಯಲ್ಲಿ ರಾಜ್ಯದ ಕುಟುಂಬದ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಸಹಾಯ ಧನ ನೀಡಲಾಗುತ್ತಿದ್ದು ಈ ಯೋಜನೆ ಅನುಷ್ಠಾನಗೊಂಡು ಮೂರು ತಿಂಗಳೇ ಕಳೆಯುತ್ತಿದ್ದರೂ ಕೆಲವು ಮಹಿಳೆಯರ ಬ್ಯಾಂಕ್ ಖಾತೆಗೆ ( Bank Account ) ಹಣ ಜಮಾ ಆಗಿಲ್ಲ. ಇಂತಹ ಮಹಿಳೆಯರು ಅಂಚೆ ಕಚೇರಿಯಲ್ಲಿ ಖಾತೆ ತೆರೆದರೆ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ – ಬರೋಬ್ಬರಿ 336 ದಿನದ ಹೊಸ ಜಿಯೋ ರಿಚಾರ್ಜ್ ಪ್ಲಾನ್, ಅನಿಯಮಿತ ಕರೆ, ಡೇಟಾ & SMS ಸೇವಗಳು

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿರುವ ಪ್ರಕಾರ , ರಾಜ್ಯದ 1.8 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 2,500 ಕೋಟಿ ರೂ ದೊರೆಯುತ್ತಿದೆ. ಹಾಗೆಯೇ ಇನ್ನೂ ಕೆಲವರಿಗೆ ಹಣ ಬರಲು ಬಾಕಿ ಇದೆ ಎಂದಿದ್ದಾರೆ. ಅನೇಕ ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯ 2000 ರೂ ಹಣ ಜಮಾ ಆಗಿಲ್ಲ. ಬ್ಯಾಂಕ್ ಖಾತೆಗೆ ಇ-ಕೈವೈಸಿ ಅಪ್ ಡೇಟ್ ಮಾಡದೇ ಇರುವುದು ಹಾಗೂ ಅವರ ಸರಿಯಾದ ಹೆಸರು ಸಿಗದೇ ಇರುವುದಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಅನೇಕ ಮಹಿಳೆಯರ ಬ್ಯಾಂಕ್ ಖಾತೆಗೆ 2000 ರೂ ಹಣ ಜಮಾ ಆಗಿಲ್ಲ.

ಗೃಹಲಕ್ಷ್ಮೀ ಯೋಜನೆಯ ಹಣಕ್ಕಾಗಿ ಹಲವಾರು ಮಹಿಳೆಯರು ತಮ್ಮ ಬ್ಯಾಂಕ್ ಖಾತೆ ನೋಂದಾಯಿಸಿಕೊಂಡಿದ್ದಾರೆ. ಹಾಗೆಯೇ ಸ್ವಲ್ಪ ಜನ ಮಹಿಳೆಯರ ಬ್ಯಾಂಕ್ ಖಾತೆ ಸರಿ ಇದ್ದು ಅದಕ್ಕೆ ಹಣ ವರ್ಗಾವಣೆ ಆಗಿದೆ ಎಂದು ತಿಳಿದು ಬಂದಿದೆ.

gruhalaxmi e1698976619220

ಇನ್ನು ಬ್ಯಾಂಕ್ ಖಾತೆ ಗೆ ಹಣ ಬಾರದೇ ಇದ್ದರೇ ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವುದು ಉತ್ತಮ ಎಂದು ತಿಳಿಸಿದ್ದಾರೆ. ಅವರಿಗೆ ಸಮಸ್ಯೆ ಆಗದಂತೆ ಅಂಚೆ ಇಲಾಖೆಯ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಹಾಗಾಗಿ ಯಾರಿಗೆಲ್ಲ ಇನ್ನೂ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅವರು ಅಂಚೆ ಕಚೇರಿಯಲ್ಲಿ ಖಾತೆ ತೆರೆದು, ಆ ಖಾತೆಯ ಸಂಖ್ಯೆಯನ್ನು ಯೋಜನೆಗೆ ಲಿಂಕ್ ಮಾಡಿದ್ರೇ ಆ ಖಾತೆಗೆ ಹಣ ಜಮಾ ಆಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆದಷ್ಟು ಬೇಗ ಈ ಕೆಲಸ ಮಾಡಿದರೆ ಹಣ ಖಾತೆಗೆ ಬರುವುದು ಖಚಿತ.

ಇದನ್ನೂ ಓದಿ – SC/ST ವರ್ಗದವರಿಗೆ ಸಾಲ & ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!