ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಗೃಹಲಕ್ಷ್ಮಿ ಯೋಜನೆಯ(gruhalakshmi scheme) ಪ್ರಜಾಪ್ರತಿನಿಧಿಗಳ ಆಯ್ಕೆಯನ್ನು ಮಾಡುತ್ತಿದ್ದು, ಕೆಲವರಿಗೆ ಅರ್ಜಿ ಸಲ್ಲಿಸಲು ಏಕೆ ಆಗುತ್ತಿಲ್ಲ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು ಸಹಾಯ ಮಾಡಲು ಪ್ರಜಾಪ್ರತಿನಿಧಿಗಳನ್ನು(prajapratinidhi) ಆಯ್ಕೆ ಮಾಡಲು ಅರ್ಜಿಗಳನ್ನು ಕರೆಯಲಾಗುತ್ತಿರುವು ನಿಮಗೆಲ್ಲ ತಿಳಿದೇ ಇದೆ. ಆದರೆ ಜನರು ಪ್ರಜಾಪ್ರತಿನಿಧಿಗಳ ಆಯ್ಕೆಗೆ ಅರ್ಜಿಯನ್ನು ಸಲ್ಲಿಸಲು ಹೋದಾಗ ಕೆಲವು ಎರರ್(error) ಗಳು ಬರುತ್ತಿವೆ. ಅರ್ಜಿಗಳನ್ನು ಸಲ್ಲಿಸಲು ಏಕೆ ಆಗುತ್ತಿಲ್ಲ?, ಏನು ಎರರ್ ಗಳು ಬರುತ್ತಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರಜಾಪ್ರತಿನಿಧಿಗಳ ಆಯ್ಕೆಗೆ ಅರ್ಜಿ ಸಲ್ಲಿಸುವಲ್ಲಿ ಸಮಸ್ಯೆ :
ಗೃಹಲಕ್ಷ್ಮೀ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆಯಲ್ಲಿ ಮಹಿಳೆಯರು, ಮಳೆ, ಸರ್ವರ್ ಬ್ಯುಸಿ, ವಿದ್ಯುತ್ ಕಡಿತ, ಕೆಲವರಿಗೆ ಮೆಸೇಜ್ ಬರುತ್ತಿಲ್ಲ, ಆಧಾರ್ ಕಾರ್ಡಿಗೆ ಪಾನ್ ಕಾರ್ಡ್ ಲಿಂಕ್ ಆಗದಿರುವುದು, ಇಂತಹ ಹಲವಾರು ಸಮಸ್ಯೆಗಳಿಂದಾಗಿ ಮಹಿಳೆಯರು ಅರ್ಜಿಯನ್ನು ಸಲ್ಲಿಸಲು ಕಷ್ಟಪಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಲು ಸಹಾಯವಾಗಲೆಂದು ಪ್ರಜಾಪ್ರತಿನಿಧಿಗಳನ್ನು ಆಯ್ಕೆ ಮಾಡುವ ಕಾರ್ಯಾಚರಣೆ ನಡೆಯುತ್ತದೆ. ಆದರೆ ಕೆಲವರು ಈ ಪ್ರಜಾಪ್ರತಿನಿಧಿಗಲಾಗಲು ಅರ್ಜಿಯನ್ನು ಸಲ್ಲಿಸುವಾಗ ಅವರಿಗೆ ಕೆಲವು ಎರರ್ ಗಳು ಬರುತ್ತವೆ ಮತ್ತು ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಅರ್ಜೆಗಳನ್ನು ಸಲ್ಲಿಸುವ ಪ್ರಕ್ರಿಯೆಯಲ್ಲಿ, ಮೊಬೈಲ್ ನಂಬರ್ ಅನ್ನು ನಮೂದಿಸಿ ಓಟಿಪಿಯನ್ನು ಹಾಕಿದ ನಂತರ ಮುಂದಿನ ಪುಟವು ಹೆಚ್ಚಾಗುತ್ತಿಲ್ಲ ಎಂದು ಅನೇಕ ಜನರು ದೂರು ನೀಡುತ್ತಿದ್ದಾರೆ.
ಪ್ರಜಾಪ್ರತಿನಿಧಿಗಳಾಗಲು ಏಕೆ ಅರ್ಜಿಗಳನ್ನು ಸಲ್ಲಿಸಲಾಗುತ್ತಿಲ್ಲ :
ಜನರು ಪ್ರಜಾಪ್ರತಿನಿಧಿಗಳಾಗಲು ಅರ್ಜಿಯನ್ನು ಸಲ್ಲಿಸಲು ಹೋದಾಗ ಅವರಿಗೆ error ಬರುತ್ತಿದೆ, ಅರ್ಜಿಗಳನ್ನು ಸಲ್ಲಿಸಲು ಪೂರ್ಣವಾಗಿ ಆಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ, ಒಂದು ಸರ್ವರ್ ಸಮಸ್ಯೆಯೂ ಆಗಿರಬಹುದು. ಇನ್ನೊಂದೆಡೆ ಆಯಾ ಗ್ರಾಮ ಅಥವಾ ವಾರ್ಡ್ ಗಳಲ್ಲಿ ಪ್ರಜಾಪ್ರತಿನಿಧಿಗಳ ಆಯ್ಕೆ ಆಗಿದ್ದರೆ, ಅಂತಹ ಗ್ರಾಮಗಳಿಗೆ ಅರ್ಜಿಗಳನ್ನು ಸಲ್ಲಿಸಲು ಆಗುತ್ತಿಲ್ಲ ಎನಬಹುದಾಗಿದೆ. ಪ್ರಜಾಪ್ರತಿನಿಧಿಗಳ ಆಯ್ಕೆಯನ್ನು ಮಾಡಿದ ನಂತರ ಅವರನ್ನು ಎಷ್ಟು ತಿಂಗಳುಗಳ ಕಾಲ ಆ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಹಾಗೂ ಎಷ್ಟು ಗೌರವ ಧನವನ್ನು ನೀಡಬೇಕು ಎಂಬುದು ಇನ್ನು ಸರ್ಕಾರದಿಂದ ನಿರ್ಧಾರವಾಗಿಲ್ಲ. ಹಾಗಾಗಿ ಇದು ಒಂದು ಕಾರಣ ಆಗಿರಬಹುದು ಎಂದು ವರದಿಗಳು ಹೇಳುತ್ತಿವೆ. ಹಾಗಾಗಿ ನೀವೇನಾದರೂ ಪ್ರಜಾಪ್ರತಿನಿಧಿಗಳಾಗಲು ಬಯಸುತ್ತಿದ್ದರೆ, ಅರ್ಜಿಗಳನ್ನು ಸಲ್ಲಿಸಲು ಪ್ರಯತ್ನಿಸುತ್ತಿರಿ, ಏಕೆಂದರೆ ಇದಕ್ಕೆ ಮುಖ್ಯವಾದ ಕಾರಣವು ಸರ್ವರ್ ಸಮಸ್ಯೆ ಆಗಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಪ್ರಜಾಪ್ರತಿನಿಧಿಗಳ ಆಯ್ಕೆಗೆ ಅರ್ಜಿಯನ್ನು ಸಲ್ಲಿಸುವ ವಿಧಾನ :
ಹಂತ 1: ಮೊದಲಿಗೆ ಸೇವಾ ಸಿಂಧುವಿನ ಸಿಟಿಜನ್ ಪೋರ್ಟಲ್ ಗೆ ತೆರಳಲು ಇಲ್ಲಿ ಕ್ಲಿಕ್ ಮಾಡಿ.
https://sevasindhugs1.karnataka.gov.in/gl-sp/
ಸೂಚನೆ : ಈ ಲಿಂಕ್ ಮೂಲಕ ಮಾತ್ರ ಲಾಗಿನ್ ಆದರೆ ನಿಮಗೆ ಗೃಹಲಕ್ಷ್ಮಿ ಪ್ರಜಾ ಪ್ರತಿನಿಧಿಯ ಅರ್ಜಿ ನಮೂನೆ ಕಾಣಿಸುತ್ತದೆ
ಹಂತ 2: ನಂತರ ನಿಮ್ಮ ಸೇವಾ ಸಿಂಧುವಿನ ಅಕೌಂಟಿನ ಸಿಟಿಜನ್ ಲಾಗಿನ್ ಐಡಿ ಗಳನ್ನು ಹಾಕಿ ಕೇಳಲಾದ ಕೋಡನ್ನು ನೋಂದಣಿ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಲಾಗಿನ್ ಆದ ನಂತರ, Apply for services ಎಂಬ ಆಯ್ಕೆಯ ಅಡಿಯಲ್ಲಿ view all available services ಎಂಬ ಆಕೆಯನ್ನು ಮಾಡಿಕೊಳ್ಳಿ. ನಂತರ ಗೃಹಲಕ್ಷ್ಮಿ ಸಿವಿ ಎನ್ರೋಲ್ಮೆಂಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 5: ನಂತರ ಅರ್ಜಿ ನಮೂನೆ ತೆರೆಯುತ್ತದೆ ಅದರಲ್ಲಿ ಅರ್ಜಿದಾರರ ಮೊಬೈಲ್ ಸಂಖ್ಯೆ ಹಾಗೂ ಅರ್ಜಿ ಸಲ್ಲಿಸುವವರ ವಿವರಗಳನ್ನು ಭರ್ತಿ ಮಾಡಿ.
ಹಂತ 6: ನಂತರ ಕೆಳಗಿನ ಭಾಗದ ಘೋಷಣೆಯಲ್ಲಿ ಐ ಅಗ್ರಿ ಎಂಬ ಚೆಕ್ ಬಾಕ್ಸ್ ಮೇಲೆ ಚೆಕ್ ಮಾಡಿ.
ಹಂತ 7: ನಂತರ ವೆರಿಫಿಕೇಶನ್ ಕೋಡನ್ನು ನೋಂದಣಿ ಮಾಡಿ ಅರ್ಜಿಯನ್ನು ಸಲ್ಲಿಸಿ.
ಅರ್ಜೆಗಳನ್ನು ಸಲ್ಲಿಸಿದ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಪ್ರಜಾ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಸಾವಿರ ಜನಸಂಖ್ಯೆಗಿಂತ ಕಡಿಮೆ ಅಥವಾ ಅದಕ್ಕೆ ಸಮನಾದ ಪ್ರತಿ ಗ್ರಾಮಕ್ಕೆ ಎರಡು ಪ್ರಜಾಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ನೀವೇನಾದರೂ ಪ್ರಜಾಪ್ರತಿನಿಧಿಗಳಾಗಲು ಬಯಸಿದರೆ, ಮೇಲಿನ ಹಂತಗಳನ್ನು ಅನುಸರಿಸಿಕೊಂಡು ಕೂಡಲೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಇನ್ನು ಮುಂದೆ ಮೆಸೇಜ್ ಬೇಡ :
ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾದಾಗ, ಕಡ್ಡಾಯವಾಗಿ ಮೆಸೇಜನ್ನು ಕಳುಹಿಸಿ ನಂತರ ನಮಗೆ ಸರ್ಕಾರದ ವತಿಯಿಂದ ಸ್ಥಳ ದಿನಾಂಕ ಹಾಗೂ ಸಮಯದ ಮೆಸೇಜ್ ಬಂದ ನಂತರ ನೋಂದಣಿ ಕೇಂದ್ರಗಳಿಗೆ ತೆರಳಿ ಅರ್ಜಿಯನ್ನು ಸಲ್ಲಿಸಬೇಕಿತ್ತು. ಈ ಮೆಸೇಜ್ ಕಳುಹಿಸುವ ಕ್ರಮದಿಂದಾಗಿ ಅದೆಷ್ಟೋ ಜನರಿಗೆ ಗೊಂದಲ ಉಂಟಾಗಿತ್ತು. ಏಕೆಂದರೆ ಕೆಲವರಿಗೆ ಸರ್ಕಾರದ ವತಿಯಿಂದ ಮೆಸೇಜ್ ಬರುತ್ತಿರಲಿಲ್ಲ. ಇನ್ನು ಕೆಲವರಿಗೆ ಮೆಸೇಜ್ ಮಾಡುವುದು ಹೇಗೆ ಎಂದೇ ತಿಳಿದಿರುತ್ತಿರಲಿಲ್ಲ. ಇಂತಹ ಕೆಲಸದಿಂದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆ ತಡವಾಗುತ್ತಿತ್ತು. ಆದರೆ ಇನ್ನು ಮುಂದೆ ಇಂತಹ ಮೆಸೇಜ್ ಗಳನ್ನು ಕಳುಹಿಸುವ ಅವಶ್ಯಕತೆ ಇಲ್ಲ. ಇಂತಹ ಗೊಂದಲಗಳನ್ನು ತಪ್ಪಿಸಿ ಸುಲಭವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ನೆರವಾಗಲೆಂದು, ಎಸ್‌ಎಂಎಸ್ ಇಲ್ಲದೆ ನೇರವಾಗಿ ನೋಂದಣಿ ಕೇಂದ್ರಗಳಿಗೆ ತೆರಳಿ ಅರ್ಜಿಗಳನ್ನು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಪ್ರಜಾಪ್ರತಿನಿಧಿಗಳ ಆಯ್ಕೆಯ ಬಗ್ಗೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಮಾಹಿತಿ ಲಭ್ಯವಾದರೆ ತಕ್ಷಣವೇ ನಿಮಗೆ ಇನ್ನೊಂದು ವರದಿಯ ಮೂಲಕ ತಿಳಿಸಲಾಗುತ್ತದೆ. ಇಂತಹ ಮುಖ್ಯವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ