Gruhalakshmi: 11ನೇ ಕಂತಿನ ‘ಗೃಹಲಕ್ಷ್ಮಿ’ ಹಣ ಬರ್ತಿಲ್ಲ ; ಗೃಹಲಕ್ಷ್ಮಿ ಬಂದ್ ಆಗುತ್ತಾ?

IMG 20240701 WA0019

ಮಹಿಳೆಯರ ಅಚ್ಚುಮೆಚ್ಚಿನ ಗೃಹಲಕ್ಷ್ಮಿ ಯೋಜನೆಯಯ (Gruhalakshmi scheme) ವಿರುದ್ಧ ಪ್ರತಿಭಟನೆ : 2 ತಿಂಗಳಿಂದ ಮಹಿಳೆಯರ ನಿರೀಕ್ಷೆ ಹುಸಿಯಾಗಿದೆ.

ರಾಜ್ಯ ಸರ್ಕಾರದ (State government) ಗ್ಯಾರಂಟಿ ಯೋಜನೆಗಳು ಕೆಲವರಿಗೆ ತುಂಬಾ ಉಪಯುಕ್ತವಾಗಿದೆ. ಆದರೆ ಇನ್ನೂ ಕೆಲವರು ಅದರ ಪ್ರಯೋಜನಗಳನ್ನು ಪಡೆದುಕೊಂಡಿಲ್ಲ. ಗ್ಯಾರೆಂಟಿ ಯೋಜನೆಗಳಲ್ಲಿಯೇ(garantee schemes) ಬಹಳ ಸದ್ದು ಮಾಡಿದ ಯೋಜನೆ ಎಂದರೆ  ಗೃಹಲಕ್ಷ್ಮಿ ಯೋಜನೆ. ಮೊದಮೊದಲಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಫಲಾನುಭವಿಗಳು ತುಂಬಾ ಕಷ್ಟಪಟ್ಟಿದ್ದರು. ಇದರ ನಡುವೆ ಅರ್ಜಿಗಳನ್ನು ಸಲ್ಲಿಸಿದ ನಂತರ ಸ್ವಲ್ಪ ತಿಂಗಳುಗಳು ಯಾವುದೇ ರೀತಿಯ ಹಣ ಬರಲಿಲ್ಲ. ತದ ನಂತರದ ದಿನಮಾನಗಳಲ್ಲಿ  ಕೆಲವು ಅರ್ಜಿದಾರರಿಗೆ ಹಣ ಬರತೊಡಗಿತು. ಇದರಿಂದ ರಾಜ್ಯದ ಹೆಣ್ಣು ಮಕ್ಕಳು ಹೆಚ್ಚು ಸಂತಸ ಪಡುತ್ತಿದ್ದರು. ಹಾಗೂ ಗ್ರಹಲಕ್ಷ್ಮಿ ಯೋಜನೆಯ ಹಣದಿಂದ ಅವರಿಗೆ ಇಷ್ಟವಾದಂತಹ ವಸ್ತುಗಳು, ತಿನಿಸಿಗಳು ಅಥವಾ ಹೊಸ ಉದ್ಯಮವನ್ನು ಪ್ರಾರಂಭಿಸಲು ಆ ಹಣವನ್ನು ಕೂಡಿರಿಸುತ್ತಾ  ಬರುತ್ತಿದ್ದಾರೆ. ಈ ರೀತಿಯಾಗಿ ತಮ್ಮ ಕನಸುಗಳಿಗೆ ಅಡಿಪಾಯವನ್ನು ಹಾಕಿಕೊಳ್ಳುತ್ತಿದ್ದಂತಹ ಹೆಣ್ಣು ಮಕ್ಕಳಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಲ್ಲಿ (Guarantee scheme) ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಎರಡು ತಿಂಗಳುಗಳಿಂದ ಬಂದಿಲ್ಲ. ಈ ಕುರಿತಾಗಿ ಮಹಿಳೆಯರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಗೃಹಲಕ್ಷ್ಮಿ ಯೋಜನೆಯಿಂದ ಆಗುತ್ತಿರುವ ತೊಂದರೆಗಳು (problems) :

ಗೃಹಲಕ್ಷ್ಮಿ ಹಣ ಬರುತ್ತಿಲ್ಲದಿರುವ ಕಾರಣ ಮಹಿಳೆಯರು ಮೈಸೂರಿನಲ್ಲಿ (Mysore) ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ಈ ನಡುವೆ ಅವರು ಹೇಳಿರುವ ಪ್ರಕಾರ ಬರೋಬ್ಬರಿ ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಯಾವೊಬ್ಬ ಫಲಾನುಭವಿಯ ಖಾತೆಗೂ ಬಂದಿಲ್ಲದಿರುವ ಕಾರಣ ತಮ್ಮ ಅಳಲನ್ನು ಈ ಮೂಲಕ ತೋಡಿಕೊಂಡಿದ್ದಾರೆ.
ಇನ್ನೂ ರಾಜ್ಯ ಸರ್ಕಾರ(state government)ದ ಗ್ಯಾರೆಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಯೂ (shakthi scheme) ಒಂದಾಗಿದ್ದು ಮೊದಮೊದಲು ಕೊಂಚ ಕಷ್ಟ ಎನಿಸಿದರು ಕೂಡ ಮಹಿಳೆಯರು ಶಕ್ತಿ ಯೋಜನೆಯನ್ನು ಬಹಳ ಇಷ್ಟಪಟ್ಟಿದ್ದರು. ಆದರೆ ಕ್ರಮೇಣವಾಗಿ ಶಕ್ತಿ ಯೋಜನೆ ಬಂದ ಮೇಲೆ ಬಸ್ಸುಗಳು (bus) ಬಹಳ ಕಡಿಮೆಯಾಗುತ್ತಾ ಬಂದವು. ಇದರಿಂದಾಗಿ ಹೆಚ್ಚು ಜನರು ಸಂಚರಿಸಲು ತೊಂದರೆಯಾಗಲು ಪ್ರಾರಂಭವಾಯಿತು. ಎಲ್ಲಾ ಬಸ್ಸುಗಳು ಮಹಿಳೆಯರನ್ನು ಕಂಡರೆ  ಬಸ್ಸುಗಳನ್ನು ನಿಲ್ಲಿಸದೆ ಹೋಗುವ ಎಷ್ಟೋ ಉದಾಹರಣೆಗಳಿವೆ. ಇನ್ನು ಬಸ್ಸನ್ನು ಹತ್ತಲು ಮಹಿಳೆಯರು ತುಂಬಾ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಇದರಿಂದಾಗಿ ಮಹಿಳೆಯರಿಗೆ ಗೌರವವೇ ಇಲ್ಲದಂತಾಗಿ ಕಷ್ಟಪಡುವ ಪರಿಸ್ಥಿತಿ ಎದುರಾಗಿದೆ.
ಗೃಹಲಕ್ಷ್ಮಿಯ ಹಣ ಎರಡು ತಿಂಗಳುಗಳಿಂದ ಯಾವ ಫಲಾನುಭವಿಯ ಖಾತೆಗೆ ಬಂದಿಲ್ಲದ ಕಾರಣ ಮನೆಗಳನ್ನು ನಿಭಾಯಿಸಲು ಕಷ್ಟವಾಗುತ್ತಿದೆ. ಗ್ಯಾರೆಂಟಿ ಯೋಜನೆಗಳಿಂದ  ದಿನನಿತ್ಯ ಕೊಂಡುಕೊಳ್ಳುವ ವಸ್ತುಗಳ ಬೆಲೆ ಏರಿಕೆ ಜಾಸ್ತಿಯಾಗಿದೆ. ಇತ್ತ ಗೃಹಲಕ್ಷ್ಮಿ ಯೋಜನೆಯ ಹಣವು ಬಂದಿಲ್ಲ ಎಂದು ಮೈಸೂರಿನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಗೃಹಲಕ್ಷ್ಮಿ ಹಣ ಬರದೆ ಇರುವ ಫಲಾನುಭವಿಗಳು ಏನು ಮಾಡಬೇಕು?

ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಬೇಕೆಂದರೆ ರೇಷನ್ ಕಾರ್ಡ್ (Ration card) ನಲ್ಲಿ ಇರುವಂತಹ ಪ್ರತಿಯೊಬ್ಬರೂ ಕೂಡ  ಈಕೆವೈಸಿ (e-kyc) ಮಾಡಿಸಬೇಕು.ಹಾಗೂ ನೋಂದಣಿ ಮಾಡಿಕೊಂಡಿರುವಂತಹ ಮಹಿಳೆಯರು ತಪ್ಪದೇ ತಮ್ಮ ಖಾತೆಗೆ  ಈಕೆವೈಸಿ ಮಾಡಿಸಬೇಕು.
ಗೃಹಲಕ್ಷ್ಮಿ ಯೋಜನೆಯ ಹಣ ಬರದೇ ಇರುವವರು ರೇಷನ್ ಕಾರ್ಡ್ ಜೊತೆಯಲ್ಲೇ ಆಧಾರ್ ಕಾರ್ಡನ್ನು ಲಿಂಕ್(Adhar card link) ಮಾಡಬೇಕು.
ಇನ್ನು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡ ನಂತರವೂ ಹಣ ಬಂದಿಲ್ಲವೆಂದರೆ ಫಲಾನುಭವಿಗಳು  ಅರ್ಜಿಯೊಂದಿಗೆ ಈಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕುಗಳಲ್ಲಿ ಪರಿಹರಿಸಿಕೊಳ್ಳಬೇಕು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!