ಗೃಹಲಕ್ಷ್ಮೀ ಯೋಜನೆಯ (gruhalakshmi scheme) ಹಣ ಇನ್ನು 2 ದಿನದಲ್ಲಿ ಜಮೆ ಆಗಲಿದೆ.
ಈಗಾಗಲೇ ಗೃಹಲಕ್ಷ್ಮೀ ಯೋಜನೆ ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ. ನಮ್ಮ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು(Five Guarantee Schemes) ಸುದ್ದಿಯಲ್ಲಿವೆ. ಅದರಲ್ಲಿ ಮುಖ್ಯ ವಾಗಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana). ಇನ್ನು ಜೂನ್ ತಿಂಗಳ ಕಂತಿಗಾಗಿ ಕಾಯುತ್ತಿರುವವರಿಗೆ ಇದು ಒಳ್ಳೆಯ ಸುದ್ದಿಯಾಗಿದೆ. ಏಕೆಂದರೆ, ಶೀಘ್ರದಲ್ಲೆ ಜೂನ್ ತಿಂಗಳ ಕಂತು ಬಿಡುಗಡೆಯಾಗಲಿದೆ. ಗೃಹಲಕ್ಷ್ಮೀ ಹಣ (gruhalakshmi money) ಫಲಾನುಭವಿಗಳಿಗೆ ಕಳೆದ ಮೇ 5ರಂದು ಕೊನೆಯದಾಗಿ ಜಮಾ ಆಗಿದೆ. ಜೂನ್ ಹಾಗೂ ಜುಲೈ ಎರಡು ತಿಂಗಳ ಹಣ ಮಾತ್ರ ಬಂದಿಲ್ಲ. ಆದರೆ, ಪರಿಶಿಷ್ಟ ಫಲಾನುಭವಿಗಳಿಗೆ ಬಂದಿದೆ. ಉಳಿದವರಿಗೆ ಶೀಘ್ರದಲ್ಲೇ ಡಿಬಿಟಿ (DBT) ಮೂಲಕ ಜಮೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ (Laksmi Hebbalkar) ತಿಳಿಸಿದರು.ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
2 ತಿಂಗಳ ಬಾಕಿ ಹಣ ಪಾವತಿ ಯಾವಾಗ?
ಗೃಹಲಕ್ಷ್ಮಿ ಮಹಿಳೆಯರ ಪರವಾಗಿಯೇ, ಮಹಿಳೆಯರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಹಿಳೆಯರು ಮುಂದೆ ಬರುವ ಭರವಸೆಯಲ್ಲಿ ತಂದಿರುವ ಮಹತ್ತರ ಯೋಜನೆಯಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಮೇ ತಿಂಗಳವರೆಗೆ ಪಾವತಿ ಯಾಗಿದೆ. ಇನ್ನು ಬಾಕಿ ಉಳಿದ ಜೂನ್ ಹಾಗೂ ಜುಲೈ ತಿಂಗಳ ಅಂದರೆ ಒಟ್ಟಾರೆಯಾಗಿ ಎರಡು ತಿಂಗಳ ಹಣವನ್ನು ಕೇವಲ 10 ದಿನಗಳ ಒಳಗಾಗಿ ಪಾವತಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ (Laksmi Hebbalkar) ತಿಳಿಸಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ:
ಗೃಹಲಕ್ಷ್ಮಿ ಹಣ (Gruha Lakshmi Money) ಜಮೆಯಾಗುವ ಕುರಿತಾಗಿ ಬೆಳಗಾವಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಯಾವುದೇ ಸಂದರ್ಭದಲ್ಲಿ ಐದು ಗ್ಯಾರಂಟಿ ಗಳನ್ನು ನಾವು ನಿಲ್ಲಿಸುವುದಿಲ್ಲ. ಜೂನ್ ಹಾಗೂ ಜುಲೈ ತಿಂಗಳ ಹಣವನ್ನು ಡಿಪಿಟಿಗೆ (DTP) ಪುಶ್ ಮಾಡಿದ್ದೇವೆ. ಇಡೀ ರಾಜ್ಯದಲ್ಲಿ ಇವತ್ತು ಮತ್ತು ನಾಳೆ ಕ್ರೆಡಿಟ್ (credit) ಆಗಲಿದೆ ಎಂದು ತಿಳಿಸಿದರು. ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡುತ್ತೇವೆ ಎನ್ನುವ ಸ್ಪಷ್ಟನೆ ಕೂಡ ಸಹ ನೀಡಿದರು. ಇನ್ನು 10 ದಿನಗಳಲ್ಲಿ ಅನುಭವಿಗಳ ಖಾತೆಗೆ ಹಣ ಪಾವತಿಯಾಗುತ್ತದೆ ಎಂದು ಭರವಸೆ ನೀಡಿದರು.
ಗೃಹಲಕ್ಷ್ಮಿ ಹಣ ಬಾರದಿರುವವರು ಈ ರೀತಿ ಮಾಡಿ :
ನೋಂದಣಿ ಮಾಡಿದ ಕೆಲವು ಮಹಿಳೆಯರಿಗೆ 11 ಕಂತಿನ ವರೆಗೆ ಹಣ (Gruha Lakshmi 11 installment money) ಜಮೆ ಯಾಗಿದೆ. ಆದರೆ ಕೆಲವರಿಗೆ ಒಂದೇ ಒಂದು ತಿಂಗಳ ಹಣ ಕೂಡ ಜಮೆಯಾಗಿಲ್ಲ. ಆದ್ದರಿಂದ ಯಾರಿಗೆಲ್ಲ ಹಣ ಪಾವತಿಯಾಗಿಲ್ಲವೋ ಅವರಿಗೂ ಕೂಡ ಹಣ ಪಾವತಿಯಾಗುತ್ತದೆ ಎಂಬ ಭರವಸೆ ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾಯುತ್ತಿದ್ದವರು ಒಂದು ಬಾರಿಯೂ ಹಣ ಪಡೆದುಕೊಳ್ಳದಿಲ್ಲದವರು (Gruha Lakshmi Money) ಕೊಡಲೇ ರೇಷನ್ ಕಾರ್ಡ್ ಗೆ ಈ ಕೆವೈಸಿ ಅಪ್ಡೇಟ್ ಮಾಡಿಸಬೇಕು.ಹಾಗೂ ಮಹಿಳೆಯರ ಆಧಾರ್ ಕಾರ್ಡ್ ಅಪ್ಡೇಟ್ ಆಗದೇ ಇರುವುದು ಕೂಡ ಈ ಸಮಸ್ಯೆಗೆ ಕಾರಣವಾಗಿದೆ. ಇನ್ನು ಬಹಳ ಮುಖ್ಯ ವಾಗಿ ಮಹಿಳೆಯರ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್(Ration card) ಗಳಲ್ಲಿ ಒಂದೇ ಹೆಸರು ಹಾಗೂ ವಿಳಾಸ ಇದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಿ. ಈ ರೀತಿಯ ಸಮಸ್ಯೆಗಳನ್ನು ನೀವು ಸರಿಪಡಿಸಿಕೊಂಡರೆ ನಿಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ತಿಳಿಸಿದರು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.