ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಅತ್ಯಂತ ಮುಖ್ಯವಾದ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಮೈಸೂರಿನಲ್ಲಿ ಚಾಲನೆ ನೀಡಲಾಗಿತ್ತು. ಈಗಾಗಲೇ 2 ಕಂತನ್ನು ಪಡೆದಿರುವ ರಾಜ್ಯದ ಬಹುತೇಕ ಮನೆ ಯಜಮಾನಿಯರು 3ನೇ ಕಂತಿನ ಬಗ್ಗೆ ಯೋಚಿಸುತ್ತಿದ್ದಾರೆ. ತಮ್ಮ ಮೊಬೈಲ್ ಗಳನ್ನು ಹಿಡಿದು ಹಣ ಕ್ರೆಡಿಟ್ ಆಗುವ ಮೆಸೇಜ್ ಗಾಗಿ ಕಾಯುತ್ತಿದ್ದಾರೆ. ಅರ್ಜಿ ಹಾಕಿದ್ದರೂ ನಿಮಗೆ 2000 ರೂ. ಹಣ ಬಂದಿಲ್ಲವಾ? ಹಾಗಿದ್ದರೆ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತ ಮಹತ್ವದ ಕ್ರಮ ಕೈಗೊಂಡಿದೆ. ಸುಮಾರು 50,000 ಅರ್ಜಿಗಳನ್ನು ಸರ್ಕಾರ ತಿರಸ್ಕರಿಸಿ ಈ ಯೋಜನೆಯಿಂದ ಹೊರಗಿಟ್ಟಿದ್ದು. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮುಂದುವರೆದ ತಾಂತ್ರಿಕ ಸಮಸ್ಯೆ.!
ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಗೆ ಇದುವರೆಗೆ 1.10 ಕೋಟಿ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ, ಈಗಾಗಲೇ ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು ಎರಡು ಸಾವಿರದಂತೆ ಎರಡು ಕಂತಿನ ಹಣ ಜಮಾ ಆಗಿದೆ. ಆದರೆ ಇನ್ನೂ ಕೆಲವರಿಗೆ ಒಂದು ಕಂತಿನ ಹಣ ಬಂದಿರುವುದಿಲ್ಲ.
ಇದುವರೆಗೂ ಒಂದು ಕೋಟಿ 10 ಲಕ್ಷ ಮಂದಿಗೆ ಹಣ ಜಮೆ ಆಗಿದೆ. ಕೆಲವರು ಇನ್ನೂ ಆಗಿಲ್ಲ ಆಗಿಲ್ಲ ಅಂತಿದ್ದಾರೆ. ಇನ್ನು 5-6 ಲಕ್ಷ ಜನರಿಗೆ ಮಾತ್ರ ಹಣ ಹೋಗುವುದು ಬಾಕಿ ಇದೆ. ಆಧಾರ್ ಲಿಂಕ್ ಮಾಡುವುದು, ಬ್ಯಾಂಕ್ ಗೆ ಹೋಗಿ ಮಾಹಿತಿ ಪಡೆದುಕೊಳ್ಳುಬೇಕು ಅಂತ ಎಷ್ಟೇ ಹೇಳಿದರು. ಮಾಡಿಸಿದ್ದೇವೆ ಅಂತ ಹೇಳ್ತಾರೆ ಅದಕ್ಕೆ ನಾವು ಈಗ ಗ್ರಾಮ ಪಂಚಾಯಿತಿಯಲ್ಲಿ ಪಿಡಿಓಗಳನ್ನು ಅವರ ಕಡೆಯಿಂದ ಯಾರಿಗೆ ಹಣ ಬಂದಿಲ್ಲ ಅಂತವರನ್ನು ಕರೆದುಕೊಂಡು ಬಂದು ಸ್ಥಳದಲ್ಲೇ ಸಮಸ್ಯೆ ಪರಿಹಾರ ಮಾಡುವ ರೀತಿ ಕಾರ್ಯಕೈಗೊಳ್ಳುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳುತ್ತಾರೆ.
50 ಸಾವಿರ ಗೃಹಲಕ್ಷ್ಮಿ ಅರ್ಜಿ ತಿರಸ್ಕೃತ
ಗೃಹಲಕ್ಷ್ಮಿ ಆರಂಭದಲ್ಲಿ ಹಲವಾರು ಶರತ್ತುಗಳನ್ನು ರಚಿಸಿದ ಸರ್ಕಾರ, ಕುಟುಂಬದ ಯಜಮಾನಿ ಅಥವಾ ಆಕೆಯ ಪತಿ ಅಥವಾ ಅವರ ಕುಟುಂಬದಲ್ಲಿ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಅಂತಹ ಮಹಿಳೆಯರು ಈ ಯೋಜನೆಗೆ ಅರ್ಹರಲ್ಲ ಎಂದು ಹೇಳಿತ್ತು, ಆದರೂ ಸಹಿತ ಹಲವಾರು ಮಹಿಳೆಯರು ಅರ್ಜಿಗಳನ್ನು ಸಲ್ಲಿಸಿದರು ಅಂತಹ ಅರ್ಜಿಗಳನ್ನು ಈಗ ತಿರಸ್ಕೃತಗೊಳಿಸಲಾಗಿದೆ. ಹಾಗೂ 3082 ಅರ್ಜಿದಾರರು ಮರಣ ಹೊಂದಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ಟೇಟಸ್ ಪರಿಶೀಲಿಸಿ.
ನೀವು ನಿಮ್ಮ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬೇಕು, ಹೇಗೆಂದರೆ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಗೃಹಲಕ್ಷ್ಮಿ ಯೋಜನೆಯ ಈ ಸಂಖ್ಯೆಗೆ 8147500500 ಟೆಕ್ಸ್ಟ್ ಮೆಸೇಜ್ ಮಾಡಬೇಕು.ನಂತರ ನಿಮ್ಮ ಮೊಬೈಲ್ಗೆ ಒಂದು ಮರು ಸಂದೇಶ ಬರುತ್ತದೆ, ಒಂದು ವೇಳೆ ನೀವು ಅರ್ಜಿ ಸಲ್ಲಿಸಿದ್ದರೆ ನಿಮ್ಮ ಅರ್ಜಿ ಸಂಖ್ಯೆ ಮತ್ತು ನೀವು ಅರ್ಜಿ ಸಲ್ಲಿಸಿದ ಬಗ್ಗೆ ಮಾಹಿತಿ ದೊರೆಯುತ್ತದೆ, ಇಲ್ಲವಾದರೆ ನಿಮ್ಮ ಅರ್ಜಿ ಸಲ್ಲಿಕೆ ಬಾಕಿ ಇದೆ ಎಂದು ಮೆಸೇಜ್ ಬರುತ್ತದೆ. ಒಂದು ವೇಳೆ ನಿಮ್ಮ ಅರ್ಜಿ ಬಾಕಿ ಇದ್ದರೆ ನೀವು ಮತ್ತೊಮ್ಮೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ನೇರವಾಗಿ ತೆರಳಿ ವಿಚಾರಿಸಿ
ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಖಾತೆಗೆ 2,000 ರೂಪಾಯಿ ಜಮಾ ಆಗದಿದ್ದರೆ, ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ