Gruhalakshmi Status- ಅನರ್ಹರ ಪಟ್ಟಿ ಬಿಡುಗಡೆ, ಇವರಿಗೆ ಬರೋದಿಲ್ಲ ಗೃಹಲಕ್ಷ್ಮಿ 2,000/- ಹಣ, ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

ezgif.com gif maker 1

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೃಹ ಲಕ್ಷ್ಮಿ ಯೋಜನೆಯ ಅನರ್ಹರರ ಪಟ್ಟಿಯನ್ನು ಹೇಗೆ ಚೆಕ್ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ, ಇನ್ನು ಹಲವಾರು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣ ಸಹಿತ ಬಂದು ತಲುಪಿಲ್ಲಹೀಗೆ ಕಾಯುತ್ತಿರುವ ಜನರಿಗೆ ಸರ್ಕಾರವು ಒಂದು ಶಾಕಿಂಗ್ ನ್ಯೂಸ್ ನೀಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಗೃಹಲಕ್ಷ್ಮಿ ಯೋಜನೆಗೆ ತಡವಾಗಿ ಅರ್ಜಿ ಸಲ್ಲಿಸಿದರು ಹಣ ಬೇಗ ಬರಲಿದೆ :

ಈ ಯೋಜನೆಯಲ್ಲಿ ಮಹಿಳೆಯರಿಗೆ ನಾನಾ ಅಡೆತಡೆ ಎದುರಾಗಿವೆ. ಆದ್ದರಿಂದ ಸ್ವಲ್ಪ ಜನ ಮಹಿಳೆಯರು ತಡವಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಯೋಜನೆಯ ಮುಖ್ಯ ಉದ್ದೇಶ, ಕುಟುಂಬದ ಒಡತಿಗೆ ಮಾಸಿಕ ಎರಡು ಸಾವಿರ ರೂ. ಆರ್ಥಿಕ ಸಹಾಯ ನೀಡುವುದಾಗಿದೆ. ಪಡಿತರ ಚೀಟಿಗಳ ಮಾಹಿತಿ ಆಧಾರದ ಮೂಲಕ ಯೋಜನೆ ಅನುಷ್ಠಾನವಾಗುತ್ತಿದೆ.

ಗೃಹಲಕ್ಷ್ಮಿ 2 ನೇ ಕಂತಿನ ಹಣ ಎಲ್ಲ ಮಹಿಳೆಯರ ಖಾತೆಗೆ ಆದಷ್ಟು ಬೇಗ ಬರಲಿದೆ. ತಡವಾಗಿ ನೊಂದಣಿ ಆದವರಿಗೆ ಹಣ ಬಿಡುಗಡೆಯಾಗಲಿದೆ. ಆದರೆ ಇನ್ನೂ ಹಲವು ಫಲಾನುಭವಿ ಮಹಿಳೆಯರು ತಮ್ಮ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಹಣ ಬಿಡುಗಡೆಯಾದ ತಕ್ಷಣ ಎರಡೂ ಕಂತುಗಳನ್ನು ಸೇರಿಸಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.

ಹಣ ಬರದಿದ್ದವರಿಗೆ ಸರ್ಕಾರದಿಂದ ಒಟ್ಟಿಗೆ ಸಿಗಲಿದೆ 4000 ರೂ :

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಎರಡು ತಿಂಗಳಿಗಿಂತ ಹೆಚ್ಚಾದರೂ ಇನ್ನೂ ಕೂಡ ಹಣ ಬಂದಿಲ್ಲ ಎಂದು ಚಿಂತೆಯಲ್ಲಿರುವ ಮಹಿಳೆಯರಿಗೆ ಸಿದ್ದರಾಮಯ್ಯನವರು tweet ಮಾಡುವ ಮೂಲಕ ನವರಾತ್ರಿಯ ಭರ್ಜರಿ ಗಿಫ್ಟನ್ನು ಘೋಷಣೆ ಮಾಡಿದ್ದಾರೆ. ಅದೇನೆಂದರೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣಬರದಿದ್ದ ಮಹಿಳೆಯರಿಗೆ ಒಟ್ಟಿಗೆ ನಾಲ್ಕು ಸಾವಿರದ ಹಣವನ್ನು ಅಕೌಂಟಿಗೆ ಜಮಾ ಮಾಡಲಿದ್ದಾರೆ.

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಗೃಹಲಕ್ಷ್ಮಿ ಹಣ ಒಟ್ಟಿಗೆ ಜಮೆ :

ಸಿದ್ದರಾಮಯ್ಯನವರು ನವರಾತ್ರಿ ಸಂಭ್ರಮದ ಟ್ವೀಟ್ ಮೂಲಕ ಖುಷಿಯಾದ ವಿಷಯವನ್ನು ಹಂಚಿಕೊಂಡಿದ್ದಾರೆ ಅದರ ವಿವರ ಕೆಳಗಿನಂತಿದೆ : “ಕುಟುಂಬ ನಿರ್ವಹಣೆಯ ಹೊಣೆಹೊತ್ತ ಮನೆಯ ಯಜಮಾನಿಯರು ನಿತ್ಯ ಎದುರಿಸುವ ಸವಾಲುಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ ರೂ. 2,000 ಧನಸಹಾಯ ನೀಡಲಾಗುತ್ತಿದೆ. ರಾಜ್ಯದ 1.08 ಕೋಟಿ ಮಹಿಳೆಯರಿಗೆ ಈಗಾಗಲೇ ಎರಡು ತಿಂಗಳ ಹಣ ಜಮೆಯಾಗಿದ್ದು, ಈ ಉದ್ದೇಶಕ್ಕಾಗಿ ಸರ್ಕಾರವು ರೂ. 4,449 ಕೋಟಿ ಅನುದಾನ ಬಳಕೆ ಮಾಡಿದೆ. ಸ್ತ್ರೀಶಕ್ತಿ ಆರಾಧನೆಯ ಈ ನವರಾತ್ರಿ ಹಬ್ಬದ ಸಂದರ್ಭದಲ್ಲಿ ನಮ್ಮ ಸರ್ಕಾರವು ಸ್ತ್ರೀಸಬಲೀಕರಣಕ್ಕೆ ಬದ್ಧವಾಗಿ ಶ್ರಮಿಸುತ್ತಿದೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ.” ಎಂದು ಟ್ವೀಟ್ ಮುಖಾಂತರ ತಿಳಿಸಿದ್ದಾರೆ.

ಅನರ್ಹರ ಪಟ್ಟಿ ಚೆಕ್ ಮಾಡುವುದು ಹೇಗೆ? Gruhalakshmi Cancelled List

ಹಂತ 1: ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ತೆರಳಬೇಕು ಅದಕ್ಕಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ :
https://ahara.kar.nic.in/Home/EServices

ಹಂತ 2: ನಂತರ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.

ನಂತರ e-Ration Card ಎಂಬ ಆಯ್ಕೆಯಲ್ಲಿ Show cancelled/Suspended  ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ

rrrrr

ಹಂತ 3: ನಂತರ ನಿಮಗೆ ಲಿಸ್ಟ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ, ತಿಂಗಳು  ಹಾಗೂ ತಾಲೂಕನ್ನು ಆಯ್ಕೆ ಮಾಡಿಕೊಳ್ಳಿ

rrrrr2

whatss

ಹಂತ 4: ನಂತರ ನೀವು ಅನರ್ಹರ ಪಟ್ಟಿಯನ್ನು ನೋಡಬಹುದು, ಅದರಲ್ಲಿ ರದ್ದು ಆಗಿರುವುದಕ್ಕೆ ಕೆಲವೊಮ್ಮೆ ಕಾರಣವನ್ನು ಕೂಡ ನೀಡಲಾಗಿರುತ್ತದೆ.

ezgif.com gif maker

ಇನ್ನೇನು ಎಲ್ಲ ಮಹಿಳೆಯರಿಗೂ ಹಣ ಬರುತ್ತದೆ ಎಂಬ ಖುಷಿಯ ಸಮಯದಲ್ಲಿ ಸರ್ಕಾರವು ಇನ್ನೊಂದು ನಿಯಮವನ್ನು ಜಾರಿಗೆ ತಂದಿದೆ. ಅದೇನೆಂದರೆ, ಬಿಪಿಎಲ್ ಕುಟುಂಬದ ಯಜಮಾನಿಗೆ ಮಾತ್ರ ರೂ.2000 ಅಂತ ಹೇಳಲಾಗಿದ್ದು. 5 ಎಕರೆ ಮೀರಿದ ಒಣ ಭೂಮಿ ಹೊಂದಿರುವ ಜನರಿಗೆ 2000 ಬೇಡ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ನಾಲ್ಕು ಚಕ್ರಗಳ ವಾಹನ ಹೊಂದಿದ ಕುಟುಂಬದವರಿಗೆ ಹಣವನ್ನು ನೀಡಲಾಗದು ಎನ್ನುತ್ತಿದ್ದಾರೆ.

ಸರ್ಕಾರಿ ಉದ್ಯೋಗ ಮತ್ತು ಪೆನ್ಷನ್ ಪಡೆಯುವವರೆಗೂ ಬೇಡ ಎಂದು ಹೇಳಲಾಗಿದೆ. ಸರ್ಕಾರ ಇನ್ಕಮ್ ಟ್ಯಾಕ್ಸ್ ಪಾವತಿದಾರರ ಕುಟುಂಬಕ್ಕೂ ಹಣ ದೊರೆಯುವುದಿಲ್ಲ. ಜಿಎಸ್ಟಿ ರಿಟರ್ನ್ ಪಾವತಿಸುವ ಮಹಿಳೆಯರಿಗೂ ನೀಡಬಾರದು. ಪ್ರೊಫೆಷನಲ್ ಟ್ಯಾಕ್ಸ್ ಪಾವತಿದಾರರಿಗೂ ಕೊಡಬಾರದು ಎಂದು ಸರ್ಕಾರ ತಿಳಿಸಿದೆ ಎಂದು ಸುದ್ದಿಗಳು ಹೇಳುತ್ತಿವೆ.

ಸೂಚನೆ – ಮನೆಯ ಯಜಮಾನಿಯರಿಗೆ 2000 ಕೊಡುತ್ತಿದ್ದರಿಂದ, ರೇಷನ್ ಕಾರ್ಡ್ ನಲ್ಲಿ ಇರುವ ಮನೆ ಯಜಮಾನಿಯರನ್ನೇ ಗೃಹಲಕ್ಷ್ಮಿ ಎಂದು ಪರಿಗಣಿಸಲಾಗಿದೆ. ಹಾಗಾಗಿ ಈ ಕೆಳಗಿನ ಕಾರಣಗಳನ್ನು ಕೊಟ್ಟು ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಅವರಿಗೂ 2000 ಹಣ ಬರುವುದಿಲ್ಲ ಎಂದು ಹೇಳಬಹುದು

whatss

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!