ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ಕರ್ನಾಟಕ ರಾಜ್ಯದ ಮಹಿಳೆಯರು ಬಹು ನಿರೀಕ್ಷಿಯಿಂದ ನೋಡುತ್ತಿರುವ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಕುರಿತಾದ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ, ಅರ್ಜಿ ಸಲ್ಲಿಕೆ ಯಾವಾಗ ಪ್ರಾರಂಭವಾಗುತ್ತದೆ? ಬೇಕಾದ ದಾಖಲಾತಿಗಳು ಯಾವುವು? ಅರ್ಜಿ ಹೇಗೆ ಸಲ್ಲಿಸಬೇಕು ಎನ್ನುವ ಸಂಪೂರ್ಣ ವಿವರವನ್ನು ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮಹಾಲಕ್ಷ್ಮಿ ಯೋಜನೆ 2023 | Gruha Lakshmi Yojane 2023
ನಿನ್ನೆ ಬೆಂಗಳೂರಿನಲ್ಲಿ ರಾಜ್ಯ ಬಜೆಟ್ ಮಂಡನೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ಇಂದು ಮಂಡಿಸಿದ ಬಜೆಟ್ ಪೂರ್ಣ ಪ್ರಮಾಣದ ಬಜೆಟ್ ಆಗಿದೆ ಎಂದು ಹೇಳಿದರು. ಕರ್ನಾಟಕ ರಾಜ್ಯದ ಮಹಿಳೆಯರ ಬಹು ನಿರೀಕ್ಷಿತ ಯೋಜನೆಯಾದ ಮಹಾಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಜುಲೈ 16ರಂದು ಪ್ರಾರಂಭವಾಗುತ್ತದೆ ಮತ್ತು ಅಗಸ್ಟ್ ನಲ್ಲಿ 2,000 ಕುಟುಂಬದ ಯಜಮಾನಿಗೆ ನೇರವಾಗಿ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು.
ರೇಷನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ.
ಗೃಹಲಕ್ಷ್ಮಿ ಯೋಜನೆಗೆ ಮತ್ತು ಅನ್ನ ಭಾಗ್ಯದ 170 ರೂಪಾಯಿ ಪಡೆಯಲು ಎಲ್ಲಾ ಗ್ರಾಹಕರ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹಾಗಾಗಿ ಅರ್ಜಿ ಪ್ರಾರಂಭವಾಗುವ ಮೊದಲು ಪ್ರತಿಯೊಬ್ಬ ಫಲಾನುಭವಿಗಳು ತಪ್ಪದೆ ತಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡಿನ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಕೆಳಗಿನ ವಿಡಿಯೋ ನೋಡುವ ಮೂಲಕ ಕೇವಲ ಎರಡು ನಿಮಿಷದಲ್ಲಿ ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿ
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಯಾರು ಅರ್ಹರಲ್ಲ
- ಮನೆಯಲ್ಲಿ ಮಕ್ಕಳು ತೆರಿಗೆ ಪಾವತಿದಾರರಾಗಿದ್ದರೆ
- GST ಪಾವತಿ ಮಾಡುವ ಕುಟುಂಬಗಳು
- APL, BPL ಕಾರ್ಡ್ ಹೊಂದಿರದ ಕುಟುಂಬಗಳು
- ಮನೆಯಲ್ಲಿ ಮಕ್ಕಳು ಅಥವಾ ಗಂಡ ಅಥವಾ ಹೆಂಡತಿ ಸರ್ಕಾರಿ ನೌಕರರಾಗಿದ್ದರೆ
- ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಯಾರಾದರೂ ತೆರಿಗೆ ಪಾವತಿಯನ್ನು ಮಾಡುತ್ತಿದ್ದರೆ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ನೀವೇನಾದರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕಾತುರದಿಂದ ಕಾಯುತ್ತಿದ್ದರೆ, ಇನ್ನೂ ಕೆಲ ದಿನಗಳ ಕಾಲ ಕಾಯಬೇಕಾಗುತ್ತದೆ, ಅಷ್ಟೇ ಅಲ್ಲದೆ ಗ್ರಾಮ ಪಂಚಾಯತ್ ಕೇಂದ್ರಗಳಲ್ಲಿಯೂ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆಯ ಡೆಮೋ ಅಪ್ಲಿಕೇಶನ್ ಹೀಗಿದೆ:
ಮೊದಲಿಗೆ ಸರ್ಕಾರದ ಖಾತರಿ ಯೋಜನೆಗಳ ಜಾಲತಾಣಕ್ಕೆ ತೆರಳಿ ಗೃಹಲಕ್ಷ್ಮಿ ಯೋಜನೆಯನ್ನು ಆಯ್ಕೆ ಮಾಡಿದ ನಂತರ ಅರ್ಜಿಯನ್ನು ಇಲ್ಲಿ ಸಲ್ಲಿಸಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ ಡೆಮೋ ಅರ್ಜಿಯ ನಮೂನೆ ಕಾಣಿಸುತ್ತದೆ. ಆದರೆ ಇಂದು ನೀವು ಈ ಅರ್ಜಿ ನಮೂನೆಯನ್ನು ಹಾಕಲು ಸಾಧ್ಯವಾಗುವುದಿಲ್ಲ ಸರ್ಕಾರದಿಂದ ಅಧಿಕೃತವಾಗಿ ಘೋಷಣೆಯ ಹೊರಡಿಸಿದ ನಂತರವೇ ಅರ್ಜಿಗಳನ್ನು ಸಲ್ಲಿಸಬಹುದು.
ಅರ್ಜಿ ನಮೂನೆಯಲ್ಲಿ ಏನೆಲ್ಲಾ ಭರ್ತಿ ಮಾಡಬೇಕು :
ಅರ್ಜಿ ನಮೂನೆಯಲ್ಲಿ, ಮೊದಲಿಗೆ ಆಧಾರ್ ಕಾರ್ಡಿನ ದೃಢೀಕರಣವನ್ನು ಮಾಡಿಕೊಳ್ಳಬೇಕು ನಂತರ ಅರ್ಜಿದಾರರ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಬೇಕು ಅವುಗಳೆಂದರೆ : ಮನೆಯ ಯಜಮಾನಿಯ ಹೆಸರು, ವಿಳಾಸ, ಆಧಾರ್ ಕಾರ್ಡ್ ಸಂಖ್ಯೆ, ಗುರುತಿನ ಚೀಟಿ ಸಂಖ್ಯೆ, ವರ್ಗ, ಬ್ಯಾಂಕ್ ವಿವರಗಳು ಹೀಗೆ ಅನೇಕ ವಿವರಗಳನ್ನು ನೋಂದಣಿ ಮಾಡಬೇಕು. ನಂತರ ಕುಟುಂಬ ಸದಸ್ಯರ ವಿವರಗಳನ್ನು ನೋಂದಣಿ ಮಾಡಬೇಕು. ಅಷ್ಟೇ ಅಲ್ಲದೆ ಪತಿಯ ಹೆಸರು ಹಾಗೂ ವಿವರಗಳನ್ನು ನೋಂದಣಿ ಮಾಡಬೇಕು. ನಂತರ ಘೋಷಣೆ ಯನ್ನು ದೊರೆಯುತ್ತದೆ. ಕೊನೆಯಲ್ಲಿ I agree ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿ ನಮೂನೆಯನ್ನು ಸಬ್ಮಿಟ್ ಮಾಡಬೇಕು. ಅರ್ಜಿ ನಮೂನೆಯನ್ನು ಸಲ್ಲಿಸಿದ ನಂತರ ನಮಗೆ ಒಂದು ಸ್ವೀಕೃತಿ ದೊರೆಯುತ್ತದೆ.
ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ : https://sevasindhugs.karnataka.gov.in/
ಇದು ಒಂದು ಮುಖ್ಯವಾದ ಮಾಹಿತಿಯಾಗಿದ್ದು, ಎಲ್ಲರಿಗೂ ಉಪಯೋಗವಾಗುತ್ತದೆ, ಆದ್ದರಿಂದ ಈ ಲೇಖನವನ್ನು ಎಲ್ಲಾ ಸ್ನೇಹಿತ ಮಿತ್ರರಿಗೂ, ಬಂಧುಗಳಿಗೂ ಹಾಗೂ ಮಹಿಳೆಯರಿಗೂ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ