GruhaLakshmi : ‘ಗೃಹಲಕ್ಷ್ಮಿ’ ಹಣ ಬಂದಿಲ್ವಾ?? ಈ ದಿನ ಎಲ್ಲರಿಗೂ ಜಮಾ ಆಗುತ್ತೆ ‘CM ಸಿದ್ಧರಾಮಯ್ಯ’ ಸಿಹಿಸುದ್ದಿ

gruhalakshmi scheme updates

ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರ (Congress government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಮಾತು ಕಥೆಗಳು ನಡೆಯುತ್ತಿವೆ. ಹಲವಾರು ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಅಗತ್ಯವಿರುವ ದಾಖಲೆಗಳನ್ನು ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ. ಇನ್ನೊಂದಿಷ್ಟು ಜನ ಸರಿಯಾದ ದಾಖಲೆಗಳನ್ನು ನೀಡಿ ಈ ಗ್ಯಾರಂಟಿ ಯೋಜನೆಗಳಿಗೆ (guarantee schemes) ಅಪ್ಲೈ ಮಾಡಿ ಈಗಾಗಲೇ ಸರ್ಕಾರದಿಂದ ಸಿಗುವ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾದರೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಹಲವಾರು ಮಹಿಳೆಯರ ಖಾತೆಗೆ ಹಣ ಬಂದಿಲ್ಲ ಏನಾಗಿದೆ ಅಂತ ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಲೇಖನವನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಗೃಹಲಕ್ಷ್ಮಿ ಯೋಜನೆ(Gruhalakshmi scheme)ಯ ಅಡಿಯಲ್ಲಿ ಹಲವಾರು ಮಹಿಳೆಯರ ಖಾತೆಗೆ (Bank Account) 2000 ರೂ ಬಂದಿದೆ. ಇನ್ನೂ ಉಳಿದ ಕೆಲವೊಂದು ಮಹಿಯರ ಖಾತೆಗೆ ಇನ್ನು ಹಣ ಬಂದಿಲ್ಲ. ಮೊದಲನೇ ಕಂತಿನ ಹಣ ಬಿಡುಗಡೆಯಾಗಿಲ್ಲ. ಸರ್ಕಾರ ಇಷ್ಟೆಲ್ಲಾ ಯೋಜನೆಗಳನ್ನ ಜಾರಿಗೆ ತಂದಿದ್ದರು, ಹಲವರಲ್ಲಿ ಅಸಮಾಧಾನ ನೀಡಲು ಕಾರಣ ಪ್ರತಿಯೊಬ್ಬ ಫಲಾನುಭವಿಗಳಿಗೂ ಕೂಡ ಸಂದಾಯವಾಗಬೇಕಿದ್ದ ಹಣ ಬಂದು ತಲುಪಿಲ್ಲ.

ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ (first instalment) ಈಗಾಗಲೇ ಮಹಿಳೆಯರ ಖಾತೆಗೆ ಜಮಾ ಆಗಿದೆ, ಇದರ ಜೊತೆಗೆ ಎರಡನೇ ಕಂತಿನ ಹಣವು ಕೂಡ ಬಿಡುಗಡೆಯಾಗಲಿದೆ. ಆದರೆ ಕೆಲವು ಫಲಾನುಭವಿ ಮಹಿಳೆಯರಿಗೆ ಮೊದಲ ಕಂತಿನ ಹಣ ಕೂಡ ಸಿಕ್ಕಿಲ್ಲ.

ಫಲಾನುಭವಿಗಳಿಗೆ 2000 ರೂ. ಸಿಕ್ಕಿಲ್ಲ ಯಾಕೆ?:

ತಮ್ಮ ಬ್ಯಾಂಕ್ ಅಕೌಂಟ್ (bank account) ನಿಂದ ಹಿಡಿದು ಆಧಾರ ಕಾರ್ಡ್ ಸೀಡಿಂಗ್ ಈ ಕೆ ವೈ ಸಿ (KYC) ಎಲ್ಲವೂ ಸರಿಯಾಗಿದ್ದರೂ ನಮಗೆ ಇನ್ನೂ ಹಣ ಬಂದಿಲ್ಲ ಎಂದು ಹಲವು ಮಹಿಳೆಯರು ಹೇಳುತ್ತಿದ್ದಾರೆ.

chanel

ಆದ್ರೆ ಸರ್ಕಾರ ತಿಳಿಸಿರುವ ಪ್ರಕಾರ ಸಾವಿರಾರು ಮಹಿಳೆಯರ ಖಾತೆ ಇನ್ನು ಸರಿಯಾಗಿಲ್ಲ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಲಿಂಕ್ ಆಗಿಲ್ಲ. ಜೊತೆಗೆ ಈ ಕೆ ವೈ ಸಿ ಆಗಿಲ್ಲ ಹಾಗೂ ಬ್ಯಾಂಕ್ ಖಾತೆ ಸಕ್ರಿಯವಾಗಿಲ್ಲ. ಎಲ್ಲ ಸಮಸ್ಯೆಗಳು ಪರಿಹಾರವಾದ ನಂತರ ಫಲಾನುಭವಿಗಳ ಖಾತೆಗೆ ಹಣ ಜಮಾ (Money Deposit to Bank Account) ಆಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಗೃಹಲಕ್ಷಿ ಯೋಜನೆಯಲ್ಲಿ ಹಣ ಸಿಗದ ಮಹಿಯರಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಸಿಹಿ ಸುದ್ದಿ :

ಗೃಹಲಕ್ಷಿ ಯೋಜನೆಯ ಅಡಿಯಲ್ಲಿ ರಾಜ್ಯದ ಕುಟುಂಬದ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ ಸಹಾಯಧನ ನೀಡಲಾಗುತ್ತಿದೆ. ಆದರೆ ಹಣ ಕೆಲ ಯಜಮಾನಿಯರ ಖಾತೆಗೆ ವರ್ಗಾವಣೆಯಾಗಿರಲಿಲ್ಲ. ಇದಕ್ಕೆಲ ಹಲವಾರು ಸಮಸ್ಯೆಗಳಿವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಯಜಮಾನಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2000 ರೂ ಹಣ ತಾಂತ್ರಿಕ ಸಮಸ್ಯೆಯಿಂದ ಬರುತ್ತಿಲ್ಲ ಎಂದು ತಿಳಿಸಿದ್ದಾರೆ. ಇವರಿಗೂ ತಾಂತ್ರಿಕ ಸಮಸ್ಯೆ ಸರಿ ಪಡಿಸೋ ಮೂಲಕ 2000 ರೂ ಹಣವನ್ನು ಡಿಬಿಟಿ ಮೂಲಕ ಖಾತೆಗೆ ಜಮಾ ಮಾಡಲಾಗುತ್ತದೆ ಅಂತ ತಿಳಿಸಿದರು.

ರಾಜ್ಯದಲ್ಲಿನ ಯಜಮಾನಿ 1.26 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈಗಾಗಲೇ ಇವರಲ್ಲಿ 1.10 ಕೋಟಿ ಯಜಮಾನಿ ಮಹಿಳೆಯರ ಖಾತೆಗೆ ಡಿಬಿಟಿ ಮೂಲಕ 2000 ರೂ ಹಣವನ್ನು ಜಮಾ ಮಾಡಲಾಗಿದೆ. ಆದರೇ 16 ಲಕ್ಷ ಜನರಿಗೆ ಬ್ಯಾಂಕ್ ಖಾತೆ, ಆಧಾರ್ ಜೋಡಣೆಯಾಗದ ತಾಂತ್ರಿಕ ಕಾರಣದಿಂದ ಜಮಾ ಆಗಿಲ್ಲ. ಈ ಸಮಸ್ಯೆ ಸರಿ ಪಡಿಸಿ ಕೆಲವೇ ದಿನಗಳಲ್ಲಿ ಹಣವನ್ನು ಯಜಮಾನಿಯರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

One thought on “GruhaLakshmi : ‘ಗೃಹಲಕ್ಷ್ಮಿ’ ಹಣ ಬಂದಿಲ್ವಾ?? ಈ ದಿನ ಎಲ್ಲರಿಗೂ ಜಮಾ ಆಗುತ್ತೆ ‘CM ಸಿದ್ಧರಾಮಯ್ಯ’ ಸಿಹಿಸುದ್ದಿ

  1. Bro nam ಅಮ್ಮನಿಗೆ first ಕಂತು ಹಣ ಬಂದಿದೆ ಆದ್ರೆ second ಕಂತು ಬಂದಿಲ್ಲ
    ಎನ್ ಮಾಡ್ಬೇಕು

Leave a Reply

Your email address will not be published. Required fields are marked *

error: Content is protected !!