ಕರ್ನಾಟಕ ಸರಕಾರ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಯ ಹಣ ಗೃಹಿಣಿಯರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆಯ ಮೂಲಕ ಪ್ರತೀ ತಿಂಗಳು ಹಣ ವರ್ಗಾವಣೆ ಆಗುತ್ತಿದೆ. ಇನ್ನು ನೋಡುವುದಾದರೆ ವಾರ್ಷಿಕವಾಗಿ ಪ್ರತೀ ಕುಟುಂಬದ ಯಜಮಾನಿಗೆ 24000 ರೂಪಾಯಿಯನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಕರ್ನಾಟಕ ರಾಜ್ಯದಲ್ಲಿ ಈ ಯೋಜನೆಯ ಲಾಭವನ್ನು ಈಗಾಗಲೇ ಕೋಟ್ಯಾಂತರ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಆದರೆ 6 ಮತ್ತು 7ನೇ ಕಂತಿನ ಹಣ ನಮ್ಮ ಖಾತೆಯನ್ನು ಬಂದೇ ಇಲ್ಲ ಎಂದು ಕೆಲವು ಮಹಿಳೆಯರು ದುರುತ್ತಿದ್ದಾರೆ, ಹಾಗಾದರೆ ಹಣ ಬರೆದಿರುವುದಕ್ಕೆ ಕಾರಣ ಏನು ಎಂಬುದನ್ನು ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮಹಿಳೆಯರಿಗೆ ಬರುವುದಿಲ್ಲ 6 ಮತ್ತು 7ನೇ ಕಂತಿನ ಹಣ
ರಾಜ್ಯದಲ್ಲಿ ಬಿಪಿಎಲ್ ಮತ್ತು ಅಂತೋದಯ ಕಾರ್ಡ್ ಹೊಂದಿರುವ ಎಲ್ಲಾ ಮಹಿಳೆಯರು ಲಕ್ಷ್ಮಿ ಯೋಜನೆಯ 2,000 ಹಣ ಪಡೆಯುತ್ತಿದ್ದು, ಈಗಾಗಲೇ 6 ಕಂತುಗಳನ್ನ ಪಡೆದುಕೊಂಡಿದ್ದಾರೆ. ಆದರೆ ರಾಜ್ಯದಲ್ಲಿ3 ಎಕರೆಗಿಂತ ಜಾಸ್ತಿ ಕೃಷಿ ಜಮೀನು ಇದ್ದವರು, ಹೆಚ್ಚಿಗೆ ಟ್ಯಾಕ್ಸ್ ಕಟ್ಟುವವರು ಹೀಗೆ ಅನೇಕ ಸೌಲಭ್ಯ ಇದ್ದವರು ಕೂಡಾ ನಕಲಿ BPL ಕಾರ್ಡ್ ಅನ್ನು ಹೊಂದಿದ್ದಾರೆ. ಈ ವರ್ಗದ ಜನರ ರೇಷನ್ ಕಾರ್ಡ್ ಗಳನ್ನು ಪ್ರತಿ ತಿಂಗಳು ಪತ್ತೇ ಮಾಡಿ ಅಂತವರ ರೇಷನ್ ಕಾರ್ಡ್ ಗಳನ್ನು ಆಹಾರ ಇಲಾಖೆ ರದ್ದುಪಡಿಸುತ್ತಿದ್ದು, ಈ ರದ್ದಾದ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಗೃಹಲಕ್ಷ್ಮಿ ಹಣ ಬರುವುದಿಲ್ಲ.
ಇಂಥವರ ರೇಷನ್ ಕಾರ್ಡ್ ರದ್ದುಪಡಿಸಲು ಆದೇಶ
ಹೌದು, ಐಷಾರಾಮಿ ಕಾರು ಇದ್ದವರು, ಸರಕಾರಿ ಕೆಲಸ ಮಾಡುವವರು, 3 ಎಕರೆಗಿಂತ ಜಾಸ್ತಿ ಕೃಷಿ ಜಮೀನು
ಇದ್ದವರು, ಹೆಚ್ಚಿಗೆ ಟ್ಯಾಕ್ಸ್ ಕಟ್ಟುವವರು ಹೀಗೆ ಅನೇಕ ಸೌಲಭ್ಯ ಇದ್ದವರು ಕೂಡಾ ನಕಲಿ BPL ಕಾರ್ಡ್ ಅನ್ನು ಹೊಂದಿದ್ದಾರೆ. ಆಹಾರ ಇಲಾಖೆಯು ಇಂತಹ ನಕಲಿ BPL ಕಾರ್ಡನ್ನು ಹೊಂದಿದವರ ಪತ್ತೆ ಹಚ್ಚಿ ಅವರ ration card ರದ್ದುಗೊಳಿಸುತ್ತಿದ್ದಾರೆ, ಮತ್ತು ದಂಡ ಕೂಡ ವಿಧಿಸಲಾಗುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಸುಮಾರು 4.6 ಲಕ್ಷ ನಕಲಿ ಕಾರ್ಡ್ ಇರುವವರಿಗೆ ದಂಡ ವಿಧಿಸಿದೆ. ಮತ್ತು ಸಾರಿಗೆ ಇಲಾಖೆಯ ಸಹಾಯದಿಂದ 12,583 ಜನರ BPL ಕಾರ್ಡ್ ಇದ್ದವರ ಐಷಾರಾಮಿ ಕಾರ್ ಮತ್ತು white board ಕಾರ್ ಗಳನ್ನು ಹೊಂದಿದ್ದಾರೆ ಎಂದು ಪತ್ತೆ ಹಚ್ಚಿದೆ.
ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
6ನೇ ಕಂತಿನ ಹಣ ( 6th installment money ) ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ ಅಂದ್ರೆ ಈ ಕೆಲಸ ಮಾಡಿ
ಈಗಾಗಲೇ ಸರ್ಕಾರ ತಿಳಿಸಿರುವಂತೆ 6ನೇ ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಾರದೇ ಇದ್ದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ (Aadhaar seeding) ಆಗಿದ್ಯೋ ಇಲ್ಲವೋ ಎಂಬುದನ್ನು ಚೆಕ್ ( Check ) ಮಾಡಿ ಕೊಳ್ಳಬೇಕು.
2. ಹತ್ತಿರದ ಪೋಸ್ಟ್ ಆಫೀಸ್ನಲ್ಲಿ ( post office ) ಹೊಸ ಖಾತೆಯನ್ನು ಆರಂಭಿಸಿ. ಅದಕ್ಕೆ ಬೇಕಾದ ದಾಖಲೆಗಳನ್ನು ನೀಡಿದರೆ. ನಿಮ್ಮ ಬ್ಯಾಂಕ್ ಖಾತೆಗೆ ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿಯ ಯೋಜನೆಯ ಎಲ್ಲಾ ಕಂತಿನ ಹಣವು ಜಮಾ ಆಗುತ್ತದೆ.
ಇನ್ನೇನು ಮಾರ್ಚ್ ತಿಂಗಳು ಮುಗಿಯುತ್ತ ಬಂದಿದೆ. ಆದ್ದರಿಂದ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಹೌದು ರಾಜ್ಯದ ಮಹಿಳೆಯರಿಗೆ ಈಗಾಗಲೇ ಹಣ ಬಿಡುಗಡೆಯಾಗಿದ್ದು, ಎಲ್ಲಾ ಮಹಿಳಾ ಫಲಾನುಭವಿಗಳು ನಿಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿಕೊಳ್ಳಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಗೃಹಲಕ್ಷ್ಮಿ, ಅನ್ನಭಾಗ್ಯದ ಪೆಂಡಿಂಗ್ ಹಣಕ್ಕೆ ಕಾಯುತ್ತಿರುವ ಎಲ್ಲರಿಗೂ ಬಿಗ್ ಅಪ್ಡೇಟ್ ಇಲ್ಲಿದೆ.
- SSP ವಿದ್ಯಾರ್ಥಿ ವೇತನ 2024, ಆನ್ಲೈನ್ ಅರ್ಜಿ ಸಲ್ಲಿಸಿ | Karnataka SSP Scholarship 2024
- ಈ ವರ್ಗದ ಮಹಿಳೆಯರಿಗೆ, ಉಚಿತ ಹೊಲಿಗೆ ಯಂತ್ರ ತರಬೇತಿಗೆ ಅರ್ಜಿ ಅವ್ಹಾನ!
- ವೋಟರ್ ಐಡಿಗೆ ಅರ್ಜಿ ಸಲ್ಲಿಸುವುದು ಹೇಗೆ? ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸುವ ವಿಡಿಯೋ ಇಲ್ಲಿದೆ
- ಬರೀ 5 ವರ್ಷದಲ್ಲಿ ಹಣ ಡಬಲ್ ಆಗುವ ಹೊಸ ಎಲ್ಐಸಿ ಯೋಜನೆ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.