ಅತೀ ಕಡಿಮೆ ಬೆಲೆಗೆ ಲಭ್ಯವಿದ್ದು, ಹೆಚ್ಚು ದೂರ ಕ್ರಮಿಸಬಲ್ಲ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ ಜಿಟಿ ಫೋರ್ಸ್ (GT Porsche)!
ಇಂದು ಎಲ್ಲಿ ನೋಡಿದರಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು (electric vehicles) ಕಾಣುತ್ತೇವೆ. ಎಲೆಕ್ಟ್ರಿಕ್ ವಾಹನಗಳು ತನ್ನತ್ತ ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ. ಇದೇಕ್ಕೆಲ್ಲ ಕಾರಣ, ಬಿಡುಗಡೆಯಾಗುವ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಆಕರ್ಷಕವಾಗಿದ್ದು, ಉತ್ತಮ ಫೀಚರ್ಸ್ ಗಳನ್ನು ಒಳಗೊಂಡಿರುತ್ತವೆ. ಇಂದು ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಮತ್ತು ಇಂಧನ ಚಾಲಿತ ವಾಹನಗಳ ನಡುವೆ ದೊಡ್ಡ ಪೈಪೋಟಿಯೇ (competition) ನಡೆದಿದೆ. ಪ್ರತಿ ದಿನ ವಿವಧ ಕಂಪನಿಗಳು ಹೊಸ ಹೊಸ ತಂತ್ರಜ್ಞಾನ (new technology) ಅಳವಡಿತ ವಾಹನಗಳನ್ನು ಬಿಡುಗಡೆ ಮಾಡುತ್ತಿರುತ್ತಾರೆ. ಹಾಗೆಯೇ ಇದೀಗ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಒಂದು ಬಿಡುಗಡೆ ಯಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಜಿಟಿ ಫೋರ್ಸ್ ನ ಬಹುನಿರೀಕ್ಷಿತ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಜಿಟಿ ಟೆಕ್ಸಾ (GT Texa) :
ಜಿಟಿ ಪೋರ್ಸ್ ಇದೀಗ ತನ್ನ ಹೊಸ ಎಲೆಕ್ಟ್ರಿಕ್ ಮೋಟಾರ್ ಸೈಕಲ್ (electric motor cycle) ಅನ್ನು ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಬಹಳ ವೈಶಿಷ್ಟಗಳನ್ನು ಹೊಂದಿದ್ದು, ಹೆಚ್ಚು ಮೈಲೇಜ್ ನೀಡುತ್ತದೆ. ನಗರ ಸವಾರರಿಗಾಗಿಯೇ, ಈ ಮೋಟಾರ್‌ಸೈಕಲ್ ಅನ್ನು ವಿನ್ಯಾಸಗೊಳಿಸಲಾಗಿದ್ದು, GT ಟೆಕ್ಸಾ ಹೆಚ್ಚು ಇನ್ಸುಲೇಟೆಡ್ BLDC ಮೋಟಾರ್ ಅನ್ನು ಹೊಂದಿದೆ. 80 ಕಿ.ಮೀ ಗರಿಷ್ಟ ವೇಗವನ್ನು ತಲುಪಬಲ್ಲ ಸಾಮರ್ಥ್ಯದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ, ರಾಜಿಯಾಗದ ಪರ್ಫಾಮೆನ್ಸ್ ನೀಡುವುದಾಗಿ ಜಿಟಿ ಫೋರ್ಸ್ ಕಂಪನಿ ತಿಳಿಸಿದೆ.
ಜಿಟಿ ಟೆಕ್ಸಾ ಮೋಟಾರ್‌ಸೈಕಲ್‌ನ ಬ್ಯಾಟರಿ ಪ್ಯಾಕ್ ಅಪ್ (battery pack up) :
ಇದೀಗ ಬಿಡುಗಡೆ ಗೊಂಡಿರುವ ಈ ಹೊಸ ಜಿಟಿ ಟೆಕ್ಸಾ ಮೋಟಾರ್‌ಸೈಕಲ್‌ನಲ್ಲಿ 3.5 kWh Lithium-Ion ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಒಂದೇ ಚಾರ್ಜ್‌ನಲ್ಲಿ 120 ರಿಂದ 130 ಕಿ.ಮೀ ರೇಂಜ್ ನೀಡುತ್ತದೆ. ಇದಕ್ಕೆ ನೀಡಲಾಗಿರುವ ಆಧುನಿಕ ಮೈಕ್ರೋ-ಚಾರ್ಜರ್‌ನೊಂದಿಗೆ, ಮೋಟಾರ್‌ಸೈಕಲ್ ಅನ್ನು ಕೇವಲ 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.
ಈ ಮೋಟಾರ್ ಸೈಕಲ್ ಎರಡು ಬಣ್ಣಗಳಲ್ಲಿ (colors) ಲಭ್ಯವಿದೆ :
ಬ್ಲಾಕ್ & ರೆಡ್ ಎರಡು ಬಣ್ಣದ ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ.
ನಗರ ಪ್ರದೇಶಗಳಲ್ಲಿ ಸಲಿಸಾದ ಸವಾರಿ ಮಾಡಬಹುದು :
GT ಟೆಕ್ಸಾ ಮೋಟಾರ್‌ಸೈಕಲ್, 180 ಕೆ.ಜಿ ಲೋಡ್ ಸಾಮರ್ಥ್ಯ ಮತ್ತು 18 ಡಿಗ್ರಿಗಳ ಗ್ರೇಡಬಿಲಿಟಿಯೊಂದಿಗೆ ನಗರ ಪ್ರದೇಶಗಳಲ್ಲಿ ಸಲೀಸಾಗಿ ರೈಡ್ ಮಾಡಲು ವಿನ್ಯಾಸಗೊಳಿಸಲಾಗಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಟೆಲಿಸ್ಕೋಪಿಕ್ ಡ್ಯುಯಲ್ ಸಸ್ಪೆನ್ಶನ್ ನೀಡಲಾಗಿದ್ದು, ಒರಟಾದ ರಸ್ತೆಗಳಲ್ಲಿಯೂ ಆರಾಮದಾಯಕ ಸವಾರಿ ಮಾಡಬಹುದು.
ಬ್ರೇಕಿಂಗ್ & ಟೈರ್ ನ ವಿವರ :
GT ಟೆಕ್ಸಾ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದ್ದು, ಮುಂಭಾಗದ ಟೈರ್ ಗಾತ್ರ 80-100/18 ಮತ್ತು ಹಿಂಭಾಗದ ಟೈರ್ ಗಾತ್ರ 120-80/17 ಇದೆ. ಹಾಗೆಯೇ ಈ ಟೈರ್‌ಗಳಿಗೆ ಅನುಗುಣವಾಗಿ ಮುಂಭಾಗದಲ್ಲಿ 457.2 ಎಂಎಂ ಮತ್ತು ಹಿಂಭಾಗದಲ್ಲಿ 431.8 ಎಂಎಂ ಅಳತೆಯ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ. ಜೊತೆಗೆ ಎರಡೂ ವೀಲ್‌ಗಳಲ್ಲಿ ಡಿಸ್ಕ್ ಬ್ರೇಕ್ ನೀಡಿದ್ದು, ಉತ್ತಮ ಬ್ರೇಕಿಂಗ್‌ಗಾಗಿ E-ABS ಅಳವಡಿಸಲಾಗಿದೆ.
ಜಿಟಿ ಟೆಕ್ಸ ಇತರ ವೈಶಿಷ್ಟ್ಯಗಳು (other features) :
ಸವಾರರು ರಿಮೋಟ್ ಸ್ಟಾರ್ಟ್ ಅಥವಾ ಕೀಲಿಯನ್ನು ಬಳಸಿಕೊಂಡು ವಾಹನವನ್ನು ಪ್ರಾರಂಭಿಸಬಹುದು, ಇದರಲ್ಲಿನ 17.78 CM LED ಡಿಸ್ಪ್ಲೇ ಅನುಕೂಲಕರ ಮಾಹಿತಿಯನ್ನು ಒದಗಿಸುತ್ತದೆ. ಡಿಜಿಟಲ್ ಸ್ಪೀಡೋಮೀಟರ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್, ಎಲ್ಇಡಿ ಹೆಡ್ಲೈಟ್, ಟೈಲ್ ಲೈಟ್ ಮತ್ತು ಟರ್ನ್ ಸಿಗ್ನಲ್ ಲ್ಯಾಂಪ್‌ಗಳನ್ನು ಫ್ಯೂಚರಿಸ್ಟಿಕ್ ಆಗಿ ನೀಡಲಾಗಿದೆ. 770 ಮಿ.ಮೀ ಸ್ಯಾಡಲ್ ಎತ್ತರ ಮತ್ತು 145 ಎಂಎಂ ಗ್ರೌಂಡ್ ಕ್ಲಿಯರೆನ್ಸ್, 120 ಕೆ.ಜಿ ಹಗುರವಾದ ಕರ್ಬ್ ತೂಕದಿಂದ ಸವಾರರು ಸುಲಭವಾಗಿ ಬೈಕ್ ಅನ್ನು ನಿಯಂತ್ರಿಸಬಹುದು.
GT ವೇಗಾಸ್, GT Ryd Plus, GT One Plus Pro ಮತ್ತು GT ಡ್ರೈವ್ ಪ್ರೊ ಸೇರಿದಂತೆ GT ಯ ಇತ್ತೀಚಿನ ಶ್ರೇಣಿಯ ಹೆಚ್ಚಿನ ಮತ್ತು ಕಡಿಮೆ-ವೇಗದ EV ದ್ವಿಚಕ್ರ ವಾಹನಗಳನ್ನು ಈಗಾಗಲೇ ಮಾರಾಟ ಮಾಡುತ್ತಿದ್ದು, ಕಂಪನಿಯು ತನ್ನ ಪರಿಸರ ಸ್ನೇಹಿ ವಾಹನಗಳನ್ನು ಹೆಚ್ಚಿಸಲು, 2024ರ ಅಂತ್ಯದ ವೇಳೆಗೆ ಒಟ್ಟು 100 ಡೀಲರ್‌ಶಿಪ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಿಕೊಂಡಿರುವುದಾಗಿ ಕಂಪನಿ ತಿಳಿಸಿದೆ.
ಜಿಟಿ ಟೆಕ್ಸಾದ ಬೆಲೆ (price) :
ಅತೀ ಕಡಿಮೆ ಬೆಲೆಗೆ 130 ಕಿಮೀ ಚಲಿಸಬಲ್ಲ ಈ ಜಿಟಿ ಟೆಕ್ಸಾವನ್ನು ರೂ. 1,19,555 ಎಕ್ಸ್ ಶೋ ರೂಂ ಬೆಲೆಗೆ ಬಿಡುಗಡೆ ಮಾಡಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.