ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಕಡ್ಡಾಯ.!

1000348064

ಹೊಸ ವರ್ಷದ(new year) ಸಂಭ್ರಮದಲ್ಲಿರುವ ಎಲ್ಲರೂ ಗಮನಿಸಬೇಕಾದ ವಿಷಯ. ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಪ್ರಕಟ!.

Guidelines for New Year celebrations:// ಹೊಸ ವರ್ಷ ಆರಂಭವಾಗುತ್ತದೆ. ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಹೊಸತನದಲ್ಲಿ ಹೊಸದಾಗಿ ಹೊಸ ವರ್ಷವನ್ನು ಸ್ವಾಗತಿಸಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಹೊಸ ವರ್ಷಕ್ಕಾಗಿ ಹೊಸ ಹೊಸ ಪ್ಲಾನ್ ಗಳನ್ನು ಹಾಕಿಕೊಂಡು ಹೊಸ ವರ್ಷವನ್ನು ಸ್ವಾಗತಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಸಾಮಾನ್ಯವಾಗಿ ಸಂತೋಷದಲ್ಲಿರುವಾಗ ತಪ್ಪುಗಳು ಅಥವಾ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಜನರಿಗೆ ಹೊಸ ವರ್ಷದ ಆಚರಣೆ ಸಮಯದಲ್ಲಿ ಯಾವುದೇ ರೀತಿಯ ತೊಂದರೆಯಾಗಬಾರದೆಂದು ಮುನ್ನೆ ಎಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯಿಂದ(police department) ಕೆಲವು ಮಾರ್ಗಸೂಚಿ ಕ್ರಮಗಳನ್ನು ಪ್ರಕಟಿಸಲಾಗಿದೆ. ಈ ಎಲ್ಲಾ ನಿಯಮಗಳನ್ನು ಪಾಲಿಸುವಂತೆ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ(press release) ತಿಳಿಸಿದೆ.  ಅದರಲ್ಲೂ ಬೆಂಗಳೂರು ನಗರದ ಜನರು ಹೊಸ ವರ್ಷವನ್ನು ಸಂಭ್ರಮ ಸಡಗರಿದಿಂದ ಆಚರಿಸುತ್ತಾರೆ. ಆದ್ದರಿಂದ ಹೊಸ ವರ್ಷದ ಖುಷಿಯಲ್ಲಿರುವ ಮಕ್ಕಳು ಹಾಗೂ ಮಹಿಳೆಯರು ಸಾರ್ವಜನಿಕರು ಸೇರಿದಂತೆ  ಎಲ್ಲರನ್ನು ಗಮನದಲ್ಲಿಟ್ಟುಕೊಂಡು ನಗರದಾದ್ಯಂತ ಯಾವುದೇ ಅಹಿತಕರ ಘಟನೆಗಳಿಗೆ ನಡೆಯದಂತೆ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಯಾವ ರೀತಿಯ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ನಗರದಲ್ಲಿ(Bangalore city) ಹೊಸ ವರ್ಷಾಚರಣೆಯನ್ನು ಶಿಸ್ತಿನಿಂದ ಮತ್ತು ಸುರಕ್ಷಿತವಾಗಿ ಆಚರಿಸಲು ಪೊಲೀಸರು ಹಲವು ಮಾರ್ಗಸೂಚಿಗಳನ್ನು(guidelines) ಪ್ರಕಟಿಸಿದ್ದಾರೆ. ಈ ನಿಯಮಗಳು ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯನ್ನು(Law and order) ಕಾಪಾಡಲು ಉದ್ದೇಶಿತವಾಗಿವೆ.

ಯಾವ ಸಮಯದವರಿಗೆ ಹೊಸ ವರ್ಷವನ್ನು ಆಚರಿಸಬಹುದು.

ಡಿಸೆಂಬರ್ 31ರಂದು(December 31st) ರಾತ್ರಿ 1 ಗಂಟೆಯವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ ನೀಡಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ(City Police Commissioner) ಬಿ. ದಯಾನಂದ್‌(B. Dayanand) ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಯಾವ ಯಾವ ಸ್ಥಳಗಳಲ್ಲಿ ಬಂದೋಬಸ್ತ್ ಮಾಡಲಾಗಿದೆ:

ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್‌ ಮಾರ್ಕ್ಸ್ ರಸ್ತೆ, ಕಬ್ಬನ್‌ ಪಾರ್ಕ್‌, ಟ್ರಿನಿಟಿ ಸರ್ಕಲ್, ಫೀನಿಕ್ಸ್‌ ಮಾಲ್, ಕೋರಮಂಗಲ, ಇಂದಿರಾನಗರ 100 ಅಡಿ ರಸ್ತೆ, ಪ್ರಮುಖ ಸ್ಟಾರ್ ಹೋಟೆಲ್‌ಗಳು, ಪಬ್‌ಗಳು, ಕ್ಲಬ್‌ಗಳು ಮುಂತಾದ ಸ್ಥಳಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಸೂಕ್ತ ಬಂದೋಬಸ್ತ್ ಮಾಡಲಾಗಿದೆ.

ಯಾವ ರೀತಿಯ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ:

ಹೊಸ ವರ್ಷಾಚರಣೆಯ ಬಂದೋಬಸ್ತ್‌ ಗೆ ಒಟ್ಟು 11,830 ಪೊಲೀಸರನ್ನು ನಿಯೋಜಿಸಲಾಗಿದೆ. ಎಂ.ಜಿ. ರಸ್ತೆಯಲ್ಲಿ ಮಾತ್ರ 2,572 ಪೊಲೀಸರನ್ನು ನಿಯೋಜಿಸಲಾಗಿದೆ.
ಮಹಿಳೆಯರ ಸುರಕ್ಷತೆಗಾಗಿ( women safety ) ಪ್ರಮುಖ ಸ್ಥಳಗಳಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿರುವ ಮಹಿಳಾ ಸುರಕ್ಷತಾ ಸ್ಥಳಗಳನ್ನು ತೆರೆಯಲಾಗಿದೆ. ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
ಹೆಚ್ಚುವರಿಯಾಗಿ ಸಿಸಿ ಕ್ಯಾಮೆರಾ, ಡ್ರೋನ್‌ ಕ್ಯಾಮೆರಾ ಕಾರ್ಯಾಚರಣೆಗೊಳಿಸಲಾಗಿದೆ. ನಗರದ ಪ್ರಮುಖ ಸ್ಥಳಗಳನ್ನು ಶ್ವಾನದಳ ಮತ್ತು ಎ.ಎಸ್‌.ಚೆಕ್‌ ತಂಡಗಳಿಂದ ತಪಾಸಣೆ ಕೈಗೊಳ್ಳಲಾಗುತ್ತದೆ.

ಆ ದಿನ ಯಾವ ರೀತಿಯ ಸಂಚಾರ ನಿಯಮಗಳು ಇರಲಿವೆ :

ಡಿಸೆಂಬರ್ 31ರಂದು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನಗರದ ಎಲ್ಲ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಎಂ.ಜಿ. ರಸ್ತೆಗೆ(MG road) ಪ್ರವೇಶಿಸುವವರಿಗೆ ಅನಿಲ್‌ ಕುಂಬ್ಳೆ ಸರ್ಕಲ್‌ನಿಂದ ಹಾಗೂ ಮೆಯೋ ಹಾಲ್‌ ಜಂಕ್ಷನ್‌ ಮೂಲಕ ಎಂ.ಜಿ.ರಸ್ತೆ ಪ್ರವೇಶಿಸಬಹುದಾಗಿದೆ. ಬ್ರಿಗೇಡ್‌ ರಸ್ತೆಯಲ್ಲಿ ಏಕಮುಖ ನಡಿಗೆ ವ್ಯವಸ್ಥೆ ಮಾಡಲಾಗಿದೆ.

ಯಾವ ರೀತಿಯ ನಿಷೇಧಗಳನ್ನು ಏರಲಾಗಿದೆ :

ಪಟಾಕಿಗಳನ್ನು ಸಿಡಿಸುವುದು, ಮದ್ಯಪಾನ ಮತ್ತು ಮಾದಕ ವಸ್ತುಗಳನ್ನು ಸೇವಿಸಿ ವಾಹನ ಚಾಲನೆ ಮಾಡುವುದು ಕಾನೂನುಬಾಹಿರವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ(Alcohol) ಮತ್ತು ಧೂಮಪಾನವನ್ನು ಮಾಡುವುದು ಕಾನೂನುಬಾಹಿರವಾಗಿರುತ್ತದೆ.

ಇನ್ನು ಸಾರ್ವಜನಿಕರಿಗೆ ಯಾವೆಲ್ಲ ಎಚ್ಚರಿಕೆಗಳನ್ನು ನೀಡಲಾಗಿದೆ :

ಮಹಿಳೆಯರು ಮತ್ತು ಮಕ್ಕಳು ಬೆಲೆಬಾಳುವ ಆಭರಣಗಳನ್ನು ಧರಿಸದೇ ಇರುವುದು ಒಳಿತು. ಮೊಬೈಲ್‌ ಫೋನ್‌ (mobile phone)ಮತ್ತು ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಇನ್ನು ವರ್ಷಾಚರಣೆಯ ಪ್ರಯುಕ್ತ ನಗರ ಪೊಲೀಸರು ಕೆಲವು ಸಲಹಾ ಸೂಚನೆಗಳನ್ನು ಸಾರ್ವಜನಿಕರು, ಮಹಿಳೆಯರು, ಮತ್ತು ಮಕ್ಕಳ ಭದ್ರತೆ ಮತ್ತು ಸುರಕ್ಷತೆ ದೃಷ್ಠಿಯಿಂದ ನೀಡಿದ್ದಾರೆ. ಅವುಗಳನ್ನು ಕಡ್ಡಾಯವಾಗಿ ಸಾರ್ವಜನಿಕರು ಪಾಲಿಸಬೇಕಾಗಿ ವಿನಂತಿ ಮಾಡಲಾಗಿದೆ.

ಹೊಸ ವರ್ಷದ ಆಚರಣೆ ಸಮಯದಲ್ಲಿ ಸಾರ್ವಜನಿಕರು ಮಾಡಬೇಕಾದ ಅಂಶಗಳು.

ಶಾಂತಿಯುತವಾಗಿ ಹೊಸ ವರ್ಷಾಚರಣೆಯನ್ನು  ಆಚರಿಸಬೇಕು.
ನಿಯಮಿತವಾಗಿ ವಾಹನ ಚಾಲನೆ ಮಾಡಿ ಮತ್ತು ಸಂಚಾರಿ ನಿಮಯಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅದರಲ್ಲೂ ಕಾನೂನು ನಿಯಮಗಳನ್ನು(Legal rules) ಮುರಿಯಬಾರದು.
ಇನ್ನು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಯವರಿಗೆ ಸಾರ್ವಜನಿಕರು ಶಾಂತಿ ಮತ್ತು ಶಿಸ್ತನ್ನು ಕಾಪಾಡಲು  ಸಹಕರಿಸಬೇಕು.
ಪೊಲೀಸರು ಮತ್ತು ಸ್ಥಳೀಯ ಆಡಳಿತದಿಂದ ಅನುಮೋದಿಸಲ್ಪಟ್ಟ ಅಧೀಕೃತ ಸ್ಥಳಗಳಲ್ಲಿ ವರ್ಷಾಚರಣೆಯನ್ನು ಆಚರಿಸಿ.
ತುರ್ತು ಸಂದರ್ಭಗಳಲ್ಲಿ 112 ಅಥವಾ ಮೀಪದ ಪೊಲೀಸ್ ಠಾಣೆಯನ್ನು/ಪೊಲೀಸ್ ಕಿಯೋಸ್ಕ್ ಅನ್ನು ಸಂಪರ್ಕಿಸುವುದು.
ಹೊಸ ವರ್ಷದ ಸಂದರ್ಭದಲ್ಲಿ ಅಕ್ಕಪಕ್ಕದವರ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಕಾಳಜಿವಹಿಸಬೇಕು.
ನಿರ್ಜನ ಪ್ರದೇಶದಲ್ಲಿ ಆಚರಿಸುವ ಬದಲಿಗೆ ಹೆಚ್ಚು ಬೆಳಕಿರುವ ಪ್ರದೇಶಗಳಲ್ಲಿ ವರ್ಷಾಚರಣೆಯನ್ನು ಆಚರಿಸಿ.
ಸಾರ್ವಜನಿಕರು ಮಹಿಳೆಯರು, ಮಕ್ಕಳು ಮತ್ತು ಹಿರಿಯರ ಸುರಕ್ಷತೆ ಬಗ್ಗೆ ಗಮನಹರಿಸುವುದು.
ಇನ್ನು, ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ಸಾರ್ವಜನಿಕರು ಹೆಚ್ಚು ಜಾಗರೂಕತೆಯಿಂದ ಇರಬೇಕು.
ಯಾವುದೇ ಅಹಿತಕರ ಘಟನೆ/ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಹತ್ತಿರದ ಪೊಲೀಸರಿಗೆ ಮಾಹಿತಿಯನ್ನು ನೀಡುವುದು.
ತಮ್ಮ ಕುಟುಂಬದವರಿಗೆ ನೀವು ಏನು ಮಾಡುತ್ತಿದ್ದೀರಿ ಎಂದು ಆಗಾಗ ಅವರಿಗೆ ಮಾಹಿತಿ ನೀಡುತ್ತಿರುವುದು ಸೂಕ್ತ.
ವರ್ಷಾಚರಣೆಯನ್ನು ಆಚರಿಸುವ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಬೆಲೆಬಾಳುವ ಆಭರಣಗಳನ್ನು ಧರಿಸದೇ ಇರುವುದು ಒಳಿತು. ಅಲ್ಲದೇ ಮೊಬೈಲ್ ಫೋನ್ ಮತ್ತು ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು.
ಬೇರೆ ಧರ್ಮದವರಿಗೆ ಯಾವುದೇ ರೀತಿಯಾಗಿ ನೋವನ್ನು ಮಾಡದೆ, ಅವರಿಗೆ ಘಾಸಿಯಾಗದಂತೆ ವರ್ಷಚರಣೆಯನ್ನು ಆಚರಿಸಿ.
ಭದ್ರತಾ ಸಿಬ್ಬಂಧಿಗಳಾದ ಪೊಲೀಸ್, ಹೋಂ ಗಾರ್ಡ್, ಜೊತೆ ಸಾರ್ವಜನಿಕರು ಸಹಕರಿಸಬೇಕು.
ಇನ್ನು ಆ ದಿನ ಆಟೋ ಅಥವಾ ಕ್ಯಾಬ್‌ಗಳಲ್ಲಿ ಪ್ರಯಾಣಿಸುವಾಗ ಆಟೋ ಅಥವಾ ಕ್ಯಾಂಬ್ ಅದೀಕೃತವೇ ಎಂದು ಖಚಿತಪಡಿಸಿಕೊಳ್ಳಿ.
ಈಗಾಗಲೇ ಪೊಲೀಸರು ಸೂಚಿಸಿರುವ ರಸ್ತೆಗಳಲ್ಲಿ ಸಾರ್ವಜನಿಕರು ಸಂಚರಿಸಬೇಕು.

ಅಧಿಕೃತ ಸೂಚನೆಗಳು:

ಡಿಸೆಂಬರ್ 31ರಂದು ರಾತ್ರಿ ಬಿಗಿ ಪೊಲೀಸ್ ಭದ್ರತೆ(Police security) ಕಲ್ಪಿಸಲಾಗುತ್ತದೆ. ಹೊಸ ವರ್ಷಾಚರಣೆಗೆ ಹೆಚ್ಚು ಜನ ಸೇರುವ ಪ್ರದೇಶಗಳಾದ ಎಂಜಿ ರಸ್ತೆ, ಕಮರ್ಷಿಯಲ್ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾ ನಗರ ಮೊದಲಾದ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚನೆ ನೀಡಲಾಗಿದೆ.
ಡ್ರಗ್ಸ್ ಉಪಟಳಕ್ಕೆ ಕಡಿವಾಣ ಹಾಕಲು ನಗರದಾದ್ಯಂತ ಒಂದು ವಾರದಿಂದ ನಿರಂತರ ಪರಿಶೀಲನೆ ನಡೆಯುತ್ತಿದೆ. ಸಿಸಿಬಿ ಅಧಿಕಾರಿಗಳು(CCB officer) ಮಾದಕ ವಸ್ತು ಸಂಗ್ರಹಿಸಿದ್ದ ಮನೆಗಳ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ.

ಗಮನಿಸಿ :

ಬೆಂಗಳೂರು ನಗರದಲ್ಲಿ ಹೊಸ ವರ್ಷಾಚರಣೆಯನ್ನು ಶಿಸ್ತಿನಿಂದ ಮತ್ತು ಸುರಕ್ಷಿತವಾಗಿ ಆಚರಿಸಲು ಈ ನಿಯಮಗಳು ಮತ್ತು ಮಾರ್ಗಸೂಚಿಗಳು ಪ್ರಕಟಿಸಲಾಗಿದೆ. ಸಾರ್ವಜನಿಕರು(public) ಈ ನಿಯಮಗಳನ್ನು ಪಾಲಿಸಿ, ಶಾಂತಿಯುತ ಮತ್ತು ಸಂತೋಷಕರ ಹೊಸ ವರ್ಷಾಚರಣೆಗೆ ಸಹಕರಿಸಬೇಕು.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!