ಈ ವರದಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ(Health and family welfare department recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, 127 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳ ಅವಧಿ ಸಂಪೂರ್ಣ ಆಫ್‌ಲೈನ್ ಮತ್ತು ಕಾನೂನಾತ್ಮಕ ಮಾರ್ಗದರ್ಶಕ ಪ್ರಕ್ರಿಯೆಯ ಮೂಲಕವೇ ನಡೆಯಲಿದೆ. ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗಾಗಿ ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 16, 2024, ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ :
ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ತಜ್ಞ ವೈದ್ಯರು : 33.
ಫಿಜಿಷಿಯನ್ : 03.
ಎಂ.ಬಿ.ಬಿ.ಎಸ್ ಐ.ಸಿ.ಯು ವೈದ್ಯರು : 28
ಡೆಂಟಲ್ ಟೆಕ್ನಿಷಿಯನ್ : 01.
ಡಯಟ್ ಕೌನ್ಸಿಲರ್ : 01.
ತಾಲೂಕಾ ಆಶಾ ಮೇಲ್ವಿಚಾರಕರು : 02.
ಡಿ.ಇ.ಐ.ಸಿ. ಮ್ಯಾನೇಜರ್ : 01.
ನೇತ್ರ ಸಹಾಯಕರು (ಆರ್.ಬಿ.ಎಸ್.ಕೆ) : 01.
ಜಿಲ್ಲಾ ಸಲಹೆಗಾರರು ಕ್ವಾಲಿಟಿಅಶ್ಯೂರೆನ್ಸ್ : 01.
ಟ್ಯೂಬರ್ಕ್ಯುಲೋಸಿಸ್ ಹೆಲ್ತ್ ವಿಸಿಟರ್ : 01.
ಜಿಲ್ಲಾ ಆಸ್ಪತ್ರೆ ಕ್ವಾಲಿಟಿ ಮ್ಯಾನೇಜರ್ : 01.
ತಾಂತ್ರಿಕ ಮೇಲ್ವಿಚಾರಕರು ರಕ್ತ ನಿಧಿ ಕೇಂದ್ರ : 01.
ಆಡಿಯೋಮೆಟ್ರಿಕ್ ಅಸಿಸ್ಟೆಂಟ್ : 01.
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು : 01.
ಜಿಲ್ಲಾ ಎಪಿಡೆಮಿಯಾಲಜಿಸ್ಟ್ ಮತ್ತು ಬ್ಲಾಕ್ ಎಪಿಡೆಮಿಯಾಲಜಿಸ್ಟ್ : 05.
ಜಿಲ್ಲಾ ಕಾರ್ಯಕ್ರಮ ಸಂಯೋಜಕರು : 01.
ಆಡಿಯೋಲಾಜಿಸ್ಟ್ : 01
ಕಿರಿಯ ಆರೋಗ್ಯ ಸಹಾಯಕರು : 09.
ಜಿಲ್ಲಾ ಕಾರ್ಯಕ್ರಮ ಸಂಯೋಜಕರು (ಹೆಚ್.ಡಬ್ಲೂ.ಸಿ) : 01.
ಶುಶ್ರೂಷಕಿಯರು : 34.
ಹುದ್ದೆಗಳ ಹೆಸರು ಮತ್ತು ಸಂಬಳ:
ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ತಜ್ಞ ವೈದ್ಯರು: ಸಂಬಳ – ₹1,30,000
ಫಿಜಿಷಿಯನ್: ಸಂಬಳ – ₹1,10,000
ಎಂ.ಬಿ.ಬಿ.ಎಸ್ ಐ.ಸಿ.ಯು ವೈದ್ಯರು: ಸಂಬಳ – ₹50,000
ಡೆಂಟಲ್ ಟೆಕ್ನಿಷಿಯನ್: ಸಂಬಳ – ₹15,554
ಕಿರಿಯ ಆರೋಗ್ಯ ಸಹಾಯಕರು: ಸಂಬಳ – ₹14,044
ವಯೋಮಿತಿ ವಿವರ :
ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳು 35 ವರ್ಷ ಹೊಂದಿರಬೇಕು.
ಶೈಕ್ಷಣಿಕ ಅರ್ಹತೆ :
ಆಯಾ ಹುದ್ದೆಗಳಿಗೆ ಅನುಗುಣವಾಗಿ SSLC/PUC/B̤Sc Nutrition/BA Nutrition/GNM/ANM/B̤Sc (Nursing)/ಸಂಬಂಧಿಸಿದ ತಜ್ಞತೆ ವಿಷಯದಲ್ಲಿ MD, MS, ಡಿಪ್ಲೊಮಾ ಪದವಿ/MBBS/BDS/BAMS/BHMS/ BUMS/BYNS/BMLT/DMLT ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಸಂಬಂಧಿಸಿದ ಅಧಿಕೃತ ವೆಬ್‌ಸೈಟ್ ಅಥವಾ ಲಿಂಕ್‌ನಲ್ಲಿ ಶೆಡ್ಯೂಲ್ ಡೌನ್‌ಲೋಡ್ ಮಾಡಿ, ಪ್ರಕ್ರಿಯೆಯ ಪೂರ್ಣ ವಿವರಗಳನ್ನು ಓದಿ, ಆಯ್ಕೆಗೆ ಹೊಂದಿದ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ ಸರಿಯಾಗಿ ಭರ್ತಿ ಮಾಡಿ, ಅಗತ್ಯವಾದ ದಾಖಲೆಗಳೊಂದಿಗೆ ಕೊನೆಯ ದಿನಾಂಕದೊಳಗೆ ಕಚೇರಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ವಿತರಿಸುವ & ಭರ್ತಿ ಮಾಡಿದ ಅರ್ಜಿ ಸಲ್ಲಿಸುವ ವಿಳಾಸ :
ಜಿಲ್ಲಾ CHR ಅಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ,(Health and family welfare department Office) ಕಾರವಾರ.
ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ಸ್ಥಳ :
ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಸಭಾಂಗಣ, ಕಾರವಾರ.
ಆಯ್ಕೆ ವಿಧಾನ :
ಅಭ್ಯರ್ಥಿಗಳ ಆಯ್ಕೆಗೆ ಮೆರಿಟ್ ಮತ್ತು ರೋಷ್ಠರ್ ಪರಿಷ್ಕರಣೆ ಮೂಲಕವೇ ಹುದ್ದೆಗಳ ಶೀಘ್ರ ನೇಮಕಾತಿ ಕೈಗೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ, ಮೂಲ ದಾಖಲಾತಿಗಳ ಪರಿಶೀಲನೆಗೆ ಕರೆಯಲಾಗುವುದು.
ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 16, 2024
ಈ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಛೇರಿಗೆ ಭೇಟಿ ನೀಡಬಹುದು.
ಮತ್ತು ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.