ಉಚಿತ ಆಸ್ಪತ್ರೆ ಸೌಲಭ್ಯ ಸಿಗುವ ಆರೋಗ್ಯ ಸಂಜೀವಿನಿ ಯೋಜನೆ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ.

Picsart 25 04 10 22 34 15 106

WhatsApp Group Telegram Group

ಆರೋಗ್ಯ ಸಂಜೀವಿನಿ ಯೋಜನೆ (KASS): ಕರ್ನಾಟಕ ಸರ್ಕಾರಿ ನೌಕರರಿಗೆ ಅಗತ್ಯವಿರುವ ಸಂಪೂರ್ಣ ಮಾಹಿತಿ

ಬೆಂಗಳೂರು: ಕರ್ನಾಟಕ ಸರ್ಕಾರದ ಆರೋಗ್ಯ ಸಂಜೀವಿನಿ ಯೋಜನೆ (KASS) — ರಾಜ್ಯದ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರ ಆರೋಗ್ಯದ ಭದ್ರತೆಗೆ ನೀಡಲಾಗುತ್ತಿರುವ ಪ್ರಮುಖ ಯೋಜನೆಯಾಗಿದ್ದು, ವೈದ್ಯಕೀಯ ಚಿಕಿತ್ಸೆಯ ಖರ್ಚನ್ನು ಸರಕಾರವೇ ಭರಿಸುತ್ತದೆ. ಈ ಯೋಜನೆಯ ಕುರಿತಾಗಿ ಜನಸಾಮಾನ್ಯರಲ್ಲೂ ಬಹುಮಾನ್ಯ ಪ್ರಶ್ನೆಗಳಿವೆ. ಈ ವರದಿಯಲ್ಲಿ, KASS ಯೋಜನೆಯ ಪ್ರಮುಖ ಅಂಶಗಳನ್ನು ವಿವರವಾಗಿ ತಿಳಿಸಲಾಗಿದ್ದು, ಅರ್ಹತೆ, ಅನುಮತಿಸಲಾದ ಖರ್ಚು, ಕುಟುಂಬದ ವ್ಯಾಖ್ಯಾನ, ನೋಂದಾಯಿತ ಆಸ್ಪತ್ರೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

1. ಯೋಜನೆಗೆ ಅರ್ಹತೆ (Eligibility)

▪️ಯಾರ್ಯಾರು ಅರ್ಹ?

– ರಾಜ್ಯ ಸರ್ಕಾರಿ ನೌಕರರು (ಕೆಲವೊಂದು ವಿಭಾಗಗಳನ್ನು ಹೊರತುಪಡಿಸಿ)
– ಅವಲಂಬಿತ ಪತಿ/ಪತ್ನಿ
– ತಂದೆ-ತಾಯಿ (ಮಲತಾಯಿ ಸೇರಿದಂತೆ), ಮಾಸಿಕ ಆದಾಯ ರೂ. 8,500/- ಮೀರಬಾರದು
– ಸಂಪೂರ್ಣ ಅವಲಂಬಿತ ಮಕ್ಕಳು (ದತ್ತು/ಮಲ ಮಕ್ಕಳು ಸೇರಿ)

▪️ಅರ್ಹವಲ್ಲದವರು (Excluded Categories):

– ಅನುದಾನಿತ ಸಂಸ್ಥೆ, ವಿಶ್ವವಿದ್ಯಾಲಯ, ಶಾಸನಬದ್ಧ ಸಂಸ್ಥೆಗಳ ನೌಕರರು
– ಗುತ್ತಿಗೆ/ಹೊರಗುತ್ತಿಗೆ/ಅರೆಕಾಲಿಕ/ದಿನಗೂಲಿ ನೌಕರರು
– “ಆರೋಗ್ಯ ಭಾಗ್ಯ” ಯೋಜನೆಗೆ ಒಳಪಟ್ಟವರು
– ಕೇಂದ್ರ ಸರ್ಕಾರಿ/ಸಾರ್ವಜನಿಕ ವಲಯದ ನೌಕರರು
– ನ್ಯಾಯಾಂಗ/ವಿಧಾನಮಂಡಲ/ಅಖಿಲ ಭಾರತ ಸೇವೆಯ ನೌಕರರು

2. “ಕುಟುಂಬ” ಪದದ ವ್ಯಾಖ್ಯಾನ

ಪತಿ ಅಥವಾ ಪತ್ನಿ

– ತಂದೆ-ತಾಯಿ (ರೂ. 8,500 ಮೀರದ ಆದಾಯ)
– ಸಂಪೂರ್ಣ ಅವಲಂಬಿತ ಮಕ್ಕಳು (ದತ್ತು/ಮಲ ಮಕ್ಕಳು)

3. ನಿರ್ಧಿಷ್ಟ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳು:

– ವೃತ್ತಿಪರ ಅವಧಿಯಲ್ಲಿದ್ದರೂ ಯೋಜನೆಗೆ ಅರ್ಹತೆ ಇದೆ.
– ದಂಪತಿಗಳಿಬ್ಬರೂ ಉದ್ಯೋಗಿಗಳಾದರೆ, ಹೆಚ್ಚು ವೇತನದ ಉದ್ಯೋಗಿ ಮುಖ್ಯ ಕಾರ್ಡ್‌ಹೋಲ್ಡರ್ ಆಗಿ ನೋಂದಾಯಿಸಬೇಕು.
– ಅವಲಂಬಿತ ಅತ್ತೆ-ಮಾವರನ್ನು ಸೇರಿಸಬಹುದೇ? – ಹೌದು, ನಿಯಮಿತ ಆದಾಯ ಮಿತಿಯೊಳಗಿದ್ದರೆ.

4. ಮಕ್ಕಳ ವಯೋಮಿತಿ (Age Limit for Dependents)

▪️ಅರ್ಹತೆ ವಯೋಮಿತಿ:

– ಉದ್ಯೋಗ ಶುರುಮಾಡುವವರೆಗೆ ಅಥವಾ
– 30 ವರ್ಷ ಅಥವಾ
– ಮದುವೆಯಾದವರೆಗೆ
– ಶಾಶ್ವತ ಅಂಗವೈಕಲ್ಯವಿದ್ದರೆ, ಯಾವುದೇ ವಯಸ್ಸಿನ ಮಗುವೂ ಅರ್ಹ.

5. ಆಸ್ಪತ್ರೆಗಳ ವಿಭಾಗೀಕರಣ (Ward Eligibility):

ವರ್ಗ – ವಾರ್ಡ್ ಹಕ್ಕು
Group A & B – Private Ward
Group C – Semi-Private Ward
Group D – General Ward

Ward Upgradation: ಅನುವು ಇಲ್ಲ. ಆದರೆ, ಖರ್ಚು ವ್ಯತ್ಯಾಸವನ್ನು ನೌಕರನು ಭರಿಸಿ, ರಶೀದಿ ಪಡೆಯಬಹುದು.

6. ಅಗತ್ಯ ದಾಖಲೆಗಳು:

DDO ನೀಡುವ ಇ-ಸಹಿ ಹೊಂದಿದ ದೃಢೀಕರಣ ಪತ್ರ ಅಥವಾ KASS ಕಾರ್ಡ್ ಅನಿವಾರ್ಯ.

7. ರೆಫರಲ್ ನಿಯಮಗಳು:

– ಸಾಮಾನ್ಯ ಚಿಕಿತ್ಸೆಗೆ ರೆಫರಲ್ ಅಗತ್ಯವಿಲ್ಲ.
– ಪ್ರೀಮಿಯಂ ಚಿಕಿತ್ಸೆಗೆ (Transplant/IVE): ಅನುಮೋದನೆ ಅಗತ್ಯ.

8. ಹಣಕಾಸು ಮಿತಿಗಳು ಮತ್ತು ಪರಿಹಾರ

ಚಿಕಿತ್ಸಾ ವೆಚ್ಚ:

– CGHS ಪ್ರಮಾಣದಲ್ಲಿ ಯಾವುದೇ ಮೇಲ್ಮಿತಿಯಿಲ್ಲ.
– ಹಿಂಬರಿಸುವಿಕೆ: ತುರ್ತು ಸಂದರ್ಭದಲ್ಲಿ ನೋಂದಾಯಿತವಲ್ಲದ ಖಾಸಗಿ ಆಸ್ಪತ್ರೆಗಳಿಂದ ಚಿಕಿತ್ಸೆಯಾದರೆ KASS ದರ ಅಥವಾ ನಿಜವಾದ ವೆಚ್ಚ, ಏನು ಕಡಿಮೆಯೋ ಅದನ್ನು ಪರಿಗಣಿಸಲಾಗುತ್ತದೆ.

9. ಹೋರರೋಗಿ ಚಿಕಿತ್ಸೆಗೆ ಅವಕಾಶವಿದೆಯೇ?

ಇಲ್ಲ. ಒಳರೋಗಿ, ಹಗಲು ಚಿಕಿತ್ಸಾ ಕೇಂದ್ರ, ಕಣ್ಣು, ದಂತ ಚಿಕಿತ್ಸೆಗಳು ಮಾತ್ರ ಮೊದಲ ಹಂತದಲ್ಲಿ ಲಭ್ಯ.

10. ಲಸಿಕೆಗಳು ಮತ್ತು ತಜ್ಞರ ಭೇಟಿಗಳು

– ಲಸಿಕೆಗಳು: UIP ಮತ್ತು ಯೋಜನೆಯಡಿಯಲ್ಲಿ ನಿರ್ಧಿಷ್ಟವಾದವುಗಳಿಗಷ್ಟೆ ಅನುಮತಿ.
– ತಜ್ಞರ ಭೇಟಿಗಳು: ತಿಂಗಳಿಗೆ 3 ಬಾರಿ, ಒಂದೇ ಆಸ್ಪತ್ರೆಯಲ್ಲಿ 3 ವಿಭಿನ್ನ ತಜ್ಞರನ್ನು ಭೇಟಿಸಬಹುದು.

11. ವೈದ್ಯಕೀಯ ನಿರ್ಲಕ್ಷ್ಯ – ದೂರು ಸಲ್ಲಿಕೆ

ದೂರು ಸಲ್ಲಿಸಬೇಕಾದ ಸ್ಥಳ:

– ಜಿಲ್ಲಾಧಿಕಾರಿ
– ಕುಂದುಕೊರತೆ ಅಧಿಕಾರಿಗಳು
– ಸ್ಟೇಟ್ ಮೆಡಿಕಲ್ ಕೌನ್ಸಿಲ್ / ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ

ಕೊನೆಯದಾಗಿ KASS ಯೋಜನೆ ರಾಜ್ಯದ ನೌಕರರ ಆರೋಗ್ಯಕ್ಕೆ ಮಾದರಿ ಯೋಜನೆಯಾಗಿದೆ. ಸರಳ ದಾಖಲೆ ಪ್ರಕ್ರಿಯೆ, ನಿರ್ದಿಷ್ಟ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ಕುಟುಂಬದ ಸದಸ್ಯರ ಒಳಗೊಳ್ಳುವ ಅವಕಾಶ ಇವು ಯೋಜನೆಯ ಸಾರ್ಥಕತೆಯನ್ನು ವೃದ್ಧಿಸುತ್ತವೆ. ಪ್ರತಿಯೊಬ್ಬ ಅರ್ಹ ನೌಕರರೂ ತಮ್ಮ ಕುಟುಂಬ ಸದಸ್ಯರೊಂದಿಗೆ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದು ಅತ್ಯಗತ್ಯ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!