ಹೀರೋ ಪ್ಯಾಶನ್ ಪ್ಲಸ್(Hero Passion Plus): ಕೈಗೆಟುಕುವ ಬೆಲೆ, ಅದ್ಭುತ ಮೈಲೇಜ್!
ಅಗ್ರ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್(Hero Motocorp), ಪ್ಯಾಶನ್ ಪ್ಲಸ್(Passion Plus) ಎಂಬ ಅತ್ಯುತ್ತಮ ಬೈಕ್ ಅನ್ನು ಭಾರತಕ್ಕೆ ನೀಡಿದ್ದಾರೆ. ಉತ್ತಮ ಮೈಲೇಜ್ ಮತ್ತು ಆಕರ್ಷಕ ವೈಶಿಷ್ಟ್ಯಗಳಿಂದ ಕೂಡಿದ ಈ ಬೈಕ್ ಗ್ರಾಹಕರು ಮನ ಗೆದ್ದಿದೆ.
ಹೊಸ ಹೀರೋ ಬೈಕ್ ಈಗ ಭಾರೀ ಮೈಲೇಜ್‌ನೊಂದಿಗೆ ಜನಸಾಮಾನ್ಯರಿಗೂ ಖರೀದಿಸಬಹುದಾದ ಬೆಲೆಯಲ್ಲಿ ಲಭ್ಯವಿದೆ. ಬನ್ನಿ ಹಾಗಿದ್ರೆ, ಈ ಬೈಕ್‌ನ ಆನ್-ರೋಡ್ ಬೆಲೆ, EMI ಆಯ್ಕೆಗಳ ಮತ್ತು ಇದರ ಆಕರ್ಷಕ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ.
ಹೀರೋ ಪ್ಯಾಶನ್ ಪ್ಲಸ್(Hero Passion Plus): ವಿಶೇಷತೆಗಳು ಮತ್ತು ವೈಶಿಷ್ಟ್ಯಗಳು
ಎಂಜಿನ್(engine) ಮತ್ತು ಆಧುನಿಕ ವೈಶಿಷ್ಟ್ಯಗಳು:
ಹೀರೋ ಪ್ಯಾಶನ್ ಪ್ಲಸ್ ಮೋಟಾರ್‌ಸೈಕಲ್ 97.2 cc ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 8.02 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 8.05 ಎನ್ಎಂ ಪೀಕ್ ಟಾರ್ಕ್ ಹೊರ ಹಾಕುತ್ತದೆ. ಜೊತೆಗೆ 4 – ಸ್ಪೀಡ್ ಗೇರ್ ಬಾಕ್ಸ್‌ನೊಂದಿಗೆ ಬರಲಿದೆ, 70 Kmpl ವರೆಗೆ ಮೈಲೇಜ್ ಕೂಡ ನೀಡುತ್ತದೆ.
ಆಧುನಿಕ ವೈಶಿಷ್ಟ್ಯಗಳಿಂದ ತುಂಬಿರುವ ಪ್ಯಾಶನ್ ಪ್ಲಸ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್(digital instrument console), ಐಡಲ್ ಸ್ಟಾರ್ಟ್/ ಸ್ಟಾಪ್ ಸಿಸ್ಟಮ್(Start/Stop System), ಯುಎಸ್‌ಬಿ(USB) ಚಾರ್ಜಿಂಗ್ ಪೋರ್ಟ್ ಮತ್ತು ಸೈಡ್ ಸ್ಟ್ಯಾಂಡ್ ಇಂಡಿಕೇಟರ್(side stand indicator) ಒಳಗೊಂಡಿದೆ. 115 ಕೆಜಿ ತೂಕದ ಈ ಬೈಕ್ 11 ಲೀಟರ್ ಟ್ಯಾಂಕ್ ಸಾಮರ್ಥ್ಯದ ಫ್ಯೂಯೆಲ್ ಅನ್ನು ಹೊಂದಿದೆ, ಇದು ದೀರ್ಘಾವಧಿಯ ಪ್ರಯಾಣಕ್ಕೆ ಆಯ್ಕೆಯಾಗಿದೆ.
ಸಸ್ಪೆನ್ಷನ್ ಮತ್ತು ಬ್ರೇಕಿಂಗ್ ವ್ಯವಸ್ಥೆ:
ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್(telescopic fork), ಹಿಂಭಾಗ (ರೇರ್) 5 – ಸ್ಟೆಪ್ ಅಡ್ಜಸ್ಟ್ಏಬಲ್ ಕಾಯಿಲ್ ಸ್ಪ್ರಿಂಗ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಇನ್ನು ಈ ಬೈಕ್ ನ ಬ್ರೇಕಿಂಗ್ ಸಿಸ್ಟಮ್ ನೋಡುವುದಾದರೆ, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಸವಾರನ ಸುರಕ್ಷತೆಗಾಗಿ ಹ್ಯಾಂಡಲ್ ಬಾರ್‌ನ ಎರಡು ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳನ್ನು ನೀಡಿದ್ದಾರೆ.
ಈ ಪ್ಯಾಶನ್ ಪ್ಲಸ್ ಬೈಕ್ 18 – ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದ್ದು, 80/ 100-18 ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ ಇದು ವಾಹನ ಸವಾರರಿಗೆ ಯಾವುದೇ ರಸ್ತೆಯಲ್ಲಿ ಉತ್ತಮವಾದ ಹಿಡಿತವನ್ನು ಒದಗಿಸುತ್ತದೆ. ಈ ಬೈಕ್ ಗ್ರೌಂಡ್ ಕ್ಲಿಯರೆನ್ಸ್ 168 ಎಂಎಂ ಅನ್ನು ಹೊಂದಿದೆ, ಎತ್ತರದ ಗ್ರೌಂಡ್ ಕ್ಲಿಯರೆನ್ಸ್ ಒರಟು ರಸ್ತೆಗಳು ಮತ್ತು ಕೆಟ್ಟ ಭೂಪ್ರದೇಶಗಳ ಮೇಲೆ ಸುಲಭವಾಗಿ ಚಲಿಸಲು ಅನುವು ಮಾಡುತ್ತದೆ. ಹಾಗೂ ಸೀಟ್ ಹೈಟ್ (ಆಸನ ಎತ್ತರ) 790 ಎಂಎಂ ಇದೆ, ಈ ಎತ್ತರದ ಸೀಟ್ ಹೆಚ್ಚಿನ ವಾಹನ ಚಾಲಕರಿಗೆ ಸವಾರಿ ಸ್ಥಾನವನ್ನು ನೀಡುತ್ತದೆ, ವಿಶೇಷವಾಗಿ ಎತ್ತರದ ವ್ಯಕ್ತಿಗಳಿಗೆ.
ಹೀರೋ ಪ್ಯಾಶನ್ ಪ್ಲಸ್ ಭಾರತದಲ್ಲಿ ಅತ್ಯಂತ ಜನಪ್ರಿಯ 110cc ಎಂಜಿನ್‌ಸೈಕಲ್‌ಗಳಲ್ಲಿ ನೆಲೆಗೊಂಡಿದೆ. ಇನ್ನು ಈ ಬೈಕ್ ಗೆ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್(TVS Star CTPlus) ಹಾಗೂ ಬಜಾಜ್ ಪ್ಲಾಟಿನಾ 110 (Bajaj Platina 110) ಜನಪ್ರಿಯ ಬೈಕ್‌ಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಹೊಸ ಹೀರೋ ಪ್ಯಾಶನ್ ಪ್ಲಸ್: ಡೌನ್ ಪೇಮೆಂಟ್(Down payment) , EMI ಮತ್ತು ಲೋನ್ (Loan) ಮತ್ತು ಲಭ್ಯತೆ ವಿವರಗಳು
ಹೊಚ್ಚ ಹೊಸ ಹೀರೋ ಪ್ಯಾಶನ್ ಪ್ಲಸ್ (Hero Passion Plus) ಬೈಕ್ ಆನ್-ರೋಡ್ ದರ(ಬೆಂಗಳೂರಿನಲ್ಲಿ) ರೂ.97,233 ಆಗಿದೆ. ನೀವು ಈ ಮೋಟಾರ್‌ಸೈಕಲ್‌ನ್ನು ರೂ.10,000 ಡೌನ್ ಪೇಮೆಂಟ್(Down payment) ಪಾವತಿಸಿ ಕೊಂಡುಕೊಂಡರೆ, ಉಳಿದ ರೂ.87,233 ಸಾಲದ ಮೊತ್ತಕ್ಕೆ ಶೇಕಡ 9.7% ಬಡ್ಡಿ ದರದಲ್ಲಿ 3 ವರ್ಷದ (36 ತಿಂಗಳು) ಅವಧಿಗೆ ಮಾಸಿಕ ರೂ.2,802 ಇಎಂಐ (EMI) ಕಟ್ಟಬೇಕು.
ಹೊಸ ಹೀರೋ ಪ್ಯಾಶನ್ ಪ್ಲಸ್ ಕೇವಲ ಒಂದು ಮೋಟಾರ್ ಸೈಕಲ್ ಅಲ್ಲ, ಇದು ಒಂದು ಟ್ರೆಂಡ್ ಅಗಿದೆ. ಕಪ್ಪು ಹೆವಿ ಗ್ರೇ ಮತ್ತು ಕಪ್ಪು ಗ್ರೇ ಸ್ಟ್ರೈಪ್ ಸೇರಿದಂತೆ ಆಕರ್ಷಕ ಬಣ್ಣಗಳಲ್ಲಿ ಈ ಬೈಕ್, ರಸ್ತೆಯಲ್ಲಿ ನಿಮ್ಮ ಗಮನ ಸೆಳೆಯುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..