Home Loan: ಹೆಂಡತಿ ಹೆಸರಲ್ಲಿ  ಹೋಮ್‌ ಲೋನ್‌ ಮಾಡಿದ್ರೆ ಎಷ್ಟೊಂದು ಲಾಭ ಗೊತ್ತಾ? ಇಲ್ಲಿದೆ ಡೀಟೇಲ್ಸ್

IMG 20241015 WA0002

ಗೃಹ ಸಾಲವನ್ನು ಪಡೆಯುವವರಿಗೆ ಗುಡ್ ನ್ಯೂಸ್, ಜಂಟಿ ಗೃಹ ಸಾಲ ಪಡೆಯುವ ಮುನ್ನ ಈ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ.!

ಇಂದು ಎಲ್ಲರೂ ದುಡಿದು ತಮ್ಮ ಜೀವನ ಉತ್ತಮ ರೀತಿಯಲ್ಲಿ ಸಾಗಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಕಷ್ಟ ಪಟ್ಟು ದುಡಿಯುತ್ತಾರೆ. ಸ್ವಂತ ಮನೆ ಕಟ್ಟಿಕೊಂಡು ತಮ್ಮ ಕುಟುಂಬದ ಜೊತೆ ಸಂತೋಷವಾಗಿ ಸಂಸಾರ ನಡೆಸಬೇಕು ಎಂಬ ಕನಸನ್ನು ಹೊಂದಿರುತ್ತಾರೆ. ಎಲ್ಲರಿಗೂ ಸ್ವಂತ ಮನೆ ಇರಬೇಕು ಎಂಬ ಅಸೆ ಇದ್ದು, ಮನೆ ಕಟ್ಟಲು ಸಂಪೂರ್ಣ ಜೀವನದ ಉಳಿತಾಯವನ್ನು ಮೀಸಲಿಡುತ್ತಾರೆ.

ಅಷ್ಟೇ ಅಲ್ಲದೆ ಅನೇಕ ಬಾರಿ ಜನರು ತಮ್ಮ ಸ್ವಂತ ಮನೆ ಖರೀದಿಸಲು ಗೃಹ ಸಾಲದ ಸಹಾಯವನ್ನು ಸಹ ತೆಗೆದುಕೊಳ್ಳುತ್ತಾರೆ. ಇದೀಗ ಗೃಹಸಾಲ (Home Loan) ಪಡೆಯುವವರಿಗೆ ಒಂದು ಗುಡ್ ನ್ಯೂಸ್ ಅದೇನೆಂದರೆ, ಗೃಹ ಸಾಲ ಪಡೆಯುವ ಮುನ್ನ ಅನೇಕ ವಿಚಾರಗಳ ಬಗ್ಗೆ ಗಮನ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಅವುಗಳು ಯಾವುವು? ಮತ್ತು ಯಾಕೆ ಮುಖ್ಯವಾಗಿರುತ್ತವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಜಂಟಿಯಾಗಿ ಪಡೆಯುವ ಗೃಹ ಸಾಲದಲ್ಲಿರುವ ಹಲವು ಪ್ರಯೋಜನಗಳ (benefits) ಬಗ್ಗೆ ತಿಳಿದುಕೊಂಡಿರಬೇಕು :

ಜಂಟಿಯಾಗಿ ಪಡೆಯುವ ಗೃಹ ಸಾಲದಿಂದ ಅನೇಕ ಪ್ರಯೋಜನಗಳಿವೆ. ಇದರೊಂದಿಗೆ ನಿಮ್ಮ ಹೆಂಡತಿಯೊಂದಿಗೆ ಜಂಟಿ ಗೃಹಸಾಲ (Joint Home Loan) ವನ್ನು ತೆಗೆದುಕೊಳ್ಳುವ ಪ್ರಯೋಜನಗಳ ಬಗ್ಗೆಯು ನಿಮಗೆ ತಿಳಿದಿರಬೇಕು. ನಿಮ್ಮ ಹೆಂಡತಿ ಮಾತ್ರವಲ್ಲ, ನಿಮ್ಮ ಗೃಹ ಸಾಲದ ಖಾತೆಯಲ್ಲಿ ನಿಮ್ಮ ತಾಯಿ, ಸಹೋದರಿ ಅಥವಾ ಇತರ ಯಾವುದೇ ಮಹಿಳೆಯ ಹೆಸರನ್ನು ಸೇರಿಸುವ ಮೂಲಕ ನೀವು ಜಂಟಿ ಗೃಹ ಸಾಲ ಖಾತೆಯನ್ನು ತೆಗೆದುಕೊಂಡರೆ, ಅದರಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು.

ಜಂಟಿ ಗೃಹ ಸಾಲದ ಪ್ರಯೋಜನಳು (benefits) :

ಮೊದಲ ಮತ್ತು ದೊಡ್ಡ ಪ್ರಯೋಜನವೆಂದರೆ ನೀವು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದು.
ನೀವು ನಿಮ್ಮ ಪತ್ನಿಯೊಂದಿಗೆ ಜಂಟಿ ಗೃಹ ಸಾಲವನ್ನು ತೆಗೆದುಕೊಂಡರೆ, ನಂತರ ನೀವು 0.05% ವರೆಗಿನ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು.
ಜಂಟಿ ಗೃಹ ಸಾಲಕ್ಕೆ ನೀವು ಯಾವುದೇ ಮಹಿಳೆಯ ಹೆಸರನ್ನು ಸೇರಿಸಿದರೆ, ನೀವು ತೆರಿಗೆ ಪ್ರಯೋಜನಗಳನ್ನು(Tax benefits) ಸಹ ಪಡೆಯುತ್ತೀರಿ ಮತ್ತು ನಿಮ್ಮ ತೆರಿಗೆ ಹೊಣೆಗಾರಿಕೆಯು ಕಡಿಮೆಯಾಗುತ್ತದೆ.

ಈ ಜಂಟಿ ಗ್ರಹ ಸಾಲದದಿಂದ ಭವಿಷ್ಯದಲ್ಲಿಯೂ (in future) ನಿಮಗೆ ಇದರ ಪ್ರಯೋಜನವಾಗಲಿದೆ :

ಜಂಟಿ ಗೃಹ ಸಾಲವನ್ನು ಪಡೆಯುದರಿಂದ ನಿಮ್ಮ ಹೆಂಡತಿಗೂ ಆಸ್ತಿಯ ಮೇಲೆ ಹಕ್ಕು ಇರುತ್ತದೆ. ಈ ಕಾರಣದಿಂದಾಗಿ ನೀವು ಭವಿಷ್ಯದಲ್ಲಿ ಯಾವುದೇ ರೀತಿಯ ಕಾನೂನು ಸಮಸ್ಯೆಯನ್ನು ಒಡಗುವುದಿಲ್ಲ. ಅಷ್ಟೇ ಅಲ್ಲದೆ, ಗೃಹ ಸಾಲಕ್ಕೆ ನಿಮ್ಮ ಪತ್ನಿಯ ಹೆಸರನ್ನು (Wife name) ಸೇರಿಸಿದರೆ ಸಾಲ ಪಡೆಯುವುದು ಸುಲಭವಾಗಿರುತ್ತದೆ.

ಜಂಟಿ ಗೃಹ ಸಾಲದಿಂದ ಮಹಿಳೆಯರಿಗೆ ಅನೇಕ ಲಾಭಗಳಿವೆ :

ಮಹಿಳೆಯರಿಗೆ ಉತ್ತಮ ಮತ್ತು ಸುಲಭವಾದ ರೀತಿಯಲ್ಲಿ ಸಾಲಗಳನ್ನು ನೀಡಲಾಗುತ್ತದೆ. ಮಹಿಳೆಯರಿಗಾಗಿ ಅನೇಕ ಗೃಹ ಸಾಲದಲ್ಲಿ ಸಹಾಯಕವಾಗುವಂತೆ ಯೋಜನೆಗಳು ಇವೆ. ಇದರಿಂದಾಗಿ ನೀವು ಗೃಹ ಸಾಲ ಮಾಡುವಾಗ ಪತನಿ, ತಂಗಿ, ತಾಯಿ ಹೀಗೆ ಮಹಿಳೆ ಹೆಸರಲ್ಲಿ ಜಂಟಿಯಾಗಿ ಸಾಲ ಪಡೆದರೆ ಒಂದು ಜವಾಬ್ದಾರಿ ಜೊತೆ ಸಾಲವೂ ಸಹ ಕಡಿಮೆ ಬಡ್ಟಿದರದಲ್ಲಿ ಸುಲಭವಾಗಿ ಸಿಗುತ್ತದೆ.

ಜಂಟಿ ಗೃಹ ಸಾಲ ಪಡೆಯಲು ಇರಬೇಕಾದ CIBIL ಸ್ಕೋರ್ ?

ಜಂಟಿ ಗೃಹಸಾಲ ಪಡೆಯಲು CIBIL ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಅತ್ಯಂತ ಮುಖ್ಯವಾಗಿರುತ್ತದೆ. ಗೃಹ ಸಾಲ ಪಡೆಯಲು ಗ್ರಾಹಕರು CIBIL ಸ್ಕೋರ್ 650 ಮತ್ತು 750ರ ನಡುವೆ ಇರಬೇಕು. CIBIL ಸ್ಕೋರ್ ಈ ವ್ಯಾಪ್ತಿಯಲ್ಲಿದ್ದರೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲವನ್ನು ಪಡೆಯಬಹುದು. ಆದರೆ ಸಾಮಾನ್ಯವಾಗಿ ಸಿಬಿಲ್‌ ಸ್ಕೋರ್‌ (CIBIL score) 650ಕ್ಕಿಂತ ಕಡಿಮೆ ಇದ್ದರೆ ಹೃಹ ಸಾಲ ನೀಡವುದು ಕಷ್ಟವಾಗುತ್ತದೆ ಅಥವಾ ಸಿಗುವದೇ ಇರಬಹುದು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!