ಸಕ್ಕರೆ ಕಾಯಿಲೆ ಚಿಂತೆ ಬಿಟ್ಟು ಪ್ರತಿ ದಿನ ಈ ಸಣ್ಣ ಕೆಲಸ ಮಾಡಿ, ಮಧುಮೇಹ ಹತ್ತಿರನು ಸುಳಿಯಲ್ಲ

Picsart 25 03 20 23 04 45 053

WhatsApp Group Telegram Group

ಮಧುಮೇಹ ನಿಯಂತ್ರಣಕ್ಕೆ ದೇಸಿ ಪರಿಹಾರಗಳು: ಆರೋಗ್ಯಕರ ಜೀವನಶೈಲಿ ಮತ್ತು ಸರಿಯಾದ ಆಹಾರ ವಿಧಾನ ಪಾಲಿಸಿ

ಇಂದಿನ ತಂತ್ರಜ್ಞಾನ (Technology) ಯುಗದಲ್ಲಿ, ಅಶಿಷ್ಟ ಆಹಾರ ಪದ್ಧತಿ, ಒತ್ತಡ, ಶಾರೀರಿಕ ಚಟುವಟಿಕೆ ಕೊರತೆ, ಮತ್ತು ಬದಲಾದ ಜೀವನಶೈಲಿಯ ಪರಿಣಾಮವಾಗಿ ಮಧುಮೇಹ (Diabetes) ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ವಿಶ್ವದಾದ್ಯಂತ ಕೋಟಿ ಕೋಟಿ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದು ಕೇವಲ ಒಂದು ಕಾಯಿಲೆಯಷ್ಟೇ ಅಲ್ಲ, ಇಡೀ ದೇಹದ ಮೆಟಾಬಾಲಿಸಮ್ ಕ್ರಿಯೆಗೆ (metabolism Process) ಪರಿಣಾಮ ಬೀರುತ್ತದೆ. ಇನ್ನು, ಮಧುಮೇಹ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಮಧುಮೇಹವನ್ನು ನಿರ್ವಹಿಸುವುದು ನಮ್ಮ ಆರೋಗ್ಯದ ಪ್ರಮುಖ ಭಾಗವಾಗಬೇಕಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಈಗಿನ ಯುಗದಲ್ಲಿ ಮಧುಮೇಹ ಒಂದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು, ಇದು ಅನೇಕ ಜನರ ಜೀವನದ ಭಾಗವಾಗಿ ಮಾರ್ಪಟ್ಟಿದೆ. ಅಹಾರ ಪದ್ಧತಿಯ ಬದಲಾವಣೆ, ಶಾರೀರಿಕ ಚಟುವಟಿಕೆಗಳ ಕೊರತೆ, ಒತ್ತಡ, ಮತ್ತು ತಲೆಮಾರು ಪರಂಪರೆಯಂತೆಯೇ ಅನುವಂಶಿಕ(Hereditary) ಕಾರಣಗಳಿಂದಾಗಿ ಮಧುಮೇಹದ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಈ ಕಾಯಿಲೆಯು ನಿಯಂತ್ರಣದಲ್ಲಿಲ್ಲದೆ ಇದ್ದರೆ ಅನೇಕ ಗಂಭೀರ ಸಮಸ್ಯೆಗಳಾದ ಹೃದಯರೋಗ, ವೃದ್ಧಿ ತೂಕ, ಕಣ್ಣುಗಳ ಸಮಸ್ಯೆ, ಹಾರ್ಮೋನ್ ಅಸಮತೋಲನ, ನರವ್ಯೂಹ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಸರಿಯಾದ ಆಹಾರ ಪದ್ಧತಿ, ದೈಹಿಕ ಚಟುವಟಿಕೆ, ಮತ್ತು ನೈಸರ್ಗಿಕ ಪರಿಹಾರಗಳ ಸಹಾಯದಿಂದ ಮಧುಮೇಹವನ್ನು ಸಮರ್ಪಕವಾಗಿ ನಿಯಂತ್ರಿಸಬಹುದು. ಯಾವ ರೀತಿಯ ಆಹಾರ ಪದ್ಧತಿಯನ್ನು (Diet) ಅನುಸರಿಸಿ ಮದುಮೇಹದಂತಹ ಕಾಯಿಲೆಯಿಂದ ದೂರ ಉಳಿಯಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಸಾಮಾನ್ಯವಾಗಿ, ಮಧುಮೇಹಕ್ಕೆ ಮೂರು ಪ್ರಕಾರಗಳಿವೆ:

ಟೈಪ್-1 ಡಯಾಬಿಟಿಸ್ :
ಸಾಮಾನ್ಯವಾಗಿ ಬಾಲ್ಯ ಅಥವಾ ಯುವವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಈ ರೀತಿಯ ಡಯಾಬಿಟಿಸ್ ದೇಹದಲ್ಲಿ ಇನ್ಸುಲಿನ್ (Insolence) ಉತ್ಪಾದನೆಯ ಕೊರತೆಯಿಂದ ಉಂಟಾಗುತ್ತದೆ.

ಟೈಪ್-2 ಡಯಾಬಿಟಿಸ್ :
ಪ್ರಾಯಶಃ ಹೆಚ್ಚಿನ ಜನರಲ್ಲಿ ಟೈಪ್-2 ಡಯಾಬಿಟಿಸ್ ಕಂಡುಬರುತ್ತದೆ. ಈ ರೀತಿಯ ಡಯಾಬಿಟಿಸ್ ಜನರ ಜೀವನಶೈಲಿ, ಆಹಾರ ಪದ್ದತಿಯ ದೋಷ, ಹಾಗೂ ಜನ್ಮಪಾರಂಪರ್ಯದ ಪರಿಣಾಮದಿಂದ ಉಂಟಾಗುತ್ತದೆ.

ಟೈಪ್-3 ಡಯಾಬಿಟಿಸ್ :
ಕೆಲವು ಗರ್ಭಿಣಿಯರಲ್ಲಿ ತಾತ್ಕಾಲಿಕವಾಗಿ ಗ್ಯಸ್ಟೇಶನಲ್ ಡಯಾಬಿಟಿಸ್ (Gestational diabetes) ಕಂಡುಬರುತ್ತದೆ. ಇದನ್ನು ಸೂಕ್ತ ಸಮಯದಲ್ಲಿ ನಿಯಂತ್ರಿಸದೇ ಹೋದರೆ ಭವಿಷ್ಯದಲ್ಲಿ ಇದು ಟೈಪ್-2 ಡಯಾಬಿಟಿಸ್ ಆಗುವ ಸಾಧ್ಯತೆ ಇದೆ.

ಮಧುಮೇಹವನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲದಿದ್ದರೂ, ಸರಿಯಾದ ಆಹಾರ, ಜೀವನಶೈಲಿ ಹಾಗೂ ಪ್ರಾಕೃತಿಕ ದೇಸಿ ಪರಿಹಾರಗಳ ಮೂಲಕ ಇದನ್ನು ನಿಯಂತ್ರಣಕ್ಕೆ ತರುವ ಸಾಧ್ಯತೆ ಇದೆ. ಹಾಗಿದ್ದರೆ, ಮಧುಮೇಹ ನಿಯಂತ್ರಣಕ್ಕೆ ಸಹಾಯ ಮಾಡುವ ಕೆಲವು ಮನೆಮದ್ದುಗಳು (Home remedies) ಮತ್ತು ಆರೋಗ್ಯಕರ ಆಹಾರ ಪದ್ಧತಿಗಳ ಬಗ್ಗೆ ನೋಡೋಣ.

ಮಧುಮೇಹ ನಿಯಂತ್ರಣಕ್ಕೆ ದೇಸಿ ಪರಿಹಾರ ಈ ರೀತಿಯಿದೆ:

1. ಸರಿಯಾದ ಆಹಾರ ಪದ್ಧತಿ ಅಳವಡಿಸಿಕೊಳ್ಳಿ:
ಮಧುಮೇಹವನ್ನು ನಿಯಂತ್ರಿಸಲು ಆಹಾರ ಪದ್ಧತಿ ಬಹಳ ಮುಖ್ಯ. ಸರಿಯಾದ ಆಹಾರವನ್ನು ಆಯ್ಕೆ ಮಾಡಿಕೊಂಡು, ಶರೀರಕ್ಕೆ ಬೇಕಾದ ಪೋಷಕಾಂಶಗಳನ್ನು (nutrients) ಒದಗಿಸುವುದು ಅನಿವಾರ್ಯ. ದಿನವಿಡೀ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸಬೇಕು ಇಲ್ಲವಾದಲ್ಲಿ ರಕ್ತದಲ್ಲಿ ಸಕ್ಕರೆ ಹಠಾತ್ ಏರಬಹುದು.
ಕಾರ್ಬೋಹೈಡ್ರೇಟುಗಳಾದ ರಾಗಿ, ಜೋಳ, ಗೋಧಿ, ಮತ್ತು ತರಕಾರಿಗಳು, ಓಟ್ಸ್, ಮತ್ತು ಕರಬೇವಿನಂತಹ ಅಂಶಪೂರ್ಣ ಧಾನ್ಯಗಳನ್ನು ಆಯ್ಕೆ ಮಾಡಿ.
ತರಕಾರಿಗಳಲ್ಲಿ ಹಸಿರು ಸೊಪ್ಪುಗಳು, ಕ್ಯಾರೆಟ್, ಬೀಟ್ರೂಟ್ ಇತ್ಯಾದಿಗಳನ್ನು ಹೆಚ್ಚಿಸಿ.
ಪ್ರೋಟೀನ್ ಯುಕ್ತ ಆಹಾರಗಳಾದ ಮೊಸರು, ಕಡಲೆ, ಹೆಸರುಕಾಳು, ಸೊಪ್ಪು, ಬೀನ್ಸ್ ಮುಂತಾದವುಗಳ ಸೇವಿಸುವುದು ಉತ್ತಮ.

2. ಆಯುರ್ವೇದ (Ayurveda) ದೇಸಿ ಔಷಧಿ ಉಪಯೋಗಿಸಿ :
ಮೆಂತ್ಯ (fenugreek) : ಒಂದು ಚಮಚ ಮೆಂತ್ಯ ಕಾಳುಗಳನ್ನು ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರು ಕುಡಿಯಿರಿ.
ಹಾಗಲಕಾಯಿ (ಕರೇಲ) ರಸ : ಇದನ್ನು ದಿನಕ್ಕೆ ಒಮ್ಮೆ ಸೇವಿಸುವುದರಿಂದ ಇನ್ಸುಲಿನ್ ಸಂವೇದನೆ ಸುಧಾರಿಸುತ್ತದೆ.
ತುಳಸಿ ಎಲೆಗಳು :  ಇದನ್ನು ಚಹಾದಲ್ಲಿ ಸೇರಿಸಿ ಅಥವಾ ನೇರವಾಗಿ ಸೇವಿಸಿದರೆ ರಕ್ತದ ಸಕ್ಕರೆಯನ್ನು ಸಮತೋಲನದಲ್ಲಿ ಇಡುತ್ತದೆ.
ನಿಂಬೆ ಮತ್ತು ಅರಿಶಿನ : ಇವು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಿ, ಗ್ಲೂಕೋಸ್ (Glucose) ಶೋಷಣೆಗೆ ಸಹಾಯ ಮಾಡುತ್ತದೆ.

3. ದೈನಂದಿನ ಶಾರೀರಿಕ ಚಟುವಟಿಕೆ ಮುಖ್ಯ :
ಪ್ರತಿದಿನ 30-45 ನಿಮಿಷ ನಡೆಯುವುದು, ಯೋಗ, ಪ್ರಾಣಾಯಾಮ, ಮತ್ತು ಸೂರ್ಯ ನಮಸ್ಕಾರ ಅಭ್ಯಾಸ ಮಾಡುವುದರಿಂದ ದೇಹದ ಮೆಟಾಬಾಲಿಸಮ್ (Metabolism) ಕ್ರಿಯೆ ಸುಧಾರಿಸುತ್ತದೆ.
ಒತ್ತಡವನ್ನು ಕಡಿಮೆ ಮಾಡಲು ಧ್ಯಾನ ಮತ್ತು ಪ್ರಾಣಾಯಾಮ ಅಭ್ಯಾಸ ಮಾಡುವುದು ಉತ್ತಮ.

4. ದೇಸಿ ಮಸಾಲೆಗಳ (Masala) ಮಹತ್ವ :
ದಾಲ್ಚಿನ್ನಿ : ಇದನ್ನು ಚಹಾದಲ್ಲಿ ಸೇರಿಸಿ ಅಥವಾ ಆಹಾರದಲ್ಲಿ ಬಳಸಿದರೆ ರಕ್ತದ ಸಕ್ಕರೆಯನ್ನು ನಿಯಂತ್ರಣ ಮಾಡಬಹುದು.
ಶುಂಠಿ (ಒಣ ಶುಂಠಿ/ಅರಿಶಿನ) :  ಇದನ್ನು ನಿತ್ಯ ಆಹಾರದಲ್ಲಿ ಸೇರಿಸಿಕೊಳ್ಳಿ.

5. ಸಾಕಷ್ಟು ನೀರು ಕುಡಿಯಿರಿ ಮತ್ತು ಉತ್ತಮ ನಿದ್ರೆ ಮಾಡಿ:
ನಿತ್ಯ ಕನಿಷ್ಠ 2-3 ಲೀಟರ್ ನೀರು ಕುಡಿಯಿರಿ.
6-8 ಗಂಟೆಗಳ ಉತ್ತಮ ನಿದ್ರೆ ಅಗತ್ಯ ವಾಗಿದ್ದು, ನಿದ್ರಾ ಕೊರತೆಯಿಂದ ದೇಹದಲ್ಲಿ ಸಕ್ಕರೆ ನಿಯಂತ್ರಣ ಮಾಡಲು ಹಾರ್ಮೋನ್ (Harmones) ಅಸಮತೋಲನ ಉಂಟಾಗುತ್ತದೆ.

ಮಧುಮೇಹ ನಿಯಂತ್ರಣಕ್ಕೆ ದೇಸಿ ಆಹಾರ ಯೋಜನೆಯ ಮಾದರಿಯ ಒಂದು ಸರಳ ಆಹಾರ ಪದ್ಧತಿ ಕೆಳಗಿನಂತಿದೆ:

ಬೆಳಗ್ಗೆ (7:00 – 8:00 AM):
ಖಾಲಿ ಹೊಟ್ಟೆಯಲ್ಲಿ, ಒಂದು ಗ್ಲಾಸ್ ಉಗುರು ಬೆಚ್ಚನೆಯ (Hot water) ನೀರಿನಲ್ಲಿ ಅರ್ಧ ಚಮಚ ಮೆಂತ್ಯ ಕಾಳು(ರಾತ್ರಿ ನೆನೆಸಿದ್ದು) ಅಥವಾ ಹಾಗಲಕಾಯಿ ರಸ ಕುಡಿಯಿರಿ.
2 ರಾಗಿ ದೋಸೆ/ಗೋಧಿಯ ಚಪಾತಿ (ಕಡಿಮೆ ಎಣ್ಣೆಯೊಂದಿಗೆ) ತೆಂಗಿನ ಚಟ್ನಿ ಅಥವಾ ಸಾಂಬಾರ್‌ನೊಂದಿಗೆ ಸೇವಿಸಿ.
ಪ್ರತಿನಿತ್ಯ ಹಸಿರು ತರಕಾರಿ ಪಲ್ಯ ಸೇವಿಸಿ.
ಸಕ್ಕರೆ ಬದಲು ಸ್ವಲ್ಪ ಜೇನುತುಪ್ಪ ಬೆರಸಿ ಒಂದು ಲೋಟ ಚಹಾ ಕುಡಿಯಿರಿ.

ಮಧ್ಯಾಹ್ನದ ತಿಂಡಿ (10:30 AM):
ಒಂದು ಹಣ್ಣು ಸೇವಿಸಬೇಕು. ಆದರೆ ಸೇಬು, ಪೇರಲ ಹಣ್ಣಿನಂತಹ ಸಿಹಿ ಹಣ್ಣುಗಳನ್ನು ತಪ್ಪಿಸಿ ಇತರೆ ಹಣ್ಣುಗಳನ್ನು ಸೇವಿಸಬೇಕು.
ಕಡಲೆಕಾಯಿ, ಹೆಸರುಕಾಳುಗಳನ್ನು ಮೊಳಕೆ ಕಟ್ಟಿ ಒಂದು ಸಣ್ಣ ಬಟ್ಟಲಿನಷ್ಟು ಸೇವಿಸಿ. ಅಥವಾ ಉಪ್ಪು ಇಲ್ಲದೆ 10 -12 ಬೀಜಗಳಷ್ಟು ಬಾದಾಮಿ/ಗೋಡಂಬಿ ಸೇವಿಸಿ.

ಊಟ (1:00 – 2:00 PM):
ಗೋಧಿ ಅಥವಾ ಜೋಳದ ಹಿಟ್ಟಿನ 1-2 ಚಪಾತಿ ಅಥವಾ ರಾಗಿ ಮುದ್ದೆ.
ಕಡಿಮೆ ಎಣ್ಣೆ, ಹೆಚ್ಚು ತರಕಾರಿಯಿರುವಂತೆ ಒಂದು ಬಟ್ಟಲು ತರಕಾರಿ ಸಾಂಬಾರ್.
ಒಂದು ಬಟ್ಟಲು ಮೊಸರು/ಮಜ್ಜಿಗೆ ಕುಡಿಯಿರಿ.
ಸಣ್ಣ ಪ್ರಮಾಣದ ಅನ್ನ (ಕಂದು ಅಕ್ಕಿ ಇದ್ದರೆ ಉತ್ತಮ).

ಸಂಜೆಯ ತಿಂಡಿ (4:30 PM):
ಸಕ್ಕರೆ ಇಲ್ಲದೆ ಒಂದು ಲೋಟ ತುಳಸಿ ಅಥವಾ ದಾಲ್ಚಿನ್ನಿ ಚಹಾ(Tea) ಕುಡಿಯುರಿ.
1-2 ಓಟ್ಸ್ ಬಿಸ್ಕತ್ತು ಅಥವಾ ಒಂದು ತುಂಡು ಗೋಧಿಯ ಬ್ರೆಡ್‌ನೊಂದಿಗೆ ತರಕಾರಿ ಸ್ಯಾಂಡ್‌ವಿಚ್ ಸೇವಿಸಿ.

ರಾತ್ರಿಯ ಊಟ (7:30 – 8:30 PM):

1-2 ರಾಗಿ ರೊಟ್ಟಿ/ಗೋಧಿ ಚಪಾತಿ.
ಒಂದು ಬಟ್ಟಲು ಸೊಪ್ಪಿನ ಪಲ್ಯ ಅಥವಾ ಕೆಡಿಮೆ ಎಣ್ಣೆ ಬಳಸಿ ಮಾಡಿರುವ ತರಕಾರಿ ಗ್ರೇವಿ ಸೇವಿಸಿ.
ಒಂದು ಸಣ್ಣ ಬಟ್ಟಲು ತೊಗರಿಬೇಳೆ ಅಥವಾ ಹೆಸರುಬೇಳೆಯ ದಾಲ್ ಸೇವಿಸಿ.
ಮಲಗುವ ಮುಂಚೆ (10:00 PM)
ಸಕ್ಕರೆ ಬೆರೆಸದೆ ಅರಿಶಿನ ಮತ್ತು ಚಿಟಿಕೆ ದಾಲ್ಚಿನ್ನಿ ಸೇರಿಸಿರುವ ಒಂದು ಗ್ಲಾಸ್ ಬೆಚ್ಚಗಿನ ಹಾಲುನ್ನು (Milk) ಕುಡಿಯಿರಿ.

ಮಧುಮೇಹವನ್ನು ನಿಯಂತ್ರಿಸಲು ಕೇವಲ ಆಹಾರ ಮಾತ್ರವಲ್ಲ, ಸರಿಯಾದ ಜೀವನಶೈಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಹಾರ, ವ್ಯಾಯಾಮ, ಒತ್ತಡ ನಿಯಂತ್ರಣ ಮತ್ತು ಉತ್ತಮ ನಿದ್ರೆ ಎಂಬ ನಾಲ್ಕು ಅಂಶಗಳು ಸಮತೋಲನದಲ್ಲಿ ಇದ್ದರೆ, ಮಧುಮೇಹದ ಬಗ್ಗೆ ತಲೆನೋವು ಬೇಡ! ಆದ್ದರಿಂದ, ಈ ಸರಳ ದೇಸಿ ಪರಿಹಾರಗಳನ್ನು (Simple home remedies) ಅನುಸರಿಸಿ ಆರೋಗ್ಯಕರ ಜೀವನವನ್ನು ಸ್ವೀಕರಿಸಿ.

ಗಮನಿಸಿ(Notice) :
ಈ ಮಾಹಿತಿ ಸಾಮಾನ್ಯ ಆರೋಗ್ಯ ಸಲಹೆಗಾಗಿ ನೀಡಲಾಗಿದೆ. ಹೆಚ್ಚಿನ ಸಮಸ್ಯೆಗಳಿದ್ದರೆ ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!