Honda Bikes – ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಹೋಂಡಾ CB350, ಖರೀದಿಗೆ ಮುಗಿಬಿದ್ದ ಜನ

Honda CB350 bike

Honda CB350, ಅದರ ಅದ್ಭುತ ವಿನ್ಯಾಸ, ಆಧುನಿಕ ವೈಶಿಷ್ಟ್ಯಗಳು ಮತ್ತು ಪ್ರಭಾವಶಾಲಿ ಕಾರ್ಯಕ್ಷಮತೆಯೊಂದಿಗೆ ರಾಯಲ್ ಎಂಫಿಎಲ್ಡ್ ಕ್ಲಾಸಿಕ್ 350(Royal Enfield Classic 350)ಗೆ ಅಸಾಧಾರಣ ಪ್ರತಿಸ್ಪರ್ಧಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಬನ್ನಿ ಹಾಗಿದ್ದರೆ ಈ ಮೋಟಾರ್ಸೈಕಲ್ ನ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಭರ್ಜರಿ ಲುಕ್ ಒಂದಿಗೆ Honda CB350:

Honda CB350

ಪ್ರಸ್ತುತ, ಮಾರುಕಟ್ಟೆಯಲ್ಲಿ 350 cc ಮೋಟಾರ್ ಸೈಕಲ್ ಎಲ್ಲರ ಗಮನ ಸೆಳೆದಿದೆ. ಕೇವಲ ರಾಯಲ್ ಎನ್‌ಫೀಲ್ಡ್ ಮಾತ್ರ 350 cc ವಿಭಾಗದ ಮೋಟಾರ್ ಸೈಕಲ್ ಅನ್ನು ಬಿಡುಗಡೆ ಮಾಡಿದೆ, ಆದರೆ ಇದರ ಪ್ರತಿಸ್ಪರ್ಧೆಯಾಗಿ ಹೋಂಡಾ ಕಂಪನಿಯ Honda CB350 ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇದು ಬಹು ಬಣ್ಣದ ಆಯ್ಕೆಗಳೊಂದಿಗೆ CB350 DLX ಹಾಗೂ CB350 DLX pro ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. CB350 DLX ರೂಪಾಂತರದ ಬೆಲೆಯು ರೂ. 2 ಲಕ್ಷ (Ex-Show room price, Delhi) ಹಾಗೂ CB350 DLX Pro ರೂಪಾಂತರದ ಬೆಲೆಯು ರೂ.2.18 ಲಕ್ಷ(Ex-Show room price, Delhi).

ಹೋಂಡಾ CB350 ಮೋಟಾರ್ ಸೈಕಲ್ ವಿನ್ಯಾಸ ಹಾಗೂ ವೈಶಿಷ್ಟ್ಯಗಳು :

CB350 ಮೋಟಾರ್ ಸೈಕಲ್ ರೆಟ್ರೋ-ಕ್ಲಾಸಿಕ್ ನೋಟ(Retro classic look) ಮತ್ತು ವಿನ್ಯಾಸ ಪಡೆಯುತ್ತದೆ. ಹಾಗೆಯೇ, ಇದು ಉದ್ದವಾದ ಮೆಟಲ್ ಫೆಂಡರ್‌ಗಳು, ಪ್ರೀಮಿಯಂ ಸೀಟ್ ಕವರ್‌ಗಳು ಮತ್ತು ಹೊಸ ಸ್ಪ್ಲಿಟ್ ಸೀಟ್(Split-seat) ವ್ಯವಸ್ಥೆ, ಮುಂಭಾಗದ ಫೋರ್ಕ್‌ಗಳಿಗೆ ಮೆಟಾಲಿಕ್ ಕವರ್‌ಗಳು, ಕ್ರೋಮ್-ಫಿನಿಶ್ಡ್ ಎಕ್ಸಾಸ್ಟ್, ಮಸ್ಕಲರ್ ಫ್ಯೂಯಲ್ ಟ್ಯಾಂಕ್ ಮತ್ತು LED ಹೆಡ್‌ಲ್ಯಾಂಪ್, LED ವಿಂಕರ್‌ಗಳು ಮತ್ತು LED ಟೈಲ್-ಲ್ಯಾಂಪ್ ಗಳೊಂದಿಗೆ ವಿನ್ಯಾಸಗೊಂಡಿದೆ.

ಹೋಂಡಾ CB350 348.36cc, ಏರ್-ಕೂಲ್ಡ್ (Air cold), 4-ಸ್ಟ್ರೋಕ್, ಸಿಂಗಲ್-ಸಿಲಿಂಡರ್(single cylinder), ಮೋಟಾರ್‌ನಿಂದ ಚಾಲಿತವಾಗಿದ್ದು ರೋಮಾಂಚಕ ಸವಾರಿಯನ್ನು ನೀಡುತ್ತದೆ. ಇದು 5,500rpm ನಲ್ಲಿ 20.7bhp ಮತ್ತು 3,000rpm ನಲ್ಲಿ 29.4Nm ಟಾರ್ಕ್ ಅನ್ನು ಹೊರಹಾಕುತ್ತದೆ ಮತ್ತು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

Honda CB350 bike 1

ಹೋಂಡಾ CB350 ಅನ್ನು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ನೈಟ್ರೋಜನ್-ಚಾರ್ಜ್ಡ್ ರಿಯರ್ ಶಾಕ್‌ಗಳೊಂದಿಗೆ ಅಳವಡಿಸಿದೆ. ಇದಲ್ಲದೆ, ಸ್ಮಾರ್ಟ್‌ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಂ,ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಸಿಸ್ಟಮ್ ಮತ್ತು ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನಂತಹ ನವೀನ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

ಬ್ರೇಕಿಂಗ್ ವಿಷಯಕ್ಕೆ ಬಂದರೆ, ಬೈಕ್ 18-ಇಂಚಿನ ಚಕ್ರಗಳ ಮೇಲೆ ಬೈಕ್ ಚಲಿಸುತ್ತದೆ ಮತ್ತು ಮುಂಭಾಗದಲ್ಲಿ 310mm ಡಿಸ್ಕ್ ಹಾಗೂ ಹಿಂಭಾಗದಲ್ಲಿ 240mm ಡಿಸ್ಕ್ ಅನ್ನು ಪಡೆಯುತ್ತದೆ. ಇನ್ನು ಸವಾರನ ಹೆಚ್ಚಿನ ಸುರಕ್ಷತೆಯನ್ನು ಗಮನದಲ್ಲಿರಿಸಿ, ಡ್ಯುಯಲ್-ಚಾನೆಲ್ABS ಅನ್ನು ಕೂಡ ಅಳವಡಿಸಲಾಗಿದೆ.

ಹೋಂಡಾ CB350 ಬೈಕ್ ಮೆಟಾಲಿಕ್ (Metallic) ಮತ್ತು ಮ್ಯಾಟ್ ಶೇಡ್ (Mate shade)ಬಣ್ಣಗಳ 5 ಆಯ್ಕೆಯನ್ನು ನೀಡುತ್ತಿದೆ, ಇದರಲ್ಲಿ ಪ್ರೆಶಿಯಸ್ ರೆಡ್ ಮೆಟಾಲಿಕ್, ಪರ್ಲ್ ಇಗ್ನಿಯಸ್ ಬ್ಲಾಕ್, ಮ್ಯಾಟ್ ಕ್ರಸ್ಟ್ ಮೆಟಾಲಿಕ್, ಮ್ಯಾಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ಮತ್ತು ಮ್ಯಾಟ್ ಡ್ಯೂನ್ ಬ್ರೌನ್ ಸೇರಿವೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಹೋಂಡಾ CB350 ವಾರಂಟಿ :

ಹೋಂಡಾ CB350 ವಿಶೇಷ 10-ವರ್ಷದ ವಾರಂಟಿ ಪ್ಯಾಕೇಜ್‌(Warranty Package) ನೊಂದಿಗೆ (3-ವರ್ಷದ ಸ್ಟಾಂಡರ್ಡ್ ಮತ್ತು ಐಚ್ಛಿಕ(Optional)7-ವರ್ಷದ ವಿಸ್ತರಣೆ) ನೀಡುತ್ತಿದೆ. ಈ ಹೊಚ್ಚ ಹೊಸ ಹೋಂಡಾ CB350 ಬೈಕಿನ ಖರೀದಿಸುವ ಆಸಕ್ತ ಗ್ರಾಹಕರು ತಮ್ಮ ಹತ್ತಿರದ BigWing ಡೀಲರ್‌ಶಿಪ್‌ಗಳ ಮೂಲಕ ಪ್ರತ್ಯೇಕವಾಗಿ Honda CB350 ಬೈಕ್ ಅನ್ನು ಬುಕ್ ಮಾಡಬಹುದು. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಬೈಕಿನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!